For Quick Alerts
  ALLOW NOTIFICATIONS  
  For Daily Alerts

  13 ವರ್ಷಗಳ ಹಿಂದಿನ 'ಅವತಾರ್‌' ರೀ-ರಿಲೀಸ್: ಈ ಬಾರಿ ನೋಡೋಕೆ ಸಖತ್ ಮಜಾ ಕೊಡುತ್ತೆ!

  |

  ಹಾಲಿವುಡ್‌ನ ಜನಪ್ರಿಯ ನಿರ್ದೇಶಕ ಜೇಮ್ಸ್ ಕ್ಯಾಮೆರಾನ್ ಸಿನಿಪ್ರಿಯರಿಗೆ ಚೆನ್ನಾಗೇ ಪರಿಚಯವಿರುತ್ತೆ. ಈ ನಿರ್ದೇಶಕನ ಬತ್ತಳಿಕೆಯಿಂದ ಬಂದ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿವೆ. ಅದರಲ್ಲೊಂದು 'ಅವತಾರ್'.

  13 ವರ್ಷಗಳ ಹಿಂದೆ ಬಿಡುಗಡೆಯಾಗಿ ವಿಶ್ವವನ್ನೇ ಗೆದ್ದಿದ್ದ 'ಅವತಾರ್' ಮತ್ತೆ ಬಿಡುಗಡೆಯಾಗುತ್ತಿದೆ. ಈ ಹಿಂದೆ ಹಲವು ಸಲ ಈ ಸಿನಿಮಾ ಬಿಡುಗಡೆಯಾಗಿದೆ. ಆದರೆ, ಈ ಬಾರಿ ಮತ್ತೆ ಬಿಡುಗಡೆಯಾಗುತ್ತಿರುವುದಕ್ಕೆ ಒಂದು ಮುಖ್ಯ ಕಾರಣವಿದೆ. ಅಂದ್ಹಾಗೆ 13 ವರ್ಷಗಳ ಹಿಂದಿನ ಸಿನಿಮಾ 'ಅವತಾರ್' ಮುಂಬರುವ ಸೆಪ್ಟೆಂಬರ್ 23 ರೀ-ರಿಲೀಸ್ ಆಗುತ್ತಿದೆ.

  24 ಗಂಟೆಯಲ್ಲಿ 'ಅವತಾರ್ 2' ಟೀಸರ್ ನೋಡಿದ್ದೆಷ್ಟು ಮಂದಿ? ಚೀನಾ ಮಂದಿಗೆ ಹುಚ್ಚು ಹಿಡಿಸಿದ್ದೇಗೆ?24 ಗಂಟೆಯಲ್ಲಿ 'ಅವತಾರ್ 2' ಟೀಸರ್ ನೋಡಿದ್ದೆಷ್ಟು ಮಂದಿ? ಚೀನಾ ಮಂದಿಗೆ ಹುಚ್ಚು ಹಿಡಿಸಿದ್ದೇಗೆ?

  ಮತ್ತೆ 'ಅವತಾರ್' ರೀ-ರಿಲೀಸ್

  ಜೇಮ್ಸ್ ಕಾಮೆರಾನ್ ನಿರ್ದೇಶನದ 'ಅವತಾರ್' ಸಿನಿಮಾ 2009ರಲ್ಲಿ ರಿಲೀಸ್ ಆಗಿತ್ತು. ಸಿನಿಮಾ ಜಗತ್ತಿಗೆ 'ಅವತಾರ್' ಒಂದು ಅದ್ಭುತ ಸಿನಿಮಾ ಎನಿಸಿಕೊಂಡಿತ್ತು. ಈ ಸಿನಿಮಾ ರಿಲೀಸ್ ಆಗಿ 13 ವರ್ಷ ಆಗಿದ್ದರೂ, ಇನ್ನೂ ಈ ಸಿನಿಮಾವನ್ನು ಜನರು ಮರೆತಿಲ್ಲ. ಹೀಗಾಗಿ 'ಅವತಾರ್‌'ಗೆ ಹೊಸ ತಂತ್ರಜ್ಞಾನವನ್ನು ಅಳವಡಿಸಿ ಸಿನಿಮಾವನ್ನು ಬಿಡುಗಡೆ ಮಾಡಲಾಗುತ್ತಿದೆ. 4ಕೆ ಹೈ ಡೈನಾಮಿಕ್ ರೇಜ್ ಫಾರ್ಮೆಟ್‌ನಲ್ಲಿ ಈ ಸಿನಿಮಾವನ್ನು ರಿಲೀಸ್ ಮಾಡಲಾಗುತ್ತಿದೆ.

  2009ರಲ್ಲಿ ತೆರೆಕಂಡಿದ್ದ ಇದೇ ಸಿನಿಮಾ ಕೇವಲ ಎರಡು ವಾರಕ್ಕಷ್ಟೇ ರಿಲೀಸ್ ಆಗುತ್ತಿದೆ. ಸ್ಯಾಮ್ ವರ್ಥಿಂಗ್‌ಟನ್ ಹಾಗೂ ಜೋ ಸಲ್ದಾನಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದ ಸಿನಿಮಾವನ್ನು ಹೊಸ ತಂತ್ರಜ್ಞಾನದಲ್ಲಿ ನೋಡಲು ಪ್ರೇಕ್ಷಕರು ತುದಿಗಾಲಲ್ಲಿ ನಿಂತಿದ್ದಾರೆ.

  'ಅವತಾರ್ 2' ಅಸಲಿ ಟೈಟಲ್ 'ಅವತಾರ್: ದಿ ವೇ ಆಫ್ ವಾಟರ್'!'ಅವತಾರ್ 2' ಅಸಲಿ ಟೈಟಲ್ 'ಅವತಾರ್: ದಿ ವೇ ಆಫ್ ವಾಟರ್'!

  ದಾಖಲೆ ಬರೆದಿತ್ತು 'ಅವತಾರ್'

  'ಅವತಾರ್' ಸಿನಿಮಾ ವಿಶ್ವದಾದ್ಯಂತ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾವಾಗಿ ಹೊರಹೊಮ್ಮಿತ್ತು. ಬಾಕ್ಸಾಫೀಸ್‌ನಲ್ಲಿ ಸುಮಾರು 2.8 ಬಿಲಿಯನ್ ಡಾಲರ್‌ ಹಣ ಗಳಿಸಿತ್ತು. ಅತ್ಯುತ್ತಮ ಸಿನಿಮಾ, ಅತ್ಯುತ್ತಮ ನಿರ್ದೇಶನ ಸೇರಿದಂತೆ ಹಲವು ಭಾಗಗಳಲ್ಲಿ ಆಸ್ಕರ್ ಪ್ರಶಸ್ತಿಗೆ ಆಯ್ಕೆಯಾಗಿತ್ತು. ಇವುಗಳಲ್ಲಿ ಅತ್ಯುತ್ತಮ ಛಾಯಾಗ್ರಹಣ, ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್, ಅತ್ಯುತ್ತಮ ವಿಜ್ಯೂವಲ್ ಎಫೆಕ್ಟ್ಸ್ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಗೆದ್ದಿತ್ತು.

  Hollywood Record Breaking Movie Avatar to Re-Releasing September 23rd

  2010ರಲ್ಲಿ 'ಅವತಾರ್' ಸಿನಿಮಾವನ್ನು 3ಡಿ ಥಿಯೇಟರ್ ಹಾಗೂ ಐಮ್ಯಾಕ್ಸ್ 3ಡಿಯಲ್ಲಿ ರೀ-ರಿಲೀಸ್ ಮಾಡಲಾಗಿತ್ತು. ಆಗ ವೇಳೆ ವಿಶ್ವದಾದ್ಯಂತ ಈ ಸಿನಿಮಾ ಸುಮಾರು 44 ಮಿಲಿಯನ್‌ನಷ್ಟು ಹಣವನ್ನು ದೋಚಿತ್ತು. ಕಳೆದ ವರ್ಷ 'ಅವತಾರ್' ಸಿನಿಮಾವನ್ನು ಚೀನಾದಲ್ಲಿ ಮರುಬಿಡುಗಡೆ ಮಾಡಲಾಗಿತ್ತು. ಚೀನಾದಲ್ಲಿ ಸುಮಾರು 57.7 ಮಿಲಿಯನ್ ಡಾಲರ್ ಹಣವನ್ನುಕಲೆಕ್ಷನ್ ಮಾಡಿತ್ತು.

  ಡಿಸೆಂಬರ್‌ನಲ್ಲಿ 'ಅವತಾರ್ 2'

  'ಅವತಾರ್ 2' ಸಿನಿಮಾವನ್ನು ಜೇಮ್ಸ್ ಕ್ಯಾಮೆರಾನ್ ನಿರ್ದೇಶಿಸಿ, ನಿರ್ಮಿಸುತ್ತಿದ್ದಾರೆ. ಹಲವು ವರ್ಷಗಳಿಂದ ಈ ಸಿನಿಮಾ ನಿರ್ಮಾಣ ಹಂತದಲ್ಲೇ ಇತ್ತು. ಕೊನೆಗೂ 'ಅವತಾರ್ 2' ಡಿಸೆಂಬರ್ 16ಕ್ಕೆ ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ. ಈ ಬಾರಿ ಅಂಡರ್‌ವಾಟರ್ ಥೀಮ್‌ನಲ್ಲಿ ಈ ಸಿನಿಮಾವನ್ನು ತೆಗೆಯಲಾಗಿದ್ದು ಸಿನಿ ಪ್ರಿಯರು ಸಿನಿಮಾ ನೋಡಲು ಕಾದು ಕೂತಿದ್ದಾರೆ.

  'ಅವತಾರ್ 2' ಬಿಡುಗಡೆ ಹಿನ್ನೆಲೆ ಪ್ರಚಾರದ ಭಾಗವಾಗಿ 'ಅವತಾರ್' ಅನ್ನು ಮರು ಬಿಡುಗಡೆಯಾಗುತ್ತಿದೆ. ಈಗಾಗಲೇ 'ಅವತಾರ್' ಸಿನಿಮಾವನ್ನು ಡಿಸ್ನಿ+ ಓಟಿಟಿಯಿಂದ ಸಂಸ್ಥೆ ತೆಗೆದು ಹಾಕಿದ್ದು, ಮತ್ತೆ ಯಾವಾಗ ಓಟಿಟಿಗೆ ಅಳವಡಿಸುತ್ತೆ ಅನ್ನೋದು ಸದ್ಯಕ್ಕೆ ಸ್ಪಷ್ಟವಾಗಿಲ್ಲ.

  Recommended Video

  Luckyman | ಒಂದೇ ವೇದಿಕೆಯಲ್ಲಿ ಸುದೀಪ್ ರಾಕ್ ಲೈನ್ Rockline Venkatesh | Sudeep | Filmibeat Kannada
  English summary
  Hollywood Record Breaking Movie Avatar to Re-Releasing September 23rd, Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X