»   » ಯಾರೀ 'ಶಿವ'ನ ಪಾತ್ರಧಾರಿ ವಿನಯ್ ಗೌಡ.? ಅವರ ಹಿನ್ನಲೆ ಏನು.?

ಯಾರೀ 'ಶಿವ'ನ ಪಾತ್ರಧಾರಿ ವಿನಯ್ ಗೌಡ.? ಅವರ ಹಿನ್ನಲೆ ಏನು.?

Posted By:
Subscribe to Filmibeat Kannada

ಶಿವನ ಚರಿತ್ರೆ ಸಾರುವ ಪೌರಾಣಿಕ ಧಾರಾವಾಹಿ 'ಹರ ಹರ ಮಹಾದೇವ' ಜುಲೈ 25 ರಿಂದ 'ಸ್ಟಾರ್ ಸುವರ್ಣ' ವಾಹಿನಿಯಲ್ಲಿ ಸೋಮವಾರ ದಿಂದ ಶುಕ್ರವಾರ ಸಂಜೆ 7.30ಕ್ಕೆ ಪ್ರಸಾರವಾಗಲಿದೆ.

ಬಾಲಿವುಡ್ ಮಟ್ಟದಲ್ಲಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ, ಅತ್ಯದ್ಭುತ ಗ್ರಾಫಿಕ್ಸ್ ಬಳಕೆ ಇರುವ ಕನ್ನಡದ 'ಹರ ಹರ ಮಹಾದೇವ' ಧಾರಾವಾಹಿಯಲ್ಲಿ 'ಶಿವ'ನ ಅವತಾರ ತಾಳಿರುವ ನಟ ವಿನಯ್ ಗೌಡ. ['ಹರ ಹರ ಮಹಾದೇವ' ಪಾತ್ರಧಾರಿಗಳ ಪರಿಚಯ]

ಕಟ್ಟುಮಸ್ತಾದ ದೇಹ, ಸಿಕ್ಸ್ ಪ್ಯಾಕ್ ಹೊಂದಿರುವ ವಿನಯ್ ಗೌಡ ಯಾರು.? ಅವರ ಹಿನ್ನಲೆ ಏನು.? ಅಂತ ತಿಳಿದುಕೊಳ್ಳುವ ಕುತೂಹಲ ಇದ್ರೆ, ವಿನಯ್ ಗೌಡ ಜೊತೆ ನಿಮ್ಮ 'ಫಿಲ್ಮಿಬೀಟ್ ಕನ್ನಡ' ನಡೆಸಿರುವ ಪುಟ್ಟ ಸಂದರ್ಶನ ಓದಿರಿ.....

* ನಮ್ಮ ಓದುಗರಿಗೆ ನಿಮ್ಮ ಪರಿಚಯ ಮಾಡಿಕೊಡಿ....

- ನಾನು ಬಣ್ಣದ ಬದುಕಿಗೆ ಕಾಲಿಟ್ಟಿದ್ದು ಐದು ವರ್ಷಗಳ ಹಿಂದೆ. 'ಚಿಟ್ಟೆ ಹಜ್ಜೆ' ಎಂಬ ಧಾರಾವಾಹಿಯಲ್ಲಿ ಸಣ್ಣ ಪಾತ್ರ ಮಾಡಿದ್ದೆ. ನಂತರ 'ಸಿ.ಐ.ಡಿ ಕರ್ನಾಟಕ' ಧಾರಾವಾಹಿಯಲ್ಲಿ ನಟಿಸಿದೆ. ಅದರಲ್ಲಿ ಸ್ವಲ್ಪ ಒಳ್ಳೆಯ ಹೆಸರು ಬಂತು. ಅದಾದ ಮೇಲೆ ಸುವರ್ಣ ವಾಹಿನಿಯವರೇ ನನಗೆ 'ಅಂಬಾರಿ' ಸೀರಿಯಲ್ ನಲ್ಲಿ ಅವಕಾಶ ಕೊಟ್ಟರು. 'ಸೂಪರ್ ಜೋಡಿ' ರಿಯಾಲಿಟಿ ಶೋನಲ್ಲಿ ನಾನು ನನ್ನ ಪತ್ನಿ ಭಾಗವಹಿಸಿ, ವಿನ್ನರ್ ಆದ್ವಿ. ಈಗ 'ಹರ ಹರ ಮಹಾದೇವ' ಸೀರಿಯಲ್ ನಲ್ಲಿ ಅಭಿನಯಿಸುತ್ತಿದ್ದೇನೆ. [ಜು.25ರಿಂದ ಸುವರ್ಣದಲ್ಲಿ ಮೊಳಗಲಿದೆ ಹರಹರ ಮಹಾದೇವ]

* 'ಹರ ಹರ ಮಹಾದೇವ' ಧಾರಾವಾಹಿಗೆ ನೀವು ಸೆಲೆಕ್ಟ್ ಆಗಿದ್ದು ಹೇಗೆ....

- 'ಹರ ಹರ ಮಹಾದೇವ' ಸೀರಿಯಲ್ ಆಡಿಷನ್ ಗೆ ಕರೆಯುವ ಮುನ್ನ ನಾನು 'ಅಮ್ಮ' ಸೀರಿಯಲ್ ನಲ್ಲಿ ವಿಲನ್ ಆಗಿ ಆಕ್ಟ್ ಮಾಡುತ್ತಿದ್ದೆ. ಅದಕ್ಕಾಗಿ ಗಡ್ಡ ಬಿಟ್ಟಿದ್ದೆ. ನಂತರ ಆಡಿಷನ್ ಗೆ ಕರೆದಾಗ ವರ್ಕೌಟ್ ಮಾಡಲು ಹೇಳಿದರು. ಅಲ್ಲಿಂದ ನಾನು ಸಿಕ್ಸ್ ಪ್ಯಾಕ್ ಮಾಡಲು ಆರಂಭಿಸಿದೆ. ಆಮೇಲೆ ನನ್ನ ಮೇಕ್ ಓವರ್ ನೋಡಿ 'ಹರ ಹರ ಮಹಾದೇವ' ಸೀರಿಯಲ್ ಗೆ ಸೆಲೆಕ್ಟ್ ಮಾಡಿದರು. [ಸುವರ್ಣದಲ್ಲಿ 60 ಕೋಟಿ ಬಜೆಟ್ ನ ಹೊಚ್ಚ ಹೊಸ ಧಾರಾವಾಹಿ]

* 'ಶಿವ' ಆಗಿರುವುದರ ಅನುಭವ....

- 'ಶಿವ' ಆಗುವುದು ಸುಲಭದ ಮಾತಲ್ಲ. ಯಾಕಂದ್ರೆ, 'ಶಿವ'ನ ಹಾಗೆ ನಡೆದುಕೊಳ್ಳುವುದು ತುಂಬಾ ಕಷ್ಟ. ಅದು ಒಳಗಿನಿಂದ ಬರಬೇಕು. ಅದಕ್ಕಾಗಿ ನಮ್ಮ ಟೀಮ್ ತುಂಬಾ ಸಪೋರ್ಟ್ ಮಾಡಿದರು.

* 'ಶಿವ' ಪಾತ್ರ ನಿರ್ವಹಿಸಲು ನಿಮ್ಮ ತಯಾರಿ....

- ನಾನು ಪ್ರತಿ ದಿನ ಧ್ಯಾನ ಮಾಡಲು ಶುರು ಮಾಡಿದೆ. ನಿಜ ಹೇಳ್ಬೇಕು ಅಂದ್ರೆ ನನಗೆ ನಾನ್-ವೆಜ್ ತುಂಬಾ ಇಷ್ಟ. 'ಶಿವ' ಪಾತ್ರ ಒಪ್ಪಿಕೊಂಡ ಮೇಲೆ ನಾನು ಮಾಂಸ ಸೇವಿಸುವುದನ್ನ ಬಿಟ್ಟು ಬಿಟ್ಟೆ. ಈಗ ನಾನ್-ವೆಜ್ ತಿನ್ಬೇಕು ಅಂತ ಅನಿಸುವುದೇ ಇಲ್ಲ. ಈಗ ನನ್ನ ಲುಕ್ ಥೇಟ್ 'ಶಿವ'ನ ತರಹ ಇದೆ ಎನ್ನುತ್ತಾರೆ. ಅದೇ ಖುಷಿ ನನಗೆ.

* ನೀವು ದೈವ ಭಕ್ತರಾ.?

- ನಾನು ಶಿವ ಭಕ್ತ. ಚಿಕ್ಕಂದಿನಿಂದಲೂ ನನಗೆ ಶಿವ ಅಂದ್ರೆ ಇಷ್ಟ. ಐದು ವರ್ಷಗಳ ಹಿಂದೆಯೇ ನಾನು ಶಿವನ ಟ್ಯಾಟೂ ಹಾಕಿಸಿಕೊಂಡಿದ್ದೆ. ಈಗ 'ಶಿವ'ನಾಗುವ ಅವಕಾಶ ಸಿಕ್ಕಿದೆ. ನಮ್ಮ ಮನೆ ದೇವರು ಕೂಡ ಶಿವ. ಹೀಗಾಗಿ ನಾನೇ ಪುಣ್ಯವಂತ.

* ಸುವರ್ಣ ವಾಹಿನಿಯ ಹೊಸ ರೂಪ ಜುಲೈ 25 ರಿಂದಲೇ...ಅದರ ಜೊತೆಗೆ ನಿಮ್ಮ ಸೀರಿಯಲ್ ಕೂಡ ಪ್ರಸಾರವಾಗುತ್ತಿದೆ. ನಿಮ್ಮ ಫೀಲಿಂಗ್....

- ನನಗೆ ತುಂಬಾ ಹೆಮ್ಮೆ ಎನಿಸುತ್ತದೆ. ನನಗೆ ಇದು ಕನಸು ನನಸಾದ ಘಳಿಗೆ. ಸುವರ್ಣ ಈಗ 'ಸ್ಟಾರ್ ಸುವರ್ಣ' ಆಗುತ್ತಿರುವುದು ದೊಡ್ಡ ವಿಷಯ. ಅದರ ಜೊತೆ 'ಹರ ಹರ ಮಹದೇವ' ಕೂಡ ಪ್ರಸಾರವಾಗುತ್ತಿರುವುದು ನನಗೆ ಹೆಮ್ಮೆ.

* ಆಲ್ ದಿ ಬೆಸ್ಟ್....

- ಥ್ಯಾಂಕ್ ಯು.

English summary
'Hara Hara Mahadeva' lead actor Vinay Gowda revealed that he quit Non-Veg to fit into the character of 'Shiva'. Here is an interview with Vinay Gowda. Have a look.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada