»   » ಜೇಮ್ಸ್ ಬಾಂಡ್ ಹೊಚ್ಚ ಹೊಸ ಟೀಸರ್ ಪೋಸ್ಟರ್

ಜೇಮ್ಸ್ ಬಾಂಡ್ ಹೊಚ್ಚ ಹೊಸ ಟೀಸರ್ ಪೋಸ್ಟರ್

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಜೇಮ್ಸ್ ಬಾಂಡ್ ಸರಣಿಯ 24ನೇ ಚಿತ್ರದ ಹೆಸರು, ಪಾತ್ರವರ್ಗ, ಏಜೆಂಟ್ 007 ಬಳಸುವ ಕಾರು ಲಂಡನ್ನಿನಲ್ಲಿ ಅನಾವರಣಗೊಂಡು ಮೂರು ತಿಂಗಳುಗಳು ಕಳೆದಿವೆ. ಲಂಡನ್ನಿನ ಪೈನ್ ವುಡ್ ಸ್ಟುಡಿಯೋದಲ್ಲಿ ನಡೆದ ಸಮಾರಂಭದಲ್ಲಿ ಬಾಂಡ್ ಚಿತ್ರದ ಪರಿಚಯದೊಂದಿಗೆ ಶೂಟಿಂಗ್ ಕೂಡಾ ಅಲ್ಲೇ ಆರಂಭಗೊಂಡಿದೆ. ಸದ್ಯಕ್ಕೆ ಬಾಂಡ್ ಚಿತ್ರದ ರೋಚಕ ಸನ್ನಿವೇಶಗಳು ಮೆಕ್ಸಿಕೋನಲ್ಲಿ ಚಿತ್ರೀತವಾಗುತ್ತಿವೆ.

ಕ್ಯಾಸಿನೋ ರಾಯಲ್, ಕ್ವಾಂಟಮ್ ಆಫ್ ಸೋಲಾಸ್ ಹಾಗೂ ಸ್ಕೈ ಫಾಲ್ ಚಿತ್ರದಲ್ಲಿ ಅದ್ಭುತ ಸಾಹಸ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದ ನಟ ಡೇನಿಯಲ್ ಕ್ರೇಗ್ ಬಾಂಡ್ ಸೂಪರ್ ಏಜೆಂಟ್ ಆಗಿ 24ನೇ ಚಿತ್ರದಲ್ಲಿ ಹೇಗೆ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. Spectre ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಮೈ ಅಪ್ಪಿಕೊಂಡಿರುವ ಟರ್ಟಲ್ ನೆಕ್ ಡ್ರೆಸ್ ನಲ್ಲಿ ಬಾಂಡ್ ಕಾಣಿಸಿಕೊಂಡಿದ್ದಾರೆ. [ಜೇಮ್ಸ್ ಬಾಂಡ್ ಹೊಸ ಚಿತ್ರದ ಹೆಸರು ಹಾಗೂ ಪಾತ್ರವರ್ಗ]

ಸೀಕ್ರೇಟ್ ಏಜೆಂಟ್ ಆಗಿ ನಾಲ್ಕನೇ ಚಿತ್ರದಲ್ಲೂ ಡೇನಿಯಲ್ ರಫ್ ಅಂಡ್ ಟಫ್ ಲುಕ್ ಮುಂದುವರೆಸಿದ್ದಾರೆ. ಇಯಾನ್ ಫ್ಲೆಮಿಂಗ್ಸ್ ಕಲ್ಪನೆಗೆ ತಕ್ಕಂತೆ ತೆರೆಯ ಮೇಲೆ ಬಂದಿರುವ ಈ ಕಾಲ್ಪನಿಕ ಪಾತ್ರ ವಿಶ್ವದೆಲ್ಲೆಡೆ ಜೇಮ್ಸ್ ಬಾಂಡ್ 007ಆಗಿ ಜನಪ್ರಿಯಗೊಂಡಿರುವುದು ಈಗ ಇತಿಹಾಸ.[ಹಾಲಿವುಡ್ ನಟಿಯರ ನಗ್ನ ಚಿತ್ರಗಳು ಲೀಕ್]

1962ರ ಸೀನ್ ಕಾನರಿಯಿಂದ ಇಂದಿನ ಡೇನಿಯಲ್ ಕ್ರೇಗ್ ತನಕ ಎಲ್ಲರೂ ಜನಮೆಚ್ಚುಗೆ ಗಳಿಸಿದ್ದಾರೆ. ಹೊಸ ಬಾಂಡ್ ಚಿತ್ರ ಈ ವರ್ಷ ನವೆಂಬರ್ ಮೊದಲ ವಾರ ಪ್ರೀಮಿಯರ್ ಶೋಗೆ ತಯಾರಾಗುತ್ತಿದೆ. ಸದ್ಯಕ್ಕೆ ಶೂಟಿಂಗ್ ಹಾಗೂ ಇನ್ನಷ್ಟು ವಿವರ ಮುಂದಿದೆ.['ಫಿಫ್ಟಿಶೇಡ್ಸ್ ಆಫ್ ಗ್ರೇ' ಗೆ ಭಾರತದಲ್ಲಿ ನಿಷೇಧ]

ಜೇಮ್ಸ್ ಬಾಂಡ್ ಶೂಟಿಂಗ್ ಎಲ್ಲಿ ನಡೆದಿದೆ?

24ನೇ ಚಿತ್ರ ಪೈನ್ ವುಡ್ ಸ್ಟುಡಿಯೋ ಲಂಡನ್, ಮೆಕ್ಸಿಕೋ, ರೋಮ್, ಮೊರಾಕ್ಕೋ, ಸೊಲ್ಡನ್, ಒಬೆರ್ಟಿಲಿಯಾಕ್, ಲೇಕ್ ಅಲ್ಟಾಸಿ, ಆಸ್ಟ್ರೀಯಾ ಮುಂತಾದೆಡೆ ಚಿತ್ರೀಕರಣವಾಗಲಿದೆ. ಸದ್ಯಕ್ಕೆ ಮಾರ್ಚ್ ತಿಂಗಳ ಅಂತ್ಯದವರೆಗೂ ಮೆಕ್ಸಿಕೋದಲ್ಲಿ ಶೂಟಿಂಗ್ ನಡೆಯಲಿದೆ.

ಶೂಟಿಂಗ್ ಬಗ್ಗೆ ವಿವರ ನೀಡುವ ಟ್ವೀಟ್ಸ್

ಶೂಟಿಂಗ್ ಬಗ್ಗೆ ವಿವರಗಳನ್ನು ಜೇಮ್ಸ್ ಬಾಂಡ್ ಐಡಿ ಟ್ವೀಟ್ಸ್ ಮಾಡಿ ನೀಡುತ್ತಿದೆ.

ವಿಲ್ಸನ್ ಜೊತೆ ಸಿಗ್ಮನ್ ಸ್ಟಿಫನಿ

ನಿರ್ಮಾಪಕ ಮೈಕಲ್ ಜಿ ವಿಲ್ಸನ್ ಜೊತೆ ಸಿಗ್ಮನ್ ಸ್ಟಿಫನಿ (ಎಸ್ಟ್ರೆಲ್ಲಾ)

ಪ್ರೀಮಿಯರ್ ಶೋ ಯಾವಾಗ?

2014ರ ಡಿಸೆಂಬರ್ 6ಕ್ಕೆ 24ನೇ ಚಿತ್ರದ ಶೂಟಿಂಗ್ ಲಂಡನ್ನಿನ ಪೈನ್ ವುಡ್ ಸ್ಟುಡಿಯೋಸ್ ನಲ್ಲಿ ಆರಂಭವಾಗಲಿದೆ. 2015ರ ನವೆಂಬರ್ 6ಕ್ಕೆ ಚಿತ್ರ ತೆರೆ ಕಾಣಲಿದೆ.

ಪಾತ್ರವರ್ಗ ಯಾರು ಯಾರು ಇದ್ದಾರೆ?

ಸ್ಕೈಫಾಲ್ ಗೆ ಚಿತ್ರಕಥೆ ಒದಗಿಸಿದ ಜಾನ್ ಲೊಗಾನ್, ನೀಯಲ್ ಪುರ್ವಿಸ್ ಹಾಗೂ ರಾಬರ್ಟ್ ವೇಡ್ ಅವರು ಈ ಚಿತ್ರಕ್ಕೂ ಕಥೆ ಬರೆದಿದ್ದಾರೆ. ರಾಲ್ಫ್ ಫಿನ್ನೆಸ್ 'M' ಪಾತ್ರದಲ್ಲಿ ನಯೋಮಿ ಹ್ಯಾರಿಸ್ 'eve moneypenny' ಪಾತ್ರದಲ್ಲಿ ಬೆನ್ ವಿಶ್ ಶಾ 'Q' ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ

English summary
The wait is over as the first look of the handsome Bond aka Daniel Craig from the 24th installment of the James Bond franchise has been dropped.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada