»   » ಸ್ಯಾಂಡಲ್ ವುಡ್ ನ ಹೊಸ ಹೀರೋ ಸೂರಜ್ ಸಂದರ್ಶನ

ಸ್ಯಾಂಡಲ್ ವುಡ್ ನ ಹೊಸ ಹೀರೋ ಸೂರಜ್ ಸಂದರ್ಶನ

Posted By:
Subscribe to Filmibeat Kannada

ಗೀತ ಸಾಹಿತಿ ಕವಿರಾಜ್ ನಿರ್ದೇಶನ ಮಾಡುತ್ತಿರುವ ಸುದ್ದಿ ನಿಮಗೆ ಗೊತ್ತಿದೆ. 'ಮದುವೆಯ ಮಮತೆಯ ಕರೆಯೋಲೆ' ಚಿತ್ರಕ್ಕೆ ಕವಿರಾಜ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಟಿ ಅಮೂಲ್ಯ ಈ ಚಿತ್ರದಲ್ಲಿ ಬಜಾರಿ ಪಾತ್ರ ಮಾಡುತ್ತಿರುವ ವರದಿಯನ್ನ ನಿಮ್ಮ 'ಫಿಲ್ಮಿಬೀಟ್ ಕನ್ನಡ' ನೀಡಿತ್ತು.

'ಮದುವೆಯ ಮಮತೆಯ ಕರೆಯೋಲೆ' ಚಿತ್ರದಲ್ಲಿ ಅಮೂಲ್ಯ ಜೊತೆ ನಾಯಕನಾಗಿ ಯುವ ಪ್ರತಿಭೆ ಸೂರಜ್ ಸ್ಯಾಂಡಲ್ ವುಡ್ ಗೆ ಕಾಲಿಡುತ್ತಿದ್ದಾರೆ. ಕವಿರಾಜ್ ನಡೆಸಿದ ಪ್ರತಿಭಾ ಅನ್ವೇಷಣೆಯಲ್ಲಿ ಸೆಲೆಕ್ಟ್ ಆಗಿರುವ ಮೈಸೂರಿನ ಹುಡುಗ ಸೂರಜ್ ಗೌಡ. [ಗಂಡುಬೀರಿಯಾದ ಚಿತ್ತಾರದ ಬೆಡಗಿ 'ಅಮೂಲ್ಯ']

kaviraj-directorial-maduveya-mamatheya-kareyole-hero-sooraj-interview

ನೋಡೋಕೆ ದೂಡ್ ಪೇಡ ದಿಗ್ಗಿ ತಮ್ಮನಂತೆ ಕಾಣುವ ಸೂರಜ್ 'ಮದುವೆಯ ಮಮತೆಯ ಕರೆಯೋಲೆ' ಚಿತ್ರಕ್ಕೆ ಸೆಲೆಕ್ಟ್ ಆಗಿದ್ದು ಹೇಗೆ? ಸೂರಜ್ ಹಿನ್ನಲೆ ಏನು? ಈ ಕುತೂಹಲದಿಂದ ನಿಮ್ಮ 'ಫಿಲ್ಮಿಬೀಟ್' ಸೂರಜ್ ಜೊತೆ ನಡೆಸಿರುವ ಚಿಟ್ ಚಾಟ್ ಇಲ್ಲಿದೆ.

* ನಿಮ್ಮ ಪರಿಚಯ.....

- ನನ್ನ ಹೆಸರು ಸೂರಜ್ ಗೌಡ. 2009ರಲ್ಲಿ 'ಮಿಸ್ಟರ್ ಮೈಸೂರ್' ಮತ್ತು 2013 ರಲ್ಲಿ 'ಮಿಸ್ಟರ್ ಕರ್ನಾಟಕ' ಟೈಟಲ್ ಪಡೆದಿದ್ದೇನೆ. 'ಏನ್ ಅಂತೀಯಾ' ಅನ್ನುವ ಕಲಾತ್ಮಕ ಚಿತ್ರದಲ್ಲಿ ಅಭಿನಯಿಸಿದ್ದೇನೆ. ಮೊದಲಿನಿಂದಲೂ ನನಗೆ ನಟನೆ ಅಂದ್ರೆ ಅಚ್ಚುಮೆಚ್ಚು. 10-15 ನ್ಯಾಷಿನಲ್ ಆಡ್ ಗಳಲ್ಲಿ ಕಾಣಿಸಿಕೊಂಡಿದ್ದೀನಿ. ಈಗ ನನಗೆ ಅಮೂಲ್ಯ ಜೊತೆ ಕವಿರಾಜ್ ನಿರ್ದೇಶನದಲ್ಲಿ ನಟಿಸುವ ಅವಕಾಶ ಸಿಕ್ಕಿದೆ.

kaviraj-directorial-maduveya-mamatheya-kareyole-hero-sooraj-interview

* 'ತೂಗುದೀಪ ಪ್ರೊಡಕ್ಷನ್ಸ್' ಅಂತಹ ಪ್ರತಿಷ್ಟಿತ ಬ್ಯಾನರ್ ನಲ್ಲಿ ನಿಮಗೆ ಅವಕಾಶ ಸಿಕ್ಕಿದ್ದು ಹೇಗೆ?

- 5000 ಹುಡುಗರನ್ನ ಹಿಂದಿಕ್ಕಿ ಆಡಿಷನ್ ನಲ್ಲಿ ಗೆಲ್ಲುವ ಮೂಲಕ ನನಗೆ ನಾಯಕನಾಗುವ ಚಾನ್ಸ್ ಸಿಕ್ತು. ಎರಡು ದಿನಗಳ ಕಾಲ ಆಡಿಷನ್ ನಡೆಯಿತು. ನಿಜ ಹೇಳ್ಬೇಕಂದ್ರೆ, ನಾನು ಎರಡನೇ ದಿನ ಆಡಿಷನ್ ಗೆ ಹಾಜರಾಗಿದ್ದು.

* ಕವಿರಾಜ್ ನಿರ್ದೇಶನದ 'ಮದುವೆಯ ಮಮತೆಯ ಕರೆಯೋಲೆ' ಚಿತ್ರದಲ್ಲಿ ನಿಮಗೆ ಇಂಪ್ರೆಸ್ ಆದ ಅಂಶ?

- ಸ್ಯಾಂಡಲ್ ವುಡ್ ನ ಪ್ರಸಿದ್ಧ ಗೀತಸಾಹಿತಿ ಕವಿರಾಜ್. ಅವರು ಸಾಹಿತ್ಯ ನೀಡಿರುವ ಹಾಡುಗಳು ಹಿಟ್ ಆಗಿವೆ. ಹೀಗಾಗಿ ಅವರು ನಿರ್ದೇಶನ ಮಾಡ್ತಿದ್ದಾರೆ ಅಂದ್ರೆ, ಖಂಡಿತ ಸಿನಿಮಾ ಹಿಟ್ ಆಗುತ್ತೆ ಅನ್ನುವ ಗ್ಯಾರೆಂಟಿ ನನಗಿದೆ. ನಾನು ಅವರೊಂದಿಗೆ ಕೆಲಸ ಮಾಡುವುದಕ್ಕೆ ಎಕ್ಸೈಟ್ ಆಗಿದ್ದೇನೆ. ['ಆಕ್ಷನ್ ಕಟ್ ರಾಜ'ನಾಗಲಿರುವ ಚಿತ್ರಸಾಹಿತಿ ಕವಿರಾಜ್]

kaviraj-directorial-maduveya-mamatheya-kareyole-hero-sooraj-interview

* ಅಮೂಲ್ಯ ಜೊತೆ ಡ್ಯುಯೆಟ್ ಹಾಡುವ ಚಾನ್ಸ್ ಸಿಕ್ಕಿದೆ. ನಿಮ್ಮ ಫೀಲಿಂಗ್...

- ಮೊದಲನೇ ಸಿನಿಮಾದಲ್ಲೇ ಅಮೂಲ್ಯ ಜೊತೆ ಆಕ್ಟ್ ಮಾಡುವ ಚಾನ್ಸ್ ಸಿಕ್ಕಿರುವುದು ನನ್ನ ಅದೃಷ್ಟ. [ಅಂತೂ ಚಿತ್ತಾರದ ಬೆಡಗಿ ಅಮೂಲ್ಯಗೆ ಸೂಕ್ತ ವರ ಸಿಕ್ಕ!]

* 'ಮದುವೆಯ ಮಮತೆಯ ಕರೆಯೋಲೆ' ಚಿತ್ರದ ಬಗ್ಗೆ ನಿಮ್ಮ ಮಾತು....

- ಇದು ಪಕ್ಕಾ ಲವ್ ಸ್ಟೋರಿ ಸಿನಿಮಾ. ಕಂಪ್ಲೀಟ್ ಫ್ಯಾಮಿಲಿ ಎಂಟರ್ಟೇನರ್. ಕವಿರಾಜ್ ರವರ ಕನಸಿನ ಕೂಸಿದು. 'ಮದುವೆಯ ಮಮತೆಯ ಕರೆಯೋಲೆ' ಚಿತ್ರದ ಬಗ್ಗೆ ಆಗಲೇ ಗಾಂಧಿನಗರದಲ್ಲಿ ಟಾಕ್ ಶುರುವಾಗಿದೆ.

kaviraj-directorial-maduveya-mamatheya-kareyole-hero-sooraj-interview

* ಸಿನಿಮಾ ಸೆಟ್ಟೇರುವುದು ಯಾವಾಗ..?

- ಏಪ್ರಿಲ್ ನಲ್ಲಿ ಚಿತ್ರದ ಮುಹೂರ್ತ. ಪಾತ್ರದ ಬಗ್ಗೆ ನಾನೀಗ ತಯಾರಿ ನಡೆಸುತ್ತಿದ್ದೇನೆ. ತುಂಬಾ ಹೋಮ್ ವರ್ಕ್ ಮಾಡ್ತಿದ್ದೇನೆ. [ಸಹಸ್ರ ಸಂಭ್ರಮದಲ್ಲಿ ಕನ್ನಡ ಗೀತಸಾಹಿತಿ 'ಕವಿರಾಜ್']

* ಯಾವ ನಟಿಯರೊಂದಿಗೆ ನಿಮಗೆ ಸ್ಕ್ರೀನ್ ಶೇರ್ ಮಾಡುವುದಕ್ಕೆ ಇಷ್ಟ?

- ನನ್ನ ಫೇವರಿಟ್ ಅಂದ್ರೆ ಕೃತಿ ಖರಬಂಧ, ಮೇಘನಾ ಗಾಂವ್ಕರ್ ಮತ್ತು ಶರ್ಮಿಳಾ ಮಾಂಡ್ರೆ. ಇವರುಗಳೊಂದಿಗೆ ಅವಕಾಶ ಸಿಕ್ಕರೆ ಖಂಡಿತ ಆಕ್ಟ್ ಮಾಡುತ್ತೇನೆ.

English summary
New Talent Sooraj is selected to play lead opposite Amulya in 'Maduveya Mamatheya Kareyole' directed by Lyricist Kaviraj. Here is an Interview with Sooraj.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada