»   » ಚೂರು ಯಾಮಾರಿದ್ರೆ, ಹಾಲಿವುಡ್ ನಲ್ಲಿ 'ಮಾಸ್ತಿಗುಡಿ' ಮಾದರಿ ದುರಂತ.!

ಚೂರು ಯಾಮಾರಿದ್ರೆ, ಹಾಲಿವುಡ್ ನಲ್ಲಿ 'ಮಾಸ್ತಿಗುಡಿ' ಮಾದರಿ ದುರಂತ.!

Posted By:
Subscribe to Filmibeat Kannada

ಕಳೆದ ತಿಂಗಳಿನಲ್ಲಷ್ಟೇ ಸಂಭವಿಸಿದ್ದ 'ಮಾಸ್ತಿಗುಡಿ' ಚಿತ್ರದ ದುರಂತವನ್ನ ಯಾರು ತಾನೆ ಮರೆಯೋಕಾಗುತ್ತೆ. ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ 'ಮಾಸ್ತಿಗುಡಿ' ಚಿತ್ರದ ಕ್ಲ್ಯೈಮ್ಯಾಕ್ಸ್ ಚಿತ್ರೀಕರಣ ಮಾಡುತ್ತಿದ್ದಾಗ ಚಾಪರ್ ನಿಂದ ನೀರಿಗೆ ಹಾರಿ ಖಳನಟ ಅನಿಲ್ ಮತ್ತು ಉದಯ್, ತಮ್ಮ ಜೀವವನ್ನೇ ಕಳೆದುಕೊಂಡಿದ್ದರು. ಚೂರು ಮಿಸ್ ಆಗಿದ್ರೆ ಇಂತಹದ್ದೇ ದುರ್ಘಟನೆಗೆ ಹಾಲಿವುಡ್ ಕೂಡ ಸಾಕ್ಷಿಯಾಗಬೇಕಿತ್ತು.

ಹೌದು, ಅಪ್ಪಿ-ತಪ್ಪಿ ಸುರಕ್ಷತಾ ಕ್ರಮಗಳನ್ನು ಸರಿಯಾಗಿ ಪಾಲಿಸದೇ ಹೋಗಿದ್ದರೆ 'ಮಾಸ್ತಿಗುಡಿ' ಚಿತ್ರದ ದುರಂತದಂತೆ ಹಾಲಿವುಡ್ ನಲ್ಲೂ ಒಂದು ದುರ್ಘಟನೆ ನಡೆದು ಹೋಗುತ್ತಿತ್ತು. ಆದ್ರೆ, ಅದೃಷ್ಟವಶಾತ್ ಕೂದಲೆಳೆ ಅಂತರದಿಂದ ಹಾಲಿವುಡ್ ನಟಿ ರೂಬಿ ರೋಸ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.['ಮಾಸ್ತಿ ಗುಡಿ' ಖಳನಟರ ದುರಂತ ಸಾವು: ದುರ್ಘಟನೆಯ ಸಂಪೂರ್ಣ ವಿವರ]

Ruby Rose Had Almost Drowned While Filming Meg

ರೂಬಿ ರೋಸ್ ಅಭಿನಯದ 'ಮೆಗ್' ಚಿತ್ರದ ಚಿತ್ರೀಕರಣದ ವೇಳೆ ನೀರಿಗೆ ಧುಮುಕಿದ ರೂಬಿ ರೋಸ್ ಅಪಾಯಕ್ಕೆ ಸಿಲುಕಿದರು. ನೀರಿನಲ್ಲಿ ಆತಂಕಗೊಂಡವರಂತೆ ರೂಬಿ ರೋಸ್ ನಟಿಸಬೇಕಿತ್ತು. ಆದ್ರೆ, ರೂಬಿ ರೋಸ್ ರವರ ಆತಂಕ ಕಂಡು ಚಿತ್ರತಂಡದವರು 'ಅದ್ಭುತ ಆಕ್ಟಿಂಗ್' ಅಂತ ಭಾವಿಸಿದರು. ತದನಂತರ 'ಕಾಪಾಡಿ..ಕಾಪಾಡಿ' ಅಂತ ಕಿರುಚಿಕೊಂಡ ಮೇಲೆ ರೂಬಿ ರೋಸ್ ರವರನ್ನ ಚಿತ್ರತಂಡ ಮೇಲಕ್ಕೆ ಕರೆತಂದರು. ಈ ವಿಚಾರವನ್ನ ಖುದ್ದು ರೂಬಿ ರೋಸ್ ಅವರೇ ಖಾಸಗಿ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.['ಮಾಸ್ತಿ ಗುಡಿ' ದುರಂತ ಸಂಭವಿಸಲು ಪ್ರಮುಖ ಕಾರಣ ಇದೇ.!]

Ruby Rose Had Almost Drowned While Filming Meg

''ನಿರ್ದೇಶಕ ಜಾನ್ ಅವರು ನಾನು ಆಕ್ಟಿಂಗ್ ಮಾಡುತ್ತಿದ್ದೇನೆ ಎಂದು ತಿಳಿದುಕೊಂಡಿದ್ದರು. ನಾನು ಆರಂಭದಲ್ಲಿ ಆಕ್ಟಿಂಗ್ ಮಾಡಿದೆ. ಆದ್ರೆ ಅಮೇಲೆ ಆಗಲಿಲ್ಲ. ನಿಜವಾಗಲೂ ಮುಳುಗುತ್ತಿದ್ದೆ. ಆದ್ರೆ, ಜಾನ್ ಅವರು ''ಅದ್ಬುತ, ಸೂಪರ್ ಆಕ್ಟಿಂಗ್'' ಎನ್ನುತ್ತಿದ್ದರು. ಆದ್ರೆ, ನನಗೆ ಗೊತ್ತಿತ್ತು ಅದು ಅದ್ಭುತವಲ್ಲ. ನಾನು ನಿಜವಾಗಲೂ ಮುಳುಗುತ್ತಿದ್ದೆ ಅಂತ'' ಎಂದು ರೂಬಿ ರೋಸ್ ಹೇಳಿಕೊಂಡಿದ್ದಾರೆ.

ಅಂದ್ಹಾಗೆ 'ಮೆಗ್' ಸಿನಿಮಾ 1997 ರಲ್ಲಿ ಸ್ಟೀವ್ ಆಲ್ಟನ್ ಬರೆದಿರುವ 'ಮೆಗ್' ಪುಸ್ತಕವನ್ನ ಆಧರಿಸಿದ ಕಥೆ. ಜಾನ್ ನಿರ್ದೇಶನ ಮಾಡುತ್ತಿದ್ದು, ಜೇಸನ್ ಸ್ಟಥಮ್, ಜೆಸ್ಸಿಕಾ, ರೂಬಿ ರೋಸ್ ಸೇರಿದಂತೆ ಹಲವರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸದ್ಯ, ಚಿತ್ರೀಕರಣ ಮಾಡುತ್ತಿರುವ 'ಮೆಗ್' 2018 ರಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

English summary
Hollywood actress Ruby Rose Reveals that she would almost have drowned during the shooting of her forthcoming movie, 'Meg'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada