Don't Miss!
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ರೋಹಿತ್ ಬಳಗದ ಅಭ್ಯಾಸಕ್ಕೆ ಭಾನುವಾರ ರಜೆ ನೀಡಿದ ಕೋಚ್ ದ್ರಾವಿಡ್
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Exclusive: ಬಾಲಿವುಡ್‌ಗೆ ಸಪ್ತಮಿ ಗೌಡ ಎಂಟ್ರಿ: 'ದಿ ವ್ಯಾಕ್ಸಿನ್ ವಾರ್' ಸೆಟ್‌ನಲ್ಲೇ ಲೀಲಾ ಸಂಕ್ರಾಂತಿ
'ಕಾಂತಾರ' ಚಿತ್ರದಲ್ಲಿ ಲೀಲಾ ಆಗಿ ಮಿಂಚಿದ ಸಪ್ತಮಿ ಗೌಡ ಇದೀಗ ಬಾಲಿವುಡ್‌ಗೆ ಎಂಟ್ರಿ ಕೊಡ್ತಿದ್ದಾರೆ. 'ಕಾಂತಾರ' ಸಕ್ಸಸ್ ಬೆನ್ನಲ್ಲೇ ಅಭಿಷೇಕ್ ಅಂಬರೀಶ್ ನಟನೆಯ 'ಕಾಳಿ' ಚಿತ್ರಕ್ಕೆ ಆಯ್ಕೆ ಆಗಿದ್ದ ಚೆಲುವೆ ಈಗ ಅಭಿಮಾನಿಗಳಿಗೆ ಮತ್ತೊಂದು ಸಿಹಿಸುದ್ದಿ ನೀಡಿದ್ದಾರೆ.
'ದಿ ಕಾಶ್ಮೀರ್ ಫೈಲ್ಸ್' ಖ್ಯಾತಿಯ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ 'ದಿ ವ್ಯಾಕ್ಸಿನ್ ವಾರ್' ಚಿತ್ರದಲ್ಲಿ ನಟಿಸುವ ಅವಕಾಶ ಸಪ್ತಮಿ ಗೌಡಗೆ ಸಿಕ್ಕಿದೆ. 'ಪಾಪ್‌ಕಾರ್ನ್ ಮಂಕಿ ಟೈಗರ್' ಸಿನಿಮಾ ಮೂಲಕ ಬಣ್ಣದಲೋಕಕ್ಕೆ ಎಂಟ್ರಿ ಕೊಟ್ಟಿದ್ದ ಸಪ್ತಮಿ ನಂತರ ಸೈಲೆಂಟ್ ಆಗಿದ್ದರು. ವಿದೇಶಕ್ಕೆ ಹೋಗಿ ಓದುವ ಲೆಕ್ಕಾಚಾರದಲ್ಲಿದ್ದರು. ಆದರೆ ಕೊರೊನಾ ಲಾಕ್‌ಡೌನ್‌ನಿಂದ ಅದು ತಡವಾಗಿತ್ತು. ಅಷ್ಟರಲ್ಲೇ 'ಕಾಂತಾರ' ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಅಲ್ಲಿಂದ ಮುಂದೆ ಏನಾಯಿತು ಎನ್ನುವುದು ಗೊತ್ತೇಯಿದೆ. ರಾತ್ರೋರಾತ್ರಿ ಭಾರತೀಯ ಚಿತ್ರರಂಗಕ್ಕೆ ಸಪ್ತಮಿ ಗೌಡ ಪರಿಚಯವಾಗಿಬಿಡ್ತು.
ಅಭಿಷೇಕ್
ಅಂಬರೀಶ್
'ಕಾಳಿ'
ಚಿತ್ರಕ್ಕೆ
ಸಪ್ತಮಿ
ಗೌಡ
ನಾಯಕಿ;
ಫೋಟೊ
ಹಂಚಿಕೊಂಡ
ನಟಿ
'ದಿ ವ್ಯಾಕ್ಸಿನ್ ವಾರ್' ಚಿತ್ರದಲ್ಲಿ ಸಪ್ತಮಿ ಗೌಡ ನಟಿಸುವ ವಿಚಾರವನ್ನು ಚಿತ್ರತಂಡ ಖಚಿತಪಡಿಸಿದೆ. ಈಗಾಗಲೇ ಚಿತ್ರದ ಲಕ್ನೋ ಶೆಡ್ಯೂಲ್ ಕಂಪ್ಲೀಟ್ ಆಗಿದ್ದು, ಹೈದರಾಬಾದ್ ಶೆಡ್ಯೂಲ್‌ನಲ್ಲಿ ಸಪ್ತಮಿ ಗೌಡ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ.

ಸಂಕ್ರಾಂತಿ ಸಂಭ್ರಮ ಡಬಲ್
ಕಾಡುಬೆಟ್ಟು ಶಿವನ ಮನದರಸಿ ಲೀಲಾ ಆಗಿ ಪ್ರೇಕ್ಷಕರಿಗೆ ಮೋಡಿ ಮಾಡಿದ ಸಪ್ತಮಿ ಗೌಡ, ಬಾಲಿವುಡ್ ಪ್ರವೇಶದ ಬಗ್ಗೆ ಫಿಲ್ಮಿಬೀಟ್ ಜೊತೆ ಎಕ್ಸ್‌ಕ್ಲೂಸಿವ್ ಆಗಿ ಮಾತನಾಡಿದ್ದಾರೆ. "ಕಾಂತಾರ ಆಸ್ಕರ್ ಅಂಗಳಕ್ಕ ಹೋದಾಗ ಲಿಸ್ಟ್‌ನಲ್ಲಿ ನಮ್ಮ ಸಿನಿಮಾ ಹೆಸರಿನ ಕೆಳಗೆ ಕಾಶ್ಮೀರ್ ಫೈಲ್ಸ್ ಸಿನಿಮಾ ಹೆಸರಿತ್ತು. ಈಗ ಅದೇ ಸಿನಿಮಾ ನಿರ್ದೇಶಕರ ಚಿತ್ರದಲ್ಲಿ ನಟಿಸ್ತಿರೋದು ಖುಷಿ ಇದೆ. ಅವರೇ ಕರೆ ಮಾಡಿ ಅವಕಾಶ ಕೊಟ್ಟರು ಎನ್ನುವುದು ಮತ್ತಷ್ಟು ಖುಷಿ ತಂದಿದೆ. ಸಂಕ್ರಾಂತಿ ಹಬ್ಬವನ್ನು ಈ ಬಾರಿ 'ದಿ ವ್ಯಾಕ್ಸಿನ್ ವಾರ್' ಶೂಟಿಂಗ್ ಸೆಟ್‌ನಲ್ಲಿ ಸೆಲೆಬ್ರೇಟ್ ಮಾಡುತ್ತಿದ್ದೀನಿ. ನಾಳೆಯೇ ಶೂಟಿಂಗ್‌ಗೆ ಹೋಗ್ತಿದ್ದೀನಿ. ಅದು ಖುಷಿ ತಂದಿದೆ"

ಪಾತ್ರದ ಬಗ್ಗೆ ಹೆಚ್ಚು ಹೇಳಲ್ಲ
'ದಿ ವ್ಯಾಕ್ಸಿನ್ ವಾರ್' ಮಾಮೂಲಿ ಕಮರ್ಷಿಯಲ್ ಸಿನಿಮಾ ಅಲ್ಲ. ನಾಯಕ- ನಾಯಕಿ ಎನ್ನುವ ಕಾನ್ಸೆಪ್ಟ್ ಇರಲ್ಲ. ಇದು ಕಂಟೆಂಟ್ ಬೇಸ್ಡ್ ಸಿನಿಮಾ. ಹಾಗಾಗಿ ನಾನು ಈ ಸಿನಿಮಾ ನಾಯಕಿ ಎಂದು ಹೇಳಲು ಸಾಧ್ಯವಿಲ್ಲ. ಒಂದು ಮುಖ್ಯವಾದ ಪಾತ್ರದಲ್ಲಿ ನಟಿಸ್ತಿದ್ದೀನಿ. ಇದಕ್ಕಿಂತ ಹೆಚ್ಚು ಪಾತ್ರದ ಬಗ್ಗೆ ಏನು ರಿವೀಲ್ ಮಾಡಲು ಆಗುವುದಿಲ್ಲ. ಆ ಚಿತ್ರದ ಭಾಗ ಆಗುತ್ತಿರುವುದು ಸಂತಸ ತಂದಿದೆ."

ಕಥೆ ಇಷ್ಟ ಆದ್ರೆ ನಟಿಸ್ತೀನಿ
ಲಾಕ್‌ಡೌನ್‌ಗೂ ಮೊದಲು ವಿದೇಶಕ್ಕೆ ಹೋಗಿ ಓದುವ ಲೆಕ್ಕಾಚಾರ ಇತ್ತು. ಆದರೆ ಲಾಕ್‌ಡೌನ್‌ನಿಂದ ಎಲ್ಲಾ ಬದಲಾಯಿತು. 'ಕಾಂತಾರ' ಸಿನಿಮಾ ಬಂತು ಸಕ್ಸಸ್ ಆಯಿತು. ಆ ನಂತರ 'ಕಾಳಿ' ಚಿತ್ರಕ್ಕೆ ಸೈನ್ ಮಾಡಿದ್ದೀನಿ. ಈಗ 'ದಿ ವ್ಯಾಕ್ಸಿನ್ ವಾರ್' ಖಂಡಿತ ಬಹಳ ಖುಷಿ ಆಗುತ್ತಿದೆ. ನೋಡೋಣ ಮುಂದೆ ಹೇಗೆ ಅಂತ. ಆತುರ ಇಲ್ಲ. ಸಾಲು ಸಾಲು ಸಿನಿಮಾ ಮಾಡುವ ಬಯಕೆ ಕೂಡ ಇಲ್ಲ. ಕಥೆಗಳು ಇಷ್ಟ ಆದರೆ ನಟಿಸಬೇಕು ಎಂದುಕೊಂಡಿದ್ದೇನೆ, ನೋಡೋಣ ಮುಂದೆ"

ರಿಷಬ್ ಸರ್, ಹೊಂಬಾಳೆಗೆ ಚಿರಋಣಿ
ನಾನು ಇವತ್ತು ಏನೇ ಇದ್ದರೂ ಅದಕ್ಕೆಲ್ಲಾ ಕಾರಣ ಕಾಂತಾರ ಸಿನಿಮಾ. ಕಾಂತಾರ ಅಂದಾಕ್ಷಣ ಬರೋದು ರಿಷಬ್ ಶೆಟ್ಟಿ ಸರ್, ಹೊಂಬಾಳೆ ಸಂಸ್ಥೆ. ಅವರೇ ನನಗೆ ಮೇನ್ ಪಿಲ್ಲರ್ಸ್ ಆಗಿದ್ದು. ವಿವೇಕ್ ಅಗ್ನಿಹೋತ್ರಿ ಸರ್ ನನಗೆ ಕಾಲ್ ಮಾಡಿ ಅವಕಾಶ ಕೊಡಬೇಕು ಅಂದರೆ ಅದಕ್ಕೆಲ್ಲಾ ಕಾರಣ ಕಾಂತಾರ ಸಿನಿಮಾ. ನಟಿಯಾಗಿ ಎಲ್ಲರಿಗೂ ಒಂದು ಆಸೆ ಇರುತ್ತದೆ. ಒಂದು ಫಿಲ್ಮ್‌ಫೇರ್ ಅವಾರ್ಡ್ ಪಡೆದುಕೊಳ್ಳಬೇಕು ಅಂತ. ಅದಕ್ಕಿಂತ ದೊಡ್ಡ ಆಸೆ ಇರಲಿಲ್ಲ. ನನ್ನ ಹೆಸರು ಆಸ್ಕರ್ ಲಿಸ್ಟ್‌ನಲ್ಲಿ ಕಾಣಿಸುತ್ತಿದೆ. ಸಪ್ತಮಿ ಗೌಡ ಅಂತ ಅಲ್ಲಿ ಇದೆ ಅಂದರೆ, ಆ ಸಿನಿಮಾ ನಾನು ಕೇಳಿದ್ದಕ್ಕಿಂತ ಜಾಸ್ತಿ ಕೊಟ್ಟಿದೆ. ನಾನು ರಿಷಬ್ ಸರ್ ಹಾಗೂ ಹೊಂಬಾಳೆ ಸಂಸ್ಥೆ ಸದಾ ಚಿರಋಣಿ" ಎಂದು ಸಪ್ತಮಿ ಗೌಡ ತಿಳಿಸಿದ್ದಾರೆ.