For Quick Alerts
  ALLOW NOTIFICATIONS  
  For Daily Alerts

  ಸಿನಿಮಾಗಾಗಿ ಕೆಲಸ ಬಿಟ್ಟಿದ್ದ ಈ ಹುಡುಗಿಯ ಕೈ ತುಂಬ ಈಗ ಆಫರ್ ಗಳಿವೆ

  By Naveen
  |

  'ಸಿನಿಮಾ...' ಮೂರು ಅಕ್ಷರದ ಈ ಪದದಲ್ಲಿ ಅದೇನೋ ಆಕರ್ಷಣೆ ಅಡಗಿದೆ. ಎಲ್ಲರನ್ನು ತನ್ನ ಬಳಿ ಸೆಳೆದು ಬಿಡುವ ಅಗಾದ ಶಕ್ತಿ ಹೊಂದಿದೆ. ಅದೇ ಕಾರಣಕ್ಕೆಯೇ ಏನೋ ಸಿನಿಮಾ ಪ್ರೀತಿ ಹೊಂದಿದವರು ಅದಕ್ಕಾಗಿ ಏನು ತ್ಯಾಗ ಬೇಕಾದರು ಮಾಡುತ್ತಾರೆ.

  ಅದೇ ರೀತಿ ಇಲ್ಲೊಬ್ಬ ಹುಡುಗಿ ಸಿನಿಮಾಗಾಗಿ ಮಾಡುತ್ತಿದ್ದ ಕೆಲಸ ಬಿಟ್ಟಿದ್ದರು. ಅವರೇ ಪಲ್ಲವಿ ರಾಜು. ನಾಟಕಗಳ ಮೂಲಕ ಚಿತ್ರರಂಗಕ್ಕೆ ಬಂದ ಪಲ್ಲವಿ ಈಗ ಕೈ ತುಂಬ ಆಫರ್ ಗಳನ್ನು ಹೊಂದಿದ್ದಾರೆ. ಅವರೇ ಹೇಳುವಂತೆ ಒಂದರ ನಂತರ ಒಂದರಂತೆ ಅವಕಾಶಗಳು ಅವರನ್ನು ಹುಡುಕಿಕೊಂಡು ಬರುತ್ತಿದೆ.

  ಹೊಸ ಹೊಸ ರೀತಿಯ ಪಾತ್ರಗಳತ್ತ ಕನ್ನಡ ನಟಿಯರ ಪ್ರಯಾಣ ಹೊಸ ಹೊಸ ರೀತಿಯ ಪಾತ್ರಗಳತ್ತ ಕನ್ನಡ ನಟಿಯರ ಪ್ರಯಾಣ

  ಅಂದಹಾಗೆ, ತಮ್ಮ ಸಿನಿ ಜರ್ನಿಯ ಕುರಿತು ಈಗ ಪಲ್ಲವಿ ರಾಜು 'ಫಿಲ್ಮಿಬೀಟ್ ಕನ್ನಡ' ಸಂದರ್ಶನದಲ್ಲಿ ಮಾತನಾಡಿದ್ದಾರೆ. ತಮ್ಮ ಹಿನ್ನಲೆ, ಮುಂದಿನ ಚಿತ್ರಗಳು, ಮೊದಲ ಅವಕಾಶ, ಕನಸಿನ ಪಾತ್ರ ಹೀಗೆ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅವರ ಸಂದರ್ಶನದ ಆಯ್ದ ಭಾಗ ಮುಂದಿದೆ ಓದಿ..

  ಸಂದರ್ಶನ : ನವಿ ಕನಸು (ನವೀನ್.ಎಂ.ಎಸ್)

  ಹೇಗಿದೆ ಕನ್ನಡ ಚಿತ್ರರಂಗ ?

  ಹೇಗಿದೆ ಕನ್ನಡ ಚಿತ್ರರಂಗ ?

  ''ಚಿತ್ರರಂಗ ತುಂಬ ಚೆನ್ನಾಗಿದೆ. ಇಲ್ಲಿ ಒಳ್ಳೆಯ ಕಥೆಯನ್ನು ಆಯ್ಕೆ ಮಾಡಿಕೊಂಡರೆ ಮಾತ್ರ ಹೆಚ್ಚು ದಿನ ಉಳಿಯಬಹುದು. ಅವಕಾಶ ಬರುತ್ತಿದೆ ಎಂಬ ಕಾರಣಕ್ಕೆ ಎಲ್ಲ ಚಿತ್ರಗಳನ್ನು ಒಪ್ಪಿಕೊಂಡರೆ ಪ್ರಯೋಜನ ಇಲ್ಲ. ತಾಳ್ಮೆಯಿಂದ ಒಳ್ಳೆಯ ಕಥೆ ಹಾಗೂ ಒಳ್ಳೆಯ ತಂಡದ ಜೊತೆಗೆ ಸಿನಿಮಾ ಮಾಡಿದರೆ ಸ್ವಲ್ಪ ತಡ ಆದರೂ ಒಳ್ಳೆಯ ಪಲಿತಾಂಶ ಸಿಗುತ್ತದೆ.''

  ಸದ್ಯ ಯಾವ ಯಾವ ಸಿನಿಮಾಗಳು ನಿಮ್ಮ ಕೈ ನಲ್ಲಿ ಇವೆ?

  ಸದ್ಯ ಯಾವ ಯಾವ ಸಿನಿಮಾಗಳು ನಿಮ್ಮ ಕೈ ನಲ್ಲಿ ಇವೆ?

  ''ಸದ್ಯ 'ಉತ್ತಮರು' ಎಂಬ ಒಂದು ಸಿನಿಮಾ ಮಾಡುತ್ತಿದ್ದೇನೆ. ಈ ಚಿತ್ರದಲ್ಲಿ ನಾನು ರತ್ನ ಮಂಜರಿ ಎಂಬ ಪಾತ್ರ ಮಾಡಿದ್ದೇನೆ. ಇದು ಎನ್ ಆರ್ ಐ ಕನ್ನಡಿಗರು ಸೇರಿ ಮಾಡುತ್ತಿರುವ ಸಿನಿಮಾ. ಇದರ ಬಳಿಕ ನಟ ಅಜಯ್ ರಾಜ್ ಅವರ ಜೊತೆಗೆ ಒಂದು ಚಿತ್ರ ಓಕೆ ಆಗಿದ್ದು, ಅದು ಕ್ರಿಯೇಟಿವ್ ಕನೆಕ್ಟರ್ ಬ್ಯಾನರ್ ನಲ್ಲಿ ಬರಲಿದೆ. 'ನಿಕ್ಸನ್' ಎಂಬ ಹೊಸ ಚಿತ್ರ ಈ ಸೋಮವಾರ ದಿಂದ ಶುರು ಆಗುತ್ತಿದೆ. ಇದು ಕನ್ನಡ ಹಾಗೂ ತಮಿಳು ಎರಡು ಭಾಷೆಯಲ್ಲಿ ನಿರ್ಮಾಣ ಆಗುತ್ತಿದೆ.''

  ಪರದೆ ಮೇಲೆ ಸ್ಟಾರ್ ನಟರ ಹೆಸರು ಮೊದಲ ಬಾರಿಗೆ ಮೂಡಿದ್ದು ಹೀಗೆ ನೋಡಿ! ಪರದೆ ಮೇಲೆ ಸ್ಟಾರ್ ನಟರ ಹೆಸರು ಮೊದಲ ಬಾರಿಗೆ ಮೂಡಿದ್ದು ಹೀಗೆ ನೋಡಿ!

  ಇಲ್ಲಿವರೆಗೆ ಎಷ್ಟು ಸಿನಿಮಾಗಳು ನಿಮ್ಮ ಖಾತೆಯಲ್ಲಿ ಇವೆ?

  ಇಲ್ಲಿವರೆಗೆ ಎಷ್ಟು ಸಿನಿಮಾಗಳು ನಿಮ್ಮ ಖಾತೆಯಲ್ಲಿ ಇವೆ?

  'ಕ', 'ಮಂತ್ರ', 'ಗುಳ್ಟು' (ಸೆಕೆಂಡ್ ಹೀರೋಯಿನ್), 'ರವಿ ಹಿಸ್ಟರಿ' 'ಸಾಲಿಗ್ರಾಮ' ಹೀಗೆ ಚಿತ್ರಗಳನ್ನು ಮಾಡಿದ್ದೇನೆ. 'ನಿಕ್ಸನ್' ನನ್ನ ಹತ್ತನೇ ಸಿನಿಮಾ ಆಗಬಹುದು. ನನ್ನ ಪ್ರಕಾರ ಇಂದಿನ ಟ್ರೆಂಡ್ ಗೆ ಏನು ಬೇಕು. ಜನ ಯಾವ ರೀತಿಯ ಸಿನಿಮಾ ನೋಡಲು ಇಷ್ಟ ಪಡುತ್ತಿದ್ದಾರೆ ಅದಕ್ಕೆ ತಕ್ಕಂತೆ ಕಥೆ ನಾವು ಆಯ್ಕೆ ಮಾಡಿಕೊಳ್ಳಬೇಕು. ನಮಗೆ ಇಷ್ಟ ಎನ್ನುವ ಕಾರಣಕ್ಕೆ ಚಿತ್ರ ಮಾಡುವುದಕ್ಕಿಂತ ಜನಕ್ಕೆ ಇಷ್ಟ ಆಗುವ ರೀತಿಯ ಚಿತ್ರವನ್ನು ಸೆಲೆಕ್ಟ್ ಮಾಡಬೇಕು.''

  ಮೊದಲ ಅವಕಾಶ ಸಿಕ್ಕಿದ್ದು ಹೇಗೆ ?

  ಮೊದಲ ಅವಕಾಶ ಸಿಕ್ಕಿದ್ದು ಹೇಗೆ ?

  ''ನಾನು ಒಂದು ಥಿಯೇಟರ್ ಗ್ರೂಪ್ ನಲ್ಲಿ ಇದೆ. ಅಲ್ಲಿ ಅನೇಕ ನಾಟಕಗಳನ್ನು ಮಾಡುತ್ತಿದೆ. ವಿಶಾಲ್ ಎಂಬ ನನ್ನ ಸೀನಿಯರ್ ಒಬ್ಬರು 'ಕ' ಸಿನಿಮಾಗೆ ರೆಫರ್ ಮಾಡಿದರು. ಅಲ್ಲಿಂದ ಒಂದರ ನಂತರ ಒಂದು ಸಿನಿಮಾಗಳು ಸಿಗುತ್ತಾ ಹೋಯ್ತು. ಒಂದು ಸಿನಿಮಾ ನೋಡಿ ಇನ್ನೊಂದು ಸಿನಿಮಾಗೆ ಅವಕಾಶ ನೀಡಿದರು.''

  ಹೀರೋಯಿನ್ ಆಗಬೇಕು ಅಂತ ಅನಿಸಿದ್ದು ಯಾವಾಗ ?

  ಹೀರೋಯಿನ್ ಆಗಬೇಕು ಅಂತ ಅನಿಸಿದ್ದು ಯಾವಾಗ ?

  ''ಕನ್ನಡದಲ್ಲಿ ಹಳೆಯ ನಟಿಯರು ನನಗೆ ತುಂಬ ಇಷ್ಟ. ಆರತಿ, ಕಲ್ಪನಾ, ಲಕ್ಷ್ಮಿ, ಮಂಜುಳಾ ಹೀಗೆ ಎಲ್ಲ ಈ ನಟಿಯರ ಸಿನಿಮಾಗಳು ತುಂಬ ಇಷ್ಟ. ಪುಟ್ಟಣ್ಣ ಕಣಗಾಲ್, ಶಂಕರ್ ನಾಗ್ ಅವರ ಸಿನಿಮಾಗಳನ್ನು ನೋಡುತ್ತ ಬೆಳೆದವು ನಾನು. ನಮ್ಮ ಅಪ್ಪನಿಗೆ ಕೂಡ ಸಿನಿಮಾ ಅಂದರೆ ಇಷ್ಟ ಇತ್ತು. ಚಿಕ್ಕ ವಯಸ್ಸಿನಲ್ಲಿ ನಾನು ಸಿನಿಮಾಗಳೆ ನಾನು ನಟಿಯಾಗಲು ಪ್ರಭಾವ ಬೀರಿದವು ಅನಿಸುತ್ತದೆ. 'ರಂಗ ನಾಯಕಿ' ರೀತಿ ಸಿನಿಮಾ ಮಾಡಬೇಕು ಎಂಬ ಆಸೆ ನನಗೆ ಇದೆ.''

  ನೀವು ಯಾವಗ ಚಿತ್ರರಂಗಕ್ಕೆ ಬಂದಿದ್ದು, ಅದಕ್ಕೂ ಮುಂಚೆ ?

  ನೀವು ಯಾವಗ ಚಿತ್ರರಂಗಕ್ಕೆ ಬಂದಿದ್ದು, ಅದಕ್ಕೂ ಮುಂಚೆ ?

  ''ನಾನು ಬಿಕಾಂ ಓದಿ ಬಳಿಕ ಒಂದು ಫ್ರೆಂಚ್ ಬ್ಯಾಂಕ್ ನಲ್ಲಿ ಮೂರು ವರ್ಷ ಕೆಲಸ ಮಾಡಿದೆ. ಕೆಲಸ ಮಾಡುತ್ತಲೇ ನಾಟಕಗಳನ್ನು ಮಾಡುತ್ತಿದೆ. ನನ್ನ ಮೊದಲ ಸಿನಿಮಾ 'ಕ' ಚಿತ್ರವನ್ನು ಕೂಡ ಕೆಲಸ ಮಾಡುತ್ತಲೇ ಮುಗಿಸಿದೆ. 2015 ರಲ್ಲಿ ಕೆಲಸ ಬಿಟ್ಟು ಸಿನಿಮಾದಲ್ಲಿಯೇ ಪೂರ್ಣ ತೊಡಗಿಸಿಕೊಂಡೆ.''

  ಸದ್ಯ ಯಾವ ಸಿನಿಮಾದ ತಯಾರಿಯಲ್ಲಿ ಇದ್ದೀರಾ ?

  ಸದ್ಯ ಯಾವ ಸಿನಿಮಾದ ತಯಾರಿಯಲ್ಲಿ ಇದ್ದೀರಾ ?

  ''ಸಪ್ಟೆಂಬರ್ ನಲ್ಲಿ ನನ್ನ ಹೊಸ ಸಿನಿಮಾ ಶೂಟಿಂಗ್ ಶುರು ಆಗುತ್ತದೆ. ಆ ಸಿನಿಮಾ ಡ್ರಗ್ ಮಾಫಿಯಾ ಬಗ್ಗೆ ಇದೆ. ಆ ಚಿತ್ರಕ್ಕಾಗಿ ನಾನು ಆರೇಳು ಕೆಜಿ ಕಡಿಮೆ ಆಗಬೇಕು. 18 ವರ್ಷದ ಹುಡುಗಿಯ ರೀತಿ ಕಾಣಬೇಕು. ಅದು ಒಂದು ಡ್ಯಾನ್ಸರ್ ಪಾತ್ರ ಆಗಿದೆ. ಅದಕ್ಕೆ ಸದ್ಯ ಡ್ಯಾನ್ಸ್ ಕಲಿಯುತ್ತಿದ್ದೇನೆ.''

  English summary
  Kannada actress Pallavi Raju spoke about her upcoming projects in an interview with Filmibeat Kannada.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X