twitter
    For Quick Alerts
    ALLOW NOTIFICATIONS  
    For Daily Alerts

    ವಿಡಿಯೋ: 'ಬಿಗ್ ಬಾಸ್-4' ಕುತೂಹಲಗಳಿಗೆ ಬ್ರೇಕ್ ಹಾಕಿದ ಪರಮೇಶ್ವರ್ ಗುಂಡ್ಕಲ್

    By Bharath Kumar
    |

    'ಬಿಗ್ ಬಾಸ್ ಕನ್ನಡ 4' ಎಲ್ಲ ಅಂದುಕೊಂಡಂತೆ ಆಗಿದ್ರೆ, ಇದೇ ವಾರ ಗ್ರ್ಯಾಂಡ್ ಫಿನಾಲೆ ನಡೆಯಬೇಕಿತ್ತು. ಆದ್ರೆ, 'ಬಿಗ್ ಬಾಸ್' ಕಡೆಯಿಂದ ಸರ್ಪ್ರೈಸ್ ಎಂಬಂತೆ ಇನ್ನೂ ಎರಡು ವಾರಗಳು ಕಾರ್ಯಕ್ರಮ ಎಕ್ಸ್ ಟೆಂಡ್ ಆಗಿದೆ ಎಂಬ ಮಾಹಿತಿ ಹೊರಬಿತ್ತು.

    14 ವಾರಗಳ 'ಬಿಗ್ ಬಾಸ್' ಆಟವನ್ನ 16 ವಾರಗಳಿಗೆ ವಿಸ್ತರಿಸಿದ್ದು ಯಾಕೆ ಎಂಬ ಕುತೂಹಲ, ಪ್ರಶ್ನೆ ವೀಕ್ಷಕರನ್ನ ಕಾಡಿತ್ತು. ಆದ್ರೆ, ಈ ಕುತೂಹಲಕ್ಕೆ 'ಬಿಗ್ ಬಾಸ್' ಕಾರ್ಯಕ್ರಮದ ನಿರ್ದೇಶಕ ಪರಮೇಶ್ವರ್ ಗುಂಡ್ಕಲ್ ಅವರು ಸ್ವಷ್ಟೀಕರಣ ಕೊಟ್ಟಿದ್ದಾರೆ.[ಎಕ್ಸ್ ಕ್ಲೂಸಿವ್: 'ಬಿಗ್ ಬಾಸ್ ಕನ್ನಡ-4' ನಿರ್ದೇಶಕ ಪರಮೇಶ್ವರ ಗುಂಡ್ಕಲ್ ಸಂದರ್ಶನ ]

    ಕೇವಲ ಈ ಒಂದು ಪ್ರಶ್ನೆಗೆ ಮಾತ್ರವಲ್ಲ, 'ಬಿಗ್ ಬಾಸ್' ಮನೆಯಲ್ಲಿ ಕಾಣಿಸಿಕೊಂಡಿದ್ದ 'ದೆವ್ವ' ನಿಜಾನ? ಪ್ರಥಮ್ ಮೇಲೆ ಹುಚ್ ವೆಂಕಟ್ ಹಲ್ಲೆ ಪ್ರಕರಣ? ನೋಟ್ ಬ್ಯಾನ್ ಎಫೆಕ್ಟ್ ಮನೆಯ ಸದಸ್ಯರಿಗೂ ತಟ್ಟಿಲ್ವಾ.... ಹೀಗೆ ಹಲವು ಕುತೂಹಲಗಳಿಗೆ 'ಬಿಗ್ ಬಾಸ್' ನಿರ್ದೇಶಕರು ಕ್ಲಾರಿಟಿ ಕೊಟ್ಟಿದ್ದಾರೆ.

    ಕೊನೆ ಕ್ಷಣದಲ್ಲಿ 'ಬಿಗ್ ಬಾಸ್' 2 ವಾರ ವಿಸ್ತರಣೆ ಆಗಿದ್ದು ಯಾಕೆ?

    ಕೊನೆ ಕ್ಷಣದಲ್ಲಿ 'ಬಿಗ್ ಬಾಸ್' 2 ವಾರ ವಿಸ್ತರಣೆ ಆಗಿದ್ದು ಯಾಕೆ?

    ''ಸ್ವರ್ಧಿಗಳು ಕೊನೆಯ 2 ವಾರಕ್ಕೆ ಕೆಲವು ಟ್ರಿಕ್ಸ್ ಗಳನ್ನ ಇಟ್ಕೊಂಡು ಹೋಗಿರುತ್ತಾರೆ. ಕಾರ್ಯಕ್ರಮದ ಫಾರ್ಮೆಟ್ ಎಲ್ಲ ಸದಸ್ಯರಿಗೂ ಗೊತ್ತಿರುವುದ್ರಿಂದ ಕೊನೆಯ ವಾರಗಳು ಹೀಗಿರುತ್ತೆ, ಹಾಗೀರುತ್ತೆ, ಅದಾಗುತ್ತೆ ಎಂಬುದು ಲೆಕ್ಕಾಚಾರ ಹಾಕಿರಬಹುದು. ಹೀಗಾಗಿ, ಅವರ ತಾಳ್ಮೆಯ, ಅವರ ವ್ಯಕ್ತಿತ್ವವನ್ನ ಪರೀಕ್ಷೆ ಮಾಡಲು, ಒಂದು ಕ್ರಿಯಾತ್ಮಕವಾಗಿ ನಿರ್ಧಾರ ತೆಗೆದುಕೊಂಡಿದ್ದೇವೆ. ಈ ಕಾರ್ಯಕ್ರಮ 13 ವಾರಗಳಲ್ಲಿ ಉತ್ತಮ ಜನಪ್ರಿಯ ಪಡೆದುಕೊಂಡು, ಜನರನ್ನ ಅತ್ಯುತ್ತಮವಾಗಿ ರಂಜಿಸುತ್ತಾ ಬಂದಿದೆ. ಆದ್ದರಿಂದ ಜನರಿಗೂ ಒಳ್ಳೆ ಮನರಂಜನೆ ಸಿಗುತ್ತೆ ಹಾಗೂ ವಾಹಿನಿಗೂ ಉತ್ತಮ ವೀಕ್ಷಕರು ಸಿಗುತ್ತಾರೆ ಎಂದು ವಿಸ್ತರಣೆ ಮಾಡಲಾಯಿತು''

    2 ವಾರ ವಿಸ್ತರಣೆಗೆ ಎದುರಾದ ಸವಾಲುಗಳೇನು?

    2 ವಾರ ವಿಸ್ತರಣೆಗೆ ಎದುರಾದ ಸವಾಲುಗಳೇನು?

    ''ಸುದೀಪ್ ಅವರ ಕಾಲ್ ಶೀಟ್ ತುಂಬಾ ಇಂಪಾರ್ಟೆಂಟ್ ಆಗಿತ್ತು. ಅವರ ಬ್ಯುಸಿ ಶೆಡ್ಯೂಲ್ ನಲ್ಲಿ ಮತ್ತೆ ಮೂರು ದಿನ ಕಾರ್ಯಕ್ರಮ ನಿರೂಪಣೆ ಮಾಡಬೇಕಿತ್ತು. ಆದ್ರೆ, ನಮಗಾಗಿ ಬಿಡುವು ಮಾಡಿಕೊಂಡು ಸಮ್ಮತಿಸಿದರು. ನಮಗೂ ಈ ನಿರ್ಧಾರ ಪ್ರಕಟ ಮಾಡುವಾಗ ಆತಂಕವಿತ್ತು. ಆದ್ರೆ, ಸುದೀಪ್ ಅವರು ಹೇಳಿದಾಗ ಮನೆಯಲ್ಲಿರುವ ಸದಸ್ಯರು ಚಪ್ಪಾಳೆ ಹೊಡೆದರು. ಕ್ಯಾಮೆರಾದಲ್ಲಿ ಕೂಡ ಎಲ್ಲೂ ಹೇಳಿಲ್ಲ. ಒಂದು ಪಕ್ಷ ನಾವು ಹೊರಗೆ ಹೋಗಬೇಕು ಎಂದು ಹೇಳಿದರೆ ಖಂಡಿತವಾಗಿ ಅವರನ್ನ ಕಳುಹಿಸಿಕೊಡುತ್ತೇವೆ. ಮತ್ತೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಜನವರಿ 15 ರಿಂದ 'ರಾಧರಮಣ' ಧಾರವಾಹಿ ಪ್ರಸಾರವಾಗುತ್ತೆ. ಆದ್ದರಿಂದ ಕಲರ್ಸ್ ಸೂಪರ್ ವಾಹಿನಿಯಲ್ಲಿ ಬಿಗ್ ಬಾಸ್ ಮುಂದುವರೆಸಲು ನಿರ್ಧಾರವಾಯಿತು''

    ಮನೆಯ ಸದಸ್ಯರಿಗೆ ಮೊಬೈಲ್ ಬಳಕೆ ಮಾಡಲಾಗುತ್ತಿದೆ ಎಂಬ ಆರೋಪದ ಬಗ್ಗೆ ನಿಮ್ಮ ನಿಲುವು?

    ಮನೆಯ ಸದಸ್ಯರಿಗೆ ಮೊಬೈಲ್ ಬಳಕೆ ಮಾಡಲಾಗುತ್ತಿದೆ ಎಂಬ ಆರೋಪದ ಬಗ್ಗೆ ನಿಮ್ಮ ನಿಲುವು?

    ''ಮೊಬೈಲ್ ನಾವು ಯಾಕೆ ಕೋಡೋಣ. ಮೂರು ಸೀಸನ್ ನಿಂದ ಸುಮಾರು 60 ಜನ 'ಬಿಗ್ ಬಾಸ್' ಮನೆಗೆ ಹೋಗಿದ್ದರು. ಅವರನ್ನೆಲ್ಲ ಕೇಳಿದ್ರೆ ಅರ್ಥವಾಗುತ್ತೆ. ನಿರಂಜನ್ ಅವರು ಬಹುಶಃ ಫನ್ನಿಯಾಗಿ ಹೇಳಿದ್ದು ಅಷ್ಟೇ. ನಾವು ಈ ರೀತಿಯಾದ ಯಾವುದೇ ಸೌಲಭ್ಯವನ್ನ ಒದಗಿಸಿಲ್ಲ. ಹೊರಗಿನ ಸಂಪರ್ಕ ಕಂಪ್ಲೀಟ್ ಆಗಿ ಕಡಿತವಾಗಿರುತ್ತೆ. ಅದು ನಂಬಿಕೆ ಪ್ರಶ್ನೆ. ನಾನು ಹಲವು ಬಾರಿ ಹೇಳಿದ್ದೀನಿ. ಮತ್ತೆ ಮತ್ತೆ ಪ್ರೂವ್ ಮಾಡುವ ಅವಶ್ಯಕತೆಯಿಲ್ಲ''

    'ಬಿಗ್ ಬಾಸ್' ಮನೆಯಲ್ಲಿ 'ದೆವ್ವ' ಇದಿಯಾ?

    'ಬಿಗ್ ಬಾಸ್' ಮನೆಯಲ್ಲಿ 'ದೆವ್ವ' ಇದಿಯಾ?

    ''ಅದು ಕ್ಯಾಮೆರಾದಲ್ಲಿ ಏನೂ ರೆಕಾರ್ಡ್ ಆಗಿಲ್ಲ. ಅವರು ಭ್ರಮಿಸಿರುವುದರಿಂದ ಅದು ಹಾಗೆ ಅನಿಸಿರಬಹುದು ಎಂಬುದು ನನ್ನ ಅನಿಸಿಕೆ. ಅಲ್ಲಿ ಮಿರರ್ ಹಿಂದೆ ಕ್ಯಾಮೆರಾ ಗಲ್ಲಿಯಿರುತ್ತೆ. ಅಲ್ಲಿ ಓಡಾಡಬಹುದು. ಅಥವಾ ಆ ಕಡೆಯಿಂದ ಯಾರಾದ್ರೂ ಮೊಬೈಲ್ ಲೈಟ್ ಅಥವಾ ಬೇರೆ ಏನಾದರೂ ಬೆಳಕು ಹಾಕಿರಬಹುದು. ಹಾಗೆ ಮಿರರ್ ಮೇಲೆ ಬೆಳಕು ಬಿದ್ದಾಗ ಹಾಗೆ ಫೀಲ್ ಆಗಿರಬಹುದು. ಅಷ್ಟೇ ಕ್ಯಾಮೆರಾದಲ್ಲಿ ಏನೂ ರೆಕಾರ್ಡ್ ಆಗಿಲ್ಲ''

    ಕಳೆದ ಆವೃತ್ತಿಯಲ್ಲಿ ಹಲ್ಲೆ ಮಾಡಿ ಹೊರಬಂದಿದ್ದ ಹುಚ್ಚ ವೆಂಕಟ್ ಅವರನ್ನ ಮತ್ತೆ ಮನೆಗೆ ಕಳುಹಿಸಿದ್ದು ಯಾಕೆ?

    ಕಳೆದ ಆವೃತ್ತಿಯಲ್ಲಿ ಹಲ್ಲೆ ಮಾಡಿ ಹೊರಬಂದಿದ್ದ ಹುಚ್ಚ ವೆಂಕಟ್ ಅವರನ್ನ ಮತ್ತೆ ಮನೆಗೆ ಕಳುಹಿಸಿದ್ದು ಯಾಕೆ?

    ''ಈ ಪ್ರಶ್ನೆಗೆ ನಾವು ಏನೂ ಉತ್ತರ ಕೊಡಬೇಕು ಅಂತ ಅಂದುಕೊಂಡಿದ್ದವೋ ಅದನ್ನ ಆ ವಾರದ ಕೊನೆಯಲ್ಲೇ ಸುದೀಪ್ ಅವರು ಕೊಟ್ಟಿದ್ದಾರೆ. ಅದಕ್ಕೆ ನಾನು ಬದ್ದನಾಗಿದ್ದೇನೆ. ಸ್ವತಃ ಹುಚ್ಚ ವೆಂಕಟ್ ಅವರೇ ಬಂದು ಏನಾಯ್ತು ಅಂತ ಹೇಳಿದ್ದಾರೆ, ಕ್ಷಮೆ ಕೇಳಿದ್ದಾರೆ. ಅದನ್ನ ಬಿಟ್ಟು ಬೇರೆನೂ ಇಲ್ಲ''

    'ನೋಟ್ ಬ್ಯಾನ್' ವ್ಯವಸ್ಥೆಯಿಂದ ಸ್ವರ್ಧಿಗಳಿಗೆ ಏನಾದರೂ ರಿಯಾಯಿತಿ ನೀಡಿದ್ರಾ?

    'ನೋಟ್ ಬ್ಯಾನ್' ವ್ಯವಸ್ಥೆಯಿಂದ ಸ್ವರ್ಧಿಗಳಿಗೆ ಏನಾದರೂ ರಿಯಾಯಿತಿ ನೀಡಿದ್ರಾ?

    ''ಈ ನಿರ್ಧಾರವನ್ನ ನಾವು ತೆಗೆದುಕೊಂಡಿದ್ದೀವಿ. ಮೊದಲ ಎರಡು ವಾರ ಹೇಳಬಾರದು ಅಂತಾನೆ ಇದ್ದೀವಿ. ಆದ್ರೆ, ದುಡ್ಡಿನ್ನ ಎಲ್ಲ ಮನೆಯಲ್ಲೇ ಇಟ್ಟಿರುವುದಿಲ್ಲ. ಬೇರೆ ಬೇರೆ ರೀತಿಯಲ್ಲಿ, ಬೇರೆ ಕಡೆ ಇಟ್ಟಿರಬಹುದು. ಅದು ಮನೆಯ ಎಲ್ಲರಿಗೂ ಗೊತ್ತಿರುವುದಿಲ್ಲ. ಅದನ್ನ ನಾವು ಹೇಳಿದ್ವಿ. ಆದ್ರೆ, ನೋಟ್ ಬ್ಯಾನ್ ಆಗಿ 15 ದಿನದ ನಂತರ ತುಂಬಾ ಅವಶ್ಯಕತೆಯಿದೆ ಅಂತ ಹೇಳಿದ್ವಿ. ಕ್ಯಾಮೆರಾಗೆ ಬಂದು ಹೇಳಿ ಅಂತ. ಆದ್ರೆ, ಯಾರೊಬ್ಬರು ಕೂಡ ಕ್ಯಾಮೆರಾಗೆ ಬಂದು ಹೇಳಿಲ್ಲ''. ಪರಮೇಶ್ವರ್ ಗುಂಡ್ಕಲ್ ಅವರ ಸಂದರ್ಶನದ ವಿಡಿಯೋ ನೋಡಲು [ಈ ಲಿಂಕ್ ಕ್ಲಿಕ್ ಮಾಡಿ]

    English summary
    'Bigg Boss Kannada 4' Director Parameshwar Gundkal Has Revealed the Secrete of 'Bigg Boss Kannada 4'. Here is an Interview with Parameshwar Gundkal. Take a look
    Saturday, January 14, 2017, 11:53
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X