»   » 'ಬೆಂಕಿಪಟ್ಣ' ಅನುಶ್ರೀ ಜೊತೆ ಫಟಾಫಟ್ ಸಂದರ್ಶನ

'ಬೆಂಕಿಪಟ್ಣ' ಅನುಶ್ರೀ ಜೊತೆ ಫಟಾಫಟ್ ಸಂದರ್ಶನ

Posted By:
Subscribe to Filmibeat Kannada

ಕಿರುತೆರೆಯಲ್ಲಿ ಅರಳು ಹುರಿದ ಹಾಗೆ ಪಟ ಪಟ ಅಂತ ಮಾತನಾಡುವ ಅನುಶ್ರೀ ಇದೀಗ ಸ್ಯಾಂಡಲ್ ವುಡ್ ಅಂಗಳದ ಹೊಚ್ಚ ಹೊಸ ನಾಯಕಿ.

ಸಣ್ಣ ಪರದೆ ಮೂಲಕ ಎಲ್ಲರ ಮನೆಮನ ತಲುಪಿರುವ ಅನುಶ್ರೀ, ಇದೀಗ ತಮ್ಮ ಸಾಮರ್ಥ್ಯವನ್ನ ಬೆಳ್ಳಿತೆರೆ ಮೇಲೆ ತೋರಿಸಿದ್ದಾರೆ. ಅವರು ನಾಯಕಿಯಾಗಿ ಅಭಿನಯದ 'ಬೆಂಕಿಪಟ್ಣ' ಚಿತ್ರ ಬಿಡುಗಡೆಯಾಗಿದೆ.


Benkipatna Heroine Anushree Interview

ಅನುಶ್ರೀ ಅಭಿನಯ 'ಸಂಪತ್ತಿಗೆ ಸವಾಲ್' ಮಂಜುಳಾ ರವರಿಗೆ ಹೋಲಿಸಲಾಗುತ್ತಿದೆ. ವ್ಯಾಪಕ ಪ್ರತಿಕ್ರಿಯೆ, ಹೊಸ ಅನುಭವದ ಬಗ್ಗೆ ನಟಿ ಅನುಶ್ರೀ 'ಫಿಲ್ಮಿಬೀಟ್ ಕನ್ನಡ' ಜೊತೆ ಮಾತನಾಡಿದ್ದಾರೆ. ಅವರ ಸಂದರ್ಶನ ಇಲ್ಲಿದೆ ಓದಿ....


* 'ಬೆಂಕಿಪಟ್ಣ' ಸಿನಿಮಾ ರಿಲೀಸ್ ಆಗಿದೆ. ನಿಮಗೆ ಸಿಕ್ಕ ಪ್ರತಿಕ್ರಿಯೆ...


- ತುಂಬಾ ಖುಷಿಯಾಗಿದೆ. ಪರ್ಫಾಮೆನ್ಸ್ ವೈಸ್ ತುಂಬಾ ಇಷ್ಟ ಆಗಿದೆ. ಇವತ್ತು ವಿಮರ್ಶೆಗಳೆಲ್ಲಾ ಓದಿದೆ. ನನ್ನ ಬಗ್ಗೆ ತುಂಬಾ ದೊಡ್ಡ ದೊಡ್ಡ ಮಾತುಗಳೆಲ್ಲಾ ಬಂದಿವೆ. ಒಂದು ಪೇಪರ್ ನಲ್ಲಿ ಓದಿದೆ - 'ಹತ್ತು ಮಂಜುಳ ಸೇರಿಹಾಕಿದ್ರೆ ಒಂದು ಅನುಶ್ರೀ. ಅಂತಹ ಅಭಿನಯ ನೀಡಿದ್ದಾರೆ' ಅಂತ. ಇದನ್ನೆಲ್ಲಾ ಜೀರ್ಣಿಸಿಕೊಳ್ಳುವುದು ಸ್ವಲ್ಪ ಕಷ್ಟ. ಹಾಗೆ, ರೆಸ್ಪಾನ್ಸ್ ಕೂಡ ನಂಗೆ ಖುಷಿ ಆಯ್ತು. ಯಾಕಂದ್ರೆ, ಬಹಳ ಕಮ್ಮಿ ಜನ ಪರ್ಫಾಮೆನ್ಸ್ ನ ಗುರುತಿಸುತ್ತಾರೆ. ನನ್ನ ಆಕ್ಟಿಂಗ್ ಗುರುತಿಸಿದ್ದಾರೆ. ಅದೇ ನನಗೆ ಹೆಮ್ಮೆ.


Benkipatna Heroine Anushree Interview

* ಇಲ್ಲಿಯವರೆಗೂ ಕಿರುತೆರೆಯಲ್ಲಿ ಮಿಂಚಿದ್ರಿ. ದೊಡ್ಡ ಪರದೆ ಮೇಲೆ ನಿಮ್ಮನ್ನ ನೀವು ಕಂಡಾಗ ಆದ ಅನುಭವ....


- ತುಂಬಾ ನರ್ವಸ್ ಆಗಿದ್ದೆ. ನಾನು ಫಸ್ಟ್ ಶೋಗೆ ಸ್ವಲ್ಪ ಲೇಟ್ ಆಗಿ ಹೋದೆ. ಸ್ವಲ್ಪ ಭಯ ಇತ್ತು ಹೇಗೆ ನನ್ನನ್ನ ಜನ ಸ್ವೀಕರಿಸುತ್ತಾರೆ ಅಂತ. ಆದ್ರೆ, ಒಳಗಡೆ ಹೋಗಿ ಕೂತುಗೊಂಡಾಗ, ನನ್ನ ಡೈಲಾಗ್ ಗಳನ್ನ ಕೇಳಿ ಜನ ಶಿಳ್ಳೆ-ಚಪ್ಪಾಳೆ ಹೊಡೆಯೋಕೆ ಶುರುಮಾಡಿದರು. ನಂಗೆ ಫುಲ್ ಖುಷಿ ಆಗೋಯ್ತು. ['ಬೆಂಕಿಪಟ್ಣ'ಕ್ಕೆ ಬಂದ ರಿಯಾಲಿಟಿ ಬೆಡಗಿ ಅನುಶ್ರೀ ]


Benkipatna Heroine Anushree Interview

* ಹಾಗಾದ್ರೆ, ನಿಮ್ಮ ಕನಸು ಈಡೇರಿದ ಹಾಗೆ...


- ಹೌದು, ಖಂಡತ. ನಾನು ಏನೇನು ನಿರೀಕ್ಷೆ ಮಾಡಿದ್ದೆ. ಅದು ನಿಜವಾಯ್ತು. ನನ್ನ ಸಿನಿಮಾ ನೋಡಿ ಜನ ಖುಷಿ ಪಡಬೇಕು ಅಂತ ಆಸೆ ಇತ್ತು. ಅದು ಈಡೇರಿದೆ.


* 'ಬೆಂಕಿಪಟ್ಣ' ಚಿತ್ರದಲ್ಲಿ ನಿಮ್ಮದೊಂದು ಉದ್ದದ ಡೈಲಾಗ್ ಇದೆ. ಒಂದೇ ಉಸಿರಲ್ಲಿ ಪೇಜ್ ಗಟ್ಟಲೆ ಡೈಲಾಗ್ ಹೇಳೋಕೆ ತಯಾರಿ ನಡೆಸಿದ ಬಗ್ಗೆ....


- ಆ ಡೈಲಾಗ್ ನ ಡೈರೆಕ್ಟರ್ ಸ್ಪೆಷಲ್ಲಾಗಿ ನನಗೋಸ್ಕರ ಬರೆದದ್ದು. ಆ ಡೈಲಾಗ್ ಓದಬೇಕಾದರೆ, ''ಸರ್ ಇದೆಲ್ಲಾ ಸಖತ್ ಕಷ್ಟ. ಇಷ್ಟು ಉದ್ದ ಹೇಗೆ ಹೇಳ್ಲಿ'' ಅಂತ ನಾನು ಕೇಳಿದ್ದೆ. ''ಇಲ್ಲಾ, ಮಾಡಿ ನಿಮ್ಮ ಕೈಲಿ ಹಂಡ್ರೆಡ್ ಪರ್ಸೆಂಟ್ ಆಗುತ್ತೆ.'' ಅಂತ ಎನ್ಕರೇಜ್ ಮಾಡಿದ್ರು. ಆ ಸೀನ್ ತೆಗೆಯೋಕೆ ನಾವು ಗುಡ್ಡವನ್ನ ಹತ್ತಿ ಹೋಗಬೇಕಿತ್ತು. ಹೋದಮೇಲೆ, ನಾವೇನು ರಿಹರ್ಸಲ್ ಮಾಡಲಿಲ್ಲ. ಸುಮ್ನೆ ಒಂದು ಟೇಕ್ ಮಾಡೋಣ ಅಂತ ಹೇಳಿದರು. ಒಂದೇ ಟೇಕ್ ನಲ್ಲಿ ನಾನು ಆ ಸೀನ್ ನ ಓಕೆ ಮಾಡ್ದೆ. ಅಲ್ಲಿದ್ದವರೆಲ್ಲಾ ಚಪ್ಪಾಳೆ ತಟ್ಟಿದರು. ಆದ್ರೆ, ನನ್ನ ಸಮಕ್ಕೆ ಹೀರೋ ಕೂಡ ರಿಯಾಕ್ಟ್ ಮಾಡಬೇಕಿತ್ತು. ಪಾಪ, ನಾನು ಹೇಳಿದ ಸ್ಟೈಲ್ ಗೆ ಅವರಿಗೆ ಹೇಗೆ ರಿಯಾಕ್ಷನ್ ಕೊಡಬೇಕು ಅನ್ನೋದೇ ಗೊತ್ತಾಗಲಿಲ್ಲ. ಮತ್ತೊಂದು ಸಲಿ ಟೇಕ್ ಮಾಡಿದ್ವಿ. ಅದೊಂದು ಗ್ರೇಟ್ ಎಕ್ಸ್ ಪೀರಿಯನ್ಸ್.


Benkipatna Heroine Anushree Interview

* 'ಬೆಂಕಿಪಟ್ಣ' ಚಿತ್ರದಲ್ಲಿ ನಿಮ್ಮದು ಗಂಡುಬೀರಿಯ ಪಾತ್ರ. ನಿಜಜೀವನದಲ್ಲಿ ನೀವು....


- ನಾನು ಚಿಕ್ಕವಳಿಂದಲೂ ಟಾಮ್ ಬಾಯ್. ಇಲ್ಲಿ ಗಂಡುಬೀರಿ ಅನ್ನುವುದಕ್ಕಿಂತ ಬಜಾರಿ ಪಾತ್ರ. ಬಯ್ಯೋದು, ಹೊಡೆಯೋದು ಜಾಸ್ತಿ. ಆ ಭಾಷೆಯನ್ನ ಬಳಸುವುದಕ್ಕೆ ನಂಗೆ ಸ್ವಲ್ಪ ಕಷ್ಟ ಆಯ್ತು. ಆದ್ರೆ, ತುಂಬಾ ಖುಷಿ ಕೊಟ್ಟಿದೆ 'ಪಾನಿ' ಪಾತ್ರ ನನಗೆ. [ಚಿತ್ರ ವಿಮರ್ಶೆ : ಕಿಚ್ಚು ಹಚ್ಚದ 'ಬೆಂಕಿಪಟ್ಣ']


Benkipatna Heroine Anushree Interview

* 'ಬೆಂಕಿಪಟ್ಣ' ಚಿತ್ರದಲ್ಲಿ ನೀವು ಸುದೀಪ್ ಅಭಿಮಾನಿ. ನಿಜಜೀವನದಲ್ಲಿ....


- ಹೌದು. ಖಂಡಿತ ನಾನು ಸುದೀಪ್ ಅಭಿಮಾನಿ. ಸುದೀಪ್ ಆಕ್ಟಿಂಗ್ ನಂಗೆ ತುಂಬಾ ಇಷ್ಟ. ಇವತ್ತಿಗೂ ನಂಗೆ 'ಈಗ' ಸಿನಿಮಾ ಪಂಚಪ್ರಾಣ. ಇಡೀ ಸೌತ್ ನಲ್ಲಿ ಲುಕ್ಸ್ ಮತ್ತು ಆಕ್ಟಿಂಗ್ ನಲ್ಲಿ ಸುದೀಪ್ ಬೆಸ್ಟ್. ಅವರ ಅಭಿಮಾನಿಯಾಗಿ ಸಿನಿಮಾದಲ್ಲಿ ಆಕ್ಟ್ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ.


Benkipatna Heroine Anushree Interview

* ನಿಮ್ಮ ಮುಂದಿನ ಪ್ರಾಜೆಕ್ಟ್ ಗಳ ಬಗ್ಗೆ....


- 'ರಿಂಗ್ ಮಾಸ್ಟರ್' ಅಂತ ಸಿನಿಮಾ ಮಾಡ್ತಿದ್ದೀವಿ. ಅರುಣ್ ಸಾಗರ್ ಮತ್ತು ನಾನು. ಒಂದು ರಾತ್ರಿ ನಡೆಯುವ ಕಥೆ. ಹೊಸ ವರ್ಷ ನಮ್ಮ ಲೈಫಲ್ಲಿ ಹೇಗೆ ಬರುತ್ತೆ ಅನ್ನುವ ಬಗ್ಗೆ ಇರುವ ಕಥೆ ಅದು.


Benkipatna Heroine Anushree Interview

* ಕಿರುತೆರೆಯಲ್ಲಿ ಬಿಜಿಯಿದ್ದೀರಾ. ಬೆಳ್ಳಿತೆರೆ ಮೇಲೆ ಅವಕಾಶಗಳು ಸಿಗುತ್ತಿವೆ. ಮುಂದೆ ನಿಮ್ಮ ಆಯ್ಕೆ...


- ನನ್ನ ಆಯ್ಕೆ ಸಿನಿಮಾ. ಹಾಗಂತ ಕಿರುತೆರೆ ಬಿಡುತ್ತೇನೆ ಅಂತಲ್ಲ. ಶೋಗಳ ಬಗ್ಗೆ ತುಂಬಾ ಚ್ಯೂಸಿ ಆಗುತ್ತೇನೆ. ಸಿನಿಮಾಗಳ ಬಗ್ಗೆ ಹೆಚ್ಚಾಗಿ ಗಮನ ಹರಿಸುತ್ತೇನೆ.

English summary
Small Screen Sensation Anushree and Arun Sagar starrer 'Benkipatna' movie has received good response from the audience. On this occasion, here is an Exclusive Interview with the Actress.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada