For Quick Alerts
  ALLOW NOTIFICATIONS  
  For Daily Alerts

  'ಕ್ರಾಂತಿ' ಸಂದರ್ಶನದಲ್ಲಿ 'ಗಂಧದ ಗುಡಿ' ಬಗ್ಗೆ ದರ್ಶನ್ ಮಾತು; ಅಪ್ಪು ಕೊನೆಯ ಚಿತ್ರ ನೋಡಿದ್ರಾ ದಚ್ಚು?

  |

  ಮುಂಬರುವ ಜನವರಿ 26ಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಕ್ರಾಂತಿ ಬಿಡುಗಡೆಯಾಗಲಿದೆ. ಇತ್ತೀಚೆಗಷ್ಟೆ ಪುಟ್ಟದೊಂದು ಕಾರ್ಯಕ್ರಮವನ್ನು ನಡೆಸಿ ಗಣರಾಜ್ಯೋತ್ಸವದ ವಿಶೇಷ ದಿನದಂದು ಕ್ರಾಂತಿ ಬೆಳ್ಳಿತೆರೆಗೆ ಬರಲಿದೆ ಎಂಬ ವಿಷಯವನ್ನು ಹಂಚಿಕೊಂಡಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕ್ರಾಂತಿ ಚಿತ್ರತಂಡ ಸದ್ಯ ಪ್ರಚಾರವನ್ನು ಆರಂಭಿಸಿದ್ದಾರೆ.

  ಚಿತ್ರದ ಕುರಿತಾಗಿ ಸಂದರ್ಶನಗಳನ್ನು ನೀಡುವ ಮೂಲಕ ಸ್ವತಃ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಚಾರ ಕಾರ್ಯಗಳನ್ನು ಆರಂಭಿಸಿದ್ದಾರೆ. ನಮ್ಮ ಕನ್ನಡ ಫಿಲ್ಮಿಬೀಟ್ ನಡೆಸಿದ ಸಂದರ್ಶನದಲ್ಲಿ ಪಾಲ್ಗೊಂಡ ದರ್ಶನ್ ಕ್ರಾಂತಿ ಚಿತ್ರದ ಬಗೆಗಿನ ಮಾಹಿತಿಗಳನ್ನು ಹಂಚಿಕೊಂಡರು. ಚಿತ್ರದಲ್ಲಿ ಸರ್ಕಾರಿ ಶಾಲೆ ಹಾಗೂ ಖಾಸಗಿ ಶಾಲೆಗಳ ನಡುವಿನ ವ್ಯತ್ಯಾಸವನ್ನು ಬಿಡಿಸಿ ಹೇಳಿ ಸಂದೇಶ ನೀಡಿದ್ದೇವೆ ಎಂದ ದರ್ಶನ್ ಸಂದರ್ಶನದಲ್ಲಿ ಪುನೀತ್ ರಾಜ್‌ಕುಮಾರ್ ಅವರ ಗಂಧದ ಗುಡಿ ಚಿತ್ರದ ಬಗ್ಗೆ ಕೂಡ ಮಾತನಾಡಿ ಸಿನಿ ರಸಿಕರಲ್ಲಿ ಇದ್ದ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.

  ಹೌದು, ಇತ್ತೀಚೆಗಷ್ಟೆ ಬಿಡುಗಡೆಗೊಂಡು ಉತ್ತಮ ಪ್ರದರ್ಶನ ಕಾಣುತ್ತಿರುವ ಪುನೀತ್ ರಾಜ್‌ಕುಮಾರ್ ಅವರ ಗಂಧದ ಗುಡಿ ಚಿತ್ರವನ್ನು ನಟ ದರ್ಶನ್ ವೀಕ್ಷಿಸಿದ್ದಾರಾ ಎಂಬ ಪ್ರಶ್ನೆ ಪ್ರೇಕ್ಷಕರ ವಲಯದಲ್ಲಿತ್ತು. ಈ ಪ್ರಶ್ನೆಗೆ ಸ್ವತಃ ದರ್ಶನ್ ಅವರೇ ಈ ಕೆಳಕಂಡಂತೆ ಉತ್ತರ ನೀಡಿದ್ದಾರೆ.

  ಗಂಧದ ಗುಡಿ ನೋಡಿದ್ರಾ?

  ಗಂಧದ ಗುಡಿ ನೋಡಿದ್ರಾ?

  ಇನ್ನು ಸಂದರ್ಶನದಲ್ಲಿ ದರ್ಶನ್ ಎಂದರೆ ಎಲ್ಲರಿಗೂ ಕಾಡು ಹಾಗೂ ವನ್ಯಜೀವಿಗಳು ನೆನಪಿಗೆ ಬರುತ್ತದೆ, ಕಾಡಿನ ಕುರಿತಾಗಿ ಇತ್ತೀಚಿಗಷ್ಟೆ ಪುನೀತ್ ಅವರ ಗಂಧದ ಗುಡಿ ಚಿತ್ರ ಕೂಡ ಬಿಡುಗಡೆಯಾಯಿತು ಚಿತ್ರ ನೋಡಿದ್ರಾ, ಹೇಗೆ ಎನಿಸಿತು ಎಂದು ನಿರೂಪಕಿ ಪ್ರಶ್ನೆಯನ್ನು ಹಾಕಿದರು. ಈ ಪ್ರಶ್ನೆಗೆ ಉತ್ತರಿಸಿದ ದರ್ಶನ್ "ಚೆನ್ನಾಗಿದೆ, ಇಟ್ಸ್ ಗುಡ್" ಎಂದು ಹೇಳಿದರು. ಈ ಮೂಲಕ ದರ್ಶನ್ ಗಂಧದ ಗುಡಿ ನೋಡಿಲ್ಲ ಎಂದು ಹರಿದಾಡುತ್ತಿದ್ದ ಸುದ್ದಿಗಳಿಗೆ ದರ್ಶನ್ ಬ್ರೇಕ್ ಹಾಕಿದ್ದಾರೆ.

  ಕಾಡು ಸುತ್ತೋಕೆ ಒಲವು ಇರಬೇಕು

  ಕಾಡು ಸುತ್ತೋಕೆ ಒಲವು ಇರಬೇಕು

  ಇನ್ನೂ ಮುಂದುವರಿದು ಮಾತನಾಡಿದ ದರ್ಶನ್ ಕಾಡನ್ನು ಸುತ್ತೋಕೆ ಆಸಕ್ತಿಗಿಂತ ಹೆಚ್ಚಾಗಿ ಒಲವಿದ್ರೆ ನೀವು ಎಲ್ಲಿಗೆ ಬೇಕಾದರೂ ಹೋಗಬಹುದು ಎಂದರು. ನಾನು ಸಹ ಕಾಡನ್ನು ಸುತ್ತುತ್ತೇನೆ, ಇಲ್ಲಿ ಆದರೆ ಜಿಮ್ ಇದೆಯಾ, ಎಸಿ ಬರುತ್ತಾ ಅಂತ ನೋಡ್ತೇವೆ ನಾವು, ಕಾಡಲ್ಲಿ ಎಸಿ ಏನೂ ಅಗತ್ಯವಿಲ್ಲ ಎಂದು ದರ್ಶನ್ ಕಾಡಿನಲ್ಲಿ ಕಾಲ ಕಳೆಯುವುದು ತಮಗಿಷ್ಟ ಎಂಬುದನ್ನು ತಿಳಿಸಿದರು.

  ಕಾವಲುಗಾರರ ಜತೆ ಕಾಡು ಸುತ್ತಬೇಕು

  ಕಾವಲುಗಾರರ ಜತೆ ಕಾಡು ಸುತ್ತಬೇಕು

  ಇನ್ನು ಕಾಡನ್ನು ಕಾವಲು ಕಾಯುವಂತಹ ಕಾವಲುಗಾರರಿರುತ್ತಾರೆ, ಅವರ ಜೊತೆ ಕಲ ಕಳೆಯಬೇಕು, ಅವಾಗ ನಿಮಗೆ ನಿಜವಾದ ಕಾಡು ಎಂದರೇನು ಎಂಬುದು ಗೊತ್ತಾಗುತ್ತೆ ಎಂದು ದರ್ಶನ್ ಹೇಳಿದರು. ತಾವೂ ಸಹ ಕಾಡು ಸುತ್ತಲು ಹೊರಟಾಗ ಅನುಮತಿ ಪಡೆದುಕೊಂಡು ಕಾವಲುಗಾರರ ಜತೆಯೇ ಕಾಡು ಸುತ್ತುತ್ತೇನೆ ಎಂದು ದರ್ಶನ್ ತಿಳಿಸಿದರು.

  English summary
  Puneeth Rajkumar's Gandhada Gudi is a good movie says Darshan in Kranti interview. Read on
  Saturday, November 19, 2022, 14:03
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X