»   » 'ಅಭಿನೇತ್ರಿ'ಯಲ್ಲಿ ನನ್ನ ಕಥೆಯೂ ಇದೆ - ಪೂಜಾಗಾಂಧಿ

'ಅಭಿನೇತ್ರಿ'ಯಲ್ಲಿ ನನ್ನ ಕಥೆಯೂ ಇದೆ - ಪೂಜಾಗಾಂಧಿ

By: ಹರ್ಷಿತಾ.ಎನ್.
Subscribe to Filmibeat Kannada

ಮಳೆ ಹುಡುಗಿಯಾಗಿ ಸ್ಯಾಂಡಲ್ ವುಡ್ ಗೆ ಬಂದ ಪೂಜಾಗಾಂಧಿ ಈಗ ಫುಲ್ ಬದಲಾಗಿ ಬಿಟ್ಟಿದ್ದಾರೆ. ಚಂದನವನದ ಕಂಪಿಗೆ ತಕ್ಕಂತೆ ತಮ್ಮನ್ನ ರೂಪಿಸಿಕೊಂಡಿದ್ದಾರೆ. ನಾಯಕಿಯಾಗಿದ್ದ ಪೂಜಾ ಈಗ ನಿರ್ಮಾಪಕಿಯಾಗಿ ನಿಮ್ಮ ಮುಂದೆ ನಿಂತಿದ್ದಾರೆ. ಸೋಲು ಗೆಲುವಿನ ಹಾದಿಯನ್ನ ಸಮನಾಗಿ ಕಂಡಿರೋ ಪಂಜಾಬಿ ಕುಡಿಯೀಗ ಅಭಿನೇತ್ರಿಯಾಗಿ ತೆರೆ ಹಿಂದು ಮತ್ತು ಮುಂದು ತಮ್ಮ ಸಾಮರ್ಥ್ಯ ಒರೆ ಹಚ್ಚ ನಿಂತಿದ್ದಾರೆ.

ಕೃಷ್ಣನ ಸತ್ಯಭಾಮೆಯಾಗಿ ಮಿಂಚಿದ ಈ ಗುಂಡು ಚೆಲುವೆಯ ಹೊಸ ಚಿತ್ರ 'ಅಭಿನೇತ್ರಿ' ಸದ್ಯದಲ್ಲೇ ರಿಲೀಸ್ ಆಗುತ್ತಿದೆ. ವಿವಾದಗಳ ಕೇಂದ್ರಬಿಂದುವಾಗಿರುವ 'ಅಭಿನೇತ್ರಿ' ಚಿತ್ರದ ಬಗ್ಗೆ ನಟಿ ಪೂಜಾ ಗಾಂಧಿ 'ಫಿಲ್ಮಿಬೀಟ್ ಕನ್ನಡ' ಜೊತೆ ನೀಡಿದ ಸಂದರ್ಶನದಲ್ಲಿ ತಮ್ಮ ಹೊಸ ಜರ್ನಿಯ ಹನಿಹನಿ ಕಹಾನಿ ಹಂಚಿಕೊಂಡಿದ್ದಾರೆ.


* ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಎಂಟು ವರ್ಷಗಳಲ್ಲಿ ನಿರ್ಮಾಪಕರಾಗಿದ್ದೀರಾ..ಇದನ್ನ ಸಾಧನೆ ಅಂತ ಬಣ್ಣಿಸುತ್ತೀರಾ?


ಪೂಜಾ ಗಾಂಧಿ - ಹೌದು, ಹಂಡ್ರೆಡ್ ಪರ್ಸೆಂಟ್. ಆಕ್ಟರ್ ಆಗಿ ಬಂದವಳು ನಾನು ಮುಂಗಾರು ಮಳೆ ನಂತ್ರ ಇಲ್ಲಿವರೆಗೆ 35ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದೇನೆ. ಪ್ರೊಡಕ್ಷನ್ ಮಾಡಬೇಕು ಅಂತ ತುಂಬಾ ದಿನದಿಂದ ಆಸೆ ಇತ್ತು. ಅದ್ರ ಬಗ್ಗೆ ಸೀರಿಯಸ್ ಆಗಿ ಯೋಚನೆ ಮಾಡಿದ್ದು ಮೂರು ವರ್ಷಗಳ ಹಿಂದೆ, ಈಗದು ನನಸಾಗಿದೆ. ಇದು ನನ್ನ ಪಾಲಿಗೆ ದೊಡ್ಡ ಸಾಧನೆ.

Abhinetri1

* ನಿರ್ಮಾಪಕಿಯಾಗಬೇಕು ಅನ್ನೋ ಡ್ರೀಮ್ ಪೂಜಾಗೆ ಇತ್ತಾ..?


- ಇಲ್ಲ..! ನಾನು ಆ ಕನಸ್ಸು ಕಂಡಿರಲಿಲ್ಲ. ಆಕ್ಟರ್ ಆಗಿದ್ದಾಗ ಕೆಲವೊಂದು ಚಿತ್ರಗಳಿಗೆ ನಾನೇ ಪ್ರೊಡ್ಯೂಸರ್ ಆಗಿದ್ರೆ ಚೆನ್ನಾಗಿರ್ತಿತ್ತು ಅಂತ ತುಂಬಾ ಸಲ ಅನ್ನಿಸ್ತಿತ್ತು. ಕೆಲ ಕಥೆಗಳನ್ನ ಮಾಡೋದಕ್ಕೆ ನಿರ್ಮಾಪಕರು ಮುಂದೆ ಬರೋದಿಲ್ಲ. ಹೊಸಬರಿಗೆ ಅವಕಾಶ ಕೊಡೋದಿಲ್ಲ ,ಇನ್ನು ಕೆಲವರು ಲಾಭದ ದೃಷ್ಚಿಯನ್ನೇ ಮುಂದಿಟ್ಟುಕೊಂಡು ಚಿತ್ರದ ಗುಣ ಮಟ್ಟದ ಬಗ್ಗೆ ಕಾಂಪ್ರಮೈಸ್ ಆಗ್ತಾರೆ. ಆದ್ರೆ ನಾವೇ ಚಿತ್ರ ಮಾಡಿದಾಗ ಇದ್ರ ಸಮಸ್ಯೆ ಎದುರಾಗಲ್ಲ. ಒಂದೊಳ್ಳೆ ಬ್ಯೂಟಿಫುಲ್ ಸಿನಿಮಾ ಮಾಡಬೇಕು, ಜನ ಮೆಚ್ಚುವ ಸಿನಿಮಾ ಮಾಡಬೇಕು ಅಂತ ನಾನು ನಿರ್ಮಾಪಕಿಯಾದೆ. [ಸೆನ್ಸಾರ್ ನಲ್ಲಿ ನಿಟ್ಟುಸಿರುಬಿಟ್ಟ ಅಭಿನೇತ್ರಿ ಪೂಜಾಗಾಂಧಿ]


* ನಟನೆ ಜೊತೆ ಅಭಿನೇತ್ರಿ ಸಿನಿಮಾ ನಿರ್ಮಾಣ ಮಾಡ್ತಿದ್ದೀರಾ..ಫಸ್ಟ್ ಟೈಂ ಎರಡೆರಡು ಜವಾಬ್ದಾರಿ ಕಷ್ಟ ಅನ್ನಿಸ್ಲಿಲ್ವಾ..?


- ಹೌದು ತುಂಬಾ ಕಷ್ಟ ಆಯ್ತು. ಆದ್ರೆ ನಿರ್ದೇಶಕರು ಮತ್ತು ಇಡೀ ತಂಡ ನನಗೆ ತುಂಬಾ ಸಪೋರ್ಟ್ ಮಾಡ್ತು. ಫ್ಯಾಮಿಲಿ ಸಪೋರ್ಟ್ ತುಂಬಾ ಚೆನ್ನಾಗಿತ್ತು. ನಟನೆಯ ವಿಚಾರದಲ್ಲಿ ನಾನು ಆ ಪಾತ್ರದಲ್ಲಿ ತುಂಬಾ ಇನ್ವಾಲ್ವ್ ಆಗಿದ್ದೆ. ನಿರ್ಮಾಣದ ಜವಾಬ್ದಾರಿಯನ್ನ ಅಪ್ಪ ನಿಭಾಯಿಸುತ್ತಿದ್ದರು. ನಿರ್ದೇಶಕ ಸತೀಶ್ ಪ್ರಧಾನ್ ನೀಟಾಗಿ ಪ್ಲಾನ್ ಮಾಡ್ತಿದ್ರು. ಹೀಗಾಗಿ ಯಾವುದೇ ತೊಂದರೆ ಇಲ್ಲದೆ ಟೀಮ್ ಸಾಥ್ ನಿಂದ ಸಿನಿಮಾ ಚೆನ್ನಾಗಿ ಬಂದಿದೆ. [ಪೂಜಾಗಾಂಧಿ ಹಿಂದಿರುವ ಸ್ಪೆಷಲ್ ಫ್ರೆಂಡ್ ಯಾರು?]

Abhinetri2

* ಪೂಜಾಗಾಂಧಿಗೆ ಅವಕಾಶ ಕಡಿಮೆ ಆಗ್ತಿದೆ ಅಂತ ನಿರ್ಮಾಣಕ್ಕೆ ಇಳಿದ್ರು ಅನ್ನೋ ಮಾತಿದೆ. ನಿಜಾನಾ..!?


- ಬಾಲಿವುಡ್ ನಲ್ಲಿ ಬಿಗ್ ಬಿಗ್ ಸ್ಟಾರ್ ಗಳೂ ಚಿತ್ರ ನಿರ್ಮಾಣ ಮಾಡ್ತಾರೆ. ಹಾಗಂತ ಅವರೆಲ್ಲಾ ಫ್ಲಾಪ್ ಸ್ಟಾರ್ ಗಳು ಅಲ್ಲಾ ಅಲ್ವಾ...? ಪ್ರೋಫೆಷನಲಿ ಬೆಳಿತಾ ಬೆಳಿತಾ ಫೀಲ್ಡ್ ನ ನಾವು ನೋಡೋ ಧಾಟಿ ಬದಲಾಗುತ್ತೆ. ಜಾಸ್ತಿ ಸಿನಿಮಾಗಳನ್ನ ಮಾಡಿದ ಮೇಲೆ ಬೇರೇನಾದ್ರೂ ಪ್ರಯೋಗ ಮಾಡಬೇಕು ಅಂತ ಎಲ್ಲರಿಗೂ ಅನ್ನಿಸೋದು ಸಹಜ..ಅದ್ರಲ್ಲಿ ತಪ್ಪೇನಿಲ್ಲ. ನಾನು ಹಾಗೇನೇ...ಪ್ರೋಡ್ಯೂಸ್ ಮಾಡ್ತಿದ್ದೀನಿ ಅಂದ ಮಾತ್ರಕ್ಕೆ ನನಗೆ ಅವಕಾಶಗಳು ಕಡಿಮೆ ಆಯ್ತು ಅಂತಲ್ಲ, ದಂಡುಪಾಳ್ಯ ಹಿಟ್ ಆಯ್ತು. ತೆಲುಗು ತಮಿಳಲ್ಲೂ ಹಂಡ್ರೆಡ್ ಡೇಸ್ ಪೂರೈಸ್ತು. ಅದಾದ ಮೇಲೆ ಬೇರೆ ಭಾಷೆ ಸೇರಿದಂತೆ ಕನ್ನಡದಲ್ಲೂ ಸಾಕಷ್ಟು ಆಫರ್ಸ್ ಬಂತು. ಆದ್ರೆ ಮನಸ್ಸಿಗೆ ಹಿಡಿಸೋ ಮಾದರಿ ಪಾತ್ರಗಳು ಬರಲಿಲ್ಲ. ಅದೇ ಲವ್ ಸ್ಟೋರಿ, ಅವೇ ಹಳೆಯ ಪಾತ್ರಗಳು ಸಿಗ್ತಿದ್ವು, ತಾಜ್ ಮಹಲ್ ಸಿನಿಮಾ ಬಳಿಕ ನಾನು ಪಾತ್ರಗಳಲ್ಲಿ ಎಕ್ಸ್ ಪೆರಿಮೆಂಟ್ ಮಾಡೋಕೆ ಶುರು ಮಾಡ್ದೆ. ನಟಿಯರು ಒಂದೇ ಪಾತ್ರಕ್ಕೆ ಸೀಮಿತರಾಗಬಾರದು ಅಂತ ನಾನು ಹೊಸತನದ ಪಾತ್ರಗಳಿಗೆ, ಮಹಿಳಾ ಪ್ರಧಾನ ಸಿನಿಮಾಗಳಿಗೆ ನಿರೀಕ್ಷೆ ಮಾಡ್ತಿದ್ದೆ. ಅವುಗಳು ಸಿಗ್ಲಿಲ್ಲ ಹೀಗಾಗಿ ನೋಡೋರಿಗೆ ನಾನು ಖಾಲಿ ಅನ್ನಿಸ್ತಿತ್ತಷ್ಟೆ.. [ಪೂಜಾಗಾಂಧಿ ಜೊತೆ ಶ್ರೀನಗರ ಕಿಟ್ಟಿ ತಂನಂ ತಂನಂ]

Abhinetri3

* ಅಭಿನೇತ್ರಿ ಯಾರ ಕನಸು..?


- ಒಬ್ಬ ನಾಯಕಿ ಬಗ್ಗೆ, ನಾಯಕ ನಟಿಯ ಜೀವನದ ಬಗ್ಗೆ ಸಿನಿಮಾ ಮಾಡಬೇಕು ಅಂತ ತುಂಬಾ ಆಸೆ ಇತ್ತು. ಅದ್ರ ಫಲವೇ ಈ ಅಭಿನೇತ್ರಿ. ನಿರ್ದೇಶಕ ಸತೀಶ್ ಪ್ರಧಾನ್ ಈ ಕಥೆಯನ್ನ ರೆಡಿ ಮಾಡಿದ್ದಾರೆ ಅಂತ ಗೊತ್ತಾಯ್ತು, ಇದನ್ನ ನಾನೇ ಯಾಕೆ ನಿರ್ಮಾಣ ಮಾಡಬಾರದು ಅಂತ ಈ ಪ್ರಾಜೆಕ್ಟ್ ನ ಕೈಗೆತ್ತಿಕೊಂಡೆ. ತುಂಬಾ ರಿಸರ್ಚ್ ಮಾಡಿ ಸತೀಶ್ ಕಥೆಯನ್ನ ಮಾಡಿದ್ರು. ನನಗೆ ಅದು ಇಷ್ಟ ಆಯ್ತು. ಆ ಮೂಲಕ ನನ್ನ ಕನಸು ಈಡೇರಿಸಿಕೊಳ್ಳೋ ಅವಕಾಶ ಸಿಕ್ತು.


* ಓರ್ವ 'ನಾಯಕಿ' ಕುರಿತ ಚಿತ್ರಣವೇ ಯಾಕೆ..?


- ನಾನು ಕೂಡ ನಾಯಕನಟಿ, ನಾಯಕಿಯಾಗಿ ತುಂಬಾ ಸವಾಲುಗಳನ್ನ ಎದುರಿಸಬೇಕಾಗುತ್ತೆ. ಭಾರತೀಯ ಚಿತ್ರರಂಗದಲ್ಲಿ ಲೆಜೆಂಡರಿ ಆಕ್ಟೆಸೆಸ್ ಇದ್ದಾರೆ. ಅವರು ಆ ಮಟ್ಟಕ್ಕೆ ತಲುಪೋಕೆ ಪಟ್ಟಿರುವ ಕಷ್ಟ ಅಷ್ಟಿಷ್ಟಲ್ಲ. 70 ರ ದಶಕದ ಚಿತ್ರರಂಗದ ಬಗ್ಗೆ ಈಗಿನವರಿಗೆ ಅಷ್ಟಾಗಿ ಗೊತ್ತಿಲ್ಲ. ಅಂದಿನ ಒಬ್ಬ ಪರಿಪೂರ್ಣ ನಾಯಕಿ ಕಥೆಯೇ ಅಭಿನೇತ್ರಿ. ಆ ಮೂಲಕ ಅಂದಿನ ನಟಿಯರಿಗೆ ಟ್ರಿಬ್ಯೂಟ್ ಕೊಡಬೇಕು ಅಂತ ಮಾಡಿರೋ ಸಿನೆಮಾ ಇದು.

Abhinetri4

* ''ಅಭಿನೇತ್ರಿ''ಯಾಗಿ ನಿಮ್ಮ ಅನುಭವ...?


- ಎಪ್ಪತ್ತರ ದಶಕದ ನಾಯಕಿಯಾಗಿ ನಟಿಸೋದು ವಿಶಿಷ್ಟ ಅನುಭವ. ಅಂದಿನ ನಾಯಕಿಯರು ರಂಗಭೂಮಿಯಲ್ಲಿ ಪಳಗಿದವರು. ಇಡೀ ಕನ್ನಡ ಚಿತ್ರರಂಗ ಚೆನ್ನೈ ನಲ್ಲಿ ನೆಲೆನಿಂತಿತ್ತು. ಆಗ ರಾತ್ರಿ ಎಲ್ಲಾ ನಟಿಯರು ಕಷ್ಟಪಟ್ಟು ನಟಿಸ್ತಿದ್ರು. ಅದೆಲ್ಲಾ ನಾನು ಅನುಭವಿಸಿ ನಟಿಸುವಂತೆ ಅವಕಾಶ 'ಅಭಿನೇತ್ರಿ'ಯಲ್ಲಿ ಸಿಕ್ಕಿದ್ದು ನನ್ನ ಅದೃಷ್ಟ.


* ಈಗಾಗಲೇ ರಿಲೀಸ್ ಆಗಿರೋ ಟ್ರೇಲರ್ ನಲ್ಲಿ ಅಭಿನೇತ್ರಿ ಚಿತ್ರದ ಮೂಲಕ ಅನೇಕ ನಟಿಯರಿಗೆ ಟ್ರಿಬ್ಯೂಟ್ ನೀಡಿದ್ದೀರಾ..ಅವರೆಲ್ಲರ ಬಗ್ಗೆ ಮತ್ತು ಅವರು ನಟಿಸಿರುವ ಚಿತ್ರಗಳ ಬಗ್ಗೆ ಪಂಜಾಬಿ ಕುಡಿಯಾದ ನಿಮಗೆಷ್ಟು ಗೊತ್ತು..?


- ನನಗೆ ಗೊತ್ತು...ಕಲ್ಪನಾ, ಆರತಿ ಅಭಿನಯದ ಸಿನಿಮಾಗಳನ್ನ ನಾನು ನೋಡಿದ್ದೇನೆ. ಜಯಂತಿಯಮ್ಮಾ ಅವರನ್ನ ಮೀಟ್ ಮಾಡಿದ್ದೀನಿ. ಅವರೆಲ್ಲಾ ಮಾಡಿರೋ ಸಿನಿಮಾಗಳನ್ನ ನೋಡಿದ್ದೀನಿ, ಎಲ್ಲರಿಂದ ಸ್ಪೂರ್ತಿ ಪಡೆದು ಮಾಡಿರೋ ಚಿತ್ರ ಈ ಅಭಿನೇತ್ರಿ.

Abhinetri5

* ಪ್ರತಿ ದಿನ 'ಅಭಿನೇತ್ರಿ'ಯಾಗೋದಕ್ಕೆ ನೀವು ತೆಗೆದುಕೊಳ್ತಿದ್ದ ಸಮಯ...?


- ಮೂರರಿಂದ ನಾಲ್ಕುಗಂಟೆ. ಯಾಕಂದ್ರೆ ಎಪ್ಪತ್ತರ ದಶಕದ ಹೇರ್ ಸ್ಟೈಲ್, ಮೇಕಪ್ ಮಾಡ್ಕೋಳೋಕೆ ಜಾಸ್ತಿ ಟೈಂ ಹಿಡಿಯುತ್ತಿತ್ತು. ರೆಟ್ರೋ ಲುಕ್ ರೀಕ್ರಿಯೇಟ್ ಮಾಡೋದು ಚಾಲೆಂಜಿಂಗ್ ಆಗಿರ್ತಿತ್ತು. ಕಾಸ್ಟ್ಯೂಮ್ ಡಿಸೈನ್ ಬಗ್ಗೆ ಹೇಳೋದಾದ್ರೆ ಹಾಡುಗಳಿಗೆ ನನ್ನ ತಂಗಿ ರಾಧಿಕಾ ಡಿಸೈನ್ ಮಾಡಿದ್ಳು. ಬಾಕಿ ಇಡೀ ಸಿನಿಮಾಗೆ ಫ್ಯಾಷನ್ ಡಿಸೈನರ್ ಕಮಲ್ ಮಾಡಿದ ಡ್ರೆಸ್ಗಳನ್ನ ಹೊತ್ತು ನಿಲ್ತಿದ್ದೆ.

Abhinetri6

* 'ಅಭಿನೇತ್ರಿ' ಮಿನುಗುತಾರೆ ಕಲ್ಪನಾ ಕಥೆಯಾಧರಿಸಿದ ಚಿತ್ರ ಅಂತ ಒಪ್ಪಿಕೊಳ್ತಿರಾ..?!


- ಈ ಚಿತ್ರಕ್ಕೆ ಕಲ್ಪನಾ ಪ್ರೇರಣೆಯಾಗಿದ್ದಾರೆಯೇ ಹೊರತು, ಅವರ ಜೀವನದ ಕಥೆ ಇದಲ್ಲ. ಕಲ್ಪನಾರಂತೆ ಅನೇಕ ನಟಿಯರ ಕಥೆಯನ್ನ ಚಿತ್ರದೊಳಗೆ ಅಳವಡಿಸಿಕೊಂಡಿದ್ದೇವೆ. ಮತ್ತೊಮ್ಮೆ ಕಲ್ಪನಾರಂತಹ ನಟಿ ಹುಟ್ಟಿ ಬರಲ್ಲ, ಅವ್ರ ಸ್ಥಾನವನ್ನ ತುಂಬೋಕೆ ಯಾರಿಂದಲೂ ಸಾಧ್ಯವಿಲ್ಲ. ನನ್ನ ಲುಕ್ ಮತ್ತು ಗೆಟಪ್ ಕಲ್ಪನಾರಿಂದಲೇ ಸ್ಪೂರ್ತಿ ಪಡೆದದ್ದು. ಅವರ ಮೇಕಪ್ ಮತ್ತು ಡ್ರೆಸ್ಸಿಂಗ್ ಸ್ಟೈಲ್ ತುಂಬಾ ಬ್ಯೂಟಿಫುಲ್. ನಾನು ಕರ್ನಾಟಕಕ್ಕೆ ಬಂದ ಮೇಲೆ ಅವರ ಬಗ್ಗೆ ತಿಳಿದುಕೊಂಡಿದ್ದು. ಈ ಚಿತ್ರವನ್ನ ಅವರಿಗೆ ಅರ್ಪಿಸುತ್ತಿದ್ದೇನೆ.


ಅಭಿನೇತ್ರಿ ಚಿತ್ರ ಕಲ್ಪನಾರಿಂದ ಪ್ರೇರಣೆ ಪಡೆದಿದ್ದು ಅಂತ ಹೇಳುವ ಪೂಜಾಗೆ ಕಲ್ಪನಾ ಬಗ್ಗೆ ಎಷ್ಟು ಗೊತ್ತು..? ಚಿತ್ರಬ್ರಹ್ಮ ಪುಟ್ಟಣ್ಣ ಚಿತ್ರಗಳನ್ನ ಪೂಜಾ ನೋಡಿದ್ದಾರಾ...ಈ ಪ್ರಶ್ನೆಗಳಿಗೆ ಪೂಜಾ ಗಾಂಧಿ ಉತ್ತರ ನೀಡಿದ್ದಾರೆ. ಮುಂದೆ ಓದಿ.


English summary
Actress Pooja Gandhi of Mungaaru Male fame is currently in talk of the town for her new venture 'Abhinetri'. The actress clarifies that the movie 'Abhinetri' is inspired from the late actress Kalpana and not completely based on her life. 'Abhinetri' is the voice of all the actresses and it also has my story as well, says Pooja in her interview with FilmiBeat Kannada.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada