twitter
    For Quick Alerts
    ALLOW NOTIFICATIONS  
    For Daily Alerts

    ಆಸ್ಕರ್ ಹಾದಿಯಲ್ಲಿ 'RRR': ರಾಜಮೌಳಿ ಹೇಳಿದ್ದು ಹೀಗೆ

    |

    ರಾಜಮೌಳಿ ನಿರ್ದೇಶನದ 'RRR' ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ದೊಡ್ಡ ಯಶಸ್ಸು ಗಳಿಸಿದ ಬಳಿಕ ಒಟಿಟಿಯಲ್ಲಿಯೂ ತನ್ನ ಜೈತ ಯಾತ್ರೆ ಮುಂದುವರೆದಿದೆ.

    ನೆಟ್‌ಫ್ಲಿಕ್ಸ್‌ನಲ್ಲಿ 'RRR' ಸಿನಿಮಾ ಬಿಡುಗಡೆ ಆದ ಬಳಿಕ ವಿಶ್ವದಾದ್ಯಂತ ಜನ ಸಿನಿಮಾವನ್ನು ನೋಡಿ ಬಹುವಾಗಿ ಮೆಚ್ಚಿ ಕೊಂಡಾಡಿದ್ದಾರೆ. ಇದೇ ಕಾರಣಕ್ಕೆ ರಾಜಮೌಳಿ ಹಾಗೂ ತಂಡ ಇನ್ನೂ ಹೆಚ್ಚು ರಾಷ್ಟ್ರಗಳಿಗೆ ಸಿನಿಮಾವನ್ನು ತಲುಪಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

    ರಾಜಮೌಳಿ ನಿನ್ನೆಯಷ್ಟೆ ಅಮೆರಿಕದ ನ್ಯೂಯಾರ್ಕ್‌ನ ಐಎಫ್‌ಎ ಸೆಂಟರ್‌ನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರೇಕ್ಷಕರ ಪ್ರಶ್ನೆಗಳಿಗೆ ಉತ್ತರಿಸಿದರು. ಈ ಸಂದರ್ಭದಲ್ಲಿ ತಮ್ಮ ಸಿನಿಮಾ ಆಸ್ಕರ್‌ಗೆ ನಾಮಿನೇಟ್ ಆಗುವ ಸಾಧ್ಯತೆಯ ಬಗ್ಗೆಯೂ ಮಾತನಾಡಿದರು.

    ''RRR' ಸಿನಿಮಾ ಆಸ್ಕರ್ ಗೆಲ್ಲಲಿ ಅಥವಾ ಗೆಲ್ಲದೇ ಇರಲಿ, ನನ್ನ ಮುಂದಿನ ಸಿನಿಮಾಕ್ಕೆ ನಾನು ಮಾಡಿಕೊಂಡಿರುವ ಯೋಜನೆಯಂತೂ ಬದಲಾಗದು'' ಎಂದಿದ್ದಾರೆ ರಾಜಮೌಳಿ. ಮುಂದುವರೆದು, ''ಆಸ್ಕರ್ ಗೆದ್ದರೆ ಅದು ನನ್ನ ಸಿನಿಮಾ ತಂಡಕ್ಕೆ, ನನ್ನ ದೇಶಕ್ಕೆ ಒಂದೊಳ್ಳೆ ಸ್ಪೂರ್ತಿ ತುಂಬಲ್ಲದು ಆದರೆ ಸಿನಿಮಾ ಕರ್ಮಿಯಾಗಿ ನನ್ನ ಕತೆ ಹೇಳುವ ರೀತಿ, ಸಿನಿಮಾ ಮಾಡುವ ರೀತಿ ಬದಲಾಗುವುದಿಲ್ಲ'' ಎಂದಿದ್ದಾರೆ.

    ''ನಾನು ಸಿನಿಮಾ ಮಾಡುವ ರೀತಿಯನ್ನು ಕಾಲ-ಕಾಲಕ್ಕೆ ಅಪ್‌ಡೇಟ್ ಮಾಡಿಕೊಳ್ಳುತ್ತಲೇ ಇರುತ್ತೇನೆ. ತಂತ್ರಜ್ಞಾನ, ಕತೆ ಹೇಳುವ ವಿಧಾನದಲ್ಲಿಯೂ ಅಪ್‌ಡೇಟ್ ಮಾಡಿಕೊಳ್ಳುತ್ತಲೇ ಇರುತ್ತೇನೆ. ಈ ಕಲಿಕೆ ಸಿನಿಮಾ ಮಾಡುವ ಜರ್ನಿಯ ಜೊತೆಯಾಗಿಯೇ ಸಾಗುತ್ತದೆ. ಆದರೆ ಕತೆಯನ್ನು ಹೇಗೆ ಹೇಳಬೇಕು ಹಾಗೂ ಹೇಗೆ ಹೇಳಬಾರದು ಎಂಬುದು ಮಾತ್ರ ಎಂದಿಗೂ ಬದಾಗುವುದಿಲ್ಲ'' ಎಂದಿದ್ದಾರೆ ರಾಜಮೌಳಿ.

    ಬ್ರಿಟೀಷರನ್ನು ವಿಲನ್‌ಗಳಂತೆ ತೋರಿಸಿರುವ ಬಗ್ಗೆ ಮಾತು

    ಬ್ರಿಟೀಷರನ್ನು ವಿಲನ್‌ಗಳಂತೆ ತೋರಿಸಿರುವ ಬಗ್ಗೆ ಮಾತು

    'RRR' ಸಿನಿಮಾದಲ್ಲಿ ಬ್ರಿಟೀಷರನ್ನು ವಿಲನ್‌ಗಳ ರೀತಿ ತೋರಿಸಿರುವ ಬಗ್ಗೆ ಮಾತನಾಡಿರುವ ರಾಜಮೌಳಿ, ''ಸಿನಿಮಾದ ಆರಂಭದಲ್ಲಿಯೇ ಒಂದು ಸೂಚನಾ ಕಾರ್ಡ್ ಹಾಕಿದ್ದೇವೆ, ಇದು ಕತೆ ಮಾತ್ರ ನಿಜವಾದ ಘಟನೆ ಅಲ್ಲವೆಂದು. ಅಲ್ಲದೆ, ಸಿನಿಮಾದಲ್ಲಿ ಬ್ರಿಟೀಷ್ ಒಬ್ಬ ವಿಲನ್ ಆಗಿ ತೋರಿಸಲಾಗುತ್ತಿದೆ ಎಂದ ಮಾತ್ರಕ್ಕೆ ಎಲ್ಲ ಬ್ರಿಟೀಷರು ವಿಲನ್‌ಗಳು ಎಂದು ಪ್ರೇಕ್ಷಕ ಭಾವಿಸುವುದಿಲ್ಲ. ಸಿನಿಮಾದಲ್ಲಿ ಭಾರತದ ಹೀರೋ ಇದ್ದಾನೆಂದರೆ ಎಲ್ಲ ಭಾರತೀಯರು ಹೀರೋಗಳು ಎಂದೂ ಸಹ ಆತ ಭಾವಿಸುವುದಿಲ್ಲ. ಆ ಸಿನಿಮಾದಲ್ಲಿ ಒಬ್ಬ ವ್ಯಕ್ತಿ ವಿಲನ್ ಎಂದು ಅವರು ಅರ್ಥ ಮಾಡಿಕೊಳ್ಳುತ್ತಾರೆ'' ಎಂದಿದ್ದಾರೆ.

    ವಿಸ್ತಾರವಾದ ಉತ್ತರ ನೀಡಿದ ರಾಜಮೌಳಿ

    ವಿಸ್ತಾರವಾದ ಉತ್ತರ ನೀಡಿದ ರಾಜಮೌಳಿ

    ಅದೇ ಪ್ರಶ್ನೆಗೆ ಇನ್ನಷ್ಟು ವಿಸ್ತಾರವಾದ ಉತ್ತರ ನೀಡುತ್ತಾ, ''ಪ್ರೇಕ್ಷಕರಿಗೆ ಇತಿಹಾಸ ಇನ್ನಿತರೆ ವಿಷಯಗಳ ಬಗ್ಗೆ ಪೂರ್ಣ ಜ್ಞಾನ ಇಲ್ಲದೇ ಹೋದರೂ ಸಹ ಭಾವುಕ ಬುದ್ಧಿವಂತಿಕೆ ಹೆಚ್ಚಾಗಿರುತ್ತದೆ. ಭಾವುಕ ಬುದ್ಧಿಮತ್ತೆಯ ಬಗ್ಗೆ ನಾವು ಕತೆ ಹೇಳುವವರು ಅರ್ಥ ಮಾಡಿಕೊಂಡರೆ ಈ ರೀತಿಯ ಸಾಮಾಜಿಕ, ಐತಿಹಾಸಿಕ ವಿಷಯಗಳ ಬಗ್ಗೆ ಹೆಚ್ಚು ಆತಂಕ ಪಡುವ ಅಗತ್ಯವಿಲ್ಲ'' ಎಂದಿದ್ದಾರೆ.

    ಆಸ್ಕರ್ ಗೆಲ್ಲುವ ಸಾಧ್ಯತೆ ಇದೆ

    ಆಸ್ಕರ್ ಗೆಲ್ಲುವ ಸಾಧ್ಯತೆ ಇದೆ

    'RRR' ಸಿನಿಮಾ ಈ ಬಾರಿಯ ಆಸ್ಕರ್‌ಗೆ ನಾಮಿನೇಟ್ ಆಗುವ ದಟ್ಟ ಸಾಧ್ಯತೆ ಇದೆ. ಸಂಗೀತ, ನಟನೆ, ನಿರ್ದೇಶನ, ಅನಿಮೇಶನ್, ಹಾಡು, ಚಿತ್ರಕತೆ, ನಟನೆ ಹೀಗೆ ಹಲವು ವಿಭಾಗಗಳಲ್ಲಿ RRR ಸಿನಿಮಾ ಅಂತಿಮ ನಾಲ್ಕರ ಘಟ್ಟಕ್ಕೆ ಹೋಗುವ ಸಾಧ್ಯತೆ ಇದೆ ಹಾಗೂ ಕೆಲವು ಆಸ್ಕರ್‌ಗಳನ್ನು ಗೆಲ್ಲುವ ಸಾಧ್ಯತೆಯೂ ಇದೆ. ಆಮಿರ್ ಖಾನ್ ನಟಿಸಿ ಆಶುತೋಶ್ ಗೌರಿಕರ್ ನಿರ್ದೇಶಿಸಿದ್ದ 'ಲಗಾನ್' ಸಿನಿಮಾದ ಬಳಿಕ ಭಾರತದ ಇನ್ನಾವ ಸಿನಿಮಾವೂ ಆಸ್ಕರ್‌ನ ನಾಲ್ಕರ ಘಟ್ಟಕ್ಕೆ ಹೋಗಿಲ್ಲ. 'ಲಗಾನ್' ಸಹ ಆಸ್ಕರ್‌ ಗೆಲ್ಲುವಲ್ಲಿ ವಿಫಲವಾಗಿತ್ತು. ಆದರೆ 'RRR' ಸಿನಿಮಾಕ್ಕೆ ಗೆಲ್ಲುವ ಅವಕಾಶವಿದೆ.

    ಮಾರ್ಚ್ 25 ರಂದು ತೆರೆಕಂಡಿದ್ದ ಸಿನಿಮಾ

    ಮಾರ್ಚ್ 25 ರಂದು ತೆರೆಕಂಡಿದ್ದ ಸಿನಿಮಾ

    ಮಾರ್ಚ್ 25 ರಂದು 'RRR' ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ದೊಡ್ಡ ಹಿಟ್ ಆಗಿತ್ತು. ರಾಜಮೌಳಿ ನಿರ್ದೇಶನದ ಈ ಸಿನಿಮಾದಲ್ಲಿ ಜೂ ಎನ್‌ಟಿಆರ್, ರಾಮ್ ಚರಣ್ ತೇಜ ನಟಿಸಿದ್ದಾರೆ. ನಾಯಕಿಯಾಗಿ ಆಲಿಯಾ ಭಟ್, ಅತಿಥಿ ಪಾತ್ರದಲ್ಲಿ ಅಜಯ್ ದೇವಗನ್, ಶ್ರಿಯಾ ಶಿರಿನ್ ಸಹ ಇದ್ದಾರೆ. ಸಿನಿಮಾಕ್ಕೆ ಎಂಎಂ ಕೀರವಾಣಿ ಸಂಗೀತ ನೀಡಿದ್ದು, ದಾನಯ್ಯ ಬಂಡವಾಳ ಹೂಡಿದ್ದಾರೆ. ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಈಗಾಗಲೇ 550 ಕೋಟಿಗೂ ಹೆಚ್ಚು ಹಣ ಗಳಿಸಿದೆ.

    English summary
    Director Rajamouli talks about possibility of his RRR movie winning Oscars. He said Though RRR movie win the Oscar his way of making movie will never change.
    Tuesday, September 20, 2022, 11:41
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X