»   » ಕಿರುತೆರೆಯ 'ಗಾಂಧಾರಿ' ಕಾವ್ಯ ಗೌಡ ಈಗ ಲಾಯರ್ ಆದ್ರು

ಕಿರುತೆರೆಯ 'ಗಾಂಧಾರಿ' ಕಾವ್ಯ ಗೌಡ ಈಗ ಲಾಯರ್ ಆದ್ರು

Posted By:
Subscribe to Filmibeat Kannada

ಕಿರುತೆರೆಯ ಧಾರಾವಾಹಿಗಳಿಂದ ಸಿನಿಮಾರಂಗಕ್ಕೆ ಅನೇಕ ಕಲಾವಿದರು ಬಂದಿದ್ದಾರೆ. ಆ ಸಾಲಿಗೆ ಈಗ ನಟಿ ಕಾವ್ಯ ಗೌಡ ಕೂಡ ಸೇರಿಕೊಂಡಿದ್ದಾರೆ. ಕಾವ್ಯ 'ಬಕಾಸುರ' ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಪಡೆದಿದ್ದಾರೆ.

'ಕರ್ವ' ಸಿನಿಮಾದ ಗೆಲುವಿನ ನಂತರ ನಿರ್ದೇಶಕ ನವನೀತ್ ಮತ್ತು ಆರ್.ಜಿ.ರೋಹಿತ್ ಕಾಂಬಿನೇಶನ್ ನಲ್ಲಿ ಈ ಸಿನಿಮಾ ಬರುತ್ತಿದೆ. ಕಾವ್ಯ ಶೆಟ್ಟಿ ಈ ಸಿನಿಮಾದ ನಾಯಕಿ ಆಗಿದ್ದು ಲಾಯರ್ ಪಾತ್ರವನ್ನು ಮಾಡುತ್ತಿದ್ದಾರೆ. ಮೊದಲ ಸಿನಿಮಾದಲ್ಲಿಯೇ ರವಿಚಂದ್ರನ್ ರಂತಹ ದೊಡ್ಡ ನಟರ ಜೊತೆಗೆ ಕಾವ್ಯ ಗೌಡ ನಟಿಸಿದ್ದಾರೆ. ಅಂದಹಾಗೆ, ತಮ್ಮ ಮೊದಲ ಸಿನಿಮಾ 'ಬಕಾಸುರ' ಬಗ್ಗೆ ಕಾವ್ಯಗೌಡ ನಿಮ್ಮ ಫಿಲ್ಮಿಬೀಟ್ ಕನ್ನಡದ ಜೊತೆಗೆ ಮಾತನಾಡಿದ್ದಾರೆ. ಮುಂದೆ ಓದಿ..

ಸಂದರ್ಶನ : ನವೀನ.ಎಂ.ಎಸ್ (ನವಿಕನಸು)

ಸಿನಿಮಾ ಮತ್ತು ಸೀರಿಯಲ್ ವ್ಯತ್ಯಾಸ ಅನಿಸಿಲ್ಲ

''ಸೀರಿಯಲ್ ಮತ್ತು ಸಿನಿಮಾ ಅಷ್ಟು ವ್ಯತ್ಯಾಸ ಅಂತ ನನಗೆ ಅನಿಸುವುದಿಲ್ಲ. ಸೀರಿಯಲ್ ಮಾಡುವಾಗ ಪ್ರತಿ ದಿನ ಟಿವಿಯಲ್ಲಿ ಕಾಣಿಸಿಕೊಳ್ಳುತ್ತಿದೆ. ಆದರೆ ಸಿನಿಮಾ ರಿಲೀಸ್ ಆದಾಗ ಮಾತ್ರ ಕಾಣಿಸಿಕೊಳ್ಳುತ್ತೇನೆ. ಅಷ್ಟೆ.''

ಲಾಯರ್ ಆಗಿ ನಾನು ಕಾಣಿಸಿಕೊಂಡಿದ್ದೇನೆ

''ಈ ಸಿನಿಮಾದಲ್ಲಿ ನನ್ನ ಪಾತ್ರ ತುಂಬ ಚೆನ್ನಾಗಿದೆ. ಲಾಯರ್ ಆಗಿ ನಾನು ಕಾಣಿಸಿಕೊಂಡಿದ್ದೇನೆ. ಸಿನಿಮಾದಲ್ಲಿ ರವಿಚಂದ್ರನ್ ಸರ್, ಶಶಿಕುಮಾರ್ ಸರ್, ಸಿತಾರ ಮೇಡಂ ಕೂಡ ಇದ್ದಾರೆ. ನನ್ನ ಮೊದಲ ಸಿನಿಮಾದಲ್ಲಿಯೇ ಇವರ ಜೊತೆಗೆ ಕೆಲಸ ಮಾಡಿದ್ದು ತುಂಬ ಖುಷಿ ಆಯ್ತು''

ಕಿರುತೆರೆಯ ರಾಧಿಕಾ ಪಂಡಿತ್

''ತುಂಬ ಜನ ನನ್ನನ್ನು ಕಿರುತೆರೆಯ ರಾಧಿಕಾ ಪಂಡಿತ್ ಅಂತ ಕರೆಯುತ್ತಾರೆ. ಆದರೆ ಯಾಕೆ ಅಂತ ಗೊತ್ತಿಲ್ಲ. ಅವರು ತುಂಬ ಚೆನ್ನಾಗಿ ಇದ್ದಾರೆ, ಅವರು ಸ್ಯಾಂಡಲ್ ವುಡ್ ನಂಬರ್ ಒನ್ ನಟಿ. ಸೋ, ಅವರ ಹೆಸರನ್ನು ನನಗೆ ಕರೆಯುವುದು ಖುಷಿ ಆಗುತ್ತದೆ.''

ಇದೇ ರೀತಿಯ ಪಾತ್ರ ಅಂತ ಏನು ಇಲ್ಲ

''ಇದೇ ರೀತಿಯ ಪಾತ್ರ, ಅದೇ ರೀತಿಯ ಪಾತ್ರ ಇಲ್ಲ. ನಟನೆಗೆ ಮಹತ್ವ ಇರುವ ಪಾತ್ರಗಳನ್ನು ನೋಡಿ ಆಯ್ಕೆ ಮಾಡುತ್ತೇನೆ.''

ಭಯ ಇದೆ

''ಇದೇ ತಿಂಗಳು 30 ಸಿನಿಮಾ ರಿಲೀಸ್ ಆಗುತ್ತಿದೆ. ನನಗೆ ಜನ ಹೇಗೆ ತೆಗೆದುಕೊಳ್ಳುತ್ತಾರೆ ಎನ್ನುವ ಭಯ ಇದೆ. ಟ್ರೇಲರ್ ನಲ್ಲಿ ಎಲ್ಲರೂ ತುಂಬ ಚೆನ್ನಾಗಿ ಕಾಣುತ್ತಿದ್ದೇನೆ ಎಂದು ಹೇಳುತ್ತಿದ್ದಾರೆ. ಎಲ್ಲ ಪಾಸಿಟಿವ್ ಆಗಿ ಇದೆ.''

English summary
Kannada actress Kavya Gowda interview. Kavya Gowda spoke about Bakasura kannada movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada