Just In
Don't Miss!
- Automobiles
ಕಾರಿನ ದೀರ್ಘ ಬಾಳಿಕೆಗೆ ಕೆಲವು ಸುಲಭ ವಿಧಾನಗಳಿವು
- News
ಸಾಂಸ್ಕೃತಿಕ ನಗರಿಯಲ್ಲಿ ಉದ್ಘಾಟನೆಗೊಂಡ ದೇಶದ ಮೊದಲ ಶ್ರೀಗಂಧದ ಮ್ಯೂಸಿಯಂ
- Sports
ಐಎಸ್ಎಲ್: ಬೆಂಗಳೂರಿಗೆ ಜಯ ನೀಡದೆ ಸ್ಫೂರ್ತಿ ಮೆರೆದ ಒಡಿಶಾ
- Education
UPSC Recruitment 2021: 249 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Lifestyle
ನ್ಯೂಮೋನಿಯಾ: ಶ್ವಾಸಕೋಶದ ಸೋಂಕು ಇದ್ದಾಗ ಏನು ತಿನ್ನಬೇಕು, ಏನು ತಿನ್ನಬಾರದು?
- Finance
ಬಜೆಟ್ 2021: ವಿತ್ತೀಯ ಕೊರತೆ ಜಿಡಿಪಿಯ 5ರಿಂದ 5.5 ಪರ್ಸೆಂಟ್ ಸಾಧ್ಯತೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
Rapper ನಿಂದ Actor: 2021 ರ ಮೇಲೆ ಚಂದನ್ ಶೆಟ್ಟಿಗಿದೆ ಭರಪೂರ ನಿರೀಕ್ಷೆಗಳು
2020 ರಲ್ಲಿ ಸಿನಿಮಾ ರಂಗ ಬಹುತೇಕ ಸ್ಥಬ್ದವಾಗಿತ್ತು. ಅನೇಕರ ಯೋಜನೆಗಳು ತಲೆಕೆಳಗಾದವು. ಎಲ್ಲೋ ಕೆಲವರಿಗಷ್ಟೆ ಈ ವರ್ಷ ವೃತ್ತಿ ಬದುಕಿನಲ್ಲಿ ತುಸು ಯಶಸ್ಸು ದೊರೆತಿದೆ. ಅದರಲ್ಲಿ ಸಂಗೀತ ನಿರ್ದೇಶಕ, Rapper ಚಂದನ್ ಶೆಟ್ಟಿ ಸಹ ಒಬ್ಬರು.
ಧೃವ ಸರ್ಜಾ ನಟನೆಯ 'ಪೊಗರು' ಸಿನಿಮಾಕ್ಕೆ ಸಂಗೀತ ನಿರ್ದೇಶನ ಮಾಡಿರುವ ಚಂದನ್ ಶೆಟ್ಟಿ. 'ಪೊಗರು' ಸಿನಿಮಾದ ಒಂದೇ ಹಾಡಿನಿಂದ ದೊಡ್ಡ ಮಟ್ಟದ ಖ್ಯಾತಿ ಗಳಿಸಿದರು ಈ ವರ್ಷ. ವರ್ಷಾರಂಭದಲ್ಲಿ ಬಿಡುಗಡೆ ಆದ 'ಕೋಲುಮಂಡೆ' ಹಾಡು ಸಹ ಹಿಟ್ ಆಯಿತು ಜೊತೆಗೆ ತುಸು ವಿಮರ್ಶೆಗೂ ಒಳಪಟ್ಟಿತು. ಈಗ ವರ್ಷಾಂತ್ಯಕ್ಕೆ ಮತ್ತೊಂದು ಹೊಸ ಹಾಡಿನೊಂದಿಗೆ ಬಂದಿದ್ದಾರೆ ಚಂದನ್. 2020 ತಮ್ಮ ಪಾಲಿಗೆ ಹೇಗಿತ್ತು ಮತ್ತು 2021 ಕ್ಕೆ ತಮ್ಮ ಗುರಿಗಳೇನು ಎಂಬುದರ ಬಗ್ಗೆ ಚುಟುಕಾಗಿ 'ಫಿಲ್ಮೀಬೀಟ್' ಜೊತೆ ಮಾತನಾಡಿದ್ದಾರೆ ಚಂದನ್ ಶೆಟ್ಟಿ.
ಬದಲಾವಣೆಗೆ ಅವಕಾಶವನ್ನು ಹೊತ್ತು ತಂದಿದೆ 2021: ಮಂಸೋರೆ
2020 ವಿಶ್ವಕ್ಕೇ ಕಹಿವರ್ಷ. ಲಕ್ಷಾಂತರ ಸಾವು-ನೋವು, ಜೀವನ ಪಲ್ಲಟಗಳು ಆಗಿವೆ. ಆದರೆ ಹೊಸ ವರ್ಷಕ್ಕೆ ಧನಾತ್ಮಕತೆಯನ್ನು ತೆಗೆದುಕೊಂಡು ನಾವು ಹೋಗಬೇಕಿದೆ. ಕೊರೊನಾ ದಿಂದ ದೊಡ್ಡ ಮಟ್ಟದ ಸಾವು-ನೋವಾಗಿದೆ. ಆದರ ಜೊತೆಗೆ ಲಾಕ್‌ಡೌನ್ ನಿಂದ ಪರಿಸರಕ್ಕೆ ಒಳ್ಳೆಯದಾಗಿದೆ. ಎಷ್ಟೋ ಮಂದಿಗೆ ತಮ್ಮ ಜೀವನವನ್ನು ಪುನರ್‌ರೂಪಿಸಿಕೊಳ್ಳುವ ಅವಕಾಶ ಒದಗಿಬಂದಿದೆ ಎಂದು 2020ರ ವರ್ಷದಲ್ಲಿ ಧನಾತ್ಮಕತೆಯನ್ನು ಹುಡುಕುವ ಮಾತನ್ನಾಡಿದರು ಚಂದನ್ ಶೆಟ್ಟಿ.

2020 ವೈಯಕ್ತಿಕವಾಗಿ ಚೆನ್ನಾಗಿಯೇ ಇತ್ತು: ಚಂದನ್
2020 ರಲ್ಲಿ ತಮ್ಮ ವೃತ್ತಿ ಬದುಕು ಸಾಗಿದ ಬಗ್ಗೆ ಮಾತನಾಡಿದ ಚಂದನ್ ಶೆಟ್ಟಿ, '2020 ನನ್ನ ಪಾಲಿಗೆ ಚೆನ್ನಾಗಿಯೇ ಇತ್ತು. ಪೊಗರು ಸಿನಿಮಾದ ಹಾಡು ಸಖತ್ ಹಿಟ್ ಆಯ್ತು. ವರ್ಷಾಂತ್ಯಕ್ಕೆ ಬಿಡುಗಡೆ ಮಾಡಿರುವ 'ಪಾರ್ಟಿ ಫ್ರೀಕ್' ಹಾಡು ಸಹ ಸದ್ದು ಮಾಡುತ್ತಿದೆ. 'ದುಬಾರಿ' ಸಿನಿಮಾಕ್ಕೆ ಸಂಗೀತ ನೀಡುವ ಅವಕಾಶ ಬಂದಿದೆ. ಒಟ್ಟಿನಲ್ಲಿ 2020 ರಲ್ಲಿ ವೃತ್ತಿ, ತೃಪ್ತಿದಾಯಕವಾಗಿಯೇ ಇದೆ' ಎಂದರು.

ಮದುವೆಯಾಗಿದ್ದು ಈ ವರ್ಷದ ಅವಿಸ್ಮರಣೀಯ ಘಟನೆ
'ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ 2020 ಅವಿಸ್ಮರಣೀಯ ವರ್ಷ ಇದೇ ವರ್ಷದಲ್ಲಿ ಮದುವೆಯಾದೆ, ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಪರಸ್ಪರ ಚೆನ್ನಾಗಿ ಅರ್ಥ ಮಾಡಿಕೊಂಡೆವು, ಪರಸ್ಪರರೊಟ್ಟಿಗೆ ಸಮಯ ಕಳೆಯಲು ಅವಕಾಶ ಒದಗಿಬಂತು. ಲಾಕ್‌ಡೌನ್ ಅವಧಿಯಲ್ಲಿ ಸ್ವಚಿಂತನೆಗೆ ಸಾಕಷ್ಟು ಕಾಲಾವಕಾಶ ದೊರಕಿತು, ಇದರಿಂದ ಮುಂದಿನ ಯೋಜನೆಗಳನ್ನು ಇನ್ನಷ್ಟು ಪಕ್ವಗೊಳಿಸಿಕೊಳ್ಳಲು ನೆರವಾಯಿತು' ಎಂದು ವಿಶ್ಲೇಷಿಸಿದರು ಚಂದನ್.
ಸಿನಿಮಾ, ಸಮಾಜ ಸೇವೆ ಹಾಗೂ ಇನ್ನಷ್ಟು: 2021 ಕ್ಕೆ ಚೇತನ್ ಅಹಿಂಸಾ ಗುರಿಗಳೇನು?

ಯುವ ಸಂಗೀತಗಾರರಿಗೆ ತರಬೇತಿ ನೀಡುವ ಕಾರ್ಯ
2021 ರಲ್ಲಿ ಯುನೈಟೆಡ್ ಆಡಿಯೋ ಸಂಸ್ಥೆ ಜೊತೆ ಸೇರಿ ಯುವ, ಪ್ರತಿಭಾನ್ವಿತ ಸಂಗೀತಗಾರರನ್ನು ಗುರುತಿಸಿ ಅವರಿಗೆ ತರಬೇತಿ ಕೊಡುವ ಕಾರ್ಯದಲ್ಲಿ ತೊಡಗಿಕೊಳ್ಳಲಿದ್ದೇನೆ. ಇನ್ನು, ವೈಯಕ್ತಿಕವಾಗಿ ವೃತ್ತಿಯಲ್ಲಿ ಇನ್ನಷ್ಟು ಪ್ರಗತಿ ಸಾಧಿಸಬೇಕು. ಆರೋಗ್ಯದ ಕಡೆಗೆ ಹೆಚ್ಚು ಗಮನ ಕೊಡಬೇಕು. ದೇಹವನ್ನು ಫಿಟ್ ಆಗಿಟ್ಟುಕೊಳ್ಳಬೇಕು, ಸೈಕಲಿಂಗ್ , ರನ್ನಿಂಗ್ ಪ್ರಾರಂಭಿಸಬೇಕು ಎಂಬ ಇರಾದೆ ಇದೆ ಎಂದರು ಚಂದನ್.

2021 ರಲ್ಲಿ ನಟನಾಗಿ ಜನರ ಮುಂದೆ ಬರಲಿರುವ ಚಂದನ್ ಶೆಟ್ಟಿ
ವೃತ್ತಿ ಬಗೆಗಿನ ನಿರೀಕ್ಷೆಗಳ ಬಗ್ಗೆ ಮಾತನಾಡಿ, '2021 ರಲ್ಲಿ ಸಿನಿಮಾ ನಟನಾಗಿ ಪ್ರವೇಶ ಮಾಡುವ ಪ್ರಯತ್ನದಲ್ಲಿದ್ದೇನೆ. ಈಗಾಗಲೇ ಕತೆಗಳ ಕೇಳುವಿಕೆ ಸಾಗಿದೆ. ಸೂಕ್ತವಾದ ಕತೆಯೊಂದನ್ನು ಆಯ್ಕೆ ಮಾಡಿಕೊಂಡು, 2021 ರಲ್ಲಿ ನಟನಾಗಿ ಬರಲಿದ್ದೇನೆ. ಸಂಗೀತ ವಿಭಾಗದಲ್ಲಿದ್ದ ನಾನು ನಟನಾಗಿ ಬಂದು ಏನು ಮಾಡಲಿದ್ದೇನೆ ಎಂಬ ಕುತೂಹಲ ಈಗಾಗಲೇ ಜನರಲ್ಲಿ ಎದ್ದಿದೆ, ಅವರ ನಿರೀಕ್ಷೆಯನ್ನು ಹುಸಿಗೊಳಿಸದೇ ಇರಲು ತಯಾರಿ ಆರಂಭಿಸಿದ್ದೇನೆ' ಎಂದರು ಚಂದನ್ ಶೆಟ್ಟಿ.
2020ರ ಅನುಭವ: ಕೊರೊನಾ, ಪ್ಯಾನ್ ಇಂಡಿಯಾ, ಒಟಿಟಿ ಬಗ್ಗೆ ಒಡೆಯರ್ ಮಾತು

'2021 ರಲ್ಲಿ ಗುಣಮಟ್ಟದ ಕಡೆಗೆ ಇನ್ನೂ ಹೆಚ್ಚಿನ ಗಮನವಹಿಸಬೇಕು'
'2021 ರಲ್ಲಿ ಸಿನಿಮಾರಂಗ ಇನ್ನಷ್ಟು ಗುಣಮಟ್ಟದ ಸಿನಿಮಾಗಳನ್ನು ಜನರ ಮುಂದಿಡಬೇಕು, ಈಗಾಗಲೇ ಪ್ಯಾನ್ ಸಿನಿಮಾಗಳ ಮೂಲಕ ಕನ್ನಡದ ಸಿನಿಮಾಗಳು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯುತ್ತಿವೆ. ಪ್ಯಾನ್ ಸಿನಿಮಾಗಳಿಂದ ಸಿನಿಮಾಗಳ ಗಳಿಕೆ ಹೆಚ್ಚುತ್ತದೆ, ಬಂಡವಾಳ ಹೂಡಿಕೆಯೂ ಹೆಚ್ಚಾಗುತ್ತಿದೆ, ಇದರಿಂದ ಇನ್ನಷ್ಟು ಗುಣಮಟ್ಟದ ಸಿನಿಮಾಗಳನ್ನು ನೀಡಲು ಸಾಧ್ಯವಾಗುತ್ತದೆ' ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು ಚಂದನ್.