twitter
    For Quick Alerts
    ALLOW NOTIFICATIONS  
    For Daily Alerts

    9 ವರ್ಷ ಕಾಶೀನಾಥ್ ಪುತ್ರ ಅಭಿಮನ್ಯು ಸಿನಿಮಾರಂಗದಿಂದ ದೂರ ಉಳಿದಿದ್ದೇಕೆ?

    |

    ಎರಡು ವರ್ಷದ ಹಿಂದೆ ಖ್ಯಾತ ನಿರ್ದೇಶಕ ಕಾಶೀನಾಥ್ ಪುತ್ರ ಅಭಿಮನ್ಯು ನಟಿಸುತ್ತಿದ್ದ ಸಿನಿಮಾ 'ಎಲ್ಲಿಗೆ ಪಯಣ ಯಾವುದೋ ದಾರಿ' ಶೂಟಿಂಗ್ ಶುರುವಾಗಿತ್ತು. ಆ ಸಿನಿಮಾದ ಚಿತ್ರೀಕರಣ ಮುಗಿಸಿದೆ. ಕಿರಣ್ ಸೂರ್ಯ ನಿರ್ದೇಶಿಸಿದ ಈ ಸಿನಿಮಾ ಥ್ರಿಲ್ಲರ್ ಕಥಾಹಂದರ ಹೊಂದಿರುವ ಸಿನಿಮಾ. 108 ದಿನ ಶೂಟಿಂಗ್ ಮಾಡಿರುವ ಈ ಸಿನಿಮಾ ಮೂಲಕ ಕಾಶೀನಾಥ್ ಪುತ್ರ ಅಭಿಮನ್ಯು ಮತ್ತೆ ವಾಪಸ್ ಆಗುತ್ತಿದ್ದಾರೆ.

    ಕಾಶೀನಾಥ್ ಪುತ್ರ ಅಭಿಮನ್ಯು ಹೊಸ ಸಿನಿಮಾದ ಪೋಸ್ಟರ್ ಅನ್ನು 2019ರಲ್ಲಿ ಉಪೇಂದ್ರ ಲಾಂಚ್ ಮಾಡಿದ್ದರು. ಅಭಿಮನ್ಯು ಇನ್ನೊಂದು ಲುಕ್ ಅನ್ನು ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ರಿವೀಲ್ ಮಾಡುವವರಿದ್ದರು. ಇನ್ನು ಸಿನಿಮಾ ಒಂದು ಹಾಡನ್ನು ಕಿಚ್ಚ ಸುದೀಪ ಹಾಡಿದ್ದಾರೆ. ಆ ಹಾಡು ಸದ್ಯದಲ್ಲೇ ಬಿಡುಗಡೆಯಾಗಲಿದೆ. ಹೀಗೆ ದಿಗ್ಗಜರು ಕಾಶೀನಾಥ್ ಪುತ್ರ ಅಭಿಮನ್ಯು ಬೆಂಬಲಕ್ಕೆ ನಿಂತಿದ್ದಾರೆ. ಬರೋಬ್ಬರಿ 9 ವರ್ಷಗಳ ಬಳಿಕ ಮತ್ತೆ ಚಿತ್ರರಂಗಕ್ಕೆ ಕಾಲಿಟ್ಟಿರುವ ಅಭಿಮನ್ಯು ಸಿನಿಮಾ ಹಾದಿ ಕೂಡ ಎಲ್ಲಿಗೆ ಪಯಣ ಯಾವುದೋ ದಾರಿ ಎನ್ನುವಂತಲೇ ಇದೆ. ತಮ್ಮ ಕಮ್ ಬ್ಯಾಕ್ ಬಗ್ಗೆ ಸ್ವತ: ಅಭಿಮನ್ಯು ಫಿಲ್ಮಿಬೀಟ್ ಜೊತೆ ಮಾತಾಡಿದ್ದಾರೆ.

    ನನ್ನ ವೈಯಕ್ತಿಕ ಕಾರಣಗಳಿಂದ ಗ್ಯಾಪ್

    ನನ್ನ ವೈಯಕ್ತಿಕ ಕಾರಣಗಳಿಂದ ಗ್ಯಾಪ್

    ಪ್ರಶ್ನೆ: 9 ವರ್ಷ ಸಿನಿಮಾರಂಗದಿಂದಲೇ ದೂರ ಉಳಿದಿದ್ದು ಏಕೆ?

    "ಇಲ್ಲಾ ನಾನಾಗೇ ಗ್ಯಾಪ್ ತೆಗೆದುಕೊಂಡಿದ್ದು ನಾಲ್ಕರಿಂದ ಐದು ವರ್ಷ. ನನ್ನ ವೈಯಕ್ತಿಕ ಕಾರಣಗಳಿಂದ ಗ್ಯಾಪ್ ತೆಗೆದುಕೊಂಡಿದ್ದೆ. ಒಂದೆರಡು ಸಿನಿಮಾಗಳು ಸ್ಕ್ರಿಪ್ಟ್ ಕೇಳಿದ್ದೆ. ಆದರೆ, ಒಂದಿಷ್ಟು ದಿನ ಎಳೆದು ಆಮೇಲೆ ಶುರುವಾಗಲೇ ಇಲ್ಲ. ಅದರಲ್ಲೇ ಮೂರು ನಾಲ್ಕು ವರ್ಷ ಹೊರಟು ಹೋಯ್ತು. ನಮ್ಮ ತಂದೆ ಜೊತೆ ಇರಬೇಕು ಅಂತ ನಾಲ್ಕು ವರ್ಷ ಸಿನಿಮಾದಿಂದ ಆಚೆ ಇದ್ದೆ. ಈಗ ಮತ್ತೆ ಒಂದಿಷ್ಟು ತಯಾರಿ ಮಾಡಿಕೊಂಡು ಬಂದಿದ್ದೇನೆ."

    ಪ್ರಶ್ನೆ: ಇಷ್ಟು ವರ್ಷ ಆದ್ಮೇಲೆ ಇದೇ ಸಿನಿಮಾ ಒಪ್ಪಿಕೊಳ್ಳಲು ಕಾರಣವೇನು?

    "ಮೊದಲ ಸಿನಿಮಾದ ಕಂಟೆಂಟ್ ಇಷ್ಟ ಆಯ್ತು. ಎರಡನೆಯದು ನನ್ನ ಪಾತ್ರಗಳು ಇಷ್ಟ ಆಯ್ತು. ಮೂರನೆಯದ್ದು ಒಂದು ಟೀಮ್, ಯಂಗ್ ಅಂಡ್ ಫೈಯರ್ ಇರುವಂತಹ ಟೀಮ್. ನಮ್ಮ ತಂದೆ ಮೊದಲು ಹೇಗೆ ಯಂಗ್ ಟೀಮ್ ಕಟ್ಟಿಕೊಂಡು ಕಂಟೆಂಟ್ ಸಿನಿಮಾ ಮಾಡಿದ್ರೋ, ಅದೇ ರೀತಿ ಈ ಟೀಮ್ ಬಂದಾಗ ನನಗೆ ಇಷ್ಟ ಆಯ್ತು. ನನ್ನಲ್ಲಿರುವ ಪ್ರತಿಭೆ ತೋರಿಸುವುದಕ್ಕೆ ಇದು ಸರಿಯಾದ ಸಿನಿಮಾ ಅಂತ ಅನಿಸಿತ್ತು ಅದಕ್ಕೆ ಒಪ್ಪಿಕೊಂಡೆ. "

    ಚಿತ್ರಕ್ಕಾಗಿ ತುಂಬಾ ಬದಲಾಗಿದ್ದೀರಾ..?

    ಚಿತ್ರಕ್ಕಾಗಿ ತುಂಬಾ ಬದಲಾಗಿದ್ದೀರಾ..?

    ಪ್ರಶ್ನೆ: 'ಎಲ್ಲಿಗೆ ಪಯಣ ಯಾವುದೋ ದಾರಿ' ಚಿತ್ರಕ್ಕಾಗಿ ತುಂಬಾ ಬದಲಾಗಿದ್ದೀರಾ..? ನಿಮ್ಮ ಲುಕ್ ಹೇಗಿದೆ?

    "ನಿರ್ದೇಶಕರು ಮೊದಲೇ ಸ್ಕೆಚ್ ಮಾಡಿಕೊಂಡು ಬಂದಿದ್ದರು. ಒಂದು ಪಾತ್ರ ಹೀಗಿರುತ್ತೆ. ಇನ್ನೊಂದು ಪಾತ್ರ ಅದರ ಅರ್ಧ ಇರುತ್ತೆ. ಇನ್ನೊಂದು ಕ್ಯಾರೆಕ್ಟರ್‌ಗೆ ತಲೆ ಕೂದಲು ಹಾಗೂ ಗಡ್ಡ ಕಡಿಮೆ ಮಾಡೋಣ ಅಂದಿದ್ದರು. ಕೊನೆಗೆ ಈ ಪೋಸ್ಟರ್‌ಗಳಲ್ಲಿ ಇರುವುದು ಫೈನಲ್ ಲುಕ್. ಆದರೆ, ಸಿನಿಮಾದಲ್ಲಿ ಎರಡು ಶೇಡ್‌ಗಳನ್ನಷ್ಟೇ ಉಳಿಸಿಕೊಂಡಿದ್ದೇವೆ. ಹೀಗಾಗಿ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಳ್ಳುತ್ತೇನೆ."

    ಪ್ರಶ್ನೆ: ನಿಮ್ಮ ತಂದೆಗೆ ಈ ಸಿನಿಮಾ ಮಾಡುವ ವಿಚಾರ ಗೊತ್ತಿತ್ತಾ?

    "ಇಲ್ಲ ನಮ್ಮ ತಂದೆ ಹೋದ್ಮೇಲೆ ಒಂದು ವರ್ಷ ಗ್ಯಾಪ್ ತೆಗೆದುಕೊಂಡು, ಮತ್ತೆ ಸಿನಿಮಾಗೆ ಬರಬೇಕು ಅಂತ ಇದ್ದಾಗ ಸಿಕ್ಕಿದ ಸಿನಿಮಾ ಇದು. ಎರಡು ವರ್ಷದ ಹಿಂದೆ ಲಾಕ್‌ಡೌನ್‌ಗೂ ಮುನ್ನ ಸೆಟ್ಟೇರಿದ ಸಿನಿಮಾ ಇದು. ಹಾಗಾಗಿ ಈ ಸಿನಿಮಾ ಬಗ್ಗೆ ನಮ್ಮ ತಂದೆಗೆ ಏನೂ ಗೊತ್ತಿರಲಿಲ್ಲ."

    ಪಾತ್ರಕ್ಕಾಗಿ ಸಣ್ಣಗಾಗಿರುವುದಾ ಹೇಗೆ?

    ಪಾತ್ರಕ್ಕಾಗಿ ಸಣ್ಣಗಾಗಿರುವುದಾ ಹೇಗೆ?

    ಪ್ರಶ್ನೆ: ನಿಮ್ಮ ತಂದೆ ನಿರ್ದೇಶನದಲ್ಲಿ ನೀವು ಸಿನಿಮಾ ಮಾಡಿಲ್ಲ ಏಕೆ?

    "ನಮ್ಮ ತಂದೆ ಜೊತೆ ಸಿನಿಮಾ ಮಾಡ್ಬೇಕು ಅಂತ ಪ್ಲ್ಯಾನ್ ಇತ್ತು. ಸಬ್ಜೆಕ್ಟ್ ಕೂಡ ಇತ್ತು. ಆದ್ರೆ, ಅದ್ಯಾವುದೂ ಆಗಲಿಲ್ಲ.

    ಪ್ರಶ್ನೆ: ತುಂಬಾ ತೆಳ್ಳಾಗಿದ್ದೀರಾ? ಪಾತ್ರಕ್ಕಾಗಿ ಸಣ್ಣಗಾಗಿರುವುದಾ ಹೇಗೆ?

    "ಈ ಸಿನಿಮಾ ಮುಹೂರ್ತದ ವೇಳೆ ಸ್ವಲ್ಪ ದಪ್ಪಗಿದ್ದೆ. 75 ಕೆಜಿ ಇದ್ದೆ. ಆದರೆ, ನಿರ್ದೇಶಕರು ಬಂದು ಕಥೆ ಹೇಳಿದಾಗ, ಅವರಿಗೆ ಸಣ್ಣಗಿರುವ ನಾಯಕ ಬೇಕಿತ್ತು. ಹೀಗಾಗಿ ನಾನು 6 ಕೆಜಿ ತೂಕ ಇಳಿಸಿಕೊಂಡೆ. ಈಗ ಫೋಟೋದಲ್ಲಿ ನೋಡುವ ಹಾಗೆ ತೆಳ್ಳಗೆ ಇದ್ದೇನೆ. ಅಂದ್ರೆ, ಈ ಸಿನಿಮಾದಲ್ಲಿ ನಾಯಕ ಪಾತ್ರಕ್ಕೆ ಜೀವನ ಆಗಲಿ, ಜನ ಆಗಲಿ ಯಾವುದರ ಬಗ್ಗೆನೂ ಆಸಕ್ತಿ ಇಲ್ಲದೆ ಇರುವ ಪಾತ್ರ. ಒಂಟಿಯಾಗಿರುವಂತಹ ಪಾತ್ರವಿದು. ಈಗಲೂ ಅಷ್ಟೇ ತೆಳ್ಳಗಿದ್ದೇನೆ."

    ಅಭಿನಯ ತರಂಗದಲ್ಲಿ ನಟನೆ ಕಲಿತ ಮೇಲೆ

    ಅಭಿನಯ ತರಂಗದಲ್ಲಿ ನಟನೆ ಕಲಿತ ಮೇಲೆ

    ಪ್ರಶ್ನೆ: ನಿಮ್ಮು ಮುಂದಿನ ಸಿನಿಮಾ ಜರ್ನಿ ಬಗ್ಗೆ ಏನಾದರೂ ಪ್ಲ್ಯಾನ್ ಮಾಡಿದ್ದೀರಾ?

    "ಪ್ಲ್ಯಾನ್ ಮೊದಲು ಇತ್ತು. ನಾವು ಅಂದ್ಕೊಂಡ ಹಾಗೇ ಜೀವನ ಆಗಲ್ಲ ಅಂತ ನಂಗೊಂದು ಪಾಠ ಕಲಿಸಿದ ಮೇಲೆ ಹಿಂಗೆ ಹಂಗೆ ಅಂತೇನೂ ಇಲ್ಲ. ಏನು ಬರುತ್ತೋ ಅದನ್ನು ಆರಿಸಿಕೊಂಡು ಮಾಡುತ್ತಿರೋದು ಅಷ್ಟೇ. ನಮ್ಮ ತಂದೆಯಂತೆ ಒಳ್ಳೆ ಕಂಟೆಂಟ್ ಇರುವ ಸಿನಿಮಾ ಮಾಡ್ಬೇಕು ಅಂತ ಇದೆ. ಆದರೆ, ಇದೇ ಅದೇ ಅಂತೇನು ಇಲ್ಲ."

    ಪ್ರಶ್ನೆ: ಜೀವನದ ಹೋರಾಟ ಹೇಗಿದೆ?

    "ಅಭಿನಯ ತರಂಗದಲ್ಲಿ ನಟನೆ ಕಲಿತ ಮೇಲೆ ಸಿನಿಮಾಗೆ ಬರ್ತೀನಿ. ಸಿನಿಮಾ ಮಾಡ್ತೀನಿ ಅಂತ ಅಂದ್ಕೊಂಡಿದ್ದು. ನಾವು ಏನೇ ಮಾಡಿದ್ರೂ ಇನ್ನೊಂದು ಹಂತ ಇರುತ್ತೆ. ಜನರು ನಮ್ಮನ್ನು ಒಪ್ಪಿಕೊಳ್ಳಬೇಕು. ಅದಕ್ಕಾಗಿ ಇದುವರೆಗೂ ಹೋರಾಡುತ್ತಿದ್ದೇನೆ. ಹೋರಾಡುತ್ತಲೇ ಇರುತ್ತೇನೆ."

    ಪ್ರಶ್ನೆ: ಕ್ರಿಕೆಟರ್ ಆಗ್ಬೇಕು ಅಂತ ಕಂಡ ಕನಸು ಏನಾಯ್ತು?

    ಪ್ರಶ್ನೆ: ಕ್ರಿಕೆಟರ್ ಆಗ್ಬೇಕು ಅಂತ ಕಂಡ ಕನಸು ಏನಾಯ್ತು?

    "ನನಗೆ ಕ್ರಿಕೆಟರ್ ಆಗ್ಬೇಕು ಅಂತ ಆಸೆ ಇತ್ತು. ಫೈನಲ್ ಇಯರ್‌ನಲ್ಲಿ ನನಗೆ ಗೊತ್ತಾಯ್ತು. ಇಲ್ಲಿ ಸಿಕ್ಕಾ ಪಟ್ಟೆ ಕಾಂಪಿಟೇಷನ್ ಇದೆ ಅಂತ. ನೀವು ಏನೇ ಕ್ರಿಕೆಟ್‌ನಲ್ಲಿ ಸಾಧಿಸಬೇಕು ಅಂದ್ರೆ, ರಾಜ್ಯಕ್ಕೆ ಆಡ್ಬೇಕು. ರಣಜಿ ಆಡಬೇಕು. ಅಲ್ಲಿ ಸಿಗೋದೂ 20 ಮಂದಿಯ ಒಂದು ತಂಡ ಅಷ್ಟೇ. ಫೈನಲ್ ಇಯರ್ ಮುಗಿದ ಮೇಲೆ ನನಗೆ ಒಂಥರಾ ಏನ್ ಮಾಡ್ತಿದ್ದೀನಿ ಅಂತ ಅನಿಸಿತ್ತು. ಇಲ್ಲಾ ಕ್ರಿಕೆಟ್ ಬಿಟ್ಟು ಬೇರೆ ಏನಾದ್ರೂ ಮಾಡ್ಬೇಕು ಅಂತ ಆಸೆಯಿತ್ತು. ಆಮೇಲೆ ಡ್ಯಾನ್ಸ್ ಹಾಗೂ ಮ್ಯಾಡ್ ಆಡ್ಸ್ ಮಾಡುತ್ತಿದ್ದೆ. ಆಗಲೂ ಸಿನಿಮಾಗೆ ಬರುತ್ತೇನೆ ಅಂದ್ಕೊಂಡಿರಲಿಲ್ಲ. ಆಗ ಅಭಿನಯ ತರಂಗ ಸೇರಿಕೊಂಡು ಅಭಿನಯ ಕಲಿತು ಸಿನಿಮಾಗೆ ಬಂದೆ."

    English summary
    Kannada Director Kashinath son Abhimanyu making comeback to films after 9 long years. 'Ellige Payana Yavudo Daari' Abhimanyu new look creating sensation.
    Wednesday, December 1, 2021, 10:13
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X