For Quick Alerts
  ALLOW NOTIFICATIONS  
  For Daily Alerts

  ಸ್ಪೈಡರ್‌ಮ್ಯಾನ್‌ ಮೇಲೆ ಮುಗಿಬಿದ್ದ ಹಳೆ ವಿಲನ್‌ಗಳು: ರೋಚಕ ಹಣಾಹಣಿ

  |

  ಮಾರ್ವೆಲ್ ಯೂನಿವರ್ಸ್‌ನ ಜನಪ್ರಿಯ ಸೂಪರ್ ಹೀರೋ ಸ್ಪೈಡರ್‌ಮ್ಯಾನ್‌ನ ಹೊಸ ಸಿನಿಮಾ 'ಸ್ಪೈಡರ್‌ಮ್ಯಾನ್‌; ನೋ ವೇ ಹೋಮ್'ನ ಅಧಿಕೃತ ಟ್ರೈಲರ್ ಬಿಡುಗಡೆ ಆಗಿದ್ದು, ಸ್ಪೈಡರ್‌ಮ್ಯಾನ್‌ ಮೇಲೆ ಎಲ್ಲ ಮಾಜಿ ವಿಲನ್‌ಗಳು ಒಟ್ಟಿಗೆ ಮುಗಿಬಿದ್ದಿರುವುದು ಟ್ರೇಲರ್‌ನಿಂದ ಗೊತ್ತಾಗುತ್ತಿದೆ.

  ನಿನ್ನೆಯಷ್ಟೇ 'ಸ್ಪೈಡರ್‌ಮ್ಯಾನ್‌; ನೋ ವೇ ಹೋಮ್'ನ ಟ್ರೇಲರ್ ಬಿಡುಗಡೆ ಆಗಿದ್ದು, ಟ್ರೇಲರ್‌ನಿಂದ ಗೊತ್ತಾಗುತ್ತಿರುವ ಅಂಶವೆಂದರೆ ಸ್ಪೈಡರ್‌ಮ್ಯಾನ್ ಯಾರೆಂಬುದು ಎಲ್ಲರಿಗೂ ಗೊತ್ತಾಗಿದೆ. ಅದು ಮಾತ್ರವೇ ಅಲ್ಲದೆ ಸ್ಪೈಡರ್‌ಮ್ಯಾನ್ ಅನ್ನು ಅಪರಾಧಿಯೆಂದು ಸರ್ಕಾರ ಆತನನ್ನು ಬಂಧಿಸಲು ಯತ್ನಿಸುತ್ತಿದೆ. ಇದು ಸ್ವತಃ ಸ್ಪೈಡರ್‌ಮ್ಯಾನ್ ಆಗಿರುವ ಪೀಟರ್ ಪಾರ್ಕರ್‌ಗೆ ಹಿಡಿಸುತ್ತಿಲ್ಲ. ಹಾಗಾಗಿ ಆತ ಡಾಕ್ಟರ್ ಸ್ಟ್ರೇಂಜ್‌ನ ಸಹಾಯದೊಂದಿಗೆ ಸಮಯವನ್ನು ಹಿಂದಕ್ಕೆ ಚಲಿಸುವಂತೆ ಮಾಡುತ್ತಾನೆ, ತನ್ನ ಗುರುತು ಪತ್ತೆಯಾಗದಿರುವಂತೆ ಮಾಡಲು ಯತ್ನಿಸುತ್ತಾನೆ.

  ಆದರೆ ಇದರಿಂದಾಗಿ ಸ್ಪೈಡರ್‌ಮ್ಯಾನ್‌ನ ಹಳೆಯ ಶತ್ರುಗಳೆಲ್ಲ ಜೀವಂತವಾಗಿ ಮತ್ತೆ ಸ್ಪೈಡರ್‌ಮ್ಯಾನ್‌ ಮೇಲೆ ಯುದ್ಧ ಸಾರುತ್ತಾರೆ. ಸ್ಲೈಡರ್‌ಮ್ಯಾನ್ ಮೊದಲ ಸಿನಿಮಾದ ವಿಲನ್ ಗ್ರೀನ್ ಗಾಬ್ಲಿಂಗ್ ಆ ನಂತರ ಸಿನಿಮಾ ಸರಣಿಗಳ ವಿಲನ್‌ಗಳಾದ ಸ್ಯಾಂಡ್‌ಮ್ಯಾನ್, ಡಾಕ್ಟರ್ ಹಾಕ್, ಲಿಜರ್ಡ್‌ ಮ್ಯಾನ್, ಎಲೆಕ್ಟ್ರಾ ಮ್ಯಾನ್, ಬ್ಕ್ಯಾಲ್ ಸ್ಪೈಡರ್ ಇನ್ನೂ ಕೆಲವು ವಿಲನ್‌ಗಳು ಸಿನಿಮಾದಲ್ಲಿದ್ದಾರೆ. ಸ್ಪೈಡರ್‌ಮ್ಯಾನ್ ಮೊದಲ ಸಿನಿಮಾದಲ್ಲಿದ್ದ ಪತ್ರಿಕೆ ಎಡಿಟರ್ ಪಾತ್ರವೂ 'ಸ್ಪೈಡರ್‌ಮ್ಯಾನ್ ನೋ ವೇ ಹೋಮ್' ಸಿನಿಮಾದಲ್ಲಿದೆ.

  ಹಲವು ವಿಲನ್‌ಗಳು ಒಮ್ಮೆಲೆ ಸ್ಪೈಡರ್‌ಮ್ಯಾನ್ ಮೇಲೆ ಮುಗಿಬೀಳುವ ಜೊತೆಗೆ ಡಾಕ್ಟರ್ ಸ್ಟ್ರೇಂಜ್ ಸಹ ಸ್ಪೈಡರ್‌ಮ್ಯಾನ್ ಮೇಲೆ ಫೈಟ್‌ ಮಾಡುತ್ತಿರುವ ದೃಶ್ಯಗಳು ಟ್ರೇಲರ್‌ನಲ್ಲಿದೆ. ಇದು ಸ್ಪೈಡರ್ ಅಭಿಮಾನಿಗಳಿಗೆ ಆಶ್ಚರ್ಯ ತರಿಸಿದೆ.

  ಆದರೆ ಸಿನಿಮಾದಲ್ಲಿ ಮತ್ತೊಂದು ಆಸಕ್ತಿದಾಯಕ ಅಂಶವೂ ಇದೆ. ಡಾಕ್ಟರ್‌ ಸ್ಟ್ರೇಂಜ್‌ನಿಂದಾಗಿ ಈ ಹಿಂದಿನ ವಿಲನ್‌ಗಳು ವರ್ತಮಾನಕ್ಕೆ ಬರುತ್ತಾರೆ ಜೊತೆಗೆ ಹಳೆಯ ಸ್ಪೈಡರ್‌ಮ್ಯಾನ್‌ಗಳು ಸಹ ಬರುತ್ತಾರೆ. ಈ ಅಂಶವನ್ನು ಇದೀಗ ಬಿಡುಗಡೆ ಆಗಿರುವ ಟ್ರೇಲರ್‌ನಲ್ಲಿ ತೋರಿಸಿಲ್ಲವಾದರೂ ಈ ಬಗ್ಗೆ ಟ್ರೇಲರ್‌ನಲ್ಲಿ ಕೆಲವು

  ಸುಳಿವುಗಳಂತೂ ಇವೆ. ಡಾಕ್ ಹಾಕ್‌ ಹಾಗೂ ಬ್ಲ್ಯಾಕ್ ಸ್ಪೈಡರ್‌ಮ್ಯಾನ್‌, ಹಾಲಿ ಸ್ಪೈಡರ್‌ಮ್ಯಾನ್ ಪರವಾಗಿ ಉಳಿದ ವಿಲನ್‌ಗಳ ಜೊತೆ ಫೈಟ್ ಮಾಡುವ ಬಗ್ಗೆಯೂ ಕೆಲವು ಸುಳಿವುಗಳು ಟ್ರೇಲರ್‌ನಲ್ಲಿದೆ. ಆದರೆ ನಾಯಕಿ ಎಂಜಿ ಸಹ ಹಳೆಯ ರೂಪದಲ್ಲಿ ಮರಳಿ ಬರುತ್ತಾಳೊ ಇಲ್ಲವೋ ಸಿನಿಮಾ ನೋಡಿದ ಮೇಲೆಯೇ ಗೊತ್ತಾಗಲಿದೆ.

  'ಸ್ಪೈಡರ್‌ಮ್ಯಾನ್ ನೋ ವೇ ಹೋಮ್' ಸಿನಿಮಾವು ಡಿಸೆಂಬರ್ 17 ರಂದು ಪ್ರಪಂಚದಾದ್ಯಂತ ಬಿಡುಗಡೆ ಆಗಲಿದೆ. ಈ ಸಿನಿಮಾವು ಸ್ಪೈಡರ್‌ಮ್ಯಾನ್ ಫ್ರಾಂಚೈಸಿಯ ಕೊನೆಯ ಸಿನಿಮಾ ಎನ್ನಲಾಗುತ್ತಿದೆ. ಅಥವಾ ಕೆಲವು ವರ್ಷಗಳಿಂದ ಸ್ಪೈಡರ್‌ಮ್ಯಾನ್‌ ಆಗಿ ನಟಿಸುತ್ತಿರುವ ಟಾಮ್ ಹಾಲೆಂಡ್‌ರ ಕೊನೆಯ ಸಿನಿಮಾ ಆಗಲಿದೆ ಎಂಬ ಸುದ್ದಿಯೂ ಇದೆ. 'ನೋ ವೇ ಹೋಮ್' ಅನ್ನು ಜಾನ್ ವ್ಯಾಟ್ಸ್ ನಿರ್ದೇಶನ ಮಾಡಿದ್ದಾರೆ. ಜಾನ್ ವ್ಯಾಟ್ಸ್ ಈ ಹಿಂದೆ 'ಸ್ಪೈಡರ್‌ಮ್ಯಾನ್; ಹೋಮ್ ಕಮಿಂಗ್' ಮತ್ತು 'ಸ್ಪೈಡರ್‌ಮ್ಯಾನ್; ಫಾರ್ ಫ್ರಮ್ ಹೋಮ್' ಸಿನಿಮಾ ನಿರ್ದೇಶಿಸಿದ್ದರು. ಇವುಗಳ ಜೊತೆಗೆ 'ಕ್ಲೌನ್', 'ಕಾಪ್ ಕಾರ್' 'ಫೆಂಟಾಸ್ಟಿಕ್ ಫೋರ್' ಸಿನಿಮಾ ಸಹ ನಿರ್ದೇಶನ ಮಾಡಿದ್ದಾರೆ.

  English summary
  Spider Man no way home trailer released on November 17, Movie will released on December 17 world wide.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X