»   » ಕನ್ನಡದ 'ಇ1' ನಾಯಕಿಗೆ ಸಿಕ್ಕಿದೆ ತೆಲುಗು, ತಮಿಳು ಚಿತ್ರಗಳ ಆಫರ್.!

ಕನ್ನಡದ 'ಇ1' ನಾಯಕಿಗೆ ಸಿಕ್ಕಿದೆ ತೆಲುಗು, ತಮಿಳು ಚಿತ್ರಗಳ ಆಫರ್.!

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ಚಿತ್ರರಂಗದ ಯುವ ನಟಿ ಸಂಹಿತಾ ಶಾ ಅಭಿನಯದ 'ಇ1' ಚಿತ್ರ ನಾಳೆ (ಆಗಸ್ಟ್ 11) ಬಿಡುಗಡೆಯಾಗಲಿದೆ. ಈ ಹಿಂದೆ 'ಮತ್ತೆ ಶ್' ಹಾಗೂ 'ಪಟ್ಟಾಭಿಷೇಕ' ಎಂಬ ಸಿನಿಮಾಗಳಲ್ಲಿ ಅಭಿನಯಿಸಿದ್ದ ಈ ಬೆಡಗಿಗೆ ಈಗ ಕೈ ತುಂಬ ಅವಕಾಶಗಳಿವೆ.

ಕನ್ನಡದಲ್ಲಿ ಮಾತ್ರವಲ್ಲದೆ ತುಳು, ತಮಿಳು, ಹಾಗೂ ತೆಲುಗಿನಲ್ಲಿಯೂ ಸಂಹಿತಾ ಸಿನಿಮಾ ಮಾಡುತ್ತಿದ್ದಾರೆ. ಸದ್ಯ ಇವರ 'ಇ1' ಸಿನಿಮಾ ವಿಭಿನ್ನ ಟೈಟಲ್ ಮೂಲಕ ಎಲ್ಲರ ಗಮನ ಸೆಳೆದಿದೆ. 'ಇ1' ಸಿನಿಮಾದ ಬಿಡುಗಡೆಯ ಹಿನ್ನಲೆಯಲ್ಲಿ ನಟಿ ಸಂ‍ಹಿತಾ ಶಾ ಅವರ ಸಂದರ್ಶನದ ಆಯ್ದ ಭಾಗ ಇಲ್ಲಿದೆ ಓದಿ...

ಸಂದರ್ಶನ : ನವೀನ.ಎಂ.ಎಸ್

ನಮ್ಮ ಓದುಗರಿಗೆ ನಿಮ್ಮ ಪರಿಚಯ...

''ನನ್ನ ಹೆಸರು ಸಂಹಿತಾ ಶಾ. ನಾನು ಹುಟ್ಟಿದ್ದು ಬೆಳೆದದ್ದು ಬೆಂಗಳೂರಿನಲ್ಲಿಯೇ. ಈ ಹಿಂದೆ 'ಮತ್ತೆ ಶ್' ಹಾಗೂ 'ಪಟ್ಟಾಭಿಷೇಕ' ಎಂಬ ಸಿನಿಮಾ ಮಾಡಿದ್ದೆ. ಈಗ 'ಇ1' ಸಿನಿಮಾದ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದೇನೆ''

'ಇ1' ಸಿನಿಮಾದಲ್ಲಿ ನಿಮ್ಮ ಪಾತ್ರದ ಬಗ್ಗೆ ಹೇಳಿ...

''ಚಿತ್ರದಲ್ಲಿ ಪ್ರೀತಿ ಎನ್ನುವ ಒಬ್ಬ ಹುಡುಗಿಯ ಪಾತ್ರ ಮಾಡಿದ್ದೇನೆ. ನನ್ನ ಪಾತ್ರ ತುಂಬ ವಿಭಿನ್ನವಾಗಿದೆ. ಹೆಲ್ಪಿಂಗ್ ನೇಚರ್ ಇರುವ ಒಬ್ಬ ಸಿಂಪಲ್ ಹುಡುಗಿಯ ಪಾತ್ರ ನನ್ನದು''

'ಇ1' ಸಿನಿಮಾದ ಟೈಟಲ್ ತುಂಬ ವಿಭಿನ್ನವಾಗಿದೆ. ಚಿತ್ರದಲ್ಲಿ ನಿರ್ದೇಶಕರು ಏನು ಹೇಳಲು ಹೊರಟಿದ್ದಾರೆ.?

''ಇ1' ಸಿನಿಮಾ ಒಬ್ಬ ಸಾಮಾನ್ಯ ಮನುಷ್ಯನ ಕಥೆ. ಚಿತ್ರದಲ್ಲಿ ಎಲ್ಲರೂ ದುಡ್ಡು ಇದ್ದರೆ ಮಾತ್ರ ಪ್ರೀತಿ ಎಂದುಕೊಂಡಿರುತ್ತಾರೆ. ಆದರೆ ದುಡ್ಡಿನಿಂದ ಪ್ರೀತಿ ಆಗುತ್ತದೆ ಎನ್ನುವುದೆಲ್ಲ ಸುಳ್ಳು. ತಾಳ್ಮೆಯಿಂದ ಇದ್ದರೇ ನಿಜವಾದ ಪ್ರೀತಿ ಸಿಕ್ಕೇ ಸಿಗುತ್ತದೆ ಅಂತ ನನ್ನ ಪಾತ್ರದ ಮೂಲಕ ನಿರ್ದೇಶಕರು ಹೇಳಿದ್ದಾರೆ''

ಸಿನಿಮಾದ ಚಿತ್ರೀಕರಣದ ಅನುಭವ ಹೇಗಿತ್ತು..?

''ತುಂಬ ಚೆನ್ನಾಗಿತ್ತು. ಯಾಕಂದ್ರೆ ನಿರ್ದೇಶಕರು ತುಂಬ ಕ್ರಿಯೇಟಿವ್ ಆಗಿರುವುದರಿಂದ ಅವರ ಜೊತೆ ಕೆಲಸ ಮಾಡಿದ್ದು ಖುಷಿ ನೀಡಿತು''

'ಇ1' ಜೊತೆಗೆ ಬೇರೆ ಯಾವುದಾದರು ಸಿನಿಮಾ ಮಾಡುತ್ತಿದ್ದೀರಾ.?

''ಹೌದು.. ನನ್ನ ನಟನೆಯ ಒಂದು ತುಳು ಚಿತ್ರದ ಶೂಟಿಂಗ್ ಆಗಿದೆ. 'ಡಿಸೆಂಬರ್ 16' ಎಂಬ ಸಿನಿಮಾ ಈ ವರ್ಷದ ಕೊನೆಗೆ ರಿಲೀಸ್ ಆಗುತ್ತದೆ. ಜೊತೆಗೆ ತೆಲುಗಿನಲ್ಲಿ 'ನಕ್ಷತ್ರ', ತಮಿಳು ಮತ್ತು ಕನ್ನಡದಲ್ಲಿ ಒಂದು ಸಿನಿಮಾ ಮಾಡುತ್ತಿದ್ದೇನೆ''

ಪ್ರೇಕ್ಷಕರಿಗೆ ಕೊನೆಯದಾಗಿ ಏನು ಹೇಳುತ್ತೀರಾ.?

''ಎಲ್ಲರೂ ಸಿನಿಮಾವನ್ನು ನೋಡಿ. ಇದರಲ್ಲಿ ಹೊಸ ವಿಷಯ ಇದೆ. ಹೊಸ ತಂಡ ಸೇರಿ ಮಾಡಿರುವ ಪ್ರಯತ್ನ ಇದು. ಸಿನಿಮಾ ಸಖತ್ ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಆಗಿ ಚೆನ್ನಾಗಿದೆ. ನೀವು ಬಂದು ಚಿತ್ರಮಂದಿರದಲ್ಲಿ ಸಿನಿಮಾ ನೋಡಿದರೆ ನಿಮಗೆ ಗೊತ್ತಾಗುತ್ತದೆ.

English summary
Interview with 'E1' kannada movie actress Samhita Shah

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada