For Quick Alerts
  ALLOW NOTIFICATIONS  
  For Daily Alerts

  ನನ್ ಮದ್ವೆ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಬುಲೆಟ್ ಹಾರಿಸಿದ ಬುಲ್ ಬುಲ್

  |
  ಬುಲೆಟ್ ಹಾರಿಸಿದ ಬುಲ್ ಬುಲ್ | FILMIBEAT KANNADA

  ಕನ್ನಡದ ಮೋಸ್ಟ್ ಬ್ಯೂಟಿಫುಲ್ ನಟಿ ರಚಿತಾ ರಾಮ್ ಈಗ ಸಿನಿಮಾ ವಿಚಾರಕ್ಕಿಂತ ಮದುವೆ ವಿಷ್ಯಕ್ಕೆ ಹೆಚ್ಚು ಸುದ್ದಿಯಾಗ್ತಿದ್ದಾರೆ. 'ಓ ನೀವು ರಾಜಕಾರಣಿಯನ್ನ ಮದುವೆ ಆಗ್ತಿದ್ದಿರಂತೆ, ರಾಜಕೀಯಕ್ಕೆ ಬರೋ ಪ್ಲಾನ್ ಕೂಡ ಇದೆಯಂತೆ...'' ಎಂದು ಹೋದಲ್ಲಿ ಬಂದಲ್ಲಿ ಕೇಳ್ತಾನೆ ಇದ್ದಾರೆ.

  ಇದನ್ನ ಕೇಳಿದ್ಮೇಲೂ ಸುಮ್ಮನೆ ಇದ್ದರೇ ಅದು ನಿಜಾ ಅಂದುಕೊಳ್ತಾರೆ ಅಂತ ರಚಿತಾ ಕೂಡ ಈ ಬಗ್ಗೆ ಮಾತಾಡಿದ್ದಾರೆ. ''ಆ ಥರ ಏನೂ ಇಲ್ಲಪ್ಪಾ, ರಾಜಕೀಯಕ್ಕೆ ಬರೋದು ನಮ್ಮ ಕೈಯಲ್ಲಿ ಇಲ್ಲ, ಭವಿಷ್ಯದಲ್ಲಿ ಏನಾಗುತ್ತೇ ಅಂತ ಈಗಲೇ ಹೇಳೋಕೆ ಆಗಲ್ಲ. ಇನ್ನು ಮದುವೆ ಬಗ್ಗೆ ಯಾಕೆ ಸುಮ್ಮನೇ ಗಾಸಿಪ್ ಆಗ್ತಿದೆ, ನಾನು ಯಾರನ್ನ ಲವ್ ಮಾಡ್ತಿಲ್ಲ, ಯಾವ ರಾಜಕಾರಣಿಯನ್ನೂ ಮದುವೆ ಆಗ್ತಿಲ್ಲ. ಸದ್ಯಕ್ಕೆ ಸಿಂಗಲ್ ಆಗಿ ಹ್ಯಾಪಿ ಆಗಿದ್ದೀನಿ'' ಅಂತ ನೇರವಾಗಿ ಹೇಳಿದ್ರು.

  'ಬುಲ್ ಬುಲ್' ಹುಡುಗಿಯ ಇಷ್ಟದ ಸೀರೆ ಮತ್ತು ಇಷ್ಟದ ಫೋಟೋ ಕಥೆ

  ಬಟ್, ಆದ್ರೂ ರಚಿತಾ ಅವರನ್ನ ಮದುವೆ ಆಗ್ತಾರೆ, ಇವರನ್ನ ಮದುವೆ ಆಗ್ತಾರೆ ಅನ್ನೋದು ಮಾತ್ರ ನಿಂತಿಲ್ಲ. ಈ ಬಗ್ಗೆ ರಚಿತಾ ಫಿಲ್ಮಿಬೀಟ್ ಜೊತೆ ಓಪನ್ ಆಗಿ ಮಾತನಾಡಿದ್ದು, ಸುಳ್ಳು ಸುದ್ದಿ ಮಾಡೋರಿಗೆ, ಗಾಸಿಪ್ ಹಬ್ಬಿಸೋರಿಗೆ ಪಟಾಕಿ ಹಚ್ಚಿದ್ದಾರೆ. ಮುಂದೆ ಓದಿ.....

  ನಾನು ಸಿಂಗಲ್, ಮದುವೆ ಸದ್ಯಕ್ಕಿಲ್ಲ

  ನಾನು ಸಿಂಗಲ್, ಮದುವೆ ಸದ್ಯಕ್ಕಿಲ್ಲ

  ''ರಚಿತಾ ರಾಮ್ ಆ ರಾಜಕಾರಣಿಯನ್ನ ಮದ್ವೆ ಆಗ್ತಾರೆ, ಈ ನಟನ ಜೊತೆ ಲವ್ವಲ್ಲಿ ಇದ್ದಾರೆ ಆಗ್ತಾರೆ ಎಂಬ ಅಂತೆ-ಕಂತೆಗಳು ಕೇಳಿಬರ್ತೀವೆ. ಬಟ್, ಅದೆಲ್ಲಾ ಶುದ್ಧ ಸುಳ್ಳು. ಯಾಕಂದ್ರೆ, ರಚಿತಾ ರಾಮ್ ಸಿಂಗಲ್. ಯಾರನ್ನ ಲವ್ ಮಾಡ್ತಿಲ್ಲ. ಸದ್ಯಕ್ಕೆ ಯಾರನ್ನ ಮದುವೆ ಆಗೋ ಪ್ಲಾನ್ ಕೂಡ ಇಲ್ಲ. ಈಗ ಏನೇ ಇದ್ರು ಸಿನಿಮಾ ಮಾತ್ರ. ಕೈತುಂಬಾ ಸಿನಿಮಾಗಳಿವೆ. ಮದ್ವೆ, ಲವ್ವು, ರಾಜಕೀಯ ಎಲ್ಲವೂ ಬರಿ ಓಳು'' ಎಂದು ಸ್ವತಃ ರಚಿತಾನೇ ಹೇಳಿದ್ದಾರೆ.

  ಮದ್ವೆ, ಲವ್ವು ಇದ್ರೆ ನಾನೇ ಹೇಳ್ತೀನಪ್ಪಾ....

  ಮದ್ವೆ, ಲವ್ವು ಇದ್ರೆ ನಾನೇ ಹೇಳ್ತೀನಪ್ಪಾ....

  ''ನಾನು ಮದುವೆ ಆಗ್ತೀದ್ದೀನಿ ಅಂದಾಗ, ಅಥವಾ ನಾನು ಯಾರನ್ನಾದರೂ ಲವ್ ಮಾಡ್ತಿದ್ದೀನಿ ಅಂದಾಗ ನಾನೇ ಎಲ್ಲರಿಗೂ ಹೇಳ್ತೀನಿ. ಅದನ್ನ ಮುಚ್ಚಿಡುವ ಅಗತ್ಯ ನನಗಿಲ್ಲ. ಈ ವಿಷ್ಯದಲ್ಲಿ ನಾನು ತುಂಬಾ ಓಪನ್. ಇಷ್ಟ ಆಗಿದ್ರೆ ಹು ಆಗಿದೆ, ಇಲ್ಲ ಅಂದ್ರೆ ಇಲ್ಲ. ಬಟ್, ಸದ್ಯಕ್ಕೆ ನಾನು ಮದುವೆ ಆಗ್ತಿಲ್ಲ ಅನ್ನೋದು ಅಷ್ಟೇ ಸತ್ಯ'' ಎಂದು ರಚಿತಾ ಗಾಸಿಪ್ ಮಾಡೋರಿಗೆ ಗೋಲಿ ಹೊಡೆದರು.

  'ರಾಕಿಂಗ್ ಸ್ಟಾರ್' ಯಶ್ ಬಗ್ಗೆ ರಚಿತಾ ರಾಮ್ ಹೇಳಿದ್ದೇನು?

  ನನ್ ಲೈಫ್ ಆರಾಮಾಗಿದೆ

  ನನ್ ಲೈಫ್ ಆರಾಮಾಗಿದೆ

  ನಾನು ಒಳ್ಳೊಳ್ಳೆ ಪ್ರಾಜೆಕ್ಟ್ ಗಳನ್ನ ಮಾಡ್ಕೊಂಡು, ನನ್ನ ಜೀವನವನ್ನ ಎಂಜಾಯ್ ಮಾಡ್ತಿದ್ದೀನಿ. ಸದ್ಯಕ್ಕೆ ನನ್ನ ಲೈಫ್ ಆರಾಮಾಗಿದೆ. ಸ್ಟಾರ್ ಗಳ ಜೊತೆ ಸಿನಿಮಾ, ಎಲ್ಲವೂ ಸಕ್ಸಸ್ ಯಾರಿಗೆ ಸಿಗುತ್ತೆ. ನಾನು ಜಾಸ್ತಿ ಮಾತಾಡ್ತೀನಿ ನಿಜ. ಹಾಗಂತ, ಏನೇ ಮಾತಾಡಿದ್ರು ಅದು ಸುದ್ದಿಯಾಗಿಬಿಡುತ್ತೆ. ನಾನು ಏನೋ ಹೇಳಿದ್ರೆ, ಅದು ಏನೋ ಆಗಿಬಿಡುತ್ತೆ. ಮುಂದಿನ ವರ್ಷದಿಂದ ನಾನು ಮಾತಾಡೋಲ್ಲ. ಬರಿ ನನ್ನ ಕೆಲಸ ಮಾತಾಡಬೇಕು'' ಎಂದು ರಚಿತಾ ಒಂದೇ ಮಾತಿನಲ್ಲಿ ಹೇಳಿಬಿಟ್ಟರು.

  ಬಿಂದ್ಯಾ ಆಗಿದ್ದ ರಚಿತಾ ರಾಮ್ ಗೆ ಹೊಸ ಹೆಸರಿಟ್ಟವರು ಇವರೇ

  ನಮ್ಮ ಹಣೆಬರಹದಲ್ಲಿ ಏನಿದೆ ಗೊತ್ತಿಲ್ಲ

  ನಮ್ಮ ಹಣೆಬರಹದಲ್ಲಿ ಏನಿದೆ ಗೊತ್ತಿಲ್ಲ

  ಅಂದ್ಹಾಗೆ, ಮದುವೆ ಯಾರನ್ನಾ ಆಗ್ತಾರೆ ಅನ್ನೋದನ್ನ ಈಗ ನಿರ್ಧಾರ ಮಾಡಲು ಸಾಧ್ಯವಿಲ್ಲ. ಮದುವೆ ಸಮಯ ಬಂದಾಗ ಅದು ಆಗುತ್ತೆ. ಇನ್ನು ನಮ್ಮ ಹಣೆ ಬರಹದಲ್ಲಿ ಏನಿದೆ ಎಂಬುದು ನಮಗೆ ಗೊತ್ತಿಲ್ಲ. ರಾಜಕಾರಣಿಯನ್ನೇ ಮದ್ವೆ ಆಗ್ಬೇಕು ಅಂತಿದ್ರೆ ಅದೇ ಆಗುತ್ತೆ'' ಅದಕ್ಕೆ ನಾನು ಹೊಣೆಯಲ್ಲ ಎಂದು ರಚಿತಾ ಸ್ಪಷ್ಟಪಡಿಸಿದ್ದಾರೆ. ಇನ್ನು ರಾಜಕೀಯಕ್ಕೆ ಬರ್ತೀರಾ ಅಂದ್ರೆ, ಭವಿಷ್ಯದಲ್ಲಿ ಏನಾಗುತ್ತೋ ನನಗೆ ಗೊತ್ತಿಲ್ಲ ಅಂತಾರೆ' ಇನ್ನು ರಾಜಕಾರಣಿ ಆದ್ರು ಇಂದಿರಾ ಗಾಂಧಿ ಮತ್ತು ಜಯಲಲಿತಾ ರೀತಿ ಇರಬೇಕು ಎಂಬ ಆಶಯ ರಚಿತಾ ಅವರದ್ದು.

  ಯಾರಾದರೂ ರಾಜಕಾರಣಿಯನ್ನು ಮದುವೆ ಮಾಡ್ಕೊಳ್ತೀನಿ ಏನಿವಾಗ?

  ಪರಭಾಷೆಯಲ್ಲೂ ರಚಿತಾ ಮೋಡಿ

  ಪರಭಾಷೆಯಲ್ಲೂ ರಚಿತಾ ಮೋಡಿ

  ಸದ್ಯ ಕನ್ನಡದ ಟಾಪ್ ಸ್ಟಾರ್ ನಟರ ಜೊತೆ ಸ್ಕ್ರೀನ್ ಶೇರ್ ಮಾಡಿರುವ ಬುಲ್ ಬುಲ್ ಈಗ ಟಾಲಿವುಡ್ ನಲ್ಲೂ ಮಿಂಚಲು ಸಜ್ಜಾಗಿದ್ದಾರೆ. ಈಗಾಗಲೇ ಪ್ರಾಜೆಕ್ಟ್ ಓಕೆ ಆಗಿದೆ. ಆದ್ರೆ, ಅದು ಯಾವಾಗ ಆರಂಭವಾಗುತ್ತೆ. ಯಾರು ಹೀರೋ, ಯಾವ ಪ್ರೊಡಕ್ಷನ್ ಅಂತ ಅಧಿಕೃತವಾಗಿ ಘೋಷಣೆಯಾಗಲಿ ಅಂತಾರೆ ರಚಿತಾ ರಾಮ್.

  ಮದ್ವೆ ವಿಷ್ಯ ಬಿಡ್ರಪ್ಪಾ

  ಮದ್ವೆ ವಿಷ್ಯ ಬಿಡ್ರಪ್ಪಾ

  ಈಗ ರಚಿತಾ ಕಡೆಯಿಂದ ಒಳ್ಳೊಳ್ಳೆ ಸಿನಿಮಾಗಳನ್ನ ನಿರೀಕ್ಷೆ ಮಾಡಿ. ಹೊಸ ರೀತಿಯ ಪಾತ್ರಗಳಲ್ಲಿ ನೋಡಲು ಇಷ್ಟಪಡಿ, ಅವರ ಸಿನಿಮಾಗಳನ್ನ ಎಂಜಾಯ್ ಮಾಡಿ. ಈ ಮದುವೆ, ಲವ್ವು ಇನ್ನೊಂದು ಮತ್ತೊಂದು ವಿಷ್ಯಗಳಿಗೆ ತಲೆಕೊಡಬೇಡಿ. ಹಾಗೇನಾದ್ರು ಇದ್ರೆ ಅವರೇ ಹೇಳ್ತಾರೆ.

  ತೂಕ ಇಳಿಸಿಕೊಂಡ ರಚಿತಾ ರಾಮ್ : ಕಾರಣ ಕೇಳ್ಬೇಡಿ

  English summary
  Kannada actress rachita ram has reacted on her marriage gossip.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X