Don't Miss!
- News
ಜನವರಿ 28ರಂದು 300 ರೈಲುಗಳನ್ನು ರದ್ದುಗೊಳಿಸಿದ ಭಾರತೀಯ ರೈಲ್ವೆ- ಸಂಪೂರ್ಣ ಪಟ್ಟಿ ಇಲ್ಲಿದೆ
- Sports
SA Vs Eng 1st ODI: ಚೇಸಿಂಗ್ನಲ್ಲಿ ಎಡವಿದ ಇಂಗ್ಲೆಂಡ್ : ದಕ್ಷಿಣ ಆಫ್ರಿಕಾಗೆ 27 ರನ್ಗಳ ಜಯ
- Automobiles
ವೈರಲ್: ಬೆಂಗಳೂರಿನಲ್ಲಿ ಕಾಣಿಸಿಕೊಂಡಿತು ಹೊಚ್ಚ ಹೊಸ ವಾಹನ... ಇದರ ಬಗ್ಗೆ ಗೊತ್ತಾ?
- Lifestyle
2023ರಲ್ಲಿ ರಾಜಯೋಗದಿಂದಾಗಿ ಈ 4 ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನವಾಗಲಿದೆ
- Finance
7th Pay Commission: ನೌಕರರಿಗೆ ಸಿಹಿ ಸುದ್ದಿ: ಬಾಕಿ DA ಹಣ ನೀಡಲು ಕೇಂದ್ರ ಸರ್ಕಾರ ನಿರ್ಧಾರ, ಹೇಗೆ?
- Technology
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಪ್ರಶಸ್ತಿಗೆ ಆಯ್ಕೆಯಾದ RRR: ಯಾವ ವಿಭಾಗದಲ್ಲಿ ಸ್ಪರ್ಧೆ
ರಾಜಮೌಳಿ ನಿರ್ದೇಶನದ 'RRR' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಬಹಳ ದೊಡ್ಡ ಹಿಟ್ ಆಗಿದೆ. ಮಾತ್ರವಲ್ಲದೆ, ವಿದೇಶಗಳಲ್ಲಿಯೂ ಈ ಸಿನಿಮಾ ಪ್ರೇಕ್ಷಕರನ್ನು ತನ್ನತ್ತ ಸೆಳೆದಿದೆ.
RRR ಸಿನಿಮಾ ನೋಡಿದ ವಿದೇಶಿ ಸಿನಿಮಾ ಸೆಲೆಬ್ರಿಟಿಗಳೇ ಈ ಬಾರಿ RRR ಗೆ ಆಸ್ಕರ್ ಪಕ್ಕಾ ಎಂದಿದ್ದಾರೆ. ಆದರೆ ಸಿನಿಮಾವು ಭಾರತದಿಂದ ಅಧಿಕೃತವಾಗಿ ಆಸ್ಕರ್‌ಗೆ ಆಯ್ಕೆಯಾಗಲು ವಿಫಲವಾಗಿದೆ. ಹಾಗೆಂದು ಈ ಸಿನಿಮಾ ಆಸ್ಕರ್‌ಗೆ ಹೋಗುವುದಿಲ್ಲ ಎಂದೇನೂ ಇಲ್ಲ. ಇನ್ನೂ ಆಸ್ಕರ್ ಅವಕಾಶ RRR ಗೆ ಇದೆ. ಈ ನಡುವೆ ಮತ್ತೊಂದು ಪ್ರತಿಷ್ಠಿತ ಪ್ರಶಸ್ತಿಗೆ ರಾಜಮೌಳಿಯ ಈ ಸಿನಿಮಾ ಆಯ್ಕೆಯಾಗಿದೆ.
ಆಸ್ಕರ್‌ನಷ್ಟೆ ಪ್ರತಿಷ್ಠಿತ ಪ್ರಶಸ್ತಿಯೆಂದು ಗುರುತಿಸಿಕೊಂಡಿರುವ ಗೋಲ್ಡನ್ ಗ್ಲೋಬ್ ನಾಮಿನೇಶನ್ ಪ್ರಕ್ರಿಯೆ ಆರಂಭಗೊಂಡಿದ್ದು, RRR ಸಿನಿಮಾವು ಗೋಲ್ಡನ್ ಗ್ಲೋಬ್‌ಗೆ ಎಂಟ್ರಿ ನೀಡಿದೆ.
80ನೇ ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳಿಗೆ ಸಿನಿಮಾಗಳನ್ನು ಆಹ್ವಾನಿಸಲಾಗಿದ್ದು ರಾಜಮೌಳಿ ನಿರ್ದೇಶನದ RRR ಸಿನಿಮಾ ಎರಡು ವಿಭಾಗದಲ್ಲಿ ನಾಮಿನೇಶನ್ ಪಡೆದುಕೊಂಡಿದೆ. ಅತ್ಯುತ್ತಮ ವಿದೇಶಿ ಸಿನಿಮಾ ಹಾಗೂ ಅತ್ಯುತ್ತಮ ಒರಿಜಿನಲ್ ಹಾಡು ವಿಭಾಗದಲ್ಲಿ RRR ಸ್ಪರ್ಧೆ ಮಾಡುತ್ತಿದೆ. ಎರಡೂ ವಿಭಾಗದಲ್ಲಿ RRR ಗೆ ಪ್ರಶಸ್ತಿ ಪಕ್ಕಾ ಎನ್ನಲಾಗುತ್ತಿದೆ.
ಆಸ್ಕರ್‌ನಷ್ಟೆ ಮಹತ್ವ ಗೋಲ್ಡನ್ ಗ್ಲೋಬ್‌ಗೂ ಇದೆ. ಗೋಲ್ಡನ್ ಗ್ಲೋಬ್‌ನಲ್ಲಿ ಪ್ರಶಸ್ತಿ ಪಡೆದ ಸಿನಿಮಾಗಳೇ ಆಸ್ಕರ್‌ನಲ್ಲಿಯೂ ಪ್ರಶಸ್ತಿ ಪಡೆಯುತ್ತವೆ ಎನ್ನಲಾಗುತ್ತದೆ. RRR ಸಿನಿಮಾ ಈಗಾಗಲೇ ಹಾಲಿವುಡ್ ಕ್ರಿಟಿಕ್ ಅಸೋಸಿಯೇಷನ್ ನ ಕೆಲವು ಪ್ರಶಸ್ತಿಗಳನ್ನು ಪಡೆದಿರುವುದರಿಂದ RRR ಮೇಲೆ ಹೆಚ್ಚಿನ ನಿರೀಕ್ಷೆ ಇದೆ.
ಅತ್ಯುತ್ತಮ ವಿದೇಶಿ ಸಿನಿಮಾ ಅಥವಾ ಇಂಗ್ಲೀಷ್‌ಯೇತರ ಸಿನಿಮಾ ವಿಭಾಗದಲ್ಲಿ RRR ಸಿನಿಮಾವು, 'ಆಲ್ ಕ್ವೈಟ್ ಆನ್ ದಿ ವೆಸ್ಟರ್ನ್ ಫ್ರಂಟ್', 'ಅರ್ಜೆಂಟೀನಿಯಾ', '1985', 'ಕ್ಲೋಸ್', 'ಡಿಸಿಶನ್ ಟು ಲೀವ್' ಸಿನಿಮಾಗಳೊಂದಿಗೆ ಸೆಣೆಸಲಿದೆ. ಇನ್ನು ಒರಿಜಿನಲ್ ಹಾಡು ವಿಭಾಗದಲ್ಲಿ 'ನಾಟು-ನಾಟು' ಹಾಡನ್ನು ಸ್ಪರ್ಧೆಗೆ ಕಳಿಸಲಾಗಿದೆ.
RRR ಸಿನಿಮಾವನ್ನು ಇಂಗ್ಲೀಷೇತರ ವಿಭಾಗದಲ್ಲಿ ಮಾತ್ರವೇ ಸ್ಪರ್ಧೆಗೆ ಪರಿಗಣಿಸಿರುವ ಬಗ್ಗೆ ಕೆಲವರು ಅಸಮಾಧಾಣ ವ್ಯಕ್ತಪಡಿಸಿದ್ದಾರೆ. RRR ಸಿನಿಮಾವನ್ನು ಅತ್ಯುತ್ತಮ ಸಿನಿಮಾ ವಿಭಾಗದಲ್ಲಿ ಸ್ಪರ್ಧೆಗೆ ಪರಿಗಣಿಸಬೇಕಿತ್ತು ಎಂದಿದ್ದಾರೆ. ಹಾಗೂ ಕೇವಲ ಎರಡು ವಿಭಾಗದಲ್ಲಿ ಮಾತ್ರವೇ ಸ್ಪರ್ಧೆಗೆ ಪರಿಗಣಿಸಿರುವ ಬಗ್ಗೆಯೂ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಏನಾದರೂ ಆಗಲಿ ರಾಜಮೌಳಿ ನಿರ್ದೇಶಿಸಿ ಜೂ ಎನ್‌ಟಿಆರ್, ರಾಮ್ ಚರಣ್ ತೇಜ, ಆಲಿಯಾ ಭಟ್ ನಟನೆಯ RRR ಸಿನಿಮಾ ಬಹುದೊಡ್ಡ ಹಿಟ್ ಆಗಿರುವುದು ಮಾತ್ರವಲ್ಲ, ಭಾರತೀಯ ಸಿನಿಮಾ ರಂಗಕ್ಕೆ ವಿಶೇಷ ಗುರುತು ನೀಡುತ್ತಿದೆ. ಆ ಸಿನಿಮಾದ ಜೈತ ಯಾತ್ರೆ ಹೀಗೆಯೇ ಮುಂದುವರೆಯಲಿ ಎಂಬುದು ಸಿನಿ ಪ್ರೆಮಿಗಳ ಆಶಯ.