»   » 'ಕಾಮಿಡಿ ಕಿಲಾಡಿ' ಲೋಕೇಶ್ ಬಗ್ಗೆ ನಿಮಗೆಲ್ಲಾ ಗೊತ್ತಿಲ್ಲದ ಸತ್ಯ ಸಂಗತಿ ಇಲ್ಲಿದೆ

'ಕಾಮಿಡಿ ಕಿಲಾಡಿ' ಲೋಕೇಶ್ ಬಗ್ಗೆ ನಿಮಗೆಲ್ಲಾ ಗೊತ್ತಿಲ್ಲದ ಸತ್ಯ ಸಂಗತಿ ಇಲ್ಲಿದೆ

Posted By:
Subscribe to Filmibeat Kannada

'ಕಾಮಿಡಿ ಕಿಲಾಡಿ' ಲೋಕೇಶ್ ಕುಮಾರ್ ಯಾರಿಗ್ತಾನೆ ಗೊತ್ತಿಲ್ಲ ಹೇಳಿ.? 'ಜೋಗಿ' ಪ್ರೇಮ್ ರವರನ್ನು ಅನುಕರಣೆ ಮಾಡಿದ ಲೋಕೇಶ್ ಕುಮಾರ್ ಇಡೀ ಕರ್ನಾಟಕಕ್ಕೆ ಚಿರಪರಿಚಿತ.

ಆದ್ರೆ, ಜೀ ಕನ್ನಡ ವಾಹಿನಿಯ 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮಕ್ಕೆ ಬರುವುದಕ್ಕೂ ಮುಂಚೆ ಬೇರೆ ರಿಯಾಲಿಟಿ ಶೋಗಳಲ್ಲಿ ಹಾಗೂ ಸಿನಿಮಾಗಳಲ್ಲಿ 'ಹೀರೋ' ಆಗಿ ಲೋಕೇಶ್ ನಟಿಸಿದ್ದರು ಎಂಬ ಸಂಗತಿ ನಿಮಗೆ ಗೊತ್ತಾ.?['ಕಾಮಿಡಿ ಕಿಲಾಡಿಗಳು' ಗೆಲ್ಲದಿದ್ದರೂ, ಬದುಕಿನ ಬಂಡಿಯಲ್ಲಿ ಲೋಕೇಶ್ ಅಪ್ರತಿಮ 'ಸಾಧಕ']

ನಿಮ್ಮ 'ಫಿಲ್ಮಿಬೀಟ್ ಕನ್ನಡ'ಗೆ ನೀಡಿದ ಸಂದರ್ಶನದಲ್ಲಿ ಲೋಕೇಶ್ ಕುಮಾರ್ ಕುರಿತ ಕೆಲ ಸತ್ಯ ಸಂಗತಿಗಳ ಅನಾವರಣ ಆಗಿದೆ. ಓದಿರಿ....
ಸಂದರ್ಶನ - ಹರ್ಷಿತಾ ರಾಕೇಶ್

ಪೂಜಾ ಗಾಂಧಿ ಜೊತೆ ನಟಿಸಿದ್ದ ಲೋಕೇಶ್.!

''ಸುಮಾರು ಐದಾರು ವರ್ಷಗಳ ಹಿಂದೆ ನಾನೊಂದು ಸಿನಿಮಾ ಮಾಡಿದ್ದೆ. 'ಜನವರಿ 1 ಬಿಡುಗಡೆ' ಅಂತ. ಅದರಲ್ಲಿ ನನ್ನದು ಮೇನ್ ಲೀಡ್ ರೋಲ್. ಅದು ರಿಲೀಸ್ ಆಗಲಿಲ್ಲ. ನನಗೆ ತುಂಬಾ ಬೇಸರ ಆಗಿತ್ತು'' - ಲೋಕೇಶ್ ಕುಮಾರ್ ['ಕಾಮಿಡಿ ಕಿಲಾಡಿ' ಲೋಕೇಶ್ ಕುಮಾರ್ ಗೆ ಡಿಮ್ಯಾಂಡಪ್ಪೋ.. ಡಿಮ್ಯಾಂಡು.!]

ಹೀರೋ ನಂಬರ್ 1

''ಅದಕ್ಕೂ ಮುನ್ನ ಕಸ್ತೂರಿ ಟಿವಿಯಲ್ಲಿ ಒಂದು ರಿಯಾಲಿಟಿ ಶೋ ಮಾಡಿದ್ದೆ. 'ಹೀರೋ ನಂಬರ್ 1' ಅಂತ. ಅದರಲ್ಲಿ ನಾನು ಗೆಲ್ಲಬೇಕಿತ್ತು. ಆದ್ರೆ, ಆಗಲಿಲ್ಲ'' - ಲೋಕೇಶ್ ಕುಮಾರ್

ಧಾರಾವಾಹಿಯಲ್ಲಿ ನಟನೆ

''ಅದಾದ್ಮೇಲೆ ನನ್ನನ್ನ ಮಾಸ್ಟರ್ ಆನಂದ್ ರವರು ನನಗೆ 'ಪಡುವಾರಳ್ಳಿ ಪಡ್ಡೆಗಳು' ಸೀರಿಯಲ್ ಗೆ ಚಾನ್ಸ್ ಕೊಟ್ಟರು. ಅದರಲ್ಲಿ ನಾನೇ ಲೀಡ್ ರೋಲ್'' - ಲೋಕೇಶ್ ಕುಮಾರ್

ಸಿನಿಮಾಗಳಲ್ಲಿ ಅಭಿನಯ

''ಅದಾದ್ಮೇಲೆ ನಾನು 'ಲೂಸ್‌ಗಳು', 'ಯು ದಿ ಎಂಡ್ ಎ' ಸಿನಿಮಾಗಳಲ್ಲಿ ನಟಿಸಿದೆ'' - ಲೋಕೇಶ್ ಕುಮಾರ್

ಕಾಮಿಡಿ ಕಿಲಾಡಿಗಳಿಗೆ ಎಂಟ್ರಿ ಕೊಟ್ಟಿದ್ದು...

''ಇದೆಲ್ಲ ಆದ ನಂತರ ನಾನು 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮಕ್ಕೆ ಆಡಿಷನ್ ಕೊಟ್ಟೆ. ನನಗೆ ಕಾಮಿಡಿ ಮಾಡುವುದು ಅಂದ್ರೆ ತುಂಬಾ ಇಷ್ಟ. ನನಗೆ ಜಗ್ಗೇಶ್ ಅಂದ್ರೆ ಪ್ರಾಣ. ಅವರ ತರಹ ಡೈಲಾಗ್ ಹೊಡೆದು ಮಿಮಿಕ್ರಿ ಮಾಡುವುದನ್ನು ಶುರು ಮಾಡಿದೆ. ಟಿವಿಯಲ್ಲಿ ಪ್ರೊಮೋ ನೋಡಿದ್ಮೇಲೆ ಆಡಿಷನ್ ಕೊಟ್ಟಿದ್ದು. ಸೆಲೆಕ್ಟ್ ಆಗುತ್ತೇನೋ, ಇಲ್ವೋ ಅಂತ ಭಯ ಇತ್ತು. ಕೊನೆಗೆ ಸೆಲೆಕ್ಟ್ ಆದೆ. ಫೈನಲ್ ವರೆಗೂ ಬಂದೆ'' - ಲೋಕೇಶ್ ಕುಮಾರ್

'ಝಿಂದಾ' ಚಿತ್ರಕ್ಕೆ ಹೀರೋ ಆಗ್ಬೇಕಿತ್ತು!

''ಕಾಮಿಡಿ ಕಿಲಾಡಿಗಳು' ಶೋಗೆ ಬರುವ ಹಿಂದಿನ ದಿನ 'ಝಿಂದಾ' ಚಿತ್ರಕ್ಕೆ ನನ್ನನ್ನ ಹೀರೋ ಆಗಿ ಮುಸ್ಸಂಜೆ ಮಹೇಶ್ ಸೆಲೆಕ್ಟ್ ಮಾಡಿದ್ದರು. ಮಾರನೇ ದಿನ ಫೋಟೋಶೂಟ್ ಇತ್ತು. ಅವತ್ತೇ 'ಕಾಮಿಡಿ ಕಿಲಾಡಿಗಳು' ಫೈನಲ್ ರೌಂಡ್ ಸೆಲೆಕ್ಷನ್ ಕೂಡ. ಯಾವುದನ್ನ ಸೆಲೆಕ್ಟ್ ಮಾಡಬೇಕು ಅಂತ ಗೊತ್ತಾಗುತ್ತಿರಲಿಲ್ಲ. ಆಮೇಲೆ 'ಕಾಮಿಡಿ ಕಿಲಾಡಿಗಳು' ಆಯ್ಕೆ ಮಾಡಿಕೊಂಡೆ. ನಾನು ಈ ಹಿಂದೆ ಸಿನಿಮಾ ಮಾಡಿದ್ದರೂ, ಯಾರೂ ನನ್ನನ್ನ ಗುರುತಿಸುತ್ತಿರಲಿಲ್ಲ. ಆದ್ರೆ, ಈಗ ಎಲ್ಲರೂ ಲೋಕೇಶ್... ಕಾಮಿಡಿ ಕಿಲಾಡಿ ಅಂತಾರೆ. ಬೆಳಗೆದ್ದು ಹಾಲು ತೆಗೆದುಕೊಳ್ಳಲು ಹೋದಾಗಲೂ ಎಲ್ಲರೂ ಕಂಡು ಹಿಡಿಯುತ್ತಾರೆ. ಬಹಳ ಖುಷಿ ಇದೆ ನನಗೆ'' - ಲೋಕೇಶ್ ಕುಮಾರ್

ಇದಕ್ಕಿಂತ ಖುಷಿ ಬೇಕಾ.?

''ನಮ್ಮ ಡಾನ್ ಬಾಸ್ಕೋ ಸಂಸ್ಥೆ ಮನೆ ಬಿಟ್ಟು ಬಂದ ಮಕ್ಕಳಿಗೆ ಇರುವುದು. ಇಂದು ಆ ಸಂಸ್ಥೆಯ ಮಕ್ಕಳಿಗೆ ನಾನು ರೋಲ್ ಮಾಡೆಲ್ ಆಗಿದ್ದೇನೆ. ಕಷ್ಟದಿಂದ ಬೆಳೆದು ನನ್ನನ್ನ ಇಂದು ಜನ ಪ್ರೀತಿಸುತ್ತಾರೆ. ಅದೇ ಖುಷಿ ನನಗೆ'' - ಲೋಕೇಶ್ ಕುಮಾರ್

English summary
Here is an Exclusive Interview of Lokesh Kumar, Grand Finale Contestant of Zee Kannada Channel's popular show 'Comedy Khiladigalu'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada