»   » ಹೊಚ್ಚ ಹೊಸ ಟ್ರೈಲರ್ ನಲ್ಲಿ ಜೇಮ್ಸ್ ಬಾಂಡ್ ಮಿಂಚಿಂಗ್

ಹೊಚ್ಚ ಹೊಸ ಟ್ರೈಲರ್ ನಲ್ಲಿ ಜೇಮ್ಸ್ ಬಾಂಡ್ ಮಿಂಚಿಂಗ್

Posted By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಜೇಮ್ಸ್ ಬಾಂಡ್ ಸರಣಿಯ 24ನೇ ಚಿತ್ರದ ಹೊಚ್ಚ ಹೊಸ ಟ್ರೈಲರ್ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಅದರೂ, ಯೂಟ್ಯೂಬ್ ನಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ಸ್ಪ್ರೆಕ್ಟ ಟ್ರೈಲರ್ 50 ಲಕ್ಷ ಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ.

ಏಜೆಂಟ್ 007 ಬಳಸುವ ಕಾರು ಲಂಡನ್ನಿನಲ್ಲಿ ಅನಾವರಣಗೊಂಡು, ಲಂಡನ್ನಿನ ಪೈನ್ ವುಡ್ ಸ್ಟುಡಿಯೋದಲ್ಲಿ ನಡೆದ ಸಮಾರಂಭದಲ್ಲಿ ಬಾಂಡ್ ಚಿತ್ರದ ಪರಿಚಯದೊಂದಿಗೆ ಶೂಟಿಂಗ್ ಆರಂಭವಾಗಿತ್ತು. ನಂತರ ಮೆಕ್ಸಿಕೋನಲ್ಲಿ ಚಿತ್ರೀಕರಣಮುಂದುವರೆದಿತ್ತು.[ಬಾಂಡ್ ಹೊಚ್ಚ ಹೊಸ ಟೀಸರ್ ಪೋಸ್ಟರ್]

ಹೊಸ ಟ್ರೈಲರ್ ನಲ್ಲಿ ಗನ್ಸ್, ಗರ್ಲ್ಸ್, ಗ್ಯಾಜೆಟ್, ಸಾಹಸ ಸನ್ನಿವೇಶ, ರೋಮ್ಯಾನ್ಸ್ ಎಲ್ಲವೂ ನಿರೀಕ್ಷೆಯಂತೆ ಇದೆ. ಅದರೆ, ಎಲ್ಲಾ ಬಾಂಡ್ ಚಿತ್ರಗಳಂತೆ ಈ ಚಿತ್ರಕ್ಕೂ ಕಥೆ ಮುಖ್ಯವಾಗಲಿದೆ. ಈ ಚಿತ್ರದಲ್ಲಿ ಕಥೆ ಹೇಗೆ ಸಾಗಲಿದೆ ಎಂಬುದು ಚಿತ್ರದ ಓಟವನ್ನು ನಿರ್ಧರಿಸಲಿದೆ.

ಟ್ರೈಲರ್ ನಲ್ಲಿ ಡೇನಿಯಲ್ ಕ್ರೇಗ್ ಅಲ್ಲದೆ ಓಬೆರ್ ಹಸರ್ ಪಾತ್ರದಲ್ಲಿ ಕ್ರಿಸ್ಟೋಫ್ ವಾಲ್ಜ್ ಗಮನಸೆಳೆಯುತ್ತಾರೆ. ಅತ್ಯಂತ ಹಿರಿಯ ಬಾಂಡ್ ಗರ್ಲ್ ಆಗಿ ಮೋನಿಕಾ ಬೆಲುಚ್ಚಿ ತಕ್ಕ ಮಟ್ಟಿಗೆ ಕಾಣಿಸಿಕೊಂಡಿದ್ದಾರೆ.

24ನೇ ಚಿತ್ರದಲ್ಲಿ ಕ್ರೇಗ್ ಬಾಂಡ್ ಸೂಪರ್ ಏಜೆಂಟ್

ಕ್ಯಾಸಿನೋ ರಾಯಲ್, ಕ್ವಾಂಟಮ್ ಆಫ್ ಸೋಲಾಸ್ ಹಾಗೂ ಸ್ಕೈ ಫಾಲ್ ಚಿತ್ರದಲ್ಲಿ ಅದ್ಭುತ ಸಾಹಸ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದ ನಟ ಡೇನಿಯಲ್ ಕ್ರೇಗ್ ಬಾಂಡ್ ಸೂಪರ್ ಏಜೆಂಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮೈ ಅಪ್ಪಿಕೊಂಡಿರುವ ಟರ್ಟಲ್ ನೆಕ್ ಡ್ರೆಸ್ ನಲ್ಲಿ ಬಾಂಡ್ ಸಕತ್ ಆಗಿ ಕಾಣಿಸಿಕೊಂಡಿದ್ದಾರೆ.

ಪಾತ್ರವರ್ಗ ಯಾರು ಯಾರು ಇದ್ದಾರೆ?

ಸ್ಕೈಫಾಲ್ ಗೆ ಚಿತ್ರಕಥೆ ಒದಗಿಸಿದ ಜಾನ್ ಲೊಗಾನ್, ನೀಯಲ್ ಪುರ್ವಿಸ್ ಹಾಗೂ ರಾಬರ್ಟ್ ವೇಡ್ ಅವರು ಈ ಚಿತ್ರಕ್ಕೂ ಕಥೆ ಬರೆದಿದ್ದಾರೆ. ರಾಲ್ಫ್ ಫಿನ್ನೆಸ್ 'M' ಪಾತ್ರದಲ್ಲಿ ನಯೋಮಿ ಹ್ಯಾರಿಸ್ 'eve moneypenny' ಪಾತ್ರದಲ್ಲಿ ಬೆನ್ ವಿಶ್ ಶಾ 'Q' ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಬಾಂಡ್ ಚಿತ್ರದ ಕನ್ಯೆಯರು

ರಾಲ್ಫ್ ಫಿನ್ನೆಸ್ 'M' ಪಾತ್ರದಲ್ಲಿ ನಯೋಮಿ ಹ್ಯಾರಿಸ್ 'eve moneypenny' ಪಾತ್ರದಲ್ಲಿ ಬೆನ್ ವಿಶ್ ಶಾ 'Q' ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಚಿತ್ರದ ಬಗ್ಗೆ ಕಾಲಕಾಲಕ್ಕೆ ಮಾಹಿತಿ

ಚಿತ್ರದ ಬಗ್ಗೆ ಕಾಲಕಾಲಕ್ಕೆ ಮಾಹಿತಿ ನೀಡುತ್ತಿರುವ ಅಧಿಕೃತ ಟ್ವಿಟ್ಟರ್ ಖಾತೆ.

ಚಿತ್ರೀಕರಣ ಎಲ್ಲೆಲ್ಲಿ ನಡೆದಿದೆ?

24ನೇ ಚಿತ್ರ ಪೈನ್ ವುಡ್ ಸ್ಟುಡಿಯೋ ಲಂಡನ್, ಮೆಕ್ಸಿಕೋ, ರೋಮ್, ಮೊರಾಕ್ಕೋ, ಸೊಲ್ಡನ್, ಒಬೆರ್ಟಿಲಿಯಾಕ್, ಲೇಕ್ ಅಲ್ಟಾಸಿ, ಆಸ್ಟ್ರೀಯಾ ಮುಂತಾದೆಡೆ ಚಿತ್ರೀಕರಣವಾಗಲಿದೆ. ಸದ್ಯಕ್ಕೆ ಮಾರ್ಚ್ ತಿಂಗಳ ಅಂತ್ಯದವರೆಗೂ ಮೆಕ್ಸಿಕೋದಲ್ಲಿ ಶೂಟಿಂಗ್ ನಡೆಯಲಿದೆ.

ಹೊಚ್ಚ ಹೊಸ ಟ್ರೈಲರ್

ಜೇಮ್ಸ್ ಬಾಂಡ್ ಚಿತ್ರದ ಹೊಚ್ಚ ಹೊಸ ಟ್ರೈಲರ್ ನೋಡಿ...

English summary
A new trailer for Spectre, James Bond's franchise's 24th installment has been dropped on Twitter and after watching the 2 minutes and 32 seconds video, we are thrilled.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada