»   » 'ಕೃಷ್ಣಲೀಲಾ'ದಲ್ಲಿ ಚಿನ್ನದ ಗಣಿ ಕಂಡೆ: ಅಜೇಯ್ ರಾವ್ ಸಂದರ್ಶನ

'ಕೃಷ್ಣಲೀಲಾ'ದಲ್ಲಿ ಚಿನ್ನದ ಗಣಿ ಕಂಡೆ: ಅಜೇಯ್ ರಾವ್ ಸಂದರ್ಶನ

Posted By:
Subscribe to Filmibeat Kannada

2003ರಲ್ಲಿ ಬಿಡುಗಡೆಯಾದ Excuse Me ಚಿತ್ರದಲ್ಲಿ ಸುನಿಲ್ ಜೊತೆ ನಾಯಕ ನಟನಾಗುವ ಮುನ್ನ ಅಜೇಯ್ ರಾವ್, ಸಹ ನಟನಾಗಿಯೂ ಕಾಣಿಸಿಕೊಂಡಿದ್ದರು.

ಇದುವರೆಗೆ 18 ಚಿತ್ರಗಳಲ್ಲಿ ನಾಯಕನಾಗಿ ನಟಿಸಿರುವ ಅಜೇಯ್ ರಾವ್ ಈಗ ಕೃಷ್ಣಲೀಲಾ ಚಿತ್ರದ ಮೂಲಕ ನಿರ್ಮಾಪಕರಾಗುತ್ತಿದ್ದಾರೆ. ಇದಕ್ಕಾಗಿ ಶ್ರೀಕೃಷ್ಣ ಆರ್ಟ್ಸ್ ಎಂಡ್ ಕ್ರಿಯೇಷನ್ಸ್ ಎನ್ನುವ ಬ್ಯಾನರನ್ನೂ ಹುಟ್ಟು ಹಾಕಿದ್ದಾರೆ. (ಕೃಷ್ಣಲೀಲಾ ನಾಯಕಿ ಮಯೂರಿ ಸಂದರ್ಶನ)

Krishna Leela Producer cum Hero Ajai Rao interview: Part 1

ಸ್ವಂತ ನಿರ್ಮಾಣದ ಚೊಚ್ಚಲ ಚಿತ್ರ, ಜೊತೆಗೆ ನಾಯಕ ನಟನಾಗಿ ನಟಿಸುತ್ತಿರುವ 'ಕೃಷ್ಣಲೀಲಾ' ಚಿತ್ರದ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲು ಚಿತ್ರ ತಂಡ 'ಒನ್ ಇಂಡಿಯಾ' ಕಚೇರಿಗೆ ಆಗಮಿಸಿತ್ತು. ಅಜೇಯ್ ರಾವ್ ಸಂದರ್ಶನದ ಪ್ರಮುಖಾಂಶ ಇಂತಿದೆ..

ಪ್ರ: ನಾಯಕ ಕಮ್ ನಿರ್ಮಾಪಕರಾಗುತ್ತಿದ್ದೀರಾ, ಹೇಗಿದೆ ಟೆನ್ಸನ್?
ಅಜೇಯ್: ದೇವರಾಣೆಗೂ ಸ್ವಲ್ಪನೂ ಟೆನ್ಸನ್ ಇಲ್ಲ. ಇದು 2010ರಲ್ಲಿ ಸುದ್ದಿವಾಹಿನಿಯಲ್ಲಿ ಬಂದ ಕಥೆಯನ್ನಾಧರಿಸಿದ ಸಿನಿಮಾ. ರಾಜ್ಯದಲ್ಲಿ ಒಂದೇ ದಿನದಲ್ಲಿ ಎಲ್ಲಾ ಏರಿಯಾದ ರೈಟ್ಸ್ ಸೋಲ್ಡ್ ಔಟ್ ಆಗಿದೆ. ನನ್ನ ಮೊದಲ ಸಿನಿಮಾ ಲಾಭದಲ್ಲಿದೆ. ಇನ್ನೇನು ಬಂದರೂ ಅದು ಪ್ರಾಫಿಟ್.

Krishna Leela Producer cum Hero Ajai Rao interview: Part 1

ಪ್ರ: ಸೆನ್ಸಾರ್ ಹೋದಾಗ ಮಂಡಳಿಯರ ಪ್ರತಿಕ್ರಿಯೆ ಹೇಗಿತ್ತು?
ಅಜೇಯ್: ಚಿತ್ರದಲ್ಲಿ ಧಮ್ ಇದ್ದರೆ ಗಾಂಧಿನಗರದಲ್ಲಿ ಒಳ್ಳೆ ಸುದ್ದಿ ಹರಡುತ್ತದೆ. ಈ ಚಿತ್ರ ರಾಜ್ಯದಲ್ಲಿ ಕುತೂಹಲ ಹುಟ್ಟುಹಾಕಿದೆ. ಚಿತ್ರಕ್ಕೆ ಯು ಸರ್ಟಿಫಿಕೇಟ್ ಸಿಕ್ಕಿದೆ. ಸೆನ್ಸಾರ್ ಮಂಡಳಿಯವರು ಭೇಷ್ ಎಂದಿದ್ದಾರೆ. ತುಂಬಾ ದಿನದ ಮೇಲೆ ಒಳ್ಳೆ ಚಿತ್ರ ನೋಡಿದ್ದೇವೆಂದು ಬೆನ್ನು ತಟ್ಟಿದ್ದಾರೆ.

ಪ್ರ: ಚಿತ್ರ ನಿರ್ಮಾಣಕ್ಕೆ ಹೇಗೆ ಮನಸ್ಸು ಮಾಡಿದ್ರಿ?
ಅಜೇಯ್ : ಶಶಾಂಕ್ ಸರ್ ಚಿತ್ರದ ಕಥೆಯ ಬಗ್ಗೆ ಹೇಳುತ್ತಿದ್ದಾಗ ನಮ್ಮ ಜೊತೆ ಎರಡು ನಿರ್ಮಾಪಕರೂ ಇದ್ದರು. ಚಿತ್ರದ ಕಥೆ ಕೇಳುತ್ತಾ, ಕೇಳುತ್ತಾ ಈ ಚಿತ್ರ ನಾನೇ ನಿರ್ಮಿಸಿದರೆ ಹೇಗೆ ಎಂದು ಅನಿಸಿತು. ಈ ಚಿತ್ರದಲ್ಲಿ ಚಿನ್ನದ ಗಣಿ ಇರುವುದನ್ನು ಕಂಡೆ, ನಿರ್ಮಾಣಕ್ಕೆ ಮುಂದಾದೆ. ಸಂದರ್ಶನದ ಮುಂದಿನ ಭಾಗಕ್ಕೆ ಇಲ್ಲಿ ಕ್ಲಿಕ್ಕಿಸಿ

English summary
Krishna Leela Producer cum Hero Ajai Rao interview to Filmibeat Kannada: Part 1

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada