»   » ಮಮತೆಯಿಂದ ಕವಿರಾಜ್ ನೀಡಿದ ಮದುವೆಯ ಕರೆಯೋಲೆ

ಮಮತೆಯಿಂದ ಕವಿರಾಜ್ ನೀಡಿದ ಮದುವೆಯ ಕರೆಯೋಲೆ

Posted By: ಸುನಿ ಗೌಡ
Subscribe to Filmibeat Kannada

ಮೊಟ್ಟ ಮೊದಲ ಬಾರಿಗೆ ಡೈರೆಕ್ಟರ್ ಕ್ಯಾಪ್ ತೊಟ್ಟಿರುವ ಕನ್ನಡದ ಖ್ಯಾತ ಗೀತೆ ರಚನೆಕಾರ ನಿರ್ದೇಶಕ ಕವಿರಾಜ್ ಅವರು 'ಮದುವೆಯ ಮಮತೆಯ ಕರೆಯೋಲೆ' ಎಂಬ ವಿಭಿನ್ನ ಸಿನಿಮಾವನ್ನು ಮಾಡಿ ಗಾಂಧಿನಗರದಲ್ಲಿ ಸುದ್ದಿಯಾಗಿದ್ದಾರೆ.

ಚೊಚ್ಚಲ ನಿರ್ದೇಶನದಲ್ಲೇ ಖ್ಯಾತ ನಟರಿಂದ ಶಭಾಷ್ ಗಿರಿ ಗಿಟ್ಟಿಸಿಕೊಂಡಿರುವ ಕವಿರಾಜ್ ಅವರು ತಮ್ಮ ಚಿತ್ರದ ಬಗ್ಗೆ ತುಂಬಾ ನಿರೀಕ್ಷೆಗಳನ್ನು ಹೊಂದಿದ್ದಾರೆ. ಜೊತೆಗೆ ಮೊದಲ ಚಿತ್ರಕ್ಕೆ ದೊಡ್ಡ ಬ್ಯಾನರ್ ಅಡಿಯಲ್ಲಿ ಅವಕಾಶ ಸಿಕ್ಕಿದ್ದಕ್ಕೆ ತುಂಬಾ ಖುಷಿ ವ್ಯಕ್ತಪಡಿಸಿರುವ ಕವಿರಾಜ್ ಅವರು ಕನ್ನಡ ಫಿಲ್ಮಿಬೀಟ್ ಜೊತೆ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ[ಬೆಸ್ಟ್ ಆಫ್ ಸ್ಯಾಂಡಲ್ ವುಡ್ : ನಿಮ್ಮ ಆಯ್ಕೆ ಯಾವುದು?]

'MMK' movie debudent director Kaviraj Exclusive Interview Part 1st

'ಮದುವೆಯ ಮಮತೆಯ ಕರೆಯೋಲೆ' ಕವಿರಾಜ್ ಅವರ ಜೊತೆ ಫಿಲ್ಮಿಬೀಟ್ ನಡೆಸಿದ ಸಂಪೂರ್ಣ ಸಂದರ್ಶನ ಝಲಕ್ ಇಲ್ಲಿದೆ ನೋಡಿ...

* ಚೊಚ್ಚಲ ಸಿನಿಮಾಗೆ ದೊಡ್ಡ ಬ್ಯಾನರ್ ಸಿಕ್ಕಿದೆ ಹೇಗನ್ನಿಸ್ತಾ ಇದೆ? ಮೊದಲ ಬಾರಿಗೆ ನಿರ್ದೇಶನ ಮಾಡಿದ್ದು ಹೇಗನ್ನಿಸ್ತು.[ಕವಿರಾಜ್ ಕಂಡ್ರೆ ಕಿಚ್ಚ ಸುದೀಪ್ ಗೆ ಹೊಟ್ಟೆಕಿಚ್ಚು ಯಾಕೆ?]

- ನನ್ನ ಹೊಸ ಅನುಭವವನ್ನು ಒಂದೇ ಮಾತಿನಲ್ಲಿ ಹೇಳಬೇಕೆಂದರೆ ತುಂಬಾ ಮಜವಾಗಿತ್ತು. ಅದಕ್ಕೆ ಮುಖ್ಯ ಕಾರಣ ಅಂದ್ರೆ, ಮೊದಲನೇ ನಿರ್ದೇಶನಕ್ಕೆ ಸಿಕ್ಕಿದ ದೊಡ್ಡ ಬ್ಯಾನರ್ ತೂಗುದೀಪ ಪ್ರೊಡಕ್ಷನ್ಸ್. ಅವರ ಪ್ರೊಡಕ್ಷನ್ ನಲ್ಲಿ ಈಗಾಗಲೇ ಮೂರು ಸಿನಿಮಾಗಳು ಹಿಟ್ ಆಗಿದೆ. ಎಲ್ಲಾ ಅನುಭವಗಳು ಇದೆ. ಮತ್ತೆ ಒಳ್ಳೆಯ ಕೆಲಸಗಾರರಿದ್ದಾರೆ. ಹಾಗಾಗಿ ಸಿನಿಮಾ ಮಾಡೋದಕ್ಕೆ ತುಂಬಾ ಸುಲಭ ಆಯ್ತು. ಆಮೇಲೆ ಸಿನಿಮಾ ಮೇಕಿಂಗ್ ಅಂತೂ ತುಂಬಾ ಮಜವಾಗಿತ್ತು. ಯಾಕೆಂದ್ರೆ ನನ್ನ ಕನಸು ಒಂದೊಂದಾಗಿ ದೃಶ್ಯ ರೂಪಕ್ಕೆ ತಿರುಗೋದನ್ನ ನೋಡೋದೇ ರೋಚಕ ಅನುಭವ.

'MMK' movie debudent director Kaviraj Exclusive Interview Part 1st

ಈ ಸಿನಿಮಾ ಹೇಗೆ ಮುಗೀತು ಅಂತಾನೇ ಗೊತ್ತಿಲ್ಲ. ನಮಗೆ ಯಾವ ಹಂತದಲ್ಲೂ ಯಾವ ರೀತಿಯಲ್ಲೂ ತೊಂದರೆ ಆಗಿಲ್ಲ ಅಷ್ಟು ಸಲೀಸಾಗಿ ಸಿನಿಮಾ ಮುಗಿಯಿತು.ಅದಕ್ಕೆ ತೂಗುದೀಪ್ ಪ್ರೊಡಕ್ಷನ್ಸ್ ಗೆ ಧನ್ಯವಾದ ಹೇಳೋಕೆ ಇಷ್ಟಪಡ್ತೀನಿ.

* ಮ್ಯೂಸಿಕ್ ಹಿಟ್ ಆದ ಬಗ್ಗೆ ಏನ್ ಹೇಳ್ತೀರಾ? ನಿಮ್ಮ ಇಷ್ಟದ ಹಾಡು.

- ಸಾವಿರಾರು ಹಾಡುಗಳನ್ನು ಬರೆದಿರುವ ನಾನು ನನ್ನ ನಿರ್ದೇಶನದ ಚಿತ್ರದಲ್ಲಿ ಒಳ್ಳೆಯ ಹಾಡುಗಳು ಇದ್ದೇ ಇರುತ್ತೆ ಅಂತ ಜನ ನಿರೀಕ್ಷೆ ಮಾಡುತ್ತಾರೆ. ಅದಕ್ಕೆ ಮೋಸ ಆಗಬಾರದು ಅಂತ ನಾನು ಆದಷ್ಟು ಒಳ್ಳೆಯ ಹಾಡುಗಳನ್ನು ನೀಡಲು ಪ್ರಯತ್ನಿಸಿದೆ. ಅದಕ್ಕೆ ಹರಿಕೃಷ್ಣ ಅವರು ಸಾಥ್ ಕೊಟ್ರು. ಇವತ್ತು ನಮ್ಮ ಸಿನಿಮಾದ ನಾಲ್ಕಕ್ಕೆ ನಾಲ್ಕು ಸಾಂಗ್ ಹಿಟ್ ಆಗಿದೆ.

'MMK' movie debudent director Kaviraj Exclusive Interview Part 1st

ನಮ್ಮ ಸಿನಿಮಾದ ಟೈಟಲ್ ಗೆ ಈ ಹಾಡುಗಳು ಆಮಂತ್ರಣ ಪತ್ರಿಕೆ ಇದ್ದಂತೆ. ಗಾಂಧಿನಗರದಲ್ಲಿ ಹಾಡುಗಳು ಹಿಟ್ ಅದರೆ ಅರ್ಧ ಸಿನಿಮಾ ಹಿಟ್ ಆದಂತೆ ಅಂತ ಪ್ರೇಕ್ಷಕರ ಅಬಿಪ್ರಾಯ. ನಾನು ನನಗೆ ಬೇಕಾದ ಹಾಗೆ ಹರಿಕೃಷ್ಣ ಅವರಲ್ಲಿ ಹೇಳಿ ಹಾಡುಗಳನ್ನು ಚಿತ್ರಕ್ಕೆ ಬೇಕಾದ ರೀತಿಯಲ್ಲಿ ಮಾಡಿಕೊಂಡಿದ್ದೇನೆ. ಸುಮಾರು 11 ಹಾಡುಗಳಲ್ಲಿ ನಾಲ್ಕು ಸೆಲೆಕ್ಟ್ ಆಯ್ತು. ಥ್ಯಾಂಕ್ಸ್ ಟೂ ಹರಿಕೃಷ್ಣ. ನನಗೆ ಎಲ್ಲಾ ಹಾಡುಗಳು ಇಷ್ಟ.

English summary
Kannada Movie 'Maduveya Mamatheya Kareyole' releasing this week (January 8th). Kannada Lyricist Kaviraj spoke to Filmibeat. Lyricist Kaviraj Shared his experience about 'Maduveya Mamatheya Kareyole' movie shooting. Here is the Exclusive Interview.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada