»   »  ಕನ್ನಡಿಗರಿಗೆ ಕಚಗುಳಿ ಇಟ್ಟು ನಗಿಸಿದ 'ಕಿಲಾಡಿ' ನರ್ಸ್ ದಿವ್ಯಶ್ರೀ ಸಂದರ್ಶನ

ಕನ್ನಡಿಗರಿಗೆ ಕಚಗುಳಿ ಇಟ್ಟು ನಗಿಸಿದ 'ಕಿಲಾಡಿ' ನರ್ಸ್ ದಿವ್ಯಶ್ರೀ ಸಂದರ್ಶನ

Posted By:
Subscribe to Filmibeat Kannada

ಜೀ ಕನ್ನಡ ವಾಹಿನಿ 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದ ಆರಂಭದಲ್ಲೇ ದಿವ್ಯಶ್ರೀ ಎಲಿಮಿನೇಟ್ ಆಗುವ ಚಾನ್ಸ್ ಇತ್ತು ಎಂದು ಜಗ್ಗೇಶ್ ಒಮ್ಮೆ ಹೇಳಿದ್ದರು. ಆ ಎಪಿಸೋಡ್ ನೋಡಿದ ಎಲ್ಲಿರಿಗೂ ಬಹುಶಃ ನೆನಪಿರುತ್ತದೆ. ಆದ್ರೆ ಅದೇ ದಿವ್ಯಶ್ರೀ 'ಕಾಮಿಡಿ ಕಿಲಾಡಿಗಳು' ಶೋ ಫಿನಾಲೆ ಹಂತ ತಲುಪಿದರು.['ಕಾಮಿಡಿ ಕಿಲಾಡಿ' ಮುತ್ತುರಾಜ್ ಯಾರು? ಅವರ ಹಿನ್ನೆಲೆ ಏನು?]

ವರ್ಷಾನುಗಟ್ಟಲೇ ನಾಟಕ ಸಂಸ್ಥೆಗಳು, ನಟನಾ ಸಂಸ್ಥೆಗಳಲ್ಲಿ ಅಭಿನಯದ ಬಗ್ಗೆ ತರಬೇತಿ ಪಡೆದವರೇ ಆಡಿಶನ್ ನಲ್ಲಿ ಎಡವಿ ಬೀಳುತ್ತಾರೆ. ಆದ್ರೆ ನಟನೆಯು ಬರದೇ ಆಡಿಶನ್ ಹೇಗಿರುತ್ತೆ ಅಂತ ನೋಡಲು ಬಂದವರು ಸೆಲೆಕ್ಟ್ ಆಗುತ್ತಾರಾ.. ಆಗಲ್ಲ ಬಿಡಿ ಅಂತ ಹೇಳೋಕೆ ಸಾಧ್ಯನೇ ಇಲ್ಲಾ. ಯಾಕಂದ್ರೆ 'ಕಾಮಿಡಿ ಕಿಲಾಡಿಗಳು' ಫಿನಾಲೆ ತಲುಪಿರುವ ದಿವ್ಯಶ್ರೀ ಆ ಮಾತನ್ನು ಸುಳ್ಳು ಮಾಡಿದವರು.

ಟಿವಿ ಮುಂದೆ ಕುಂತು ಹಾಸ್ಯ ಕಾರ್ಯಕ್ರಮ ನೋಡುತ್ತಿದ್ದರೂ ನಗದವರಿಗೆ, ಆಯಾಸವಾಗುವಷ್ಟು ನಗುವಂತೆ ಹಾಸ್ಯದ ಮೆಡಿಸನ್ ನೀಡಿದರು ನರ್ಸ್ ದಿವ್ಯಶ್ರೀ. ಜೊತೆಗೆ ಕಳ್ಳ ಸ್ವಾಮೀಜಿ ಶಿಷ್ಯೆ, ಹೌಸ್ ವೈಫ್ ಕ್ಯಾರೆಕ್ಟರ್ ಗಳಿಂದ ಕನ್ನಡ ನಾಡಿನ ಮನೆಮಂದಿಯನ್ನು ನಗಿಸಿ ಫೇಮಸ್ ಆಗಿರುವ ದಿವ್ಯಶ್ರೀ, ಕನ್ನಡಿಗರ ಮನೆ ಮಾತಾಗಿದ್ದಾರೆ. ಪ್ರತಿ ಎಪಿಸೋಡ್ ನಲ್ಲೂ ಪ್ರೇಕ್ಷಕರನ್ನು ರಂಜಿಸಲು ಹೊಸ ಪ್ರಯತ್ನಕ್ಕೆ ಒಡ್ಡಿಕೊಳ್ಳುತ್ತಿದ್ದ ದಿವ್ಯಶ್ರೀ ಜೊತೆ ನಿಮ್ಮ 'ಫಿಲ್ಮಿ ಬೀಟ್ ಕನ್ನಡ' ನಡೆಸಿದ ಸಂದರ್ಶನ ಇಲ್ಲಿದೆ ಓದಿರಿ...

ಸಂದರ್ಶನ: ಸುನೀಲ್ ಬಿಂಡಹಳ್ಳಿ

ನಿಮ್ಮ ಊರು ಯಾವುದು? ವಿದ್ಯಾಭ್ಯಾಸದ ಬಗ್ಗೆ ಹೇಳಿ?

-ನಮ್ಮೂರು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ. ಸಕಲೇಶ್ವರದಲ್ಲಿ ಓದಿದ್ದು, ಆದ್ರೆ ಎಂಕಾಂ ಮಾಡಿದ್ದು ಚಿಕ್ಕಮಗಳೂರಿನಲ್ಲಿ. ನಾನು ಬೇಸಿಕಲಿ ಆಕ್ಟರ್ ಅಲ್ಲ. ಬೆಂಗಳೂರಿನ ಎನ್ ಯು ಹಾಸ್ಟಿಟಲ್ ನಲ್ಲಿ HR ಆಗಿ ವರ್ಕ್ ಮಾಡ್ ತಿದ್ದೆ. ನಾನು ಮತ್ತು ನಮ್ಮ ಅಮ್ಮ ಬೆಂಗಳೂರಿನಲ್ಲೇ ಇದ್ದೀವಿ.

ನಟನೆ ಬಗ್ಗೆ ಆಸಕ್ತಿ ಯಾವಾಗ್ಲಿಂದ?

-ಸ್ಕೂಲ್ ಡೇಸ್ ನಲ್ಲಿ ಆಕ್ಟಿಂಗ್ ಮಾಡ್ ತಿದ್ದೆ. ಆದರೆ ಅಮ್ಮನಿಗೆ ಮೀಡಿಯಾ ಬಗ್ಗೆ ಅಷ್ಟೊಂದು ಒಳ್ಳೆ ಓಪಿನಿಯನ್ ಇರಲಿಲ್ಲ. ಸೊ...10th ಆದಮೇಲೆ ಅದಕ್ಕೊಂದು ಪುಲಿಸ್ಟಾಪ್ ಇಟ್ಟುಬಿಟ್ಟಿದೆ. ಆಮೇಲೆ ಎಲ್ಲೂ ಆಕ್ಟಿಂಗ್ ಮಾಡ್ ತಿರ್ ಲಿಲ್ಲ. ಬಟ್ ಪ್ಲಸ್ ಪಾಯಿಂಟ್ ಏನಂದ್ರೆ ನನಗೆ ಸ್ಟೇಜ್ ಫಿಯರ್ ಇಲ್ಲ. ನಾನು HR ಆಗಿ ವರ್ಕ್ ಮಾಡ್ ತಿದ್ ರಿಂದ ಕೆರಿಯರ್ ಸಪೋರ್ಟ್ ಸಹ ಆ ರೀತಿನೆ ಇದೆ. ಆದ್ರೆ ಆಂಕ್ಟಿಂಗ್ ಇಲ್ಲಿ ಬಂದ ಮೇಲೆ ಕಲಿತಿರೋದು. ಕಂಟಿನ್ಯೂ ಸಹ ಆಗ್ತಿರೋದು.

ಕಾಮಿಡಿ ಕಿಲಾಡಿಗೆ ಬಂದಿದ್ದು ಹೇಗೆ?

- ಅದು ನನ್ ಫ್ರೆಂಡ್ ಇಂದ. ನಾನು ಹಿಂದಿನ ಕೆಲಸಕ್ಕೆ ರಿಜೈನ್ ಮಾಡಿ ಕೆಲಸ ಹುಡುಕುತ್ತಿದ್ದೆ. ಆ ವೇಳೆ ನನ್ ಸ್ನೇಹಿತೆ ಉಲ್ಲೇಖ ಆಡಿಶನ್ ಗೆ ಟ್ರೈ ಮಾಡೆ ಅಂದ್ಲು. ನಾನು ಆಡಿಶನ್ ಹೇಗಿರುತ್ತೆ ಅನ್ನೋದನ್ನ ತಿಳಿದುಕೊಳ್ಳುವ ಕುತೂಹಲದಿಂದ ಬಂದು, 'ಕಾಮಿಡಿ ಕಿಲಾಡಿ'ಗೆ ಸೆಲೆಕ್ಟ್ ಆಗಿದ್ದು.

ಹಾಸ್ಯ ಮಾಡುವುದು ಎಷ್ಟು ಸುಲಭ?

-ಹಾಸ್ಯ ಮಾಡೋದು ತುಂಬಾನೆ ಕಷ್ಟ. ಈ ಅಡಿಗೆ ಮಾಡುವವರಿಗೆ ಅದರ ಕಷ್ಟಗೊತ್ತು. ತಿನ್ನುವವರಿಗೆ ಗೊತ್ತಿರಲ್ಲ ಅಲ್ವಾ. ಸೇಮ್ ಥಿಂಗ್. ಆದ್ರೆ, ನಾನು ಕಾಮಿಡಿ ಕಿಲಾಡಿಗಳು ಜರ್ನಿಯಲ್ಲಿ ಮೊದಲು ತುಂಬಾನೆ ಸ್ಟ್ರಗಲ್ ಮಾಡಿಬಿಟ್ಟೆ. ಸ್ಟೇಜ್ ಫಿಯರ್ ಇಲ್ಲಾ ಅನ್ನೋದೊಂದೆ ಧೈರ್ಯ ನನಗೆ ಇದ್ದದ್ದು. ನಾನೇ ಕ್ಯಾರೆಕ್ಟರ್ ಅಂದುಕೊಂಡುಕೊಳ್ಳುತ್ತಾ ಹೋದಂತೆ ಕಾಮಿಡಿ ಮಾಡುವುದು ಸುಲಭ.

ಕಾಮಿಡಿ ಕಿಲಾಡಿಗಳು ಜರ್ನಿಯಲ್ಲಿ ಇಷ್ಟವಾದ ಪಾತ್ರ..

-ತುಂಬಾ ವಿಕಾರವಾಗಿ, ಫುಲ್ ಕಪ್ಪು ಬಣ್ಣಬಳಿದುಕೊಂಡು, ಬದನೆಕಾಯಿ ಜಡೆ, ಹಳೇ ಸೋಡಾ ಗ್ಲಾಸ್, ಹಳೇ ಸೀರೆ, ಗೋಲ್ಡನ್ ಕಲರ್ ಜ್ಯುವೆಲರಿ ಧರಿಸಿ ನಾನು ಒಂದು ಹಲ್ಲುಬ್ಬಿ ಪಾತ್ರ ಮಾಡಿದ್ದೆ. ಅದನ್ನು ಫುಲ್ ಬೇರೆ ಶೇಡ್ ನಲ್ಲಿ ತೋರಿಸಿದ್ರು. ಆ ಪಾತ್ರ ನನಗೆ ತುಂಬಾ ಫೇವರಿಟ್. ಅಲ್ಲಿಯವರೆಗೆ ಒಂಥರಾ ಸ್ವೀಟ್ ಅಂಡ್ ಕ್ಯೂಟ್ ಕ್ಯೂಟ್ ಆಗಿ ತೋರಿಸಿದ್ರು. ರೋಡ್ ನಲ್ಲಿ ಹುಡುಗರೆಲ್ಲಾ ಚುಡಾಯಿಸುವ ಮಟ್ಟಿಗೆ ಇತ್ತು.

ಹಾಸ್ಯ ಕಲಾವಿದರಲ್ಲಿ ತುಂಬಾ ನೋವು ಅಡಗಿರುತ್ತಂತೆ. ಎಷ್ಟು ಸತ್ಯ?

-ನಮ್ಮ ಅಪ್ಪ-ಅಮ್ಮನಿಗೆ ನಾನೇ ಮಗ-ಮಗಳು ಎರಡು ಸಹ. ನಾನು ಕೆಲಸಕ್ಕೆ ಹೋಗೋದ್ರಿಂದ ಏನೋ ಸ್ವಲ್ವ ಇನ್ ಕಮ್ ಜೆನೆರೇಟ್ ಆಗುತ್ತಿತ್ತು. ಜೀವನ ಸಾಗುತ್ತಿತ್ತು. ಹಾಗಂತ ತೀರ ನಗಿಸುವವರ ಹಿಂದೆ ತೀರ ನೋವಿರುತ್ತೆ ಅಂತ ಅಲ್ಲಾ. ಕಲಾವಿದರಾಗಿ ನಾವು ನಗಿಸುತ್ತೇವೆ ಅಷ್ಟೆ.

ಕಾಮಿಡಿ ಕಿಲಾಡಿಗಳಿಗೆ ಬಂದ ಮೇಲೆ ನಿಮ್ಮಲ್ಲಾದ ಬದಲಾವಣೆ..?

-ತುಂಬಾ ಆಗಿದೆ. ಮೀಡಿಯಾಗೆ ಬರೋಕು ಮುನ್ನ ಹೆಣ್ಣು ಮಕ್ಕಳಿಗೆ ಸೇಫ್ಟಿನಾ ಅನ್ನೋ ದೊಡ್ಡ ಪ್ರಶ್ನೆ ಇತ್ತು. ಆದರೆ ಈಗ ಆ ಭಯ ಇಲ್ಲ. ಇದು ಹೇಗೆ ಅಂದ್ರೆ ಒಂಥರಾ ಕನ್ನಡಿ ಇದ್ದ ಹಾಗೆ. ನಾವು ಹೇಗೋ ಹಾಗೆ. ಈಗ ಕೆಟ್ಟ ಆಲೋಚನೆಗಳು ಹೋಗಿವೆ. ನಾನು ತುಂಬಾ ಬೋಲ್ಡ್ ಆಗಿದ್ದೇನೆ.

ಸಿನಿಮಾಗಳಿಗೆ ಅವಕಾಶ..

-ಬರ್ತಾ ಇದೆ. ಆದ್ರೆ ಈ ಫೀಲ್ಡ್ ಗೆ ನಾನು ಹೊಸಬಳು. ನಮ್ಮ ಕಾಮಿಡಿ ಕಿಲಾಡಿಗಳು ಡೈರೆಕ್ಟರ್ ಏನ್ ಹೇಳ್ತಾರೆ ಅನ್ನೋದನ್ನ ಕೇಳಿ, ಮಾರ್ಗದರ್ಶನ ಪಡೆದು ಡಿಸೈಡ್ ಮಾಡ್ತೀನಿ. ಸಿನಿಮಾ ಬಗ್ಗೆ ಏನಿದ್ರು ನಮ್ಮ ತಂದೆ-ತಾಯಿ ಕಮ್ಯುನಿಕೇಟ್ ಮಾಡ್ತಾರೆ.

ಕುಟುಂಬದ ಸಪೋರ್ಟ್ ಹೇಗಿದೆ.?

-ಕಾಮಿಡಿ ಕಿಲಾಡಿಗಳು ಕಾರ್ಯಕ್ರಮಕ್ಕೆ ಬಂದಾಗ ಮೊದಲ ನಾಲ್ಕು ವಾರ ನಮ್ಮ ತಾಯಿ ಒಂದ್ ರೀತಿ ಚೆಕ್ಕಿಂಗ್ ಇನ್ಸ್ ಪೆಕ್ಟರ್ ಆಗ್ಬಿಟಿದ್ರು. ಎಲ್ಲಾ ಶೋ ಗು ಬರೋರು. ಚಪ್ಪಾಳೆ ಹೊಡಿತಾ ಎಲ್ಲರನ್ನೂ ಅನಲೈಸ್ ಮಾಡೋರು. ಆದ್ರೆ ನಮ್ಮ ಒಡನಾಟ, ಎಲ್ಲರನ್ನೂ ನೋಡಿದ ಮೇಲೆ ಎಲ್ಲಾ ಸರಿಹೋತ್ತು. ಈಗ ಆಕ್ಟಿಂಗ್ ಗೆ ಸಂಪೂರ್ಣ ಬೆಂಬಲ ಇದೆ.

ಕಾರ್ಯಕ್ರಮದಲ್ಲಿ ನಿಮಗೆ ತುಂಬಾ ಖುಷಿಯಾದ ಸನ್ನಿವೇಶಗಳು

- ಒಂದು... ಬೆಸ್ಟ್ ಪರ್ಫಾಮರ್ ಆಫ್ ದಿ ವೀಕ್ ಕೊಟ್ಟಿದ್ದು. ಅವತ್ತು ದ್ವಾರಕೀಶ್ ಸರ್ ಬಂದಿದ್ರು. ಅಂದು ಜಗ್ಗೇಶ್ ಸರ್ ನನ್ನ ಬಗ್ಗೆ 'ಈಕೆ ಇದಳಲ್ಲಾ ಆಕ್ಟರ್ ಅಲ್ಲಾ.. ಒಂದ್ ಕಂಪನಿಯಲ್ಲಿ HR ಆಗಿ ಕೆಲಸ ಮಾಡ್ತಿದ್ಲು. ಶುರುನಲ್ಲಿ ಈಕೆ ಹೋಗ್ ಬಿಡ್ತಾಳೆ ಅಂತ ಅಂದುಕೊಂಡಿದ್ವಿ. ಈಗ ಚೆನ್ನಾಗಿ ನಟನೆ ಮಾಡ್ತಿದ್ದಾಳೆ. ನಿಮಗೆ ಗೊತ್ತಿರಲಿ ಅಂತ ಹೇಳ್ತಿದಿನಿ ಅಂದ್ರು'. ಅದಕ್ಕೆ ದ್ವಾರಕೀಶ್ ಸರ್ 'ಯಾರ್ ಹೇಳಿದ್ದು ಈಕೆ ಆಕ್ಟರ್ ಅಲ್ಲಾ ಅಂತ. ಪರಿಪೂರ್ಣವಾಗಿ ಯಾವುದೇ ಪಾತ್ರ ನಿರ್ವಹಿಸುವ ಆಕ್ಟರ್ ಆಗಿದ್ದಾಳೆ' ಅಂದಿದ್ರು. ಅದು ನಂಗೆ ತುಂಬಾ ಖುಷಿ ಆಗಿತ್ತು. ಯಾಕಂದ್ರೆ ಅವರು ನಮ್ಮ ಅಪ್ಪ-ಅಮ್ಮನ ಕಾಲದ ಆಕ್ಟರ್, ದಿಗ್ಗಜರು, ನಿರ್ಮಾಪಕರು. ಅವರು ಬಾಯಿತಪ್ಪಿ ಅಂದಿದ್ರು ಪರವಾಗಿಲ್ಲ. ಅದು ನನಗೆ ಬೆಸ್ಟ್ ಮೂಮೆಂಟ್.

ಎರಡನೇಯದಾಗಿ ನಮ್ಮ ತಂದೆ ಕಾರ್ಯಕ್ರಮಕ್ಕೆ ಬಂದಿದ್ದು.

ಮುಂದಿನ ಪ್ಲಾನ್ ಏನು?

-ಆಕ್ಟಿಂಗ್ ಫೀಲ್ಡ್ ನಲ್ಲೇ ಮುಂದುವರಿಬೇಕು ಅಂದುಕೊಂಡಿದ್ದೇನೆ. ಇದನ್ನೇ ವೃತ್ತಿಯಾಗಿ ಕಂಟಿನ್ಯೂ ಮಾಡ್ ತೀನಿ.

English summary
Zee Kannada 'Comedy Kiladigalu' Grand Finale Contestant Divyashree Interview.
Please Wait while comments are loading...