»   » ಹಳ್ಳಿ ಹುಡುಗಿಯಿಂದ ಗ್ಲಾಮರ್ ಗರ್ಲ್ ಆಗಲಿದ್ದಾರೆ 'ತಿಥಿ' ಪೂಜಾ

ಹಳ್ಳಿ ಹುಡುಗಿಯಿಂದ ಗ್ಲಾಮರ್ ಗರ್ಲ್ ಆಗಲಿದ್ದಾರೆ 'ತಿಥಿ' ಪೂಜಾ

Posted By:
Subscribe to Filmibeat Kannada
ತಿಥಿ ಸಿನಿಮಾದ ಪೂಜಾ ಈಗ ಫುಲ್ ಚೇಂಜ್ | FIlmibeat Kannada

'ತಿಥಿ' ಸಿನಿಮಾದ ಮೂಲಕ ಸಿನಿಮಾ ಪಯಣ ಶುರು ಮಾಡಿದ ನಟಿ ಪೂಜಾ. ಒಂದು ಕಡೆ ಪೂಜಾ ಮೊದಲ ಸಿನಿಮಾದಲ್ಲಿಯೇ ತಮ್ಮ ನಟನೆಯ ಮೂಲಕ ಜನರಿಗೆ ಇಷ್ಟ ಆದರು. ಇನ್ನೊಂದು ಕಡೆ ರಾಜ್ಯ ಪ್ರಶಸ್ತಿ ಕೂಡ ಪಡೆದರು.

'ತಿಥಿ' ಬಳಿಕ ಪೂಜಾ ಎಲ್ಲಿ ಹೋದರು..? ಈಗ ಏನು ಮಾಡುತ್ತಿದ್ದಾರೆ...? ಎನ್ನುವ ಕುತೂಹಲ ಅನೇಕರಲ್ಲಿ ಇದೆ. ಈಗ ಅದಕ್ಕೆಲ್ಲ ಉತ್ತರ ಸಿಕ್ಕಿದೆ. ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಟಿ ಪೂಜಾ ಈಗ ತಮ್ಮ ಸಿನಿಮಾ ಜರ್ನಿ, ತಮ್ಮ ಪಾತ್ರಗಳ ಆಯ್ಕೆ, ಗ್ಲಾಮರ್ ರೋಲ್ ಹೀಗೆ ಅನೇಕ ವಿಷಯಗಳ ಬಗ್ಗೆ ಮಾತನಾಡಿದ್ದಾರೆ.

ಅಂದಹಾಗೆ, ಬರ್ತಡೇ ಗರ್ಲ್ ನಟಿ ಪೂಜಾ ನಿಮ್ಮ 'ಫಿಲ್ಮಿಬೀಟ್ ಕನ್ನಡ'ಕ್ಕೆ ನೀಡಿರುವ ಸಂದರ್ಶನದ ಆಯ್ದ ಭಾಗ ಇಲ್ಲಿದೆ ಓದಿ...

ಸಂದರ್ಶನ : ನವೀನ. ಎಂ.ಎಸ್

ಹೇಗಿದೆ ನಿಮ್ಮ ಈ ವರ್ಷದ ಹುಟ್ಟುಹಬ್ಬ ಆಚರಣೆ..?

''ದೊಡ್ಡ ಪ್ಲಾನ್ ಅಂತ ಏನು ಇಲ್ಲ.. ಬೆಳಗ್ಗೆ ದೇವಸ್ಥಾನಕ್ಕೆ ಹೋಗಿದ್ದೆ.. ಈಗ ಫ್ರೆಂಡ್ಸ್ ಜೊತೆ ಹೊರಗೆ ಬಂದಿದ್ದೇನೆ. ಸಂಜೆ ನಮ್ಮ ಹೊಸ ಸಿನಿಮಾದ ತಂಡದ ಜೊತೆ ಒಂದು ಕಾರ್ಯಕ್ರಮದ ಇದೆ ಅಷ್ಟೆ'' - ಪೂಜಾ, ನಟಿ

ಸದ್ಯ ಯಾವ ಯಾವ ಸಿನಿಮಾ ನಿಮ್ಮ ಕೈನಲ್ಲಿದೆ..?

''ಈಗ ನಾನು 'ನೀವು ಕರೆ ಮಾಡಿದ ಚಂದಾದಾರರು ಬಿಜಿ ಆಗಿದ್ದಾರೆ' ಎಂಬ ಸಿನಿಮಾ ಮಾಡುತ್ತಿದ್ದೇನೆ. ಈ ಚಿತ್ರದಲ್ಲಿ ತಾರಾ ಮೇಡಂ ಮತ್ತು ದೇವರಾಜ್ ಸರ್ ಜೊತೆ ನಟಿಸುತ್ತಿದ್ದೇನೆ. ಜೊತೆಗೆ ನಾಳೆ ನನ್ನ ಹೊಸ ಸಿನಿಮಾವೊಂದರ ಫೋಟೋಶೂಟ್ ಮಂಡ್ಯದಲ್ಲಿ ನಡೆಯುತ್ತಿದೆ'' - ಪೂಜಾ, ನಟಿ

ನಿಮ್ಮ 'ಮೂಕಹಕ್ಕಿ' ಸಿನಿಮಾದ ಬಗ್ಗೆ ಹೇಳಿ?

''ಮೂಕಹಕ್ಕಿ' ಒಂದು ವಿಭಿನ್ನ ಸಿನಿಮಾ. ಅದರಲ್ಲಿ ತುಂಬ ಒಳ್ಳೆಯ ಕಥೆ ಇದೆ. ಚಿತ್ರದಲ್ಲಿರುವ ನನ್ನ ಪಾತ್ರ ನನಗೆ ಬಹಳ ಇಷ್ಟ ಆಗಿದೆ. ಆ ಸಿನಿಮಾ ಮುಂದಿನ ತಿಂಗಳು ಬಿಡುಗಡೆಯಾಗುತ್ತಿದೆ'' - ಪೂಜಾ, ನಟಿ

ಮುಂದೆ ಯಾವ ರೀತಿಯ ಪಾತ್ರಗಳ ಹುಡುಕಾಟದಲ್ಲಿ ಇದ್ದೀರಾ..?

''ನಾನು ಈ ರೀತಿಯ ಸಿನಿಮಾ... ಆ ರೀತಿಯ ಸಿನಿಮಾ.. ಎನ್ನುವ ಭೇದ ಮಾಡುವುದಿಲ್ಲ. ನಾನು ಕಥೆಗೆ ಪ್ರಾಮುಖ್ಯತೆ ನೀಡುತ್ತೇನೆ. ನನ್ನ ಪಾತ್ರಕ್ಕೆ ಪ್ರಾಮುಖ್ಯತೆ ನೀಡುತ್ತೇನೆ. ಸಿನಿಮಾದ ಕಥೆ ಜನರ ಮನಸ್ಸಿನಲ್ಲಿ ಉಳಿಯಬೇಕು ಆ ರೀತಿಯ ಕಥೆ ಹುಡುಕುತ್ತಿದ್ದೇನೆ'' - ಪೂಜಾ, ನಟಿ

'ತಿಥಿ' ಬಳಿಕ ಹೆಚ್ಚು ಸಿನಿಮಾ ಅವಕಾಶ ಬಂದರೂ ಒಪ್ಪಿಕೊಳ್ಳಲಿಲ್ಲವಂತೆ. ಹೌದೇ..?

''ಹೌದು.. ತುಂಬ ಸಿನಿಮಾಗಳು ಬಂತು. ಆದರೆ ನನ್ನ ಪಾತ್ರ ನನಗೆ ಇಷ್ಟ ಆಗಲಿಲ್ಲ. ಆ ಕಾರಣ ಅವಕಾಶ ಬಂದರೂ ನಾನು ಕೆಲ ಸಿನಿಮಾಗಳನ್ನು ಮಾಡಲಿಲ್ಲ'' - ಪೂಜಾ, ನಟಿ

ಹಳ್ಳಿ ಹುಡುಗಿ ಆಗಿ ನೋಡಿದ ನಿಮ್ಮನ್ನು ಗ್ಲಾಮರಸ್ ಪಾತ್ರದಲ್ಲಿಯೂ ನೋಡಬಹುದೆ..?

''ಖಂಡಿತ ನಾನು ಗ್ಲಾಮರ್ ಪಾತ್ರವನ್ನು ಮಾಡುತ್ತೇನೆ. ನನಗೂ ಕೂಡ ಒಂದು ಚೇಂಚ್ ಓವರ್ ಬೇಕು. 'ನೀವು ಕರೆ ಮಾಡಿದ ಚಂದಾದಾರರು ಬಿಜಿ ಆಗಿದ್ದಾರೆ' ಸಿನಿಮಾದಲ್ಲಿ ಇಷ್ಟು ದಿನ ಜನ ನೋಡಿದ್ದಕ್ಕಿಂತ ಬೇರೆ ರೀತಿ ಲುಕ್ ಇದೆ. ಆದರೆ ನಾನು ಗ್ಲಾಮರ್...ಡೀಗ್ಲಾಮರ್ ಎನ್ನುವುದಕ್ಕಿಂತ ಕಥೆಗೆ ಪ್ರಾಮುಖ್ಯತೆ ನೀಡುತ್ತಿದ್ದೇನೆ'' - ಪೂಜಾ, ನಟಿ

ನಿಮ್ಮ ಸಿನಿಮಾ ಪಯಣದಲ್ಲಿ ಅಪ್ಪ ಅಮ್ಮನ ಸಹಕಾರ ಹೇಗಿದೆ..?

''ಮೊದ ಮೊದಲು ಮನೆಯವರಿಂದ ಸಪೋರ್ಟ್ ಇರಲಿಲ್ಲ. ಆದರೆ ಈಗ ಅವರು ಅರ್ಥ ಮಾಡಿಕೊಳ್ಳುತ್ತಾರೆ. ಅವರು ಕೂಡ ಶೂಟಿಂಗ್ ಇದ್ದಾಗ ನನ್ನ ಜೊತೆ ಬರುತ್ತಾರೆ. ಅವರ ಸಂಪೂರ್ಣ ಸಪೋರ್ಟ್ ಈಗ ಇದೆ'' - ಪೂಜಾ, ನಟಿ

ಸಿನಿಮಾ ಮತ್ತು ಓದು ಎರಡನ್ನೂ ನಿಭಾಯಿಸುವುದು ಕಷ್ಟ ಆಗುತ್ತಿದೆಯಾ..?

''ನಾನು ಈಗ ಎಂ.ಸಿ.ಎ ಓದುತ್ತಿದ್ದೇನೆ. ಎಕ್ಸಾಂ ಇದ್ದ ಸಮಯದಲ್ಲಿ ಹಾಗೆ ಅನಿಸುತ್ತದೆ. ಬೇರೆ ಸಮಯದಲ್ಲಿ ತೊಂದರೆ ಇಲ್ಲ. ನನ್ನ ಸಿನಿಮಾ ಜರ್ನಿಗೆ ನಮ್ಮ ಕಾಲೇಜಿನಲ್ಲಿಯೂ ಪ್ರೋತ್ಸಾಹ ಇದೆ'' - ಪೂಜಾ, ನಟಿ

ಓದು ಮುಗಿದ ಮೇಲೆ ಚಿತ್ರರಂಗದಲ್ಲಿಯೇ ಮುಂದುವರೆಯುತ್ತಿರಾ..?

'' ಓದುವುದು ಸಾಕು ಎನಿಸಿದೆ. ನನಗೆ ಒಂದು ಕಂಪನಿ ಪ್ರಾರಂಭ ಮಾಡಬೇಕು ಎಂಬ ಕನಸು ಇತ್ತು. ಸೋ.. ಒಳ್ಳೆಯ ಸಿನಿಮಾ ಅವಕಾಶ ಸಿಕ್ಕರೆ ಸಿನಿಮಾ ಮಾಡುತ್ತೇನೆ. ಇಲ್ಲ ಅಂದರೆ ಕಂಪನಿ ಶುರು ಮಾಡುತ್ತೇನೆ.'' - ಪೂಜಾ, ನಟಿ

English summary
'Thithi' fame Actress Pooja speaks about her Cinema Journey and future projects in an Exclusive Interview with Filmibeat Kannada. 'ತಿಥಿ' ಖ್ಯಾತಿಯ ನಟಿ ಪೂಜಾ ಹುಟ್ಟುಹಬ್ಬದ ವಿಶೇಷ ಸಂದರ್ಶನ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada