For Quick Alerts
  ALLOW NOTIFICATIONS  
  For Daily Alerts

  ಕನ್ನಡದ ರೂಪಿಕಾರಲ್ಲಿ ಕೀರ್ತಿ ಸುರೇಶ್‌ರನ್ನು ಕಂಡ ತೆಲುಗು ಮಂದಿ

  |

  'ನಾಯಕಿಯಾಗಿ ಹತ್ತು ವರ್ಷ, ಒಟ್ಟಾರೆ ನಟಿಯಾಗಿ 15 ವರ್ಷ ಆಯ್ತು. ಇಷ್ಟು ವರ್ಷದಲ್ಲಿ ಒಂದೇ ಮಟ್ಟದ ಗ್ರಾಫ್ ಉಳಿಸಿಕೊಂಡಿದ್ದೇನೆ. ಮುಖ್ಯವಾಗಿ ಹೆಸರು, ಗೌರವ ಉಳಿಸಿಕೊಂಡಿದ್ದೇನೆ. ಎಲ್ಲಾ ಕಲಾವಿದರಿಗೂ ಇದು ಸಾಧ್ಯವಾಗುವುದಿಲ್ಲವಲ್ಲ' ಎಂಬ ಖುಷಿ ಹಂಚಿಕೊಂಡರು ನಟಿ ರೂಪಿಕಾ.

  ಎಸ್. ನಾರಾಯಣ್ ನಿರ್ದೇಶನದ 'ಚೆಲುವಿನ ಚೆಲುಪಿಲಿ' ಚಿತ್ರದ ಮೂಲಕ ಬೆಳ್ಳಿತೆರೆಗೆ ನಾಯಕಿಯಾಗಿ ಪರಿಚಯಗೊಂಡ ರೂಪಿಕಾಗೆ ಹೆಸರು ತಂದುಕೊಟ್ಟಿದ್ದು 'ಕಾಲ್ಗೆಜ್ಜೆ' ಚಿತ್ರ. ಇತ್ತೀಚೆಗೆ ಅವರ 'ಥರ್ಡ್ ಕ್ಲಾಸ್' ಚಿತ್ರ ಬಿಡುಗಡೆಯಾಗಿತ್ತು. ಈ ಹತ್ತು ವರ್ಷದ ಸುದೀರ್ಘ ಪಯಣದಲ್ಲಿ ರೂಪಿಕಾ ಯಾವುದೇ ಸ್ಟಾರ್ ನಟರ ಜತೆಗೆ ನಟಿಸಿಲ್ಲ. ಹಾಗೆಂದು ಅವರು ಚಿತ್ರರಂಗದಿಂದಲೂ ಮರೆಯಾಗಿಲ್ಲ. ಸಿನಿಮಾಗಳಲ್ಲಿ ನಟಿಸುತ್ತಲೇ, ನೃತ್ಯಗಾತಿಯಾಗಿ ತಮ್ಮ ಹವ್ಯಾಸವನ್ನು ಮುಂದುವರಿಸುತ್ತಲೇ ಅಸ್ತಿತ್ವ ಪ್ರದರ್ಶನ ಮಾಡುತ್ತಿದ್ದಾರೆ.

  Interview: 'ಮಾಯಾ ಬಜಾರ್' ಮೋಡಿಗಾರನ ಸಂಗೀತಮಯ ಪಯಣInterview: 'ಮಾಯಾ ಬಜಾರ್' ಮೋಡಿಗಾರನ ಸಂಗೀತಮಯ ಪಯಣ

  ಸಿಕ್ಕ ಒಳ್ಳೆ ಪಾತ್ರಗಳಲ್ಲಿಯೇ ತೃಪ್ತಿ ಇದೆ ಎನ್ನುವ ಅವರು 'ಫಿಲ್ಮಿ ಬೀಟ್' ಜತೆ ಹಂಚಿಕೊಂಡ ಮಾತುಗಳು ಇಲ್ಲಿವೆ.

  ಉದ್ಯಮದ ಅನುಭವ ತೃಪ್ತಿಕರವಾಗಿದೆ

  ಉದ್ಯಮದ ಅನುಭವ ತೃಪ್ತಿಕರವಾಗಿದೆ

  ಉದ್ಯಮದಲ್ಲಿ ನನ್ನ ಬಗ್ಗೆ ಯಾರೂ ಕೆಟ್ಟ ಮಾತನ್ನಾಡುವುದಿಲ್ಲ. ನನ್ನ ಕುರಿತು ಯಾವುದೇ ನಕಾರಾತ್ಮಕ ಅಭಿಪ್ರಾಯಗಳಿಲ್ಲ. ಕೊಟ್ಟ ಪಾತ್ರವನ್ನು ನೀಟಾಗಿ ಮಾಡುತ್ತಾಳೆ ಎಂಬ ನಂಬಿಕೆ ಚಿತ್ರರಂಗಕ್ಕೆ ಇದೆ. ಸ್ಟಾರ್‌ಗಳ ಜತೆಗೆ ನಟಿಸಬೇಕು, ದೊಡ್ಡ ಹಿಟ್ ನೀಡಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಹಾಗೆಂದು ಅದು ಸಿಗದೆ ಇರುವುದಕ್ಕೆ ಬೇಸರವಿಲ್ಲ. ಅದು ನನಗೆ ಹಿನ್ನಡೆಯೂ ಆಗಿಲ್ಲ. ಖುಷಿ ಕೊಡುವ ಒಳ್ಳೆಯ ಪಾತ್ರಗಳನ್ನು ಮಾಡುತ್ತಿದ್ದೇನೆ.

  ಪ್ರಭಾವಿ ಹಿನ್ನೆಲೆಯಿಲ್ಲದೆ ಬಂದವಳು

  ಪ್ರಭಾವಿ ಹಿನ್ನೆಲೆಯಿಲ್ಲದೆ ಬಂದವಳು

  ಚಿತ್ರರಂಗಕ್ಕೆ ಬರುವ ಅನೇಕರಿಗೆ ಒಂದು ಹಿನ್ನೆಲೆ ಇರುತ್ತದೆ. ಸಿನಿಮಾ ಕುಟುಂಬ ಅಥವಾ ಪ್ರಭಾವಿ ವಲಯದಿಂದ ಬಂದವರು ಇರುತ್ತಾರೆ. ಆದರೆ ನನಗೆ ಅಂತಹ ಹಿನ್ನೆಲೆಯಿಲ್ಲ. ನಾನು ಕಲೆಯ ಮೂಲಕವೇ ಬಂದವಳು. ಕಠಿಣ ಪರಿಶ್ರಮದಿಂದ ಉದ್ಯಮಕ್ಕೆ ಬಂದ ಬಳಿಕವೇ ಎಲ್ಲವನ್ನೂ ಕಲಿತೆ. ನನ್ನ ಪ್ರತಿಭೆಯನ್ನು ರೂಪಿಸಿಕೊಂಡೆ. ಈ ಅವಧಿಯಲ್ಲಿ 'ಗೆಜ್ಜೆ' ಎಂಬ ನೃತ್ಯ ಸಂಸ್ಥೆ ಕಟ್ಟಿ ನೃತ್ಯ ಹೇಳಿಕೊಡುತ್ತಿದ್ದೇನೆ. ಅದರ ಜತೆಗೆ ಸಾಮಾಜಿಕ ಕಾರ್ಯಗಳಲ್ಲಿಯೂ ತೊಡಗಿಸಿಕೊಂಡಿದ್ದೇನೆ.

  ಮದುವೆಯಾದ ಮೇಲೆ ನಟಿಯರಿಗೆ ಪ್ರಾಮುಖ್ಯತೆ ಕಡಿಮೆ: ಹೇಮ ಬೇಸರದ ನುಡಿಮದುವೆಯಾದ ಮೇಲೆ ನಟಿಯರಿಗೆ ಪ್ರಾಮುಖ್ಯತೆ ಕಡಿಮೆ: ಹೇಮ ಬೇಸರದ ನುಡಿ

  ಕೀರ್ತಿ ಸುರೇಶ್‌ಗೆ ಹೋಲಿಕೆ

  ಕೀರ್ತಿ ಸುರೇಶ್‌ಗೆ ಹೋಲಿಕೆ

  ತೆಲುಗಿನಲ್ಲಿಯೂ ಅವಕಾಶಗಳು ಬಂದಿವೆ. ಢಮರುಗಂ ಗಣೇಶ್ ಅವರೊಂದಿಗೆ 'ಧಾಡಿ' ಹಾಗೂ '2+1' ಚಿತ್ರಗಳಲ್ಲಿ ನಟಿಸುತ್ತಿದ್ದೇನೆ. ಅಲ್ಲಿ ಕೂಡ ಒಳ್ಳೆಯ ಪಾತ್ರಗಳು ಸಿಕ್ಕಿವೆ. ಸ್ತ್ರೀ ಪ್ರಧಾನ ಚಿತ್ರಗಳಲ್ಲದೆ ಇದ್ದರೂ ನಾಯಕರಿಗೆ ಸಮಾನವಾದ ಪಾತ್ರಗಳು ಸಿಗಬೇಕು ಎನ್ನುವುದು ನನ್ನ ಆಸೆ. 'ಮಹಾನಟಿ'ಯಂತಹ ಚಿತ್ರದ ಪಾತ್ರ ಬೇಕು. ಮತ್ತೊಂದು ವಿಷಯ, ತೆಲುಗಿನಲ್ಲಿ ಅನೇಕರು ನನಗೆ ನಟಿ ಕೀರ್ತಿ ಸುರೇಶ್ ಅವರ ಸಂಬಂಧಿಯೇ ಎಂದು ಕೇಳಿದ್ದಾರೆ. ನನ್ನ ಮುಖ ಕೀರ್ತಿ ಸುರೇಶ್ ಅವರಿಗೆ ಹೋಲಿಕೆಯಾಗುತ್ತದೆ ಎಂದು ತೆಲುಗಿನ ಅನೇಕರು ಹೇಳಿದ್ದಾರೆ. ಅವರೊಂದಿಗೆ ನನ್ನ ಫೋಟೊ ಕ್ಲಬ್ ಮಾಡಿ ಹಂಚಿಕೊಂಡಿದ್ದಾರೆ. ಇದೆಲ್ಲ ಮುದ ನೀಡುವ ಸಂಗತಿ.

  ಸೌಂದರ್ಯ ರೋಲ್ ಮಾಡೆಲ್

  ಸೌಂದರ್ಯ ರೋಲ್ ಮಾಡೆಲ್

  ನನಗೆ ನಟಿ ಸೌಂದರ್ಯ ರೋಲ್ ಮಾಡೆಲ್. ಅವರ ಸರಳತೆ, ಅಭಿನಯ ಎರಡಕ್ಕೂ ಮಾರುಹೋಗಿದ್ದೆ. ಅವರು ಸೀರೆಯಲ್ಲಿಯೇ ಇರಲಿ ಅಥವಾ ಆಧುನಿಕ ಉಡುಪಿನಲ್ಲಿಯೇ ಕಾಣಿಸಿಕೊಳ್ಳಲಿ, ಕ್ಯಾಮೆರಾ ಎದುರು ಅವರು ಅಪ್ರೋಚ್ ಮಾಡುತ್ತಿದ್ದ ಬಗೆಯೇ ಅದ್ಭುತವಾಗಿತ್ತು. ಅವರಂತೆಯೇ ಇರಬೇಕು ಎನ್ನುವುದು ನನ್ನ ಬಯಕೆ.

  ಇನ್ನಷ್ಟು ಸಿನಿಮಾಗಳು ಸಿಗುತ್ತಿವೆ

  ಇನ್ನಷ್ಟು ಸಿನಿಮಾಗಳು ಸಿಗುತ್ತಿವೆ

  ಹತ್ತು ವರ್ಷದ ಈ ಪ್ರಯಾಣ ನನಗೆ ಕೇವಲ ಒಂದು ವರ್ಷದ್ದು ಎನಿಸುತ್ತಿದೆ. ಇನ್ನೂ ಅನೇಕ ಸಿನಿಮಾಗಳನ್ನು ಮಾಡಬೇಕು. ವಿಭಿನ್ನ ಬಗೆಯ ಪಾತ್ರಗಳನ್ನು ಮಾಡಬೇಕು ಎಂಬ ಆಸೆ ಇದೆ. ನಾಗತಿಹಳ್ಳಿ ಚಂದ್ರಶೇಖರ್ ಅವರ ಟೆಂಟ್ ಸಿನಿಮಾ ಬ್ಯಾನರ್‌ನಲ್ಲಿ 'ಡೈಮಂಡ್ ಕ್ರಾಸ್' ಹಾಗೂ 'ಟಿ ಜಂಕ್ಷನ್' ಎಂಬ ಸಿನಿಮಾ ಮಾಡುತ್ತಿದ್ದೇನೆ. 'ಥರ್ಡ್ ಕ್ಲಾಸ್' ಸಿನಿಮಾ ಮೂರನೇ ವಾರ ಪ್ರದರ್ಶನ ಕಂಡಿದೆ. ನನ್ನ ಎಲ್ಲ ಸಿನಿಮಾಗಲೂ ಬಿಡುಗಡೆಯಾಗಿವೆ ಎನ್ನುವ ಖುಷಿ ಇದೆ. ಈಗಿನ ಕಾಲದಲ್ಲಿ ಸಿನಿಮಾ ಬಿಡುಗಡೆಯಾದರೇನೇ ಅದು ಹಿಟ್ ಎನ್ನುವಂತಹ ಪರಿಸ್ಥಿತಿ ಬಂದಿದೆ.

  English summary
  Actress Roopika interview with Filmi Beat. After 10 years journey in Kannada industry Roopika happy for herself for maintaining her graph.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X