»   » ಸಂದರ್ಶನ: 'ಡ್ರಾಮಾ ಕ್ವೀನ್' ವಂಶಿಯ ಯಶೋಗಾಥೆ

ಸಂದರ್ಶನ: 'ಡ್ರಾಮಾ ಕ್ವೀನ್' ವಂಶಿಯ ಯಶೋಗಾಥೆ

Posted By: ಸುನೀತಾ ಗೌಡ
Subscribe to Filmibeat Kannada

'ಡ್ರಾಮಾ ಜ್ಯೂನಿಯರ್ಸ್ ಸೀಸನ್-2' ಮೂಲಕ 'ಜ್ಯೂನಿಯರ್ ಲಕ್ಷ್ಮಿ' ಅಂತ ಬಿರುದು ಗಿಟ್ಟಿಸಿಕೊಂಡಿರುವ ದಕ್ಷಿಣ ಕನ್ನಡದ ಪುಟಾಣಿ ವಂಶಿ, ತಮ್ಮ ವಿಭಿನ್ನ ಮ್ಯಾನರಿಸಂ ನಿಂದ ಇಡೀ ಕರ್ನಾಟಕದ ಜನತೆಯ ಮನ ಗೆದ್ದಿದ್ದಾರೆ. ತಮ್ಮ ಅದ್ಭುತ ನಟನೆಯಿಂದ ಶಹಬ್ಬಾಸ್ ಗಿರಿ ಪಡೆದುಕೊಂಡು ವಿನ್ನರ್ ಆಗಿ ಟ್ರೋಫಿಗೆ ಮುತ್ತಿಕ್ಕಿದ್ದಾರೆ.

ನೃತ್ಯ ಮತ್ತು ಹಾಡುಗಾರಿಕೆಯಲ್ಲಿ ಮುಂಚೂಣಿಯಲ್ಲಿದ್ದ ಪುಟ್ಟ ವಂಶಿಗೆ ನಟನೆ ಬಗ್ಗೆ ಅಷ್ಟಾಗಿ ಜ್ಞಾನ ಇರಲಿಲ್ಲ. ನಟನೆ ಮಾಡುತ್ತೇನೆ,'ಡ್ರಾಮಾ ಜ್ಯೂನಿಯರ್ಸ್' ಅನ್ನೋ ದೊಡ್ಡ ವೇದಿಕೆಗೆ ಕಾಲಿಡುತ್ತೇನೆ, ಅಲ್ಲಿ ಎಲ್ಲರ ಮನೆ-ಮನ ಗೆದ್ದು ವಿಜಯ ಶಾಲಿಯಾಗುತ್ತೇನೆ ಅಂತ ಕನಸಿನಲ್ಲಿಯೂ ಅಂದುಕೊಳ್ಳದ ವಂಶಿ, ಇದೀಗ ವಿನ್ನರ್ ಆದ ಖುಷಿಯಲ್ಲಿ ತಮ್ಮ ಜರ್ನಿ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ.

ಡ್ರಾಮಾ ಜೂನಿಯರ್ಸ್-2 ಗೆದ್ದ 'ಜೂನಿಯರ್ ಲಕ್ಷ್ಮಿ' ಮತ್ತು ಅಮಿತ್

ದಕ್ಷಿಣ ಕನ್ನಡ ಜಿಲ್ಲೆಯ, ಸುಳ್ಯ ತಾಲೂಕಿನ ಅಮರ ಮುಡ್ನೂರು ಗ್ರಾಮದ ಹಿರಿಯಡ್ಕ ಎಂಬಲ್ಲಿನ ಶ್ರೀ ರತ್ನ ಕುಮಾರ್ ಮತ್ತು ಶ್ರೀಮತಿ ರೇವತಿ ಅವರ ಏಕೈಕ ಪುತ್ರಿ ವಂಶಿ. ಪ್ರಸ್ತುತ ಅಪ್ಪ-ಅಮ್ಮನ ಜೊತೆ ಮಂಗಳೂರಿನ ಸಮೀಪ ಕೊಣಾಜೆ ಎಂಬಲ್ಲಿ ನೆಲೆಸಿರುವ ವಂಶಿ 7ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ. ಅಂದಹಾಗೆ 'ಡ್ರಾಮಾ ಕ್ವೀನ್' ವಂಶಿ ಜೊತೆ ಮಾಡಿರುವ ಚಿಟ್ ಚಾಟ್ ನೋಡಲು ಕೆಳಗಿನ ಸ್ಲೈಡ್ಸ್ ಗಳನ್ನು ಕ್ಲಿಕ್ಕಿಸುತ್ತಾ ಹೋಗಿ....

ಸಂದರ್ಶನ: ಸುನೀತಾ ಗೌಡ

'ಡ್ರಾಮಾ ಜ್ಯೂನಿಯರ್ಸ್ ಸೀಸನ್-2' ಗೆ ಆಯ್ಕೆ ಆದ ಬಗ್ಗೆ ಹೇಳ್ಬೋದಾ.?

ನಾನು ಫಸ್ಟ್ ಡ್ಯಾನ್ಸರ್ ಆಗಿದ್ದೆ, ತುಂಬಾ ಡ್ಯಾನ್ಸ್ ಶೋ ಕೊಟ್ಟಿದ್ದೇನೆ ಊರಲ್ಲೇ. ಆದ್ರೆ ಈಗ ಡ್ರಾಮಾ ಮಾಡ್ತಾ ಇದ್ದೇನೆ. ನಾನು ಇಲ್ಲಿಗೆ ಬಂದೇ ಡ್ರಾಮಾ ಕಲಿತೆ ಅನ್ನೋದು ತುಂಬಾ ಖುಷಿಯ ವಿಚಾರ. ನನಗೆ 'ಜೆ.ಪಿ.ತುಮಿನಾಡ್' ಸರ್ ಅವರು ಹೋಗು ಅಂತ ಧೈರ್ಯ ತುಂಬಿ ಒತ್ತಾಯ ಮಾಡಿ ಕಳುಹಿಸಿಕೊಟ್ಟರು. ಶಾರದಾ ಕಾಲೇಜಿನಲ್ಲಿ ಆಡಿಷನ್ ಇತ್ತು. ತುಂಬಾ ಜನ ಆಡಿಷನ್ ಗೆ ಬಂದಿದ್ರು, ನನಗೆ ಮೊದಲು ಭಯ ಆಯ್ತು. ಅಲ್ಲಿ ಒಂದು ಚಿಕ್ಕ ಡ್ರಾಮಾ ಮಾಡಿ ತೋರಿಸೋಕೆ ಹೇಳಿದ್ರು. ಅದರಲ್ಲಿ ನಾನು ಸೆಲೆಕ್ಟ್ ಆಗಿ ಬೆಂಗಳೂರಿಗೆ ಬಂದೆ ಅಲ್ಲಿ 19 ಜನ ಇದ್ರು ಅದರಲ್ಲಿ ಮಂಗಳೂರಿನಿಂದ ನಾನು ಮತ್ತು ವೀಕ್ಷಾ ಸೆಲೆಕ್ಟ್ ಆದ್ವಿ.

ನಿಮಗೆ ಡ್ರಾಮಾ ಮಾಡುವ ಆಸಕ್ತಿ ಹೇಗೆ ಹುಟ್ಟಿತು.?

ನಾನು ಚಿಕ್ಕಂದಿನಿಂದಲೇ ಡ್ಯಾನ್ಸ್ ಮಾಡಿಕೊಂಡು ಬಂದಿದ್ದೇನೆ. ಹಾಗಾಗಿ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಬೇಕು ಅಂತ ಮೊದಲು ಆಸೆ ಇತ್ತು. ಆದ್ರೆ ಅದಿಕ್ಕೆ ನನಗೆ ಸರಿಯಾದ ಗುರು ಅಥವಾ ಮೆಂಟರ್ ಅಂತ ಯಾರು ಸಿಗ್ಲಿಲ್ಲ, ಹಾಗಾಗಿ ನನ್ನ ಆಸೆ ಈಡೇರಲಿಲ್ಲ. ಆದ್ರೆ ಡ್ರಾಮಾ ಜ್ಯೂನಿಯರ್ಸ್ ಆಡಿಷನ್ ಗೆ ಕರೆದಾಗ, ಸುಮ್ನೆ ಹೋಗಿ ಟ್ರೈ ಮಾಡುವ ಅಂತ ಹೋದೆ. ಈಗ ನನಗೆ ಡ್ರಾಮಾನೇ ತುಂಬಾ ಇಷ್ಟ ಆಗುತ್ತೆ. ಇನ್ನು ಮುಂದಕ್ಕೆ ನಟನೆಯನ್ನೇ ನನ್ನ ಹವ್ಯಾಸ ಮಾಡ್ಬೇಕು ಅಂತ ಇದ್ದೀನಿ.

ಡ್ರಾಮಾ ಜ್ಯೂನಿಯರ್ಸ್ ಸೀಸನ್-2 ವಿನ್ನರ್ ಆಗ್ತೀರಿ ಅಂತ ನಿಮಗೆ ನಂಬಿಕೆ ಇತ್ತಾ'.?

ಖಂಡಿತ ಇಲ್ಲ, ನಾನು ಫೈನಲ್ ಪ್ರವೇಶ ಮಾಡ್ತೀನಿ ಅಂತಾನೇ ನನಗೆ ನಂಬಿಕೆ ಇರ್ಲಿಲ್ಲ. ಆಮೇಲೆ ಫೈನಲ್ ಗೆ ಬಂದ ಮೇಲಂತೂ, ವಿನ್ನರ್ ಆಗ್ತೀನೋ ಬಿಡ್ತಿನೋ, ಆದ್ರೆ ಸಮಸ್ತ ಕರ್ನಾಟಕದ ಜನತೆ ಮುಂದೆ ಇಷ್ಟು ದೊಡ್ಡ ವೇದಿಕೆಯಲ್ಲಿ, ಇಲ್ಲಿ ತನಕ ಬಂದಿದ್ದೇನೆ ಅಲ್ವಾ ಅಂತ ಖುಷಿ ಆಯ್ತು. ಆಮೆಲಂತೂ ನಾನು ವಿನ್ನರ್ ಅಂತ ಗೊತ್ತಾದಾಗ ನನಗೆ ನಂಬೋಕೆ ಆಗ್ಲಿಲ್ಲ, ತುಂಬಾ ಖುಷಿ ಆಯ್ತು. ನನಗೆ ಚಂದ್ರು ಸರ್ ಅವರು ಟ್ರೋಫಿ ಕೊಟ್ರು.

ಸ್ಟುಡಿಯೋ ಹಾಗೂ ಸಾವಿರಾರು ಜನರ ಮುಂದೆ ನಟನೆಗೆ ವ್ಯತ್ಯಾಸವಿದೆ. ಲೈವ್ ನಲ್ಲಿ ಪರ್ಫಾಮ್ ಮಾಡೋವಾಗ ಅನುಭವ ಹೇಗಿತ್ತು.?

ಹೌದು, ಸ್ಟುಡಿಯೋದಲ್ಲಿ ಬರೀ ಕ್ಯಾಮೆರಾ ಮತ್ತು ಸ್ವಲ್ಪ ಆಡಿಯನ್ಸ್ ಮಾತ್ರ ಇರ್ತಾರೆ. ಆದ್ರೂ ಫಸ್ಟ್-ಫಸ್ಟ್ ಜಡ್ಜಸ್ ಮುಂದೆ ಮಾಡುವಾಗ ಭಯ ಆಗ್ತಾ ಇತ್ತು. ಮತ್ತೆ ಹೋಗ್ತಾ-ಹೋಗ್ತಾ ಕಾನ್ಫಿಡೆಂಟ್ ಬಂತು. ಮೊದಲು ನಾನು ಲೈವ್ ಶೋ ಕೊಟ್ಟಿದ್ದು ಶಿವಮೊಗ್ಗದಲ್ಲಿ. 'ಮಹಾಸಂಚಿಕೆ' ಅಂತ ಒಂದು ಎಪಿಸೋಡ್ ಇತ್ತು ಅಲ್ಲಿ ಫಸ್ಟ್ ಟೈಮ್ ನನ್ನ ಲೈವ್ ಫರ್ಫಾಮೆನ್ಸ್. ಅಲ್ಲಿ ಅಷ್ಟು ಜನರನ್ನು ನೋಡಿ ಒಮ್ಮೆ ತುಂಬಾ ಭಯ ಆಗಿತ್ತು, ಕೈಕಾಲು ಶೇಕ್ ಆಗ್ತಾ ಇತ್ತು, ಆದ್ರೂ ಮಾಡ್ತೀನಿ ಅಂತ ಕಾನ್ಫಿಡೆಂಟ್ ಇತ್ತು. ಆಮೇಲೆ ಫೈನಲ್ ನಲ್ಲಿ ಹೊಸಪೇಟೆಯಲ್ಲಿ, ಅಲ್ಲಿ ಶಿವಮೊಗ್ಗಕ್ಕಿಂತ ಜಾಸ್ತಿ ಜನ ಇದ್ರು. ಆಗ್ಲೂ ಸ್ವಲ್ಪ ಭಯ ಆಗಿತ್ತು. ಆದ್ರೆ ಶಿವಮೊಗ್ಗದಲ್ಲಿ ಲೈವ್ ಮಾಡಿದ್ರಿಂದ ಹೇಗೆ ಮಾಡ್ಬೇಕು, ಹೇಗೆ ಇರ್ಬೇಕು ಅಂತ ಸ್ವಲ್ಪ ನಾಲೆಡ್ಜ್ ಇತ್ತು.

'ನಿಮಗೆ ಡ್ರಾಮಾದಲ್ಲಿ ನೀವು ಮಾಡಿದ ಇಷ್ಟವಾದ ಪಾತ್ರ ಯಾವುದು'.?

ತುಂಬಾ ಇಷ್ಟ ಆಗಿದ್ದು ಲಕ್ಷ್ಮಿ ಅಮ್ಮನ ಜೊತೆ ಆಕ್ಟ್ ಮಾಡಿದ್ದು, ಅಷ್ಟು ದೊಡ್ಡ ನಟಿ ಜೊತೆ ನಟನೆ ಮಾಡೋದು ಅಂದ್ರೆ ಗ್ರೇಟ್ ಅಲ್ವಾ?. ಫಸ್ಟ್ ಆಫ್ ಆಲ್ ನಾನು ಅನ್ಕೊಂಡೆ ಇರ್ಲಿಲ್ಲ, ನಾನು 'ಡ್ರಾಮಾ ಜ್ಯೂನಿಯರ್ಸ್' ಗೆ ಬರ್ತಿನಿ ಲಕ್ಷ್ಮಿ ಅಮ್ಮನ ಜೊತೆ ನಟಿಸ್ತೀನಿ ಅಂತ. ಡ್ರಾಮಾಗೆ ಬಂದ ಕಾರಣ ನನಗೆ ಇಷ್ಟೆಲ್ಲಾ ಮಾಡೋಕೆ ಸಾಧ್ಯ ಆಯ್ತು.

'ನಿಮ್ಮ ಫೆವರಿಟ್ ಜಡ್ಜ್ ಯಾರಾಗಿದ್ರು, ಅಥವಾ ನಿಮ್ಮನ್ನು ಜಾಸ್ತಿ ಯಾರು ಇಷ್ಟ ಪಡ್ತಾ ಇದ್ರು'.?

-ನನಗೆ ಮೂರು ಜನಾನು ತುಂಬಾ ಇಷ್ಟ. ನನ್ನನ್ನು ಜಾಸ್ತಿ ಲಕ್ಷ್ಮಿ ಅಮ್ಮ ಇಷ್ಟ ಪಡ್ತಾ ಇದ್ರು, ಇದಕ್ಕಿಂತ ಮುಂಚೆ ಸೀತಾರಾಮ್ ಸರ್ ಅವರು ತುಂಬಾ ಇಷ್ಟ ಪಡ್ತಾ ಇದ್ರು.

'ಡ್ರಾಮಾ ಜೂನಿಯರ್ಸ್' ಸ್ಪರ್ಧಿ 'ವಂಶಿ'ಯ ಅಭಿನಯ ಯಾನ

ನಿಮ್ಮ ಮೆಂಟರ್ ಮತ್ತು ಸಹ ಕಲಾವಿದರ ಸಪೋರ್ಟ್ ಹೇಗಿತ್ತು.?

ನನಗೆ ಮಂಜುನಾಥ್ ಸರ್, ಫ್ರಭು ಸರ್ ಮತ್ತು ಗಣಪ ಸರ್ ಅಂತ ಮೂರು ಜನ ಮೆಂಟರ್ ಇದ್ರು. ಅವರೂ ಮೂರು ಜನಾನು ತುಂಬಾನೇ ಚೆನ್ನಾಗಿ ಹೇಳಿ ಕೊಡ್ತಾ ಇದ್ರು. ಮುಂಚೆ ಬೇರೆ ಮೆಂಟರ್ ಇದ್ರು, ಅಪ್ಪಣ್ಣ ಸರ್, ವಿಕ್ರಂ ಸೂರಿ ಸರ್ ಮತ್ತು ಹರೀಶ್ ಅಂತ ಇದ್ರು, ಅವರು ಈಗ ಇಲ್ಲ. ಅವರೂ ಕೂಡ ಅಷ್ಟೇ ತುಂಬಾ ಚೆನ್ನಾಗಿ ಹೇಳಿ ಕೊಡ್ತಾ ಇದ್ರು, ಅವರು ಹೇಳಿ ಕೊಟ್ಟ ಹಾಗೆ ನಾವು ಮಾಡ್ಬೇಕಿತ್ತು, ಹಾಗಾಗಿ ನಾವು ಇಲ್ಲಿ ತನಕ, ಇಷ್ಟು ಚೆನ್ನಾಗಿ ನಟನೆ ಮಾಡ್ಕೊಂಡು ಬರೋಕೆ ಸಹಾಯ ಆಯ್ತು.

ಮನೆಯವರ ಸಪೋರ್ಟ್ ಹೇಗಿತ್ತು.?

ಮನೆಯವರು ತುಂಬಾ ಸಪೋರ್ಟ್ ಮಾಡ್ತಾ ಇದ್ರು. ಅದ್ರಲ್ಲೂ ಅಮ್ಮ ಯಾವಾಗ್ಲೂ ನನ್ನ ಜೊತೆಗೆ ಇರ್ತಾ ಇದ್ರು. ರಿಹರ್ಸಲ್ ಟೈಮ್ ನಲ್ಲಿ ಎಷ್ಟೇ ಹೊತ್ತು ಆದ್ರೂ ನನ್ನ ಜೊತೆ ಸೆಟ್ ನಲ್ಲೇ ಇರ್ತಾ ಇದ್ರು. ಅಪ್ಪ ಜಾಸ್ತಿ ಬರ್ತಾ ಇರ್ಲಿಲ್ಲ ಯಾಕಂದ್ರೆ ಅವರು ಕೆಲಸಕ್ಕೆ ಹೋಗ್ತಾ ಇದ್ರು.

ಶೂಟಿಂಗ್ ಮಧ್ಯೆ ಶಾಲೆ ಮತ್ತು ಪಾಠವನ್ನು ಹೇಗೆ ನಿಭಾಯಿಸಿದ್ರಿ?

ಸೀಸನ್ ಆರಂಭ ಆದ ಮೊದ-ಮೊದಲು ಟೈಮ್ ಇತ್ತು, ಫ್ರೆಂಡ್ಸ್ ವಾಟ್ಯಾಪ್ ನಲ್ಲಿ ನೋಟ್ಸ್ ಕಳಿಸ್ತಾ ಇದ್ರು, ಬರ್ಕೋತಾ ಇದ್ದೆ. ಆಮೇಲೆ ಟೈಮ್ ಸಿಗ್ತಾ ಇರ್ಲಿಲ್ಲ, ಆವಾಗ ತುಂಬಾ ಟೆನ್ಶನ್ ಆಗ್ತಾ ಇತ್ತು. ಏನಪ್ಪಾ ಮಾಡೋದು ಅಂತ. ಆವಾಗ ಟೀಚರ್ಸ್, ನೀನು ಮೊದಲು ಡ್ರಾಮಾ ಕಡೆ ಗಮನ ಕೊಡು ಆಮೇಲೆ ನೀನು ಈ ಕಡೆ ಬಂದ ಮೇಲೆ ನಾವೇ ನಿನಗೆ ಹೇಳಿ ಕೊಡ್ತೀವಿ, ಪೋಷನ್ಸ್ ಮಾಡ್ತೀವಿ ಅಂತ ಹೇಳಿ ಧೈರ್ಯ ತುಂಬಿದ್ರು.

ಈಗ ನಿಮ್ಮ ಅಕ್ಕ-ಪಕ್ಕದ ಜನ, ಫ್ರೆಂಡ್ಸ್ ನಿಮ್ಮನ್ನು ಟ್ರೀಟ್ ಮಾಡೋ ರೀತಿ ಹೇಗಿದೆ.?

ಹಾ..ಎಲ್ಲರಿಗೂ ಖುಷಿ ಆಗಿದೆ. ಮಂಗಳೂರು ಹುಡುಗಿ 'ಡ್ರಾಮಾ ಜ್ಯೂನಿಯರ್ಸ್ ಸೀಸನ್-2' ವಿನ್ನರ್ ಆಗಿದ್ದಾಳೆ ಅಂತ ಎಲ್ಲರೂ ಹೇಳ್ತಾರೆ. ಎಲ್ಲಿ ಹೋದ್ರು ಎಲ್ಲರೂ ನನ್ನ ಗುರುತಿಸ್ತಾರೆ, ಡ್ರಾಮಾ ಜ್ಯೂನಿಯರ್ಸ್ ವಂಶಿ ಅಂತ ಗುರುತು ಹಿಡಿತಾರೆ. ಅದಿಕ್ಕೆ ತುಂಬಾ ಖುಷಿ ಆಗುತ್ತೆ.

ಕೊನೆಯದಾಗಿ ಮುಂದೇನು ಮಾಡ್ಬೇಕು ಅಂತ ಇದ್ದೀರಾ, ನಟನೆಗೆ ಅವಕಾಶ ಸಿಕ್ರೆ ಹೋಗ್ತಿರಾ.?

- ನಾನು ಮುಂದೆ ನಟಿ ಆಗ್ಬೇಕು ಅಂತ ಇದ್ದೀನಿ. ಸೀರಿಯಲ್ ಅಥವಾ ಸಿನಿಮಾದಲ್ಲಿ ಆಫರ್ ಬಂದ್ರೆ ಖಂಡಿತವಾಗ್ಲೂ ಹೋಗ್ತೀನಿ, ಅವಕಾಶ ಸಿಕ್ರೆ ನಟಿಸ್ತೀನಿ.

ನೀವು ಸಾಕಷ್ಟು
ವಿಚಾರಗಳನ್ನು ನಮ್ಮ ಜೊತೆ ಹಂಚಿಕೊಂಡಿದ್ದೀರಿ, ಧನ್ಯವಾದಗಳು

English summary
'Drama Juniors Season-2' Winner Vamshi Rathnakumar spoke to filmibeat. Vamshi Rathnakumar Shared her experience and journey about 'Drama Juniors'. Check out the Interview here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X