For Quick Alerts
  ALLOW NOTIFICATIONS  
  For Daily Alerts

  ಬಾಹ್ಯಾಕಾಶದಲ್ಲಿ ಚಿತ್ರೀಕರಣ ಮಾಡಲಿದ್ದಾರೆ ಟಾಮ್ ಕ್ರೂಸ್!

  |

  ವಿಶ್ವದ ಅತ್ಯಂತ ದುಬಾರಿ, ಜನಪ್ರಿಯ ನಾಯಕ ನಟ ಟಾಮ್ ಕ್ರೂಸ್ ಇದೀಗ ಹೊಸ ಸಾಹಸಕ್ಕೆ ಮುಂದಾಗಿದ್ದಾರೆ. ಮೊದಲ ಬಾರಿಗೆ ಟಾಮ್ ಕ್ರೂಸ್ ತಮ್ಮ ಹೊಸ ಸಿನಿಮಾದ ಚಿತ್ರೀಕರಣವನ್ನು ಬಾಹ್ಯಾಕಾಶದಲ್ಲಿ ಮಾಡಲಿದ್ದಾರೆ.

  ಅಸಲಿಗೆ ಟಾಮ್ ಕ್ರೂಸ್ ಬಾಹ್ಯಾಕಾಶದಲ್ಲಿ ತಮ್ಮ ಸಿನಿಮಾದ ಚಿತ್ರೀಕರಣ ಮಾಡಲಿದ್ದಾರೆ ಎಂಬುದು ತೀರ ಹೊಸ ಸುದ್ದಿಯೇನಲ್ಲ. ಕಳೆದ ಎರಡು ವರ್ಷಗಳ ಹಿಂದೆಯೇ ಹೀಗೊಂದು ಸುದ್ದಿ ಹರಿದಾಡಿತ್ತು. ಆದರೆ ಕೋವಿಡ್ ಕಾರಣದಿಂದಾಗಿ ಭೂಮಿಯ ಮೇಲೆ ಚಿತ್ರೀಕರಣ ನಿಂತು ಹೋಗಿತ್ತಾದ್ದರಿಂದ ಬಾಹ್ಯಾಕಾಶಕ್ಕೆ ಹಾರುವುದಂತೂ ಅಸಾಧ್ಯ ಎಂಬಂತಾಗಿತ್ತು.

  ಟಾಮ್ ಕ್ರೂಮ್ ಪಡೆವ ಸಂಭಾವನೆಯಲ್ಲಿ 8 'ಕೆಜಿಎಫ್ 2' ನಿರ್ಮಿಸಬಹುದು! ಇಲ್ಲಿದೆ ಭಾರಿ ಸಂಭಾವನೆ ಪಡೆವ ನಟರ ಪಟ್ಟಿಟಾಮ್ ಕ್ರೂಮ್ ಪಡೆವ ಸಂಭಾವನೆಯಲ್ಲಿ 8 'ಕೆಜಿಎಫ್ 2' ನಿರ್ಮಿಸಬಹುದು! ಇಲ್ಲಿದೆ ಭಾರಿ ಸಂಭಾವನೆ ಪಡೆವ ನಟರ ಪಟ್ಟಿ

  ಆದರೆ ತಮ್ಮ ಕನಸಿಗೆ ಮತ್ತೆ ಜೀವ ತುಂಬಿರುವ ಟಾಮ್ ಕ್ರೂಸ್, ಕ್ಯಾಮೆರಾ ಹೊತ್ತು ರಾಕೆಟ್ ಏರಲು ಸಜ್ಜಾಗಿದ್ದಾರೆ. ಅದಕ್ಕಾಗಿ ತಯಾರಿಗಳನ್ನು ಸಹ ಮುಗಿಸಿದ್ದಾರೆ.

  ಮಿಷನ್ ಇಂಪಾಸಿಬಲ್ ಸಿನಿಮಾದ ಹೊಸ ಸರಣಿಗಾಗಿ ಟಾಮ್ ಕ್ರೂಸ್ ಬಾಹ್ಯಾಕಾಶಕ್ಕೆ ಹಾರಲಿದ್ದಾರೆ ಎನ್ನಲಾಗಿತ್ತು. ಆದರೆ ಅದರ ಬದಲು ಟಾಮ್ ಕ್ರೂಸ್ ತಮ್ಮ ಇನ್ನೊಂದು ಹೊಸ ಸಿನಿಮಾದ ಚಿತ್ರೀಕರಣಕ್ಕಾಗಿ ಬಾಹ್ಯಾಕಾಶಕ್ಕೆ ಹಾರಲಿದ್ದಾರೆ. ಬಾಹ್ಯಾಕಾಶದಲ್ಲಿ ಸ್ಟಂಟ್ ಮಾಡಲಿರುವ ಟಾಮ್ ಕ್ರೂಸ್‌ಗೆ ಆಕ್ಷನ್ ಕಟ್ ಹೇಳಲಿರುವುದು ನಿರ್ದೇಶಕ ಡಾ ಲಿಮನ್.

  ಟಾಮ್ ಕ್ರೂಸ್, ಬಾಹ್ಯಾಕಾಶದಲ್ಲಿ ಸಿನಿಮಾ ಚಿತ್ರೀಕರಣ ಮಾಡಲಿರುವ ಬಗ್ಗೆ ಯೂನಿವರ್ಸಲ್ ಪಿಕ್ಚರ್ಸ್ ನಿರ್ಮಾಣ ಸಂಸ್ಥೆಯು ಖಾತ್ರಿ ಪಡಿಸಿದ್ದು, ಬಾಹ್ಯಾಕಾಶ ನಿಲ್ದಾಣದ ಹೊರಗೆ ಚಿತ್ರೀಕರಣ, ಸ್ಟಂಟ್ ಮಾಡಲಿರುವ ಮೊದಲ ನಾಗರೀಕ ಎಂಬ ಖ್ಯಾತಿಗೆ ಟಾಮ್ ಕ್ರೂಸ್ ಪಾತ್ರರಾಗಲಿದ್ದಾರೆ ಎಂದಿದೆ.

  ಟಾಮ್ ಕ್ರೂಸ್, ತಾವು ಬಾಹ್ಯಾಕಾಶದಲ್ಲಿ ಸಿನಿಮಾ ಚಿತ್ರೀಕರಣ ಮಾಡುವುದಾಗಿ ಘೋಷಿಸಿದ ಕೂಡಲೇ ರಷ್ಯಾದ ಒಂದು ಸಿನಿಮಾ ತಂಡ ತರಾತುರಿಯಲ್ಲಿ ಬಾಹ್ಯಾಕಾಶದಲ್ಲಿ ಚಿತ್ರೀಕರಣ ಮಾಡಿಕೊಂಡು ಬಂದು ಮೊದಲಿಗರೆನಿಸಿಕೊಂಡಿದ್ದಾರೆ. ಆದರೆ ಆ ತಂಡವು ಬಾಹ್ಯಾಕಾಶ ನಿಲ್ದಾಣ (ಸ್ಪೇಸ್ ಸ್ಟೇಷನ್)ನಲ್ಲಿ ಮಾತ್ರವೇ ಚಿತ್ರೀಕರಣ ಮಾಡಿತ್ತು. ಸ್ಪೇಸ್‌ ಸ್ಟೇಶನ್‌ನ ಹೊರಗೆ, ಅಸಲು ಬಾಹ್ಯಾಕಾಶದಲ್ಲಿ ಚಿತ್ರೀಕರಣ ಮಾಡಿರಲಿಲ್ಲ. ಆದರೆ ಟಾಮ್ ಕ್ರೂಸ್ ಆ ಸಾಹಸಕ್ಕೆ ಕೈ ಹಾಕುತ್ತಿದ್ದಾರೆ.

  ಟಾಮ್ ಕ್ರೂಸ್ ಪ್ರಸ್ತುತ ತಮ್ಮ ಮಿಷನ್ ಇಂಪಾಸಿಬಲ್ 8 ಸಿನಿಮಾದ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾವು ಕೋವಿಡ್ ಕಾರಣದಿಂದಾಗಿ ತಡವಾಗುತ್ತಿದ್ದು, ಸಿನಿಮಾದ ಬಿಡುಗಡೆ 2023, ಜುಲೈ ತಿಂಗಳಲ್ಲಿ ಬಿಡುಗಡೆ ಆಗಲಿದೆ.

  English summary
  Tom Cruise will film his upcoming movie in outer space. Universal pictures confirms hat Tom Cruise going to space to shoot movie.
  Tuesday, October 11, 2022, 8:44
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X