»   » 'ಫಿಲ್ಮಿಬೀಟ್'ಗೆ ಸೂಪರ್ ಸ್ಟಾರ್ ಜೆ.ಕೆ ಎಕ್ಸ್ ಕ್ಲೂಸಿವ್ ಸಂದರ್ಶನ

'ಫಿಲ್ಮಿಬೀಟ್'ಗೆ ಸೂಪರ್ ಸ್ಟಾರ್ ಜೆ.ಕೆ ಎಕ್ಸ್ ಕ್ಲೂಸಿವ್ ಸಂದರ್ಶನ

Posted By:
Subscribe to Filmibeat Kannada

'ವಾಂಟೆಡ್' ಪೋಸ್ಟರ್ ಗಳಿಂದ ಕರ್ನಾಟಕದ ಮೂಲೆ ಮೂಲೆಯಲ್ಲೂ ಭಾರಿ ಸದ್ದು-ಸುದ್ದಿ ಮಾಡಿದ ಚಿತ್ರ 'ಸ'.

ಹೇಮಂತ್ ಹೆಗ್ದೆ ಆಕ್ಷನ್ ಕಟ್ ಹೇಳಿರುವ 'ಸ' ಚಿತ್ರದಲ್ಲಿ ಸಂಯುಕ್ತ ಹೊರನಾಡು, ವಿಜಯ್ ಸೂರ್ಯ, ಅನುರಾಧಾ ಮುಖರ್ಜಿ ಜೊತೆ 'ಸೂಪರ್ ಸ್ಟಾರ್' ಜೆಕೆ (ಕಾರ್ತಿಕ್ ಜಯರಾಮ್) ಕೂಡ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

ಇದೇ ಶುಕ್ರವಾರ (ಆಗಸ್ಟ್ 26) 'ಸ' ಸಿನಿಮಾ ನಿಮ್ಮ ಮುಂದೆ ಬರುತ್ತಿದೆ. 'ಸ' ಚಿತ್ರದ ಪ್ರಮೋಷನ್ ಪ್ರಯುಕ್ತ ನಿಮ್ಮ ಒನ್ ಇಂಡಿಯಾ/ಫಿಲ್ಮಿಬೀಟ್ ಕಛೇರಿಗೆ ಕಾರ್ತಿಕ್ ಜಯರಾಮ್ ಆಗಮಿಸಿದ್ರು.

ಜೆ.ಕೆ ಜೊತೆ ನಿಮ್ಮ ಫಿಲ್ಮಿಬೀಟ್ ಕನ್ನಡ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ. ಓದಿರಿ.....

* 'ಸ' ಚಿತ್ರದಲ್ಲಿ ನಿಮ್ಮ ಪಾತ್ರ....

- 'ಸ' ಚಿತ್ರದಲ್ಲಿ ನನ್ನದು ವಿಶೇಷವಾದ ಪಾತ್ರ. ಇಡೀ ಚಿತ್ರದ ಕಥೆ ಸುತ್ತುವುದು ನನ್ನ ಸುತ್ತ. ಸಿನಿಮಾದಲ್ಲಿ ನಾನು Ornithologist, ಅಂದ್ರೆ ಪಕ್ಷಿಗಳ ಬಗ್ಗೆ ರಿಸರ್ಚ್ ಮಾಡುವ ಪಾತ್ರ.

* 'ಸ' ಅಂದ್ರೆ ಸಸ್ಪೆನ್ಸ್ ಅಂತ ಅರ್ಥ ಮಾಡಿಕೊಳ್ಳಬಹುದಾ.?

- 'ಸ' ಅಂದ್ರೆ ಏನು ಬೇಕಾದರೂ ತಿಳಿದುಕೊಳ್ಳಬಹುದು. ನಾವಂದುಕೊಂಡಿರೋದು ಸಸ್ಪೆನ್ಸ್. ಸಿನಿಮಾ ನೋಡಿದ ಮೇಲೆ ಜನರಿಗೆ ಗೊತ್ತಾಗುತ್ತೆ 'ಸ' ಅಂದರೆ ಏನು ಅಂತ.!

* 'ಸ' ಚಿತ್ರದ ವಾಂಟೆಡ್ ಪೋಸ್ಟರ್ ಗಳಿಂದ ನಿಮಗೆ ಸಿಕ್ಕ ಪ್ರತಿಕ್ರಿಯೆ

- ತುಂಬಾ ಫೋನ್ ಕಾಲ್ ಬರಲು ಶುರು ಆಯ್ತು. ಪೋಸ್ಟರ್ ನಲ್ಲಿ ಹೇಮಂತ್ ನಂಬರ್ ಇತ್ತು. ಎಷ್ಟೋ ಜನ ನನ್ನ ಫ್ಯಾನ್ಸ್, ಹೇಮಂತ್ ಗೆ ಫೋನ್ ಮಾಡಿ ಧಮ್ಕಿ ಹಾಕಿದ್ದಾರೆ. ಅಲ್ಲಿಗೆ, ಅದು ಜನರಿಗೆ ತಲುಪಿದೆ ಅಂತರ್ಥ. [ಜೆ.ಕೆ, ಸಂಯುಕ್ತ ಅವರನ್ನು ಪತ್ತೆ ಹಚ್ಚಿ ಸೂಕ್ತ ಬಹುಮಾನ ಗೆಲ್ಲಿ]

* 'ಸ' ಚಿತ್ರದಲ್ಲಾದ ಕುದುರೆ ಚೇಸಿಂಗ್ ಅನುಭವ...

- ಜೀವನದಲ್ಲಿ ಇದುವರೆಗೂ ಯಾರ ಹತ್ರವೂ ಕಾಲಿನಿಂದ ಒದೆ ತಿಂದಿರ್ಲಿಲ್ಲ. ಆದ್ರೆ, ಮೊದಲ ಬಾರಿ ಕುದುರೆಯಿಂದ ಒದೆಸ್ಕೊಂಡೆ. ಹಾರ್ಸ್ ಚೇಸಿಂಗ್ ಮಾಡುವ ಮುನ್ನ ಎರಡು ತಿಂಗಳು ಟ್ರೇನಿಂಗ್ ಕೊಟ್ಟರು. ರೇಸ್ ಕೋರ್ಸ್ ನಲ್ಲಿ ಕುದುರೆ ಮೇಲೆ ಕೂತ್ಕೊಂಡು ಹೋಗುವುದು ಬಿಟ್ರೆ ಬೇರೇನೂ ಮಾಡ್ಲಿಲ್ಲ. ಶೂಟಿಂಗ್ ನಲ್ಲಿ ಶಿವಾಜಿನಗರದಿಂದ ಕುದುರೆ ತಂದಿದ್ದರು. ಅದರ ಮೇಲೆ ಕೂತಿದ್ದೇ ತಡ, ಅದು ಎಲ್ಲಿಗೆ ಕರ್ಕೊಂಡು ಹೋಯ್ತು ಅನ್ನೋದೇ ಗೊತ್ತಾಗ್ಲಿಲ್ಲ. ಸಂಯುಕ್ತ ಚೇಸಿಂಗ್ ಸೀನ್ ನಡೆಯುವಾಗ ಸಡನ್ ಆಗಿ ಕಟ್ ಹೇಳಿದರು. ಆಗ ನನ್ನ ಮುಂದೆ ಇದ್ದ ಕುದುರೆ ತನ್ನ ಹಿಂದಿನ ಕಾಲು ಎತ್ತಿಬಿಡ್ತು. ಅದರಿಂದ ನನ್ನ ಕಾಲಿಗೆ ಪೆಟ್ಟಾಯ್ತು. ತಲೆ ತಿರುಗಿ ಬಿದ್ದುಬಿಟ್ಟೆ. ಜ್ಞಾನ ಇರ್ಲಿಲ್ಲ. ತುಂಬಾ ಬ್ಯಾಡ್ ಎಕ್ಸ್ ಪೀರಿಯನ್ಸ್. ಪುಣ್ಯಕ್ಕೆ ಮೂಳೆಗೆ ಏಟಾಗಲಿಲ್ಲ. ಆದರೂ, ಒಳ್ಳೆ ಪಾಠ. 'ಸ' ಚಿತ್ರದಿಂದ ನಾನು ಕುದುರೆ ಸವಾರಿ ಕಲಿತೆ.

* 'ಸ' ಚಿತ್ರದ ಸ್ಪೆಷಲ್ ಸ್ಕ್ರೀನಿಂಗ್ ಆಗಿದೆ. ಅದರಲ್ಲಿ ನಿಮಗೆ ಸಿಕ್ಕ ಅಭಿಪ್ರಾಯ...

- ಆಟೋ ಡ್ರೈವರ್ ಗಳಿಂದ ಹಿಡಿದು ಕಾರ್ಪೊರೇಟ್ ಉದ್ಯೋಗಿಗಳವರೆಗೂ 50 ಜನರಿಗಾಗಿ ಒಂದು ಸ್ಪೆಷಲ್ ಸ್ಕ್ರೀನಿಂಗ್ ಮಾಡಿದ್ವಿ. ಅದರಲ್ಲಿ ನಮ್ಮ ಚಿತ್ರದ ಟೈಟಲ್ ಕಾರ್ಡ್ ಹಾಕಿರ್ಲಿಲ್ಲ. ಅದರಿಂದ ನಮಗೆ ಒಳ್ಳೆ ರೆಸ್ಪಾನ್ಸ್ ಸಿಕ್ತು. 50 ಜನರ ಪೈಕಿ 47 ಜನ 'ಎಕ್ಸಲೆಂಟ್' ಅಂತ ತಿಳಿಸಿದ್ದಾರೆ. ಹೀಗಾಗಿ, 'ಸ' ಚಿತ್ರದ ಬಗ್ಗೆ ವಿಶ್ವಾಸ ಹೆಚ್ಚಿದೆ.

* ಒಂದ್ಕಡೆ ಸೀರಿಯಲ್, ಇನ್ನೊಂದ್ಕಡೆ ಸಿನಿಮಾ. ಟೈಮ್ ಹೇಗೆ ಮ್ಯಾನೇಜ್ ಮಾಡ್ತೀರಾ?

- ಅದೇ ದೊಡ್ಡ ತಲೆನೋವು. 'ಸಿಯಾ ಕೆ ರಾಮ್' ಧಾರಾವಾಹಿಗಾಗಿ ನಾನು ಎಂಟು ತಿಂಗಳು ಮೀಸಲಿಟ್ಟಿದ್ದೆ. ಯಾಕಂದ್ರೆ, ಅದು ಸಿಕ್ಕಾಪಟ್ಟೆ ಕಷ್ಟ ಇತ್ತು. ನನಗೆ ಟೈಮ್ ಸಿಕ್ತಾಯಿರ್ಲಿಲ್ಲ. ಸಿದ್ಧತೆ ಮಾಡಿಕೊಳ್ಳಬೇಕಿತ್ತು. 'ರಾವಣ' ಪಾತ್ರ ಮಾಡುವುದು ಸುಲಭ ಅಲ್ಲ. ಅದಕ್ಕಾಗಿ ನಾನು ಕೆಲವು ಗ್ರಂಥಗಳನ್ನ ಓದಿದೆ. ಅದರ ನಡುವೆ ಸ್ವಲ್ಪ ಬಿಡುವು ಮಾಡಿಕೊಂಡು ಅರ್ಜುನ್ ಸರ್ಜಾ ಜೊತೆ 'ವಿಸ್ಮಯ' ಚಿತ್ರದಲ್ಲಿ ನಟಿಸಿದೆ. ಅವರು ಹದಿನೈದು ದಿನ ಕಾಲ್ ಶೀಟ್ ಕೇಳಿದರು. ನನಗೆ ಆಗ್ಲಿಲ್ಲ. ಕಡೆಗೆ ಏಳು ದಿನ ಡಬಲ್ ಕಾಲ್ ಶೀಟ್ ಕೊಟ್ಟು ಹಗಲು-ರಾತ್ರಿ ಶೂಟಿಂಗ್ ಮಾಡಿದ್ದೀನಿ.

* 'ಸಿಯಾ ಕೆ ರಾಮ್' ಧಾರಾವಾಹಿಯಲ್ಲಿ ನಿಮಗೆ ಅವಕಾಶ ಸಿಕ್ಕಿದ್ದು ಹೇಗೆ?

- ಅದಕ್ಕೆ ನಾನು 'ಸ' ಚಿತ್ರತಂಡಕ್ಕೆ ಥ್ಯಾಂಕ್ಸ್ ಹೇಳ್ಬೇಕು. ಇದರಲ್ಲಿ ನಾನು Ornithologist ಪಾತ್ರ ಮಾಡ್ಬೇಕಾದಾಗ ಮೀಸೆ, ಉದ್ದ ದಾಡಿ ಬಿಟ್ಟಿದ್ದೆ. ಅದಾದ ಮೇಲೆ ನನಗೆ ತಮಿಳು ಚಿತ್ರವೊಂದಕ್ಕೆ ಅವಕಾಶ ಸಿಕ್ತು. ಅಲ್ಲಿಂದ 'ಸಿಯಾ ಕೆ ರಾಮ್' ಆಡಿಷನ್ ಕೊಟ್ಟೆ. ನಾನು ದಾಡಿ ಬಿಟ್ಟಿರುವ ಲುಕ್ ನೋಡಿ ಅವರು ತಕ್ಷಣ ಸೆಲೆಕ್ಟ್ ಮಾಡಿದರು.

* ನೆಗೆಟಿವ್ ಶೇಡ್ ಗಳಲ್ಲೇ ಹೆಚ್ಚಾಗಿ ಜೆ.ಕೆ ಮಿಂಚ್ತಿದ್ದಾರಲ್ಲಾ.?

- ನಾನು ನಟಿಸಿರುವ ಅನೇಕ ಪಾತ್ರಗಳಲ್ಲಿ ನೆಗೆಟಿವ್ ಶೇಡ್ ಇದೆ. ನಾನು ಅದನ್ನ ಎಂಜಾಯ್ ಮಾಡ್ತೀನಿ. ನನ್ನನ್ನ ಜನ 'ನಟ' ಅಂತ ಗುರುತಿಸಬೇಕು, ಹೀರೋ ಅಥವಾ ವಿಲನ್ ಆಗಿ ಅಂತಲ್ಲ.

* 'ಸ' ಫಸ್ಟ್ ಕಾಪಿ ನೋಡಿದಾಗ, ನಿಮ್ಮ ಫೀಲಿಂಗ್?

- 'ಸ' ಸಿನಿಮಾದ ಫಸ್ಟ್ ಕಾಪಿ ನೋಡಿದಾಗ, ಕ್ಯೂರಿಯಾಸಿಟಿ ನನ್ನಲ್ಲಿ ಇತ್ತು. ಯಾಕಂದ್ರೆ, ಇಡೀ ಸಿನಿಮಾದ ಕಥೆ ನನಗೆ ಗೊತ್ತಿರ್ಲಿಲ್ಲ. ಖಂಡಿತ ಜನರಿಗೆ 'ಸ' ಇಷ್ಟವಾಗುತ್ತೆ, ಕ್ಲೈಮ್ಯಾಕ್ಸ್ ವರೆಗೂ ಸೀಟಿನ ತುದಿಗೆ ಕೂರುತ್ತಾರೆ ಅಂತ ಭಾವಿಸುತ್ತೇನೆ.

* ವಿಡಿಯೋ ನೋಡಿ....

'ಸ' ಚಿತ್ರದ ಬಗ್ಗೆ ಒನ್ ಇಂಡಿಯಾ/ಫಿಲ್ಮಿಬೀಟ್ ಕನ್ನಡ ಓದುಗರಿಗಾಗಿ ಕಾರ್ತಿಕ್ ಜಯರಾಂ ಹೇಳಿರುವ ಮಾತುಗಳು ಇವು. ವಿಡಿಯೋ ನೋಡಿ....

English summary
Since, Kannada Movie 'Sa' is releasing on August 26th, Kannada Actor Karthik Jayaram visited Oneindia/Filmibeat Office as a part of Film promotion. Here is an exclusive interview with him.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada