»   » ಆಸ್ಕರ್ ಅಂಗಳದಲ್ಲಿ ಪ್ರಿಯಾಂಕಾ ಛೋಪ್ರಾಗೆ ಹೊಸ ಪಾತ್ರ

ಆಸ್ಕರ್ ಅಂಗಳದಲ್ಲಿ ಪ್ರಿಯಾಂಕಾ ಛೋಪ್ರಾಗೆ ಹೊಸ ಪಾತ್ರ

Posted By:
Subscribe to Filmibeat Kannada

ಬಾಲಿವುಡ್ ನಿಂದ ಇಂಗ್ಲೀಷ್ ಕಿರುತೆರೆಗೆ ಹಾರಿ ಪ್ರಶಸ್ತಿ ಬಾಚಿಕೊಂಡು ಎಲ್ಲರ ಮನ ಗೆದ್ದಿರುವ ಮಾಜಿ ವಿಶ್ವ ಸುಂದರಿ ಪ್ರಿಯಾಂಕಾ ಛೋಪ್ರಾಗೆ ಈಗ ಹೊಸದೊಂದು ಅವಕಾಶ ಹುಡುಕಿಕೊಂಡು ಬಂದಿದೆ. ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹೊಸ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಏನದು? ಮುಂದೆ ಓದಿ...

ಆಸ್ಕರ್ ವಿಜೇತರಾದ ಭಾನು ಅಥೈಯಾ, ಸತ್ಯಜಿತ್ ರೇ, ರೆಸೂಲ್ ಪೂಕುಟ್ಟಿ, ಎ.ಆರ್ ರೆಹಮಾನ್ ಹಾಗೂ ಗುಲ್ಜಾರ್ ಅವರ ಸಾಲಿಗೆ ಯುನೈಟೆಡ್ ಕಿಂಗ್ಡಮ್ ನಲ್ಲಿ ಜನಿಸಿದ ಮುಂಬೈ ಮೂಲದ ಕಂಪ್ಯೂಟರ್ ಇಂಜಿನಿಯರ್ ರಾಹುಲ್ ಥಕ್ಕರ್ ಸೇರ್ಪಡೆಗೊಂಡ ಸಂತಸದ ಸುದ್ದಿಯ ಬೆನ್ನಲ್ಲೇ ಪ್ರಿಯಾಂಕಾ ಅವರಿಗೆ ಆಸ್ಕರ್ ವೇದಿಕೆಯಲ್ಲಿ ಉತ್ತಮ ಅವಕಾಶ ಸಿಕ್ಕಿರುವ ಸುದ್ದಿ ಬಂದಿದೆ.[ಆಸ್ಕರ್ ಪ್ರಶಸ್ತಿ ನಾಮಿನೇಷನ್ 2016 ಪಟ್ಟಿ]

Actress Priyanka Chopra To Present Oscars 2016 Award: Second Wave Of Presenters Announced!

ಪ್ರಿಯಾಂಕಾಗೆ ಒಲಿದ ಅದೃಷ್ಟ: ಪ್ರಿಯಾಂಕಾ ಛೋಪ್ರಾ ಅವರನ್ನು ನಿರೂಪಕಿ ಪಾತ್ರದಲ್ಲಿ 88ನೇ ಆಸ್ಕರ್ ವೇದಿಕೆ ಮೇಲೆ ಕಾಣಬಹುದಾಗಿದೆ. ಸಾಮಾನ್ಯವಾಗಿ ಆಸ್ಕರ್ ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ನಿರೂಪಣೆ ಮಾಡುವವರ ಎರಡು ಪಟ್ಟಿಯನ್ನು ತಯಾರಿಸಲಾಗುತ್ತದೆ. ಈ ರೀತಿಯ ಎರಡನೇ ಪಟ್ಟಿಯಲ್ಲಿ ಪ್ರಿಯಾಂಕಾ ಛೋಪ್ರಾ ಹೆಸರಿದೆ.[ಆಸ್ಕರ್ ಗೆ ಅರ್ಹತೆ ಪಡೆದ ರಂಗಿತರಂಗ, ಕೇರ್ ಆಫ್ ಫುಟ್ಪಾತ್ 2]

ವಿವಿಧ ದೇಶಗಳ ಸೆಲೆಬ್ರಿಟಿಗಳನ್ನು ಆಯ್ಕೆ ಮಾಡಿ ನಿರೂಪಣೆ ಹೊಣೆ ನೀಡಲಾಗುತ್ತದೆ. ಈಗಾಗಲೇ ನಾಮಾಂಕಿತ ಪಟ್ಟಿಯಲ್ಲಿ ಹೆಚ್ಚು ಬಿಳಿ ಬಣ್ಣದ ನಟ, ನಟಿಯರೇ ತುಂಬಿದ್ದಾರೆ, ಆಸ್ಕರ್ ಪ್ರಶಸ್ತಿ ಸಮಿತಿ ವರ್ಣಬೇಧ ನೀತಿ ಅನುಸರಿಸುತ್ತಿದೆ ಎಂಬ ಕೂಗು ಬಲವಾಗಿದೆ.

ಇಂಥ ಕೂಗನ್ನು ತಗ್ಗಿಸಲು ಎಲ್ಲಾ ವರ್ಣಗಳ ಅನೇಕ ದೇಶಗಳ ಸೆಲೆಬ್ರಿಟಿಗಳ ಹೆಸರನ್ನು ಎರಡನೇ ಪಟ್ಟಿಯ ನಿರೂಪಕರ ಸಾಲಿಗೆ ಸೇರಿಸಿರುವ ಸಾಧ್ಯತೆಯೂ ಇದೆ. ಪ್ರಿಯಾಂಕಾ ಜೊತೆ ಕೊರಿಯನ್ ನಟ ಬ್ಯೂಂಗ್ ಹನ್ ಲೀ ಕೂಡಾ ಇದ್ದಾರೆ.

Oscars 2016 Award

ಲಿಯಾನಾರ್ಡೋ ಡಿ ಕಾಪ್ರಿಯೋ ಅಭಿನಯದ ದಿ ರೆವೆನಂಟ್ ಈ ಬಾರಿ ಅತಿಹೆಚ್ಚು ನಾಮಾಂಕಿತಗೊಂಡಿದೆ. ದಿ ರೆವೆನೆಂಟ್ 12 ವಿಭಾಗದಲ್ಲಿ ರೇಸ್ ನಲ್ಲಿದ್ದರೆ ಮ್ಯಾಡ್ ಮ್ಯಾಕ್ಸ್ ಫ್ಯೂರಿ ರೋಡ್ 10 ವಿಭಾಗದಲ್ಲಿ ಸ್ಪರ್ಧೆಯಲ್ಲಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಬೆವರ್ಲಿ ಹಿಲ್ಸ್ ನಲ್ಲಿ ಫೆಬ್ರವರಿ 28, 2016ರಂದು ನಡೆಯಲಿದೆ. (ಫಿಲ್ಮಿ ಬೀಟ್ ಕನ್ನಡ)

English summary
Oscars 2016 is just a few weeks away and the second wave of presenters is finally announced! Bollywood actress Priyanka Chopra will be presenting the award at Oscars 2016
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada