Don't Miss!
- Sports
ಗೆದ್ದ ಜಯ್ ಶಾ ಹಠ, ಪಾಕ್ಗೆ ಹಿನ್ನೆಡೆ; ತಟಸ್ಥ ಸ್ಥಳದಲ್ಲಿ 2023ರ ಏಷ್ಯಾಕಪ್ ಆಯೋಜಿಸಲು ನಿರ್ಧಾರ
- Lifestyle
Horoscope Today 5 Feb 2023: ಭಾನುವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Technology
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಟಾಪ್ ಗನ್: ಮೆವರಿಕ್' ಸಿನಿಮಾ ಗೆಲ್ಲಿಸಿದ ಪ್ರೇಕ್ಷಕರಿಗೆ ಥ್ಯಾಂಕ್ಸ್ ಎನ್ನುತ್ತ ಹೆಲಿಕ್ಯಾಪ್ಟರ್‌ನಿಂದ ಜಿಗಿದ ಟಾಮ್ ಕ್ರೂಸ್!
ಹಾಲಿವುಡ್ ನಟ ಟಾಮ್ ಕ್ರೂಸ್ ಅಂದಾಕ್ಷಣ ಹೈವೋಲ್ಟೇಜ್ ಆಕ್ಷನ್ ಸೀಕ್ವೆನ್ಸ್ ನೆನಪಾಗುತ್ತದೆ. ರಿಸ್ಕಿ ಸ್ಟಂಟ್ಸ್ ಮೂಲಕ ಈ ಹಾಲಿವುಡ್ ನಟ ಪ್ರೇಕ್ಷಕರನ್ನು ಥ್ರಿಲ್ ಮಾಡುತ್ತಿರುತ್ತಾರೆ. ಸದ್ಯ ಪ್ರಪಂಚದಲ್ಲಿ ಟಾಮ್ ಕ್ರೂಸ್ ರೇಂಜಿಗೆ ರಿಸ್ಕಿ ಸ್ಟಂಟ್ಸ್ ಮಾಡುವ ಮತ್ತೊಬ್ಬ ನಟ ಇಲ್ಲ ಎಂದರೆ ಅತಿಶಯೋಕ್ತಿ ಆಗುವುದಿಲ್ಲ.
'ಮಿಷನ್ ಇಂಪಾಸಿಬಲ್' ಸರಣಿ ಸಿನಿಮಾಗಳ ನಟ ಟಾಮ್ ಕ್ರೂಸ್ ಇದೀಗ ಸಿನಿಮಾ ಪ್ರಚಾರಕ್ಕಾಗಿ ಹೆಲಿಕ್ಯಾಪ್ಟರ್‌ನಿಂದ ಜಿಗಿದಿದ್ದಾರೆ. ಈ ವರ್ಷ ಟಾಮ್ ನಟಿಸಿದ 'ಟಾಪ್ ಗನ್ ಮೆವರಿಕ್' ಸಿನಿಮಾ ರಿಲೀಸ್ ಆಗಿ ಸದ್ದು ಮಾಡಿತ್ತು. 1986ರಲ್ಲಿ ಬಂದ 'ಟಾಪ್ ಗನ್' ಚಿತ್ರದ ಸೀಕ್ವೆಲ್ ಇದು. ಚಿತ್ರದಲ್ಲಿ ಟಾಮ್ ಕ್ರೂಜ್, 'ನಾವೆಲ್ ಏವಿಯೇಟರ್' ಆಗಿ ಕಾಣಿಸಿಕೊಂಡರು. 170 ಮಿಲಿಯನ್ ಡಾಲರ್ ವೆಚ್ಚದಲ್ಲಿ ನಿರ್ಮಾಣವಾಗಿದ್ದ 'ಟಾಪ್ ಗನ್ ಮೆವರಿಕ್' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು.
ಬಾಹ್ಯಾಕಾಶದಲ್ಲಿ
ಚಿತ್ರೀಕರಣ
ಮಾಡಲಿದ್ದಾರೆ
ಟಾಮ್
ಕ್ರೂಸ್!
ಮೇ 27ರಂದು ತೆರೆಗಪ್ಪಳಿಸಿದ್ದ ಸಿನಿಮಾ 1.48 ಬಿಲಿಯನ್ ಡಾಲರ್ ಕಲೆಕ್ಷನ್ ಮಾಡಿ ಸಂಚಲನ ಸೃಷ್ಟಿಸಿತ್ತು. ಈ ಸಿನಿಮಾ ಡಿಸೆಂಬರ್ 22 ರಂದು 'ಪಾರಾಮೌಂಟ್+' ಓಟಿಟಿ ಫ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಇದಕ್ಕಾಗಿ ಟಾಮ್ ವಿಭಿನ್ನ ರೀತಿಯಲ್ಲಿ ಪ್ರಚಾರ ಮಾಡುತ್ತಿದ್ದಾರೆ. 'ಟ್ಯಾಪ್ ಗನ್ ಮೆವರಿಕ್' ಸಿನಿಮಾವನ್ನು ಮೆಚ್ಚಿದವರಿಗೆ ಥ್ಯಾಂಕ್ಸ್ ಎಂದು ಹೇಳುತ್ತಾ, ಆಗಸದಲ್ಲಿ ಸಾವಿರಾರು ಅಡಿಗಳ ಎತ್ತರದಲ್ಲಿ ಹಾರಾಡುತ್ತಿದ್ದ ಹೆಲಿಕ್ಯಾಪ್ಟರ್‌ನಿಂದ ಕೆಳಕ್ಕೆ ಜಿಗಿದಿದ್ದಾರೆ.

ಆಗಸದಿಂದ ಜಿಗಿದು ಗಾಳಿಯಲ್ಲಿ ತೇಲುತ್ತಲೇ 'ಟ್ಯಾಪ್ ಗನ್ ಮೆವರಿಕ್' ಚಿತ್ರವನ್ನು ಗೆಲ್ಲಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. ಜೊತೆಗೆ ವಿಡಿಯೋದಲ್ಲಿ ಡಿಸೆಂಬರ್ 22 ರಂದು ಸಿನಿಮಾ 'ಪಾರಾಮೌಂಟ್+'ಗೆ ಬರ್ತಿದೆ ಎಂದು ಘೋಷಿಸಲಾಗಿದೆ. ಸದ್ಯ ಟಾಮ್ ಕ್ರೂಸ್ ನಟನೆಯ 'ಮಿಷನ್ ಇಂಪಾಸಿಬಲ್' ಸರಣಿಯ ಹೊಸ ಸಿನಿಮಾ ಚಿತ್ರೀಕರಣ ದಕ್ಷಿಣ ಆಫ್ರಿಕಾದಲ್ಲಿ ನಡೀತಿದೆ. ಈ ಚಿತ್ರಕ್ಕಾಗಿ ಸ್ಟಂಟ್ ಮಾಡುವ ವೇಳೆಯೇ ಟಾಮ್ ಈ ಸ್ಪೆಷಲ್ ವಿಡಿಯೋ ಮಾಡಿದ್ದಾರೆ. ಇನ್ನು ಭಾರತದಲ್ಲಿ ಅಮೇಜಾನ್ ಪ್ರೈಮ್‌ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ. ಕನ್ನಡ ಸೇರಿದಂತೆ ದಕ್ಷಣ ಭಾರತದ ಭಾಷೆಗಳಿಗೆ ಸಿನಿಮಾ ಡಬ್ ಆಗಿ ಬರ್ತಿದೆ.