»   » ಗ್ಲಾಮರಸ್, ಡೀಗ್ಲಾಮರಸ್ ನಲ್ಲಿ ನಂಬಿಕೆ ಇಲ್ಲ: ನಿವೇದಿತಾ

ಗ್ಲಾಮರಸ್, ಡೀಗ್ಲಾಮರಸ್ ನಲ್ಲಿ ನಂಬಿಕೆ ಇಲ್ಲ: ನಿವೇದಿತಾ

Posted By:
Subscribe to Filmibeat Kannada

2013ನೇ ಸಾಲಿನ 'ರಾಜ್ಯ ಚಲನಚಿತ್ರ ಪ್ರಶಸ್ತಿ' ಪಟ್ಟಿ ಪ್ರಕಟವಾಗಿದೆ. 'ಉತ್ತಮ ನಟಿ' ವಿಭಾಗದಲ್ಲಿ ಅನೇಕ ನಟೀಮಣಿಯರನ್ನ ಹಿಂದಕ್ಕೆ ತಳ್ಳಿ, ನಟಿ ನಿವೇದಿತಾ 'ಡಿಸೆಂಬರ್ 1' ಚಿತ್ರದ ಅಭಿನಯಕ್ಕಾಗಿ 'ರಾಜ್ಯ ಪ್ರಶಸ್ತಿ'ಯನ್ನ ಮುಡಿಗೇರಿಸಿಕೊಂಡಿದ್ದಾರೆ.

ಮೊದಲ ಬಾರಿಗೆ ಇಂತಹ ಹಿರಿಮೆಗೆ ಪಾತ್ರವಾಗಿರುವ ನಿವೇದಿತಾ ತಮ್ಮ ಸಂತಸವನ್ನು 'ಫಿಲ್ಮಿಬೀಟ್ ಕನ್ನಡ' ಜೊತೆ ಹಂಚಿಕೊಂಡಿದ್ದಾರೆ. ಪ್ರಶಸ್ತಿ ಮತ್ತು 'ಡಿಸೆಂಬರ್ 1' ಚಿತ್ರದ ಅನುಭವದ ಬಗ್ಗೆ ನಿವೇದಿತಾ ನೀಡಿರುವ ಸಂದರ್ಶನ ಇಲ್ಲಿದೆ ಓದಿ.

* ಪ್ರಪ್ರಥಮ ಬಾರಿ 'ಉತ್ತಮ ನಟಿ' ಪ್ರಶಸ್ತಿಗೆ ಭಾಜನರಾಗಿದ್ದೀರಿ. ಹೇಗಿದೆ ಫೀಲಿಂಗ್?
ಉತ್ತಮ ನಟಿ ಪ್ರಶಸ್ತಿ, ಮೊದಲ ಬಾರಿ ಹೌದು. ರಾಜ್ಯ ಪ್ರಶಸ್ತಿ (ಪೋಷಕ ಪಾತ್ರಕ್ಕೆ) 'ಅವ್ವ' ಸಿನಿಮಾಗಾಗಿ ಸಿಕ್ಕಿತ್ತು. ತುಂಬಾ ಖುಷಿ ಆಗ್ತಿದೆ. ಸಂತೋಷ, ಸಂಭ್ರಮ, ಸಡಗರ ಎಲ್ಲಾ ಇದೆ. ನ್ಯೂ ಇಯರ್ ಬೇರೆ. ಇದು ಅನಿರೀಕ್ಷಿತ ನನಗೆ. ಇಷ್ಟು ಬೇಗ ಅನೌನ್ಸ್ ಮಾಡ್ತಾರೆ ಅಂತ ಗೊತ್ತಿರಲಿಲ್ಲ. ನಾನು ಹೊಸ ವರ್ಷದ ಸಂಭ್ರಮದಲ್ಲಿ ಬಿಜಿಯಾಗಿದ್ದೆ. ಪ್ರಶಸ್ತಿ ನನಗೆ ನ್ಯೂ ಇಯರ್ ಗಿಫ್ಟ್ ಸಿಕ್ಕಿದ ಹಾಗೆ. [2013ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ]

An interview with Best Actress Niveditha 20131

* ಜಯಂತಿ, ಆರತಿ, ಕಲ್ಪನಾ, ಸುಧಾರಾಣಿ, ತಾರಾ ರವರಂತಹ ದೊಡ್ಡ ದೊಡ್ಡ ಕಲಾವಿದರ ಲಿಸ್ಟ್ ಗೆ ನೀವು ಸೇರಿದ್ದೀರಿ, ಇದನ್ನ ನಿಮ್ಮ ಜೀವಮಾನದ ಸಾಧನೆ ಅಂತ ಬಣ್ಣಿಸಬಹುದಾ..?
ಜೀವಮಾನದ ಸಾಧನೆ ಏನಲ್ಲ. ನಾನು ಅವರ ಮಟ್ಟಕ್ಕೇನು ಸಾಧಿಸಿಲ್ಲ. ಸಾಧಿಸುವುದು ಇನ್ನೂ ತುಂಬಾ ಇದೆ. ನನಗೆ ನನ್ನ ಕೆಲಸದ ಬಗ್ಗೆ ಅಷ್ಟಾಗಿ ತೃಪ್ತಿ ಸಿಕ್ಕಿಲ್ಲ. ತೆರೆಮೇಲೆ ನನ್ನ ನಾನು ನೋಡಿಕೊಂಡಾಗ ಬಹಳಷ್ಟು ತಪ್ಪುಗಳು ಕಾಣುತ್ತೆ. ಇನ್ನೂ ಚೆನ್ನಾಗಿ ಮಾಡಬಹುದಿತ್ತು ಅನ್ಸುತ್ತೆ. ನಾನಿನ್ನೂ ಕಲಿಯೋದು ತುಂಬಾ ಇದೆ. ನನ್ನ ಕೈಲಾಗಿದ್ದನ್ನ ನಾನು ಮನಸಾರೆ ಮಾಡ್ತಿದ್ದೀನಿ ಅಷ್ಟೆ.

* 'ರಾಜ್ಯ ಪ್ರಶಸ್ತಿ'ಯನ್ನ ಯಾರಿಗೆ ಅರ್ಪಿಸುತ್ತೀರಾ?
- OFCOURSE ಶೇಷಾದ್ರಿ ಸರ್ ಗೆ ಪ್ರಶಸ್ತಿಯನ್ನ ಡೆಡಿಕೇಟ್ ಮಾಡ್ತೀನಿ. ಯಾಕಂದ್ರೆ, ''ನಾನು ಮಾಡಬಲ್ಲೆ'' ಅಂತ ನನ್ನ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟು, ಆ ಪಾತ್ರವನ್ನ ನನಗೆ ಕೊಟ್ಟರು. ಅವರೊಂದಿಗೆ ನನಗೆ ಸಪೋರ್ಟ್ ಮಾಡಿದ ಎಲ್ಲರಿಗೂ ಈ ಪ್ರಶಸ್ತಿಯನ್ನ ಅರ್ಪಿಸುತ್ತೇನೆ.

An interview with Best Actress Niveditha 20132

* ರಿಲೀಸ್ ಗೂ ಮುನ್ನವೇ ಚಿತ್ರಕ್ಕೆ 'ರಾಷ್ಟ್ರ ಪ್ರಶಸ್ತಿ' ಲಭಿಸಿತ್ತು. ಆಗ ನಿಮಗೂ ಪ್ರಶಸ್ತಿ ಗಳಿಸುವ ಭರವಸೆ ಇತ್ತಾ?
- ಇಲ್ಲ. 'ರಾಷ್ಟ್ರ ಪ್ರಶಸ್ತಿ'ಯಲ್ಲೂ ನನಗೆ ಒಂದು ವೋಟ್ ನಲ್ಲಿ 'ಉತ್ತಮ ನಟಿ' ಪ್ರಶಸ್ತಿ ಮಿಸ್ ಆಯ್ತು ಅನ್ನುವ ಸುದ್ದಿ ಇತ್ತು. ಆದರೆ ನಾನು ಯಾವುದೇ ನಿರೀಕ್ಷೆಯನ್ನ ಇಟ್ಟುಕೊಂಡಿರಲಿಲ್ಲ. ಆದ್ರೆ, ನೋಡಿದವರೆಲ್ಲಾ ''ಉತ್ತಮವಾಗಿ ಅಭಿನಯಿಸಿದ್ದೀರಾ, ನಿಮಗೆ ಗ್ಯಾರೆಂಟಿ ಪ್ರಶಸ್ತಿ ಲಭಿಸುತ್ತೆ'' ಅನ್ನುತ್ತಿದ್ದರು. ಅದೇ ನನಗೆ ಪ್ರಶಸ್ತಿ ಸಿಕ್ಕಿದಷ್ಟು ಖುಷಿ. ಪ್ರಶಸ್ತಿ ಬಗ್ಗೆ ನಿಜವಾಗಿಯೂ ಯೋಚಿಸಿರಲಿಲ್ಲ.

* 'ಡಿಸೆಂಬರ್ 1' ಚಿತ್ರದ 'ದೇವಕ್ಕ' ಪಾತ್ರ...ನಿರ್ವಹಿಸುವುದು ಎಷ್ಟು ಕಷ್ಟ ಅಥವಾ ಸುಲಭವಾಗಿತ್ತು ನಿಮಗೆ?
- ನನಗೆ ತುಂಬಾ ಕಷ್ಟ ಅಂತೇನೂ ಅನಿಸಲಿಲ್ಲ. ನಾನು ಹಳ್ಳಿಯಲ್ಲಿ ಹುಟ್ಟಿ ಬೆಳೆದವಳೇ. ಹೀಗಾಗಿ ಬರಿಗಾಲಲ್ಲಿ ಓದಾಡೋದೆಲ್ಲಾ ನನಗೆ ಕಷ್ಟ ಆಗಲೇ ಇಲ್ಲ. ನನಗೆ ಯಾವುದೂ ಕಷ್ಟ ಅಂತ ಅನಿಸಲ್ಲ. ಎಲ್ಲವನ್ನೂ ಇಷ್ಟ ಪಟ್ಟು ಮಾಡ್ತೀನಿ. 'ದೇವಕ್ಕ'ನ ಪಾತ್ರ ನನಗೆ ತುಂಬಾ ಇಷ್ಟ ಆಗಿತ್ತು. ನಿರ್ದೇಶಕ ಶೇಷಾದ್ರಿ, ಕ್ಯಾಮರಾಮೆನ್ ಅಶೋಕ್ ಕೂಡ ನನಗೆ ತುಂಬಾ ಸಪೋರ್ಟ್ ಮಾಡಿದ್ರು.

An interview with Best Actress Niveditha 20133

* ಗ್ಲಾಮರಸ್ ಪಾತ್ರಗಳನ್ನ ಮಾಡುತ್ತಾ ಚಿತ್ರರಂಗಕ್ಕೆ ಬಂದ್ರಿ, 'ಅವ್ವ' ಮತ್ತು 'ಡಿಸೆಂಬರ್ 1' ರಲ್ಲಿ ಡೀಗ್ಲಾಮರಸ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೀರಾ..ಇಂತಹ ಚೇಂಜ್ ಓವರ್ ಗೆ ಕಾರಣ?
ಏನೂ ಚೇಂಜ್ ಓವರ್ ಆಗಿಲ್ಲ. ನಾಳೆ ನನಗೆ ಒಳ್ಳೆ ಕಮರ್ಷಿಯಲ್ ಸಿನಿಮಾ ಆಫರ್ ಸಿಕ್ಕರೆ, ಖಂಡಿತ ಮಾಡ್ತೀನಿ. ಯಾವ ಪಾತ್ರ ಇಷ್ಟವಾಗುತ್ತೆ, ಅದನ್ನ ಮಾಡ್ತೀನಿ. ಗ್ಲಾಮರಸ್, ಡೀಗ್ಲಾಮರಸ್ ಅನ್ನೋದ್ರಲ್ಲಿ ನನಗೆ ನಂಬಿಕೆ ಇಲ್ಲ.

* 'ಡಿಸೆಂಬರ್ 1' ಚಿತ್ರಕ್ಕೆ ನಿಮಗೆ ಅವಕಾಶ ಸಿಕ್ಕಿದ್ದಾದರೂ ಹೇಗೆ?
'ದೇವಕ್ಕ'ನ ಪಾತ್ರಕ್ಕಾಗಿ ಶೇಷಾದ್ರಿ ಸರ್ ಹುಡುಕಾಟದಲ್ಲಿದ್ದರು. ಆಗ ಅವರು ನನಗೆ ಫೋನ್ ಮಾಡಿದ್ರು. ಆಮೇಲೆ ಕಥೆ ಹೇಳಿದ್ರು. ಇಷ್ಟ ಆಗಿ ಒಪ್ಪಿಕೊಂಡೆ.

* 'ರಾಷ್ಟ್ರ ಪ್ರಶಸ್ತಿ' ಪುರಸ್ಕೃತ ನಿರ್ದೇಶಕ ಪಿ.ಶೇಷಾದ್ರಿ ಜೊತೆ ಕೆಲಸ ಮಾಡಿದ ಅನುಭವ...
ಅವರಿಗೆ ರಾಷ್ಟ್ರ ಪ್ರಶಸ್ತಿ ಬಂದಿದೆ ಅಂತ ಯಾರಿಗೂ ಅನಿಸುವುದೇ ಇಲ್ಲ. ಅಷ್ಟು ಸರಳ ಜೀವಿ ಅವರು. ತುಂಬಾ Down To Earth. ಅವರ ಹತ್ತಿರ ಕಲಿಯೋದು ತುಂಬಾ ಇದೆ. ಯಾವುದೇ ಟೆನ್ಷನ್ ಮಾಡಿಕೊಳ್ಳದೇ, ಯಾರಿಗೂ ಟೆನ್ಷನ್ ಕೊಡದೆ ಆರಾಮಾಗಿ ಕೆಲಸ ಮಾಡ್ತಾರೆ ಅವರು. [ಶೇಷಾದ್ರಿ ಮುಂದಿನ ಚಿತ್ರ 'ವಿದಾಯ'ಕ್ಕೆ ಗ್ರೀನ್ ಸಿಗ್ನಲ್]

An interview with Best Actress Niveditha 20134

* ಪ್ರಶಸ್ತಿ ಸಿಕ್ಕ ಮೇಲೆ ಜವಾಬ್ದಾರಿ ಜಾಸ್ತಿಯಾಗಿದೆ. ಮುಂದಿನ ಚಿತ್ರಗಳ ಬಗ್ಗೆ ಜಾಗರೂಕತೆ ವಹಿಸಬೇಕು. ಎಂತಹ ಪಾತ್ರಗಳನ್ನು ಎದುರು ನೋಡುತ್ತಿದ್ದೀರಿ.?
ಹೌದು, ಜವಾಬ್ದಾರಿ ಜಾಸ್ತಿ ಇದೆ. ಸದ್ಯಕ್ಕೆ ಯಾವುದೇ ಹೊಸ ಪ್ರಾಜೆಕ್ಟ್ ಒಪ್ಪಿಕೊಂಡಿಲ್ಲ. 'ಶುದ್ದಿ' ಅನ್ನುವ ಸಿನಿಮಾ ರಿಲೀಸ್ ಆಗ್ಬೇಕು. ಪ್ರಶಸ್ತಿಗಳಿಂದ ಸಿನಿಮಾ ಆಯ್ಕೆ ಮೇಲೆ ನಾನು ಪ್ರಭಾವಿ ಆಗೋದಿಲ್ಲ. ನನಗೆ ಪಾತ್ರ ಇಷ್ಟ ಆಗ್ಬೇಕು. ಆ ಪಾತ್ರ ಮಾಡಬಲ್ಲೆ ಅಂತ ನನಗೆ ಅನಿಸಿದರೆ, ಒಪ್ಪಿಕೊಳ್ಳುತ್ತೀನಿ.

* ಕಲಾವಿದರಿಗೆ 'ಪ್ರಶಸ್ತಿ' ಮುಖ್ಯವೋ ಅಥವಾ ಅಭಿಮಾನಿ ಬಳಗ, ಕಮರ್ಶಿಯಲ್ ಸಕ್ಸಸ್ ಮುಖ್ಯವೋ..? ನಿಮ್ಮ ವೈಯುಕ್ತಿಕ ಅಭಿಪ್ರಾಯ..?
ಕಲಾವಿದರಿಗೆ ಕಮರ್ಶಿಯಲ್ ಸಕ್ಸಸ್, ಅಭಿಮಾನಿ ಬಳಗವೂ ಬೇಕು. ಹಾಗೆ ಪ್ರಶಸ್ತಿಗಳೂ ಬೇಕು. ಆದರೆ, ನನ್ನ ಕೆಲಸಕ್ಕೆ Motivation ಅವೆರಡೂ ಅಲ್ಲ. ಪಾತ್ರಕ್ಕೆ ನ್ಯಾಯ ಒದಗಿಸಿ, ಕೆಲಸಕ್ಕೆ ಡೆಡಿಕೇಟ್ ಆಗಿದ್ದರೆ, ಮಾಡುವ ಕೆಲಸ ಸಾರ್ಥಕ.

An interview with Best Actress Niveditha 20135

* ಸ್ಮಿತಾ, ನಿವೇದಿತಾ ಆದ್ಮೇಲೆ ಅದೃಷ್ಟ ಖುಲಾಯಿಸಿತಾ ಅಂತ?
ಹಾಗೇನಿಲ್ಲ, ಹೆಸರು ಚೇಂಜ್ ಮಾಡಿಕೊಂಡು ಆರು ವರ್ಷಗಳಾಯ್ತು. ಅದ್ರಿಂದ ನನಗೆ ಪಾಸೀಟಿವ್ ಎನರ್ಜಿ ಬಂದಿರುವುದು ಖಚಿತ. ನಿವೇದಿತಾ ಅಂದ್ರೇನೇ ಡೆಡಿಕೇಷನ್. ಸೋ, ನಾನು ತುಂಬಾ ಡೆಡಿಕೇಟ್ ಆಗಿ ವರ್ಕ್ ಮಾಡ್ತಿದ್ದೀನಿ. ಹಾಗೇ ಮುಂದುವರಿಯ ಬೇಕು ಅಂತಿದ್ದೀನಿ.

English summary
Niveditha has been announced as the Best Actress-2013 (Karnataka State Film Awards). On this occasion, here is the interview of Actress Niveditha.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada