For Quick Alerts
  ALLOW NOTIFICATIONS  
  For Daily Alerts

  ಕಮ್ ಬ್ಯಾಕ್ ಮಾಡಿದ ಜೆಂಕೆಮರಿ ನಂದಿತಾ ಎಕ್ಸ್‌ ಕ್ಲೂಸಿವ್ ಮಾತು

  By Pavithra
  |

  ಜಿಂಕೆ ಮರಿನಾ...ಜಿಂಕೆ ಮರಿನಾ ಅಂತ ಲೂಸ್ ಮಾದ ಯೋಗಿ ಜೊತೆ ಹೆಜ್ಜೆ ಹಾಕಿದ್ದ ನಟಿ ನಂದಿತಾ. ಸಾಕಷ್ಟು ವರ್ಷದ ನಂತರ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ. ಹತ್ತು ವರ್ಷಗಳ ಕಾಲ ಚಿತ್ರರಂಗದಲ್ಲಿ ನಟಿಯಾಗಿ ಕಾಣಿಸಿಕೊಂಡಿರುವ ನಂದಿತಾ ಸದ್ಯ ಟಾಲಿವುಡ್ ನಲ್ಲಿ ಬೇಡಿಕೆ ನಟಿ.

  ಕನ್ನಡ ಬೆಡಗಿಯ ತಮಿಳು ಮತ್ತು ತೆಲುಗು ಸಿನಿಮಾವನ್ನು ನೋಡಿ ಅದ್ಬುತವಾಗಿ ನಟನೆ ಮಾಡುತ್ತೀರಾ ಎನ್ನುವ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದರು ಸ್ಯಾಂಡಲ್ ವುಡ್ ಮಂದಿ. ಇದೇ ಸಮಯದಲ್ಲಿ ಸಾಕಷ್ಟು ಜನರು ನಂದಿತಾ ಎದುರಿಗೆ ಸಿಕ್ಕಾಗ ಕೇಳುತ್ತಿದ್ದ ಪ್ರಶ್ನೆ ಒಂದೇ, ಯಾವಾಗ ಕನ್ನಡದಲ್ಲಿ ಮತ್ತೆ ಅಭಿನಯ ಮಾಡುತ್ತೀರಾ ಎನ್ನುವುದು.

  ಅಂತು ನಂದಿತಾಗೆ ಲಕ್ ಬಂತು : ಕನ್ನಡದ ಸ್ಟಾರ್ ನಟನ ಜೊತೆಗೆ ಜಿಂಕೆ ಮರಿ!

  ಹಾಗಂತ ಕನ್ನಡ ನಿರ್ದೇಶಕರು ಜಿಂಕೆ ಮರಿಯನ್ನು ಹುಡುಕಿಲ್ಲ ಅಂತಿಲ್ಲ. ಸಾಕಷ್ಟು ಕಥೆಯನ್ನು ನಂದಿತಾ ಕೇಳಿದ್ರು ಕೂಡ ಅದ್ಯಾಕೋ ಈ ಚಿತ್ರದಲ್ಲಿ ಅಭಿನಯ ಮಾಡಲೇಬೇಕು ಅಂತ ಯಾವತ್ತಿಗೂ ಅನ್ನಿಸಿರಲಿಲ್ಲ. ಆದರೆ ಈಗ ಒಳ್ಳೆ ಸಮಯ ಬಂದಿದೆ. ಉತ್ತಮ ಪಾತ್ರ ಸಿಕ್ಕಿದೆ. ರಾಕಿಂಗ್ ಸ್ಟಾರ್ ಜೊತೆ ಅಭಿನಯ ಮಾಡಲು ನಂದಿತಾ ಅವರಿಗೆ ಅವಕಾಶ ಸಿಕ್ಕಿದೆ. ಅದಕ್ಕಾಗಿ ಜಿಂಕೆ ಮರಿ ಇನ್ನು ಕೆಲವೇ ದಿನಗಳಲ್ಲಿ ಬೆಂಗಳೂರಿಗೆ ಓಡೋಡಿ ಬರುತ್ತಿದೆ. ಅದಕ್ಕೂ ಮುನ್ನ ಫಿಲ್ಮೀ ಬೀಟ್ ಜೊತೆ ಎಕ್ಸ್ ಕ್ಲೂಸಿವ್ ಆಗಿ ನಂದಿತಾ ಮಾತನಾಡಿದ್ದಾರೆ. ಇಲ್ಲಿದೆ ಸಂಪೂರ್ಣ ಸಂದರ್ಶನ ಮುಂದೆ ಓದಿ.

  ಹೇಗಿದ್ದೀರಾ? ಕನ್ನಡ ಸಿನಿಮಾ ಒಪ್ಪಿಕೊಂಡಿದ್ದೀರಾ?

  ಹೇಗಿದ್ದೀರಾ? ಕನ್ನಡ ಸಿನಿಮಾ ಒಪ್ಪಿಕೊಂಡಿದ್ದೀರಾ?

  ಹಾದು... ಯಶ್ ಅಭಿನಯದ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಅನಿಲ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಖುಷಿ ಆಗುತ್ತಿದೆ ಹತ್ತು ವರ್ಷಗಳ ನಂತರ ಮತ್ತೆ ಕನ್ನಡ ಚಿತ್ರದಲ್ಲಿ ಅಭಿನಯ ಮಾಡುತ್ತಿರುವುದಕ್ಕೆ.

  ಕನ್ನಡ ಸಿನಿಮಾ ಅವಕಾಶ ಹೇಗೆ ಸಿಕ್ತು?

  ಕನ್ನಡ ಸಿನಿಮಾ ಅವಕಾಶ ಹೇಗೆ ಸಿಕ್ತು?

  ಕನ್ನಡ ಸಿನಿಮಾರಂಗದ ಕೆಲವರು ಸಂಪರ್ಕದಲ್ಲಿ ಇದ್ದಾರೆ. ನಿರ್ದೇಶಕ ಅನಿಲ್ ಕೂಡ ಕಾಲ್ ಮಾಡಿದ್ರು. ಸಾಮಾನ್ಯವಾಗಿ ಮಾತನಾಡುತ್ತಾ ಯಶ್ ಅವರ ಸಿನಿಮಾದಲ್ಲಿ ಪಾತ್ರವಿದೆ ಅಭಿನಯ ಮಾಡುತ್ತೀರಾ ಎಂದು ಕೇಳಿದ್ರು? ನಾನು ಭೇಟಿ ಮಾಡಿ ನಂತರ ಒಪ್ಪಿಕೊಂಡೆ. ಇಬ್ಬರು ನಾಯಕಿಯರು ಎಂದು ಹೇಳಿದ್ರು. ಪರವಾಗಿಲ್ಲ, ನನ್ನ ಪಾತ್ರ ನಾನು ನಿರ್ವಹಿಸುತ್ತೇನೆ.

  ಇದೇ ಸಿನಿಮಾ ಒಪ್ಪಿಕೊಳ್ಳಲು ಕಾರಣ?

  ಇದೇ ಸಿನಿಮಾ ಒಪ್ಪಿಕೊಳ್ಳಲು ಕಾರಣ?

  ಒಳ್ಳೆ ಪಾತ್ರ, ಉತ್ತಮ ನಿರ್ದೇಶಕರು. ಯಶ್ ಜೊತೆ ಅಭಿನಯ ಮಾಡುವ ಅವಕಾಶ ಹಾಗೂ ಜಯಣ್ಣ ಅವರ ನಿರ್ಮಾಣ ಸಂಸ್ಥೆ ಇವೆಲ್ಲವೂ ಒಟ್ಟಿಗೆ ಸಿಕ್ಕಿದು ಖುಷಿ ಆಯ್ತು. ಇಷ್ಟು ವರ್ಷ ತಾಳ್ಮೆಯಿಂದ ಕಾದಿದ್ದಕ್ಕೂ ಒಳ್ಳೆ ಅವಕಾಶ ಸಿಕ್ಕಿದೆ.

  ಹೇಗೆ ಅನ್ನಿಸುತ್ತಿದೆ ಕನ್ನಡ ಸಿನಿಮಾ ಅವಕಾಶ ಸಿಕ್ಕಿದ್ದು?

  ಹೇಗೆ ಅನ್ನಿಸುತ್ತಿದೆ ಕನ್ನಡ ಸಿನಿಮಾ ಅವಕಾಶ ಸಿಕ್ಕಿದ್ದು?

  ತಯಾರಿ ಅಂತ ಏನು ಇಲ್ಲ, ಆದರೆ ತುಂಬಾ ಕುತೂಹಲವಿದೆ. ಕನ್ನಡ ಸಿನಿಮಾ ಚಿತ್ರೀಕರಣ. ಅದೂ ಮಂಡ್ಯದಲ್ಲಿ ಶೂಟಿಂಗ್ ಇರುತ್ತೆ. ಹೇಗಿರುತ್ತೆ ಅನ್ನುವ ಕುತೂಹಲವೇ ಹೆಚ್ಚು.

  ಎಷ್ಟು ಸಿನಿಮಾಗಳು ಕೈನಲ್ಲಿವೆ?

  ಎಷ್ಟು ಸಿನಿಮಾಗಳು ಕೈನಲ್ಲಿವೆ?

  ಸಾಕಷ್ಟು ಬ್ಯುಸಿ ಆಗಿದ್ದೀನಿ. ಒಟ್ಟು ಒಂಬತ್ತು ಸಿನಿಮಾಗಳಲ್ಲಿ ಅಭಿನಯ ಮಾಡುತ್ತಿದ್ದೇನೆ. ತಮಿಳು ನಾಲ್ಕು, ತೆಲುಗಿನಲ್ಲಿ ಐದು ಚಿತ್ರಗಳ ಶೂಟಿಂಗ್ ನಡೆಯುತ್ತಿದೆ. 2019ರ ವರೆಗೂ ಬ್ಯಾಕ್ ಟು ಬ್ಯಾಕ್ ಚಿತ್ರಗಳಿಗೆ ಡೇಟ್ಸ್ ಕೊಟ್ಟಿದ್ದೇನೆ.

  ಹೈದ್ರಾಬಾದ್ ಗೆ ಶಿಫ್ಟ್ ಆಗಿದ್ದೀರಾ?

  ಹೈದ್ರಾಬಾದ್ ಗೆ ಶಿಫ್ಟ್ ಆಗಿದ್ದೀರಾ?

  ಖಂಡಿತಾ ಇಲ್ಲ. ಎಲ್ಲೂ ಹೋಗಿಲ್ಲ. ಬೆಂಗಳೂರಿನಲ್ಲೇ ಇದ್ದೇನೆ. ಚಿತ್ರೀಕರಣದ ಬಿಡುವು ಸಿಕ್ಕಾಗ ಬೆಂಗಳೂರಿಗೆ ಬರ್ತಿನಿ. ಇಲ್ಲೇ ಇರ್ತಿನಿ. ವಿಶೇಷ ಎಂದರೆ ಪ್ರತಿ ಸಲ ರೆಸ್ಟ್ ಮಾಡೋದಕ್ಕೆ ರಜಾ ದಿನವನ್ನು ಕಳೆಯೋದಕ್ಕೆ ಬರ್ತಿದ್ದೆ. ಆದರೆ ಈ ಸಲ ಕನ್ನಡ ಸಿನಿಮಾ ಚಿತ್ರೀಕರಣಕ್ಕಾಗಿ ಬರ್ತಿದ್ದೀನಿ.

  ಇನ್ನು ಮುಂದೆ ಕನ್ನಡ ಸಿನಿಮಾ ಒಪ್ಪಿಕೊಳ್ತಿರಾ?

  ಇನ್ನು ಮುಂದೆ ಕನ್ನಡ ಸಿನಿಮಾ ಒಪ್ಪಿಕೊಳ್ತಿರಾ?

  ಇನ್ನು ಮುಂದೆ ಅಂತ ಇಲ್ಲ. ನನಗೆ ಒಳ್ಳೆ ಪಾತ್ರ ಮತ್ತು ಕಥೆ ಚೆನ್ನಾಗಿರುವ ಸಿನಿಮಾ ಸಿಗಬೇಕು ಅಷ್ಟೇ. ಸದ್ಯ ಯಶ್ ಚಿತ್ರದಲ್ಲಿ ಅಭಿನಯ ಮಾಡುತ್ತಿದ್ದೇನೆ. ನಂತರ ನೋಡೋಣ ಒಳ್ಳೆ ಕಥೆ ಅನ್ನಿಸಿದ್ರೆ ನಿಜಕ್ಕೂ ಒಪ್ಪಿಕೊಳ್ಳುತ್ತೇನೆ.

  English summary
  Kannada actress Nandita Shweta has acted in Yash's new film. Here is an interview with Nandita about the Kannada Movie .

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X