twitter
    For Quick Alerts
    ALLOW NOTIFICATIONS  
    For Daily Alerts

    ರಷ್ಯಾ- ಉಕ್ರೇನ್ ಯುದ್ಧದಲ್ಲಿ ಸೇನೆ ಸೇರಿದ್ದ ಯುಕ್ರೇನ್‌ ನಟ ಸಾವು: ಕೊನೆಯ ಸಂದೇಶವೇನು?

    |

    ಉಕ್ರೇನ್ ಮೇಲೆ ರಷ್ಯಾ ದಾಳಿ ನಿಲ್ಲುವಂತೆ ಕಾಣುತ್ತಿಲ್ಲ. ರಷ್ಯಾ ನಿರಂತರವಾಗಿ ಯುದ್ಧವನ್ನು ಮುಂದುವರೆಸಿದೆ. ಈ ಯುದ್ಧದಲ್ಲಿ ಉಕ್ರೇನ್‌ನ ನಾಗರೀಕರು ಸೇರಿದಂತೆ ಸೇನೆ ಸೇರಿದ ಜನರು ಸಾವನ್ನಪ್ಪಿದ್ದಾರೆ. ಈ ಘೋರ ಯುದ್ಧದಲ್ಲಿ ಉಕ್ರೇನ್‌ನ 33 ವರ್ಷದ ಯುವ ನಟ ಪಾಶಾ ಲೀ ಸಾವನ್ನಪ್ಪಿದ್ದಾನೆ. ಕಳೆದ ವಾರವಷ್ಟೇ ರಷ್ಯಾ ವಿರುದ್ಧ ಹೋರಾಡಲು ಪಾಶಾ ಲೀ ಉಕ್ರೇನ್ ಆರ್ಮಿಯನ್ನು ಸೇರಿದ್ದನು. ರಷ್ಯಾ ವಿರುದ್ಧ ಸೆಣೆ ಸಾಡುತ್ತಾಲೇ ಪಾಶಾ ಲೀ ವೀರಮರಣವನ್ನು ಅಪ್ಪಿದ್ದಾನೆ.

    ರಷ್ಯಾ ಆಕ್ರಮಣದ ವಿರುದ್ಧ ಪಾಶಾ ಲೀ ಸಿಡಿದೆದ್ದು, ಉಕ್ರೇನ್‌ನ ಪ್ರಾದೇಶಿಕ ರಕ್ಷಣಾ ಪಡೆಯನ್ನು ಸೇರಿಕೊಂಡಿದ್ದ. ಇನ್ನೊಂದು ಕಡೆ ರಷ್ಯಾ ಯುದ್ಧವನ್ನು ನಿಲ್ಲಿಸಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಉಕ್ರೇನ್ ರಾಜಧಾನಿ ಕೀವ್ ಮೇಲೆ ದಾಳಿ ನಡೆಸಿದ ಬಳಿಕವೂ ಯುದ್ಧವನ್ನು ಮುಂದುವರೆಸಿದೆ. ಹೀಗಾಗಿ ಕಳೆದ ವಾರ ಪಾಶಾ ಲೀ ಸೇನೆಯನ್ನು ಸೇರಿಕೊಂಡಿದ್ದನು. ದುರಾದೃಷ್ಟವಶಾತ್ ಈ ಯುದ್ಧದಲ್ಲಿ ಹೋರಾಡುವಾಗ ಉಕ್ರೇನ್ ನಟ ಸಾವನ್ನಪ್ಪಿದ್ದಾನೆ.

    ರಷ್ಯಾಕ್ಕೆ ನಿರ್ಬಂಧ ಹೇರಿದ ಮನರಂಜನಾ ಕ್ಷೇತ್ರ!ರಷ್ಯಾಕ್ಕೆ ನಿರ್ಬಂಧ ಹೇರಿದ ಮನರಂಜನಾ ಕ್ಷೇತ್ರ!

     ಶೇಲ್ ದಾಳಿಗೆ ಉಕ್ರೇನ್ ನಟ ಸಾವು

    ಶೇಲ್ ದಾಳಿಗೆ ಉಕ್ರೇನ್ ನಟ ಸಾವು

    ರಷ್ಯಾ ಸೇನೆ ಉಕ್ರೇನ್ ಮೇಲಿನ ದಾಳಿಯನ್ನು ಇನ್ನೂ ನಿಲ್ಲಿಸಿಲ್ಲ. ಉಕ್ರೇನ್ ರಾಜಧಾನಿ ಕೀವ್‌ಗೆ ಲಗ್ಗೆ ಇಟ್ಟ ಬಳಿಕ ಪಶ್ಚಿಮದ ಕಡೆಗೆ ಯುದ್ಧ ಮುಂದುವರೆದಿದೆ. ಸ್ಥಳೀಯ ವರದಿ ಪ್ರಕಾರ, ರಷ್ಯಾ ಶೇಲ್ ದಾಳಿಯನ್ನು ಮುಂದುವರೆಸಿದೆ. ಉಕ್ರೇನ್‌ನ ನಟ ಪಾಶಾ ಲೀ ಉಕ್ರೇನ್‌ನ ಇರ್ಪಿನ್‌ನಲ್ಲಿ ಸೇನೆಯೊಂದಿಗೆ ಇದ್ದ. ಈ ವೇಳೆ ರಷ್ಯಾ ಸೇನೆ ಶೆಲ್ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಪಾಶಾ ಲೀ ಸಾವನ್ನಪ್ಪಿದ್ದಾನೆ ಎಂದು ತಿಳಿಸಲಾಗಿದೆ. ಉಕ್ರೇನ್ ಟಿಎಸ್‌ಎನ್ ಟೆಲಿವಿಷನ್ ಹಾಗೂ ಒಡೆಸಾ ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ನಟನಿಗೆ 33 ವರ್ಷ ವಯಸ್ಸಾಗಿತ್ತು ಎಂದು ಹೇಳಿದೆ.

    ರಂಗಕ್ಕಿಳಿದ ಸೋನು ಸೂದ್: ಉಕ್ರೇನ್‌ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳಿಗೆ ನೆರವುರಂಗಕ್ಕಿಳಿದ ಸೋನು ಸೂದ್: ಉಕ್ರೇನ್‌ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳಿಗೆ ನೆರವು

     ನಟ ಪಾಶಾ ಲೀ ಕೊನೆಯ ಸಂದೇಶವೇನು?

    ನಟ ಪಾಶಾ ಲೀ ಕೊನೆಯ ಸಂದೇಶವೇನು?

    ಉಕ್ರೇನ್ ನಟ ಪಾಶಾ ಲೀ ಸಾವಿಗೂ ಮುನ್ನ ತನ್ನ ಇನ್‌ಸ್ಟಾಗ್ರಾಂನಲ್ಲಿ ಕೊನೆಯದಾಗಿ ಯುದ್ಧದ ಬಗ್ಗೆ ಬರೆದುಕೊಂಡಿದ್ದನು. " ಕಳೆದ 48 ಗಂಟೆಗಳಿಂದ ನಮಗೆ ಕೂತು ಕೊಳ್ಳುವುದಕ್ಕೆ ಅವಕಾಶ ಸಿಕ್ಕಿದೆ. ಹಾಗೇ ನಮ್ಮ ಮೇಲೆ ಹೇಗೆ ಬಾಂಬ್ ಎಸೆದಿದ್ದಾರೆ ಎಂಬುವುದನ್ನು ಕ್ಯಾಮರಾದಲ್ಲಿ ಸೆರೆಹಿಡಿಯಲು ಕೂಡ ಅವಕಾಶ ಸಿಕ್ಕಿದೆ. ಹೀಗಿದ್ದರೂ ನಾವು ನಗುತ್ತಿದ್ದೇವೆ. ಯಾಕಂದರೆ ನಾವು ಈ ಸಂದರ್ಭವನ್ನು ನಿಭಾಯಿಸುತ್ತೇವೆ. ಎಲ್ಲವೂ ಉಕ್ರೇನ್‌ಗಾಗಿಯೇ. ನಾವು ಅದಕ್ಕಾಗಿಯೇ ಕೆಲಸ ಮಾಡುತ್ತೇವೆ." ಎಂದು ಉಕ್ರೇನ್ ನಟ ಪಾಶಾ ಲೀ ಬರೆದುಕೊಂಡಿದ್ದನು.

     ಪಾಶಾ ಲೀ ಡಬ್ಬಿಂಗ್ ಆಟ್ಟಿಸ್ಟ್

    ಪಾಶಾ ಲೀ ಡಬ್ಬಿಂಗ್ ಆಟ್ಟಿಸ್ಟ್

    ಪಾಶಾ ಲೀ ಡಬ್ಬಿಂಗ್ ಆರ್ಟಿಸ್ಟ್ ಕೂಡ ಹೌದು. ಹಾಲಿವುಡ್ ಸಿನಿಮಾಗಳು ಉಕ್ರೇನ್ ಭಾಷೆಗೆ ಡಬ್ ಆಗುತ್ತಿದ್ದವು. ಇಂತಹ ಹಲವು ಸಿನಿಮಾಗಳಿಗೆ ಪಾಶಾ ಲೀ ಡಬ್ ಮಾಡಿದ್ದಾರೆ. ಹಾಲಿವುಡ್ ಸಿನಿಮಾ 'ದಿ ಲಯನ್ ಕಿಂಗ್' ಹಾಗೂ 'ದಿ ಹೊಬ್ಬಿಟ್' ಸಿನಿಮಾಗಳಿಗೆ ಡಬ್ ಮಾಡಿದ್ದು ಇದೇ ನಟ. ಇದರೊಂದಿಗೆ ಉಕ್ರೇನಿನ DOM ಚಾನೆಲ್‌ನಲ್ಲಿ ನಿರೂಪಕರಾಗಿಯೂ ಕೆಲಸ ಮಾಡಿದ್ದಾನೆ. ಉಕ್ರೇನ್‌ ಸಂಕಷ್ಟದಲ್ಲಿರುವಾಗ ಸೇನೆ ಸೇರಿದ ನಟ ಯುದ್ಧದಲ್ಲಿ ಹೋರಾಡುತ್ತಾ ಸಾವನ್ನಪ್ಪಿದ್ದಾನೆ.

    ಅಫ್ಘಾನಿಸ್ತಾನದ ಕರುಳು ಹಿಂಡುವ ಕತೆ: ನೋಡಲೇ ಬೇಕಾದ ಸಿನಿಮಾಗಳುಅಫ್ಘಾನಿಸ್ತಾನದ ಕರುಳು ಹಿಂಡುವ ಕತೆ: ನೋಡಲೇ ಬೇಕಾದ ಸಿನಿಮಾಗಳು

     ಫೇಮಸ್ ಆಗಿವೆ ಪಾಶಾ ಲೀ ಶೋ

    ಫೇಮಸ್ ಆಗಿವೆ ಪಾಶಾ ಲೀ ಶೋ

    2019ರಲ್ಲಿ ಕಾಮಿಡಿ ಮೀಟಿಂಗ್ ಆಫ್ ಕ್ಲಾಸ್‌ಮೇಟ್ಸ್, 2017ರಲ್ಲಿ ಸ್ಟೋರ್ಟ್ಸ್ ಆಕ್ಷನ್ ಸಿನಿಮಾ 'ದಿ ಪೈಟ್ ರೂಲ್ಸ್, 2016ರಲ್ಲಿ ಆಕ್ಷನ್ ಕಾಮಿಡಿ ಸೆಲ್ಫಿ ಪಾರ್ಟಿ ಹಾಗೂ 2012ರ ಮತ್ತೊಂದು ಕಾಮಿಡಿ ಸಿನಿಮಾ 'ಝ್ವಿಚಯ್ನಾ ಸ್ಪ್ರಾವಾ' ಎಂಬ ಸಿನಿಮಾದಲ್ಲಿ ನಟಿಸಿ ಪ್ರಸಿದ್ದಿ ಪಡೆದಿದ್ದನು. ಇನ್ನೊಂದು ಕಡೆ ರಷ್ಯಾ ಉಕ್ರೇನ್ ರಾಜಧಾನಿ ಕೀವ್ ಹಾಗೂ ಇರ್ವಿನ್ ಪ್ರದೇಶದಲ್ಲಿ ನಿರಂತರವಾಗಿ ಶೆಲ್ ದಾಳಿಯನ್ನು ನಡೆಸುತ್ತಲೇ ಇದೆ. ದೇಶದ ಹೋರಾಡಲು ಸೇನೆ ಸೇರಿದ ಹಲವು ನಾಗರಿಕರು ಕೂಡ ಸಾವನ್ನಪ್ಪಿದ್ದಾರೆ.

    Read more about: russia actor war ನಟ
    English summary
    Ukrainian actor Pasha Lee died in Russia Ukraine war at the age of 33. Pasha Lee, who joined Ukraine’s Territorial Defence Force following the Russian invasion launched on Feb. 23, was killed in action.
    Thursday, March 10, 2022, 13:53
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X