»   » 'ಕಾಮಿಡಿ ಕಿಲಾಡಿ' ಲೋಕೇಶ್ ಕುಮಾರ್ ಗೆ ಡಿಮ್ಯಾಂಡಪ್ಪೋ.. ಡಿಮ್ಯಾಂಡು.!

'ಕಾಮಿಡಿ ಕಿಲಾಡಿ' ಲೋಕೇಶ್ ಕುಮಾರ್ ಗೆ ಡಿಮ್ಯಾಂಡಪ್ಪೋ.. ಡಿಮ್ಯಾಂಡು.!

Posted By:
Subscribe to Filmibeat Kannada

ಜೀ ಕನ್ನಡ ವಾಹಿನಿಯ ಜನಪ್ರಿಯ 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದಲ್ಲಿ ವೀಕ್ಷಕರಿಗೆ ಬೇಜಾನ್ ಕಚಗುಳಿ ಇಟ್ಟ ಲೋಕೇಶ್ ಕುಮಾರ್ ಗೆ ಸ್ಯಾಂಡಲ್ ವುಡ್ ನಲ್ಲಿ ಡಿಮ್ಯಾಂಡಪ್ಪೋ... ಡಿಮ್ಯಾಂಡು..!

ಹೌದು, 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮಕ್ಕೆ ಬರುವ ಮುನ್ನ 'ಜನವರಿ 1', 'ಲೂಸ್‌ಗಳು' ಸೇರಿದಂತೆ ಕೆಲ ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿದ್ದ ಲೋಕೇಶ್ ಕುಮಾರ್ ರವರಿಗೆ ಈಗ ಅವಕಾಶಗಳ ಮಹಾಪೂರವೇ ಹರಿದು ಬರುತ್ತಿದೆ.

ಹೀರೋ ಆಗುವ ಅವಕಾಶ.!

ಸಿನಿಮಾಗಳಿಗೆ ಹೀರೋ ಆಗುವಂತೆ ಲೋಕೇಶ್ ಕುಮಾರ್ ರವರಿಗೆ ಕರೆ ಬಂದಿದೆ. ಆದ್ರೆ, ಆಫರ್ ಗಳ ಬಗ್ಗೆ ಲೋಕೇಶ್ ತುಂಬಾ ಚ್ಯೂಸಿ ಆಗಿದ್ದಾರೆ. ['ಕಾಮಿಡಿ ಕಿಲಾಡಿಗಳು' ಗೆಲ್ಲದಿದ್ದರೂ, ಬದುಕಿನ ಬಂಡಿಯಲ್ಲಿ ಲೋಕೇಶ್ ಅಪ್ರತಿಮ 'ಸಾಧಕ']

ಲೋಕೇಶ್ ಕುಮಾರ್ ಹೇಳುವುದೇನು.?

''ಸಿನಿಮಾ ಆಫರ್ಸ್ ತುಂಬಾ ಬರ್ತಿದೆ. ಲೀಡ್ ರೋಲ್ ಗೆ ಕರೆಯುತ್ತಾರೆ. ನನಗೆ ಖುಷಿ ಆಗುವುದು ಏನು ಅಂದ್ರೆ ನಮ್ಮ 'ಕಾಮಿಡಿ ಕಿಲಾಡಿಗಳು' ನಿರ್ದೇಶಕ ಶರಣಯ್ಯ ಸರ್ ನಮಗೆ ತುಂಬಾ ಸಹಾಯ ಮಾಡುತ್ತಾರೆ. ಯಾವುದೇ ಆಫರ್ಸ್ ಬಂದರೂ, ಒಮ್ಮೆ ಹೇಳಿ ಅಂತ ನಮಗೆ ಹೇಳಿದ್ದಾರೆ. ಯಾಕಂದ್ರೆ, ''ಹೀರೋ ಆಗಿ ನೀವೇ ಮಾಡಿ.. ನಮಗೆ ದುಡ್ಡು ಕೊಡಿ'' ಅಂತ ಹೇಳುವವರು ಚಿತ್ರರಂಗದಲ್ಲಿ ಇದ್ದಾರೆ. ಹೀಗಾಗಿ ನಮಗೆ ಬ್ಯಾಕ್ ಗ್ರೌಂಡ್ ಯಾರೂ ಇಲ್ಲ. ಹೀಗಿರುವಾಗ ನಮ್ಮ ಸಹಾಯಕ್ಕೆ, ಮಾರ್ಗದರ್ಶನಕ್ಕೆ ಶರಣಯ್ಯ ಸರ್ ನಿಂತಿದ್ದಾರೆ'' ಎನ್ನುತ್ತಾರೆ ಲೋಕೇಶ್ ಕುಮಾರ್. ['ಕಾಮಿಡಿ ಕಿಲಾಡಿ' ಲೋಕೇಶ್ ಬಗ್ಗೆ ನಿಮಗೆಲ್ಲಾ ಗೊತ್ತಿಲ್ಲದ ಸತ್ಯ ಸಂಗತಿ ಇಲ್ಲಿದೆ]

ಕಾಮಿಡಿಯನ್ ಆಗಿ ಬೆಳೆಯಬೇಕು.!

''ಸಿನಿಮಾ ಇಂಡಸ್ಟ್ರಿಯಲ್ಲಿ ನಾನು ಕಾಮಿಡಿಯನ್ ಆಗಿ ಬೆಳೆಯಬೇಕು ಎಂಬ ಆಸೆ ತುಂಬಾ ಇದೆ'' ಅಂತಾರೆ 'ಕಾಮಿಡಿ ಕಿಲಾಡಿ' ಲೋಕೇಶ್ ಕುಮಾರ್.

'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದಲ್ಲಿ ಇಷ್ಟದ ಪಾತ್ರ ಯಾವುದು.?

ಅಂದ್ಹಾಗೆ, ಲೋಕೇಶ್ ಕುಮಾರ್ ರವರಿಗೆ 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದಲ್ಲಿ ಸಿಕ್ಕ ಅಚ್ಚುಮೆಚ್ಚಿನ ಪಾತ್ರ 'ಬಾಡಿಗಾರ್ಡ್', 'ಪ್ರೇಮ್' ಅನುಕರಣೆ ಹಾಗೂ ಗರ್ಭಿಣಿ ಹೆಂಗಸು.

English summary
Lokesh Kumar, Grand Finale Contestant of Zee Kannada Channel's popular show 'Comedy Khiladigalu' is in demand in Sandalwood.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada