For Quick Alerts
  ALLOW NOTIFICATIONS  
  For Daily Alerts

  ಯಾರನ್ನೂ ದೂಷಿಸಲ್ಲ.. ಎಲ್ಲಾ ನನ್ನ ಹಣೆಬರಹ: 'ರಮ್ಯಾ-ಪ್ರಜ್ವಲ್ ಇಲ್ಲದೆ 'ದಿಲ್ ಕಾ ರಾಜ' ಮುಗಿಸುತ್ತೇನೆ'

  |

  ರಮ್ಯಾ ಸ್ಯಾಂಡಲ್‌ವುಡ್‌ಗೆ ಮತ್ತೆ ಕಮ್ ಬ್ಯಾಕ್ ಮಾಡಿರುವ ಈ ಹೊತ್ತಲೇ 'ದಿಲ್ ಕಾ ರಾಜ' ಸಿನಿಮಾ ಸದ್ದು ಮಾಡುತ್ತಿದೆ. ಎಂಟೊಂಬತ್ತು ವರ್ಷಗಳ ಹಿಂದೆ ಸೆಟ್ಟೇರಿದ್ದ 'ದಿಲ್ ಕಾ ರಾಜ'ದಲ್ಲಿ ರಮ್ಯಾ ಪ್ರಮುಖ ಆಕರ್ಷಣೆಯಾಗಿದ್ದರು. ಅರ್ಧಕ್ಕೆ ಸಿನಿಮಾ ನಿಲ್ಲಿಸಿದ್ದ ರಮ್ಯಾ ಈಗ ಈ ಸಿನಿಮಾ ಕಂಪ್ಲೀಟ್ ಮಾಡುತ್ತಾರಾ? ಅನ್ನೋ ಪ್ರಶ್ನೆ ಎದುರಾಗಿತ್ತು. ಈ ಹೊತ್ತಲೇ ನಿರ್ದೇಶಕ ಸಿನಿಮಾ ಮುಗಿಸುವುದಕ್ಕೆ ಸಜ್ಜಾಗಿದ್ದಾರೆ.

  ಮೋಹಕತಾರೆ ರಮ್ಯಾ ಹಾಗೂ ಪ್ರಜ್ವಲ್ ದೇವರಾಜ್ ಇಲ್ಲದೆನೇ ಸಿನಿಮಾ ಮುಗಿಸುವುದಕ್ಕೆ ನಿರ್ದೇಶಕ ಪ್ಲ್ಯಾನ್ ಮಾಡಿದ್ದಾರೆ. ಈಗಾಗಲೇ ಸ್ಕ್ರಿಪ್ಟ್ ವರ್ಕ್ ನಡೆಯುತ್ತಿದೆ. ಆದಷ್ಟು ಬೇಗ ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ. 'ಬಾಹುಬಲಿ', RRR ಅಂತಹ ಸಿನಿಮಾಗಳಿಗೆ ಕ್ಯಾಮರಾವರ್ಕ್ ಮಾಡಿರೋ ಸೆಂಥಿಲ್ ಕುಮಾರ್ ಛಾಯಾಗ್ರಾಹರಾಗಿದ್ದರು. ಸದ್ಯ ಈ ಸಿನಿಮಾ ಯಾವ ಹಂತದಲ್ಲಿದೆ. ರಮ್ಯಾ ಹಾಗೂ ಪ್ರಜ್ವಲ್ ಇಲ್ಲದೆ ಹೇಗೆ ಸಿನಿಮಾ ಮುಗಿಸುತ್ತಾರೆ ಅನ್ನೋ ಬಗ್ಗೆ ನಿರ್ದೇಶಕ ಸೋಮನಾಥ್ ಪಾಟೀಲ್ ಫಿಲ್ಮಿಬೀಟ್ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.

  Exclusive: ಅರ್ಧಕ್ಕೆ ನಿಂತ ಸಿನಿಮಾ ಮರೆತ ರಮ್ಯಾ, ಮೋಹಕ ತಾರೆ ಕೈ ಬಿಟ್ಟ ಸಿನಿಮಾ ಕಥೆಯೇನು?Exclusive: ಅರ್ಧಕ್ಕೆ ನಿಂತ ಸಿನಿಮಾ ಮರೆತ ರಮ್ಯಾ, ಮೋಹಕ ತಾರೆ ಕೈ ಬಿಟ್ಟ ಸಿನಿಮಾ ಕಥೆಯೇನು?

  'ಇದೆಲ್ಲ ನಮ್ಮ ಹಣೆಬರಹ ಅಂದ್ಕೊಂಡಿದ್ದೇನೆ'

  'ಇದೆಲ್ಲ ನಮ್ಮ ಹಣೆಬರಹ ಅಂದ್ಕೊಂಡಿದ್ದೇನೆ'

  "ನನಗೆ ಯಾರನ್ನೂ ದೂಷಿಸುವುದಕ್ಕೆ ಇಷ್ಟವಿಲ್ಲ. ಇದೆಲ್ಲ ನಮ್ಮ ಹಣೆಬರಹ ಅಂದ್ಕೊಂಡಿದ್ದೇನೆ. ಯಾಕೆ ಲೇಟ್ ಆಯ್ತು? ಯಾಕೆ ಸಿನಿಮಾ ಸ್ಟ್ರಕ್ ಆಯ್ತು? ಬೇರೆ ಬೇರೆ ಕಾರಣಗಳು ಬಂದು ಬಿಟ್ಟವು. ನಾವು ಸಮಯವನ್ನು ಮಾತ್ರ ದೂಷಿಸುವುದಕ್ಕೆ ಸಾಧ್ಯ. ನಾನು ಏನೇ ಪ್ಲ್ಯಾನ್ ಮಾಡಿ, ಸಿನಿಮಾ ಮುಗಿಸಬೇಕು ಅಂತ ಹೋದರೂ ತಡವಾಗುತ್ತಾ ಹೋಯ್ತು. ಇಷ್ಟು ದಿನ ಒಂದು ಆಶಾಭಾವನೆಯಿಟ್ಟುಕೊಂಡು ಕಾದೆ. ಆದರೆ, ಒಂದು ಸ್ಟೇಜ್ ಇರುತ್ತೆ. ಆಗ ನೀವು ಪ್ರಾಜೆಕ್ಟ್ ಅನ್ನು ಕಂಪ್ಲೀಟ್ ಮಾಡಬೇಕಿರುತ್ತೆ. ಯಾಕಂದ್ರೆ, ಬಂಡವಾಳ ಸಿಕ್ಕಾಪಟ್ಟೆ ಆಗಿತ್ತು. ದುಡ್ಡು ಯಾರದ್ದೇ ಆಗಿರಲಿ ಅದು ದುಡ್ಡೇ ಅಲ್ಲವೇ? ಹಣ ಕೊಟ್ಟವರ ನಂಬಿಕೆ ನನ್ನ ಮೇಲೆ ಇದೆ. ಅದಕ್ಕೆ ಇಷ್ಟು ದಿನ ಕಾದಿದ್ದಕ್ಕೆ ಏನೂ ಪರಿಹಾರ ಕಾಣಲಿಲ್ಲ ನನಗೆ. ಹಾಗಾಗಿ ಈ ಬಾರಿನಾದ್ರೂ ಸಮಯ ನನ್ನ ಜೊತೆ ಇದ್ದರೆ ಈ ಪ್ರಾಜೆಕ್ಟ್ ಮುಗಿಯುತ್ತೆ." ಎನ್ನುತ್ತಾರೆ.

  'ದಿಲ್ ಕಾ ರಾಜ' ವೆಂಟಿಲೇಟರ್‌ನಲ್ಲಿದೆ

  'ದಿಲ್ ಕಾ ರಾಜ' ವೆಂಟಿಲೇಟರ್‌ನಲ್ಲಿದೆ

  "ಈ ಸಿನಿಮಾ ಒಂದೊಳ್ಳೆ ಮಾರ್ಕೆಟ್ ಇತ್ತು. ಎಲ್ಲರಿಗೂ ಗೊತ್ತಿತ್ತು. ಆರಂಭದಿಂದಲೂ ಅದಕ್ಕೊಂದು ಕಲರ್ ಇತ್ತು. ಈಗಲೂ ಈ ಸಿನಿಮಾಗೆ ಜೀವ ಇದೆ. ಸದ್ಯ ವೆಂಟಿಲೇಟರ್‌ನಲ್ಲಿದೆ. ಈಗ ಹೇಗಾದರೂ ಮಾಡಿ ಶಕ್ತಿ ತುಂಬಿ ಕಂಪ್ಲೀಟ್ ಮಾಡಿ ಆಚೆ ತರಬೇಕಿದೆ ಅಷ್ಟೇ." ಅಂತಿದ್ದಾರೆ ಸೋಮನಾಥ್ ಪಾಟೀಲ್.

  'ಎರಡು ಬಾರಿ ರಮ್ಯಾ ಡೇಟ್ ಕೊಟ್ಟಿದ್ರು'

  'ಎರಡು ಬಾರಿ ರಮ್ಯಾ ಡೇಟ್ ಕೊಟ್ಟಿದ್ರು'

  "ಆಗ ಮಾತಿನ ಪ್ರಕಾರ ಅವರು ಸಂಪರ್ಕ ಮಾಡಿದ್ದರು. ಲಂಡನ್‌ನಿಂದ ಬಂದಮೇಲೆ. ಆದರೆ, ಡೇಟ್ಸ್ ಮ್ಯಾಚ್ ಆಗಲಿಲ್ಲ. ಎರಡು ಡೇಟ್ ಕೊಟ್ಟಿದ್ದರು. ರಮ್ಯಾ ಫ್ರೀ ಇದ್ದಾಗ, ಪ್ರಜ್ವಲ್ ದೇವರಾಜ್ ಫ್ರೀ ಇರುತ್ತಿರಲಿಲ್ಲ. ಪ್ರಜ್ವಲ್ ಇದ್ದಾಗ ರಮ್ಯಾ. ಹೀಗೇ ಆಯ್ತು. ಜೊತೆಗೆ ನಾನು ಇನ್ನೊಂದು ಪ್ರಾಜೆಕ್ಟ್ ಅನ್ನು ಮಾಡುತ್ತಿದೆ. ಸದ್ಯ ನನಗೆ ಅವರನ್ನು ರೀಚ್ ಆಗುವುದಕ್ಕೆ ಸರಿಯಾದ ಚಾನೆಲ್ ಇಲ್ಲ. ನಮ್ಮ ಅಮ್ಮ ಸೀರಿಯಸ್ ಇದ್ದಾರೆ. ಬೆಡ್‌ ರಿಡನ್ ಆಗಿಬಿಟ್ಟಿದ್ದಾರೆ. ಆಗ ನಮ್ಮ ಅಮ್ಮ ಕೂಡ ಟ್ರೈ ಮಾಡಿದ್ರು ರೀಚ್ ಆಗುವುದಕ್ಕೆ. ಆದರೆ ಅದೂ ಆಗಲಿಲ್ಲ."

  'ಸಿನಿಮಾ ಮುಗಿದರೆ ಕುಟುಂಬ ಉಸಿರಾಡುತ್ತೆ'

  'ಸಿನಿಮಾ ಮುಗಿದರೆ ಕುಟುಂಬ ಉಸಿರಾಡುತ್ತೆ'

  "ಲಾಸ್ ಅಂದ್ರೆ, ಸುಮಾರು 8 ವರ್ಷ ಗ್ಯಾಪ್ ಆಗಿದೆ. ನಿಮಗೆ ಗೊತ್ತಲ್ಲ. ಅಮೌಂಟ್ ಹೆಚ್ಚಾಗುತ್ತಲೇ ಹೋಗುತ್ತೆ. ಇದೂವರೆಗೂ 2.75 ಕೋಟಿ ರೂಪಾಯಿ ಬಂಡವಾಳ ಹೂಡಲಾಗಿತ್ತು. ಈಗ ಬಡ್ಡಿ ಎಲ್ಲಾ ಸೇರಿ ಡಬಲ್ ಆಗಿರಬಹುದು. ಈಗ ಈ ಸಿನಿಮಾ ಮುಗಿಸಿದರೆ, ಏನೂ ಇಲ್ಲ ಅನ್ನುವುದಕ್ಕಿಂತ ಏನಾದರೂ ಒಂದು ಚೂರು ಬರುತ್ತೆ ಅಷ್ಟೇ. ಸಿನಿಮಾದ ಒಂದು ಭಾಗವನ್ನು ನಾವು ರಿಕವರ್ ಮಾಡಿಕೊಳ್ಳಬಹುದು. ನನಗಾಗಲಿ ನನ್ನ ಕುಟುಂಬಕ್ಕೆ ಆಗಲಿ ಉಸಿರಾಡುವುದಕ್ಕೆ ಸಮಯ ಸಿಕ್ಕಂತಾಗುತ್ತೆ. ನನ್ನ ಬಗ್ಗೆ ನನಗೆ ಕಾನ್ಫಿಡೆನ್ಸ್ ಸಿಕ್ಕಂತಾಗುತ್ತೆ."

  ನನ್ನ ಕರಿಯರ್ ಕೂಡ ನಿಂತ ನೀರಾಗಿದೆ

  ನನ್ನ ಕರಿಯರ್ ಕೂಡ ನಿಂತ ನೀರಾಗಿದೆ

  "ನಾನು ಕರಿಯರ್‌ ಕೂಡ ಬ್ಲಾಕ್ ಅಂದಂತೆ ಆಗಿಬಿಟ್ಟಿದೆ. ಅದು ಯಾವ್ಯಾವ ಕಾರಣಕ್ಕೆ ಪ್ರಾಜೆಕ್ಟ್ ಸ್ಟಾಪ್ ಆಗಿದೆಯೋ ಬೇರೆ ಮಾತು. ಆದರೆ, ಆರೋಪ ಮಾಡೋದು ನಿರ್ದೇಶಕನ ಮೇಲೆನೇ. ಈ ಡೈರೆಕ್ಟರ್‌ಗೆ ಕ್ಯಾಲಿಬರ್ ಇಲ್ಲ. ಅದಕ್ಕೆ ಹೀಗಾಗಿದೆ ಅಂತಾರೆ. ಒಂದು ಸಿನಿಮಾ ಗೆದ್ದರೆ, ಆ ಕ್ರೆಡಿಟ್ ಎಲ್ಲರಿಗೂ ಹೋಗುತ್ತೆ. ಬ್ರಹ್ಮಾಂಡದ ಮೇಲೆ ನಂಬಿಕೆ ಇದೆ. ಸ್ಕ್ರಿಪ್ಟ್ ರಿವೈಸ್ ಮಾಡಿದ್ದೇನೆ. ಚೆನ್ನಾಗಿ ಬಂದಿದೆ. ಕಂಟೆಂಟ್ ಹಾಗೂ ಸ್ಟೋರಿ ಲೈನ್ ಚೇಂಜ್ ಮಾಡಿದ್ದೀನಿ. ಎಲ್ಲಾ ಸರಿಯಾಗಿ ಆದರೆ, ಸಿನಿಮಾ ಬೇಗನೇ ಶುರುವಾಗುತ್ತೆ."

  ಬೆಳಕು ಹುಡುಕೋ ಪ್ರಯತ್ನದಲ್ಲಿದ್ದೇನೆ

  ಬೆಳಕು ಹುಡುಕೋ ಪ್ರಯತ್ನದಲ್ಲಿದ್ದೇನೆ

  "ಈಗಾಗಲೇ ನಾನು 45 ದಿನಗಳ ಕಾಲ ಶೂಟ್ ಮಾಡಿದ್ದೇನೆ. ಆ ಕಂಟೆಂಟ್ ಹಾಗೇ ಇರುತ್ತೆ. ಆದರೆ, ಆ ಸ್ಟೋರಿ ಲೈನ್ ಬದಲಾವಣೆ ಮಾಡಿ, ಅದಕ್ಕೆ ಲಿಂಕ್ ಕೊಟ್ಟಿದ್ದೇನೆ. ಇದರಲ್ಲೂ ರಮ್ಯಾ ಹಾಗೂ ಪ್ರಜ್ವಲ್ ಇಬ್ಬರೂ ಇರುತ್ತಾರೆ. ಆದರೆ, ಇನ್ನೂ ಶೂಟ್ ಆಗದ ಜಾಗದಲ್ಲಿ ಸ್ಟೋರಿ ಹೇಗೆ ಸಾಗುತ್ತೆ ಅನ್ನುವುದೇ ಕುತೂಹಲ. ಸದ್ಯ ಎಲ್ಲಾ ಡೋರ್ ಕ್ಲೋಸ್ ಆಗಿದೆ. ಆದರೂ ಸುಮ್ಮನೆ ಕೂರದೆ, ಯಾವುದೇ ಒಂದು ಬಾಗಿಲು ತೆಗೆದು ಬೆಳಕು ಹುಡುಕಿಕೊಂಡು ಹೋಗಬೇಕಿದೆ ಅಷ್ಟೇ."

  ರಮ್ಯಾ ಬಂದರೆ ಸಿನಿಮಾ ಆಗಲ್ಲ

  ರಮ್ಯಾ ಬಂದರೆ ಸಿನಿಮಾ ಆಗಲ್ಲ

  " ರಮ್ಯಾ ಮತ್ತೆ ಬರ್ತಾರೆ ಅನ್ನೋ ಹೋಪ್ ಇಲ್ಲ. ಹಾಗೂ ಒಂದು ವೇಳೆ ಬಂದರೆ, ಎಲ್ಲಾ ಅಪಿಯರೆನ್ಸ್ ಚೇಂಜ್ ಆಗಿದೆ. ನನಗೆ ಬಂದ್ರೆ ತುಂಬಾನೇ ಖುಷಿ. ಅವರಿಗೂ ಅನಿಸಿರಬಹುದು ಪ್ರಾಜೆಕ್ಟ್ ತುಂಬಾ ಹಳೆಯದಾಗಿದೆ. ಏನೋ ಅಂತ. ಎರಡು ಮೂರು ಬಾರಿ ರೀಚ್ ಆಗಲು ನೋಡಿದೆ. ನನಗೆ ಅವರು ಸಿಗಲಿಲ್ಲ. ಏನೇ ಆದರೂ, ನನ್ನ ಪ್ರಾಜೆಕ್ಟ್ ಮುಂದುವರೆಯುತ್ತೆ. ಸಿನಿಮಾ ರಿಲೀಸ್ ಆದರೆ, 50 ರಿಂದ 60 ರಷ್ಟು ರಿಲೀಫ್ ಸಿಗುತ್ತೆ."

  English summary
  Dil Ka Raja Director Somnath Patil Reacted About Ramya And Movies Compilation, Know More.
  Tuesday, October 11, 2022, 19:51
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X