»   » ರೋರಿಂಗ್ ಸ್ಟಾರ್ ಶ್ರೀಮುರಳಿ ಹುಟ್ಟುಹಬ್ಬಕ್ಕಿದೆ ಬಂಪರ್ ಉಡುಗೊರೆ!

ರೋರಿಂಗ್ ಸ್ಟಾರ್ ಶ್ರೀಮುರಳಿ ಹುಟ್ಟುಹಬ್ಬಕ್ಕಿದೆ ಬಂಪರ್ ಉಡುಗೊರೆ!

By: ಹರ್ಷಿತಾ ರಾಕೇಶ್
Subscribe to Filmibeat Kannada

ಕಳೆದ ವರ್ಷ 'ಉಗ್ರಂ', ಈ ವರ್ಷ 'ರಥಾವರ'! ಎರಡು ಬ್ಯಾಕ್ ಟು ಬ್ಯಾಕ್ ಸಕ್ಸಸ್ ನಿಂದ ನಟ ಶ್ರೀಮುರಳಿ ಬಾಕ್ಸ್ ಆಫೀಸ್ ನಲ್ಲಿ ಅಕ್ಷರಶಃ ರೋರಿಂಗ್ ಸ್ಟಾರ್ ಆಗಿದ್ದಾರೆ.

ಬಹುನಿರೀಕ್ಷಿತ ಚಿತ್ರ 'ರಥಾವರ' ಸಿನಿಮಾ ತೆರೆಗೆ ಬಂದಿದ್ದು ಆಗಿದೆ. ಎಲ್ಲೆಲ್ಲೂ ಹೌಸ್ ಫುಲ್ ಪ್ರದರ್ಶನ ಕಾಣ್ತಿದೆ. ಮುಂದೆ ಶ್ರೀಮುರಳಿ ಯಾವ ಸಿನಿಮಾದಲ್ಲಿ ಕಾಣಿಸಿಕೊಳ್ತಾರೆ? ಈ ಮಿಲಿಯನ್ ಡಾಲರ್ ಪ್ರಶ್ನೆಗೆ ಡಿಸೆಂಬರ್ 17 ರಂದು ಉತ್ತರ ಸಿಗಲಿದೆ.


ಹೌದು, ಡಿಸೆಂಬರ್ 17 ರಂದು ಶ್ರೀಮುರಳಿ ಅವರ ಹುಟ್ಟುಹಬ್ಬ. ಅಂದೇ ಅವರ ಮುಂದಿನ ಪ್ರಾಜೆಕ್ಟ್ ಅನೌನ್ಸ್ ಮಾಡ್ತಾರಂತೆ ಶ್ರೀಮುರಳಿ. ಹಾಗಂತ, 'ಫಿಲ್ಮಿಬೀಟ್ ಕನ್ನಡ'ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಶ್ರೀಮುರಳಿ ಬಾಯ್ಬಿಟ್ಟರು. [ಚಮ್ಕಾಯ್ಸಿ ಚಿಂದಿ ಉಡಾಯಿಸಿದ ಶ್ರೀಮುರಳಿ 'ರಥಾವರ']


Interview ; Srimurali has surprise for fans on his brithday

ನಟ ಶ್ರೀಮುರಳಿ ಜೊತೆ 'ಫಿಲ್ಮಿಬೀಟ್ ಕನ್ನಡ' ನಡೆಸಿದ ಸಂದರ್ಶನ ಇಲ್ಲಿದೆ ಓದಿ.....


* ಬ್ಯಾಕ್ ಟು ಬ್ಯಾಕ್ ಸಕ್ಸಸ್ ನಿಂದ ನಿಮ್ಮ ಮೇಲೆ ಜವಾಬ್ದಾರಿ ಜಾಸ್ತಿ ಆಗಿದೆ ಅಂತ ಅಂದುಕೊಳ್ಳಬಹುದಾ...


- ಹೌದು, ಇನ್ನೂ ಹೆಚ್ಚು ಜವಾಬ್ದಾರಿ ಜಾಸ್ತಿ ಆಗಿದೆ. ಭಯ ಆಗ್ತಿದೆ. That's the better way I can say. [ಮಲ್ಟಿಫ್ಲೆಕ್ಸ್ ಗಳಲ್ಲೂ ಶ್ರೀಮುರಳಿ 'ರಥಾವರ' ದರ್ಬಾರ್..!]


* ಭಯ ಯಾಕೆ....


- ನಿರೀಕ್ಷೆ ಜಾಸ್ತಿ ಆದಾಗ, ಅಂದುಕೊಂಡಿದ್ದು ರೀಚಾಗದೇ ಇದ್ದಾಗ ಎಲ್ಲೋ ಒಂದು ಕಡೆ ಮನುಷ್ಯ ಯೋಚನೆ ಮಾಡ್ತಾನೆ. ಗೊತ್ತಿದ್ದೋ, ಗೊತ್ತಿಲ್ಲದೇನೋ ತಪ್ಪಾಗುತ್ತೆ. ಆ ಭಯ ಇರ್ಬೇಕು. ಅದು ಹಾಗೇ ಮುಂದುವರಿಬೇಕು. ನಮ್ಮ ಜೀವನವನ್ನ ಒಳ್ಳೆ ದಾರಿಯಲ್ಲಿ ಕರ್ಕೊಂಡು ಹೋಗುತ್ತೆ ಈ ಒಂದು ಭಯ ಅಂತ ನನಗೆ ಅನಿಸುತ್ತೆ. [ಶ್ರೀಮುರಳಿ 'ರಥಾವರ' ಆರ್ಭಟಕ್ಕೆ ಬಾಕ್ಸ್ ಫೀಸ್ ಉಡೀಸ್!]


* 'ಚಂದ್ರ ಚಕೋರಿ' ಅಂತಹ ಫ್ಯಾಮಿಲಿ ಎಂಟರ್ ಟೇನರ್ ಕೊಟ್ಟಿದ್ದೀರಾ. 'ಉಗ್ರಂ' ಮತ್ತು 'ರಥಾವರ' ಮಾಸ್ ಸಿನಿಮಾ ಮಾಡಿದ್ದೀರಾ. ಮುಂದಿನ ಸಬ್ಜೆಕ್ಟ್?


- ಅದು ಸರ್ ಪ್ರೈಸ್. ಈಗಾಗಲೇ ನಾವು ಅದರ ಬಗ್ಗೆ ವರ್ಕೌಟ್ ಮಾಡ್ತಿದ್ದೀವಿ. ಸ್ಕ್ರಿಪ್ಟ್ ಕೆಲಸ ನಡೀತಾಯಿದೆ. ಅದು ಹೇಗೆ ಬರುತ್ತೆ ಅನ್ನೋದು ಸರ್ ಪ್ರೈಸ್.


* ಬರ್ತಡೆ ಸರ್ ಪ್ರೈಸ್ ಪ್ಲಾನಾ..?


- ಹೌದು. ಇದು ಬರ್ತಡೆ ಗಿಫ್ಟ್. ಡಿಸೆಂಬರ್ 17 ಕ್ಕೆ ನನ್ನ ಹುಟ್ಟುಹಬ್ಬದ ದಿನ ಸಿನಿಮಾ ಅನೌನ್ಸ್ ಆಗುತ್ತೆ.


* ಅಣ್ಣ-ತಮ್ಮ (ವಿಜಯ್ ರಾಘವೇಂದ್ರ-ಶ್ರೀಮುರಳಿ) ಒಟ್ಟಿಗೆ ಸಿನಿಮಾದಲ್ಲಿ ಯಾವಾಗ ನೋಡಬಹುದು?


- ಮಾಡ್ತೀವಿ. ಎಲ್ಲದಕ್ಕೂ ಕಾಲ ಕೂಡಿಬರಬೇಕು. [ಅಬ್ಬರಿಸಿ, ಬೊಬ್ಬಿರಿಯುತ್ತಿರುವ 'ರಥಾವರ'ನ ಬಗ್ಗೆ ವಿಮರ್ಶಕರು ಏನಂದ್ರು?]


'ರಥಾವರ' ಸಿನಿಮಾದಲ್ಲಿ ಮಂಗಳಮುಖಿ 'ಮಾದೇವಿ' ಪಾತ್ರ ಕೂಡ ಹೈಲೈಟ್. ಸಮಾಜದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಮಂಗಳಮುಖಿಯರ ಬಗ್ಗೆ ಶ್ರೀಮುರಳಿ ಮಾತನಾಡಿದ್ದಾರೆ. ಅದಕ್ಕಾಗಿ NEXT ಬಟನ್ ಕ್ಲಿಕ್ ಮಾಡಿ.....


English summary
Kannada Actor Sriimurali's next project will be announced on his birthday (December 17th).

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada