For Quick Alerts
  ALLOW NOTIFICATIONS  
  For Daily Alerts

  ಟಾಮ್ ಮಾಡಿದ ಭಯಂಕರ ಸ್ಟಂಟ್ ವಿಡಿಯೋ

  By ಜೇಮ್ಸ್ ಮಾರ್ಟಿನ್
  |

  ಟಾಮ್ ಕ್ರೂಸ್ ಎಂದಾಕ್ಷಣ ನೆನಪಿಗೆ ಬರುವುದು 'ಮಿಷನ್ ಇಂಪಾಸಿಬಲ್' ಚಿತ್ರಗಳ ಸರಣಿ. ಈ ಸರಣಿ ಚಿತ್ರಗಳಿಗಾಗಿ ಟಾಮ್ ಮಾಡುವ ಸಾಹಸ ದೃಶ್ಯಗಳು ಚಿತ್ರದಿಂದ ಚಿತ್ರಕ್ಕೆ ವಿಭಿನ್ನವಾಗಿ, ಮೈನವಿರೇಳಿಸುವಂತಿರುತ್ತದೆ. ಈ ಸರಣಿ ಮುಂದಿನ ಚಿತ್ರದ ಶೂಟಿಂಗ್ ಸದ್ಯಕ್ಕೆ ಜಾರಿಯಲ್ಲಿದ್ದು, ಇನ್ನೂ ಹೆಸರಿಡದ 'ಎಂಐ' ಸರಣಿಯ ಮುಂದಿನ ಚಿತ್ರಕ್ಕಾಗಿ ಟಾಮ್ ಭಯಾನಕ ಸ್ಟಂಟ್ ದೃಶ್ಯದಲ್ಲಿ ಪಾಲ್ಗೊಂಡಿದ್ದಾರೆ. ['ಫಾಸ್ಟ್ ಅಂಡ್ ಫ್ಯೂರಿಯಸ್ ಸ್ಟಂಟ್ ನೋಡಿ]

  ಭೂಮಿಯಿಂದ ಸುಮಾರು 5,000 ಸಾವಿರ ಅಡಿ ಎತ್ತರದಲ್ಲಿ ವೇಗವಾಗಿ ಚಲಿಸುತ್ತಿರುವ ವಿಮಾನದ ಕದ ತೆರೆದು ಹೊರ ಹಾರುವ ದೃಶ್ಯ ರೋಮಾಂಚನಕಾರಿಯಾಗಿದೆ. ಏರ್ ಬಸ್ ಎ 400ಎಂ ಅಟ್ಲಾಸ್ ಮಿಲಿಟರಿ ವಾಹಕ ವಿಮಾನದಿಂದ ಹೊರಕ್ಕೆ ಬರುವ ಟಾಮ್ ಕ್ರೂಸ್ ಬಾಗಿಲ ಬಳಿ ನಿಂತಿರುವ ಚಿತ್ರಗಳು ಎಲ್ಲೆಡೆ ಹರಿದಾಡಿತ್ತು. ಈಗ ವಿಡಿಯೋ ತುಣುಕುಗಳು ಸಿಕ್ಕಿವೆ..

  ಟಾಮ್ ಗೆ ಚಿತ್ರತಂಡ ಅಡ್ಡಿ ಪಡಿಸಿತ್ತು

  ಟಾಮ್ ಗೆ ಚಿತ್ರತಂಡ ಅಡ್ಡಿ ಪಡಿಸಿತ್ತು

  ಏರ್ ಬಸ್ ಎ 400ಎಂ ವೇಗ ಗಂಟೆ 250 ಮೈಲಿ ಪ್ರತಿ ಗಂಟೆ ವೇಗದಲ್ಲಿ ಸಂಚರಿಸುವ ವಿಮಾನವೇರಿ 52 ವರ್ಷ ವಯಸ್ಸಿನ ಟಾಮ್ ಕ್ರೂಸ್ ಸಾಹಸ ಮಾಡಲು ಹೊರಟಾಗ ಚಿತ್ರ ತಂಡ ಅಡ್ಡಿಪಡಿಸಿತ್ತು.

  ಬಾಡಿ ಡಬಲ್ ಬಳಸದ ಟಾಮ್ ಕ್ರೂಸ್

  ಬಾಡಿ ಡಬಲ್ ಬಳಸದ ಟಾಮ್ ಕ್ರೂಸ್

  ಬಾಡಿ ಡಬಲ್ ಬಳಸಿ ಡ್ಯೂಪ್ ಗಳಿಂದ ಸಾಹಸ ದೃಶ್ಯ ಚಿತ್ರೀಕರಿಸೋಣ ಎಂದು ಸಲಹೆ ನೀಡಿತ್ತು. ಅದರೆ, ಸಾಹಸಿ ಟಾಮ್ ಸೂಟು ಬೂಟುಧಾರಿಯಾಗಿ ಲಿಂಕನ್ ಷೈರ್ ಹತ್ತಿರದ ಶೂಟಿಂಗ್ ಸ್ಪಾಟ್ ಗೆ ಹಾಜರಾದರು.

  ಮಿಷನ್ ಇಂಪಾಸಿಬಲ್ ಸ್ಟಂಟ್ ವಿಡಿಯೋ 1

  ಮಿಷನ್ ಇಂಪಾಸಿಬಲ್ ಚಿತ್ರಕ್ಕಾಗಿ ಟಾಮ್ ಕ್ರೂಸ್ ಮಾಡಿರುವ ಅದ್ಭುತ ಸ್ಟಂಟ್ ವಿಡಿಯೋ 1

  ಸ್ಟಂಟ್ ನಾವೇ ಮಾಡುವುದು ಉತ್ತಮ

  ಸ್ಟಂಟ್ ನಾವೇ ಮಾಡುವುದು ಉತ್ತಮ

  ಪಾತ್ರಕ್ಕೆ ದೈಹಿಕವಾಗಿ ಮಾನಸಿಕವಾಗಿ ಜೀವ ತುಂಬಬೇಕು ಎಂದರೆ ಸ್ಟಂಟ್ ಗಳನ್ನು ನಾವೇ ಮಾಡುವುದು ಉತ್ತಮ ನನ್ನ 30 ವರ್ಷಗಳ ಅನುಭವಕ್ಕೂ ಬೆಲೆ ಎಂದು ಎಂಐ ಸ್ಟಾರ್ ಹೇಳಿದ್ದಾರೆ.

  ಮಿಷನ್ ಇಂಪಾಸಿಬಲ್ ಯಾವಾಗ ತೆರೆಗೆ?

  ಮಿಷನ್ ಇಂಪಾಸಿಬಲ್ ಯಾವಾಗ ತೆರೆಗೆ?

  ಎಥಾನ್ ಹಂಟ್ ಆಗಿ ಮಿಷನ್ ಇಂಪಾಸಿಬಲ್ ಸರಣಿಯ ಮುಂದಿನ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಟಾಮ್ ಕ್ರೂಸ್ ಅವರ ಜೊತೆಗೆ ಜೆರೆಮಿ ರೆನ್ನರ್, ಅಲೆಕ್ ಬಾಲ್ಡ್ವಿನ್, ಪಾಲಾ ಪಾಟನ್ ಮುಂತಾದವರಿದ್ದಾರೆ. ಡಿಸೆಂಬರ್ 25,2015ಕ್ಕೆ ಚಿತ್ರ ತೆರೆ ಕಾಣಲಿದೆ.

  rn

  ಮಿಷನ್ ಇಂಪಾಸಿಬಲ್ ಸ್ಟಂಟ್ ವಿಡಿಯೋ 2

  ಮಿಷನ್ ಇಂಪಾಸಿಬಲ್ ಚಿತ್ರಕ್ಕಾಗಿ ಟಾಮ್ ಕ್ರೂಸ್ ಮಾಡಿರುವ ಅದ್ಭುತ ಸ್ಟಂಟ್ ವಿಡಿಯೋ 2

  English summary
  Tom Cruise is the daredevil Hollywood star who famously shuns stunt doubles in his action blockbusters. The 52-year-old Hollywood heartthrob has done a scary stunt all by himself.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X