»   » ತುಳು ಚಿತ್ರೋದ್ಯಮದಲ್ಲಿ ಕಾಲು ಎಳೆಯುವವರೇ ಹೆಚ್ಚು

ತುಳು ಚಿತ್ರೋದ್ಯಮದಲ್ಲಿ ಕಾಲು ಎಳೆಯುವವರೇ ಹೆಚ್ಚು

Posted By:
Subscribe to Filmibeat Kannada

ತುಳು ಚಿತ್ರರಂಗದ ಬಹು ನಿರೀಕ್ಷಿತ ಮತ್ತು ಬಹು ಚರ್ಚಿತ 'ಚಾಲಿಪೋಲಿಲು' ಚಿತ್ರ ಶುಕ್ರವಾರ (ಅ 31) ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಬಿಡುಗಡೆಯಾಗಲಿದೆ.

ಬಾಲ್ಯದಲ್ಲಿ ಬಣ್ಣ ಹಚ್ಚಬೇಕು ಎನ್ನುವ ತನ್ನ ಕನಸು, ಕನಸಾಗಿಯೇ ಉಳಿದ ನಂತರ ಮೊದಲ ಬಾರಿಗೆ ಚಿತ್ರ ನಿರ್ಮಾಣಕ್ಕೆ ಕೈಹಾಕಿದ್ದಾರೆ ಪ್ರಕಾಶ್ ಪಾಂಡೇಶ್ವರ. ಇವರು ಕರಾವಳಿಯ 'ಜಯಕಿರಣ' ಪತ್ರಿಕೆಯ ಸಂಪಾದಕರೂ ಕೂಡಾ. (ಹಲವು ಪ್ರಥಮಗಳ ಚಾಲಿಪೋಲಿಲು)

ಪ್ರಕಾಶ್ ನಿರ್ಮಿಸುತ್ತಿರುವ 'ಚಾಲಿಪೋಲಿಲು' ಚಿತ್ರದ ನಿರ್ದೇಶಕರು ಅವರ ಸ್ನೇಹಿತರೂ ಆಗಿರುವ ವೀರೇಂದ್ರ ಶೆಟ್ಟಿ ಕಾವೂರು. ನಿರ್ದೇಶಕರಿಗೂ ಇದು ಚ್ಚೊಚಲ ನಿರ್ದೇಶನದ ಚಿತ್ರವಾಗಿದ್ದರೂ ಸ್ನೇಹಿತನ ಮೇಲಿನ ವಿಶ್ವಾಸದಿಂದ ಚಿತ್ರಕ್ಕೆ ಹಣ ಹೂಡಿದ್ದೇನೆ ಎನ್ನುತ್ತಾರೆ ಪ್ರಕಾಶ್.

'ಫಿಲ್ಮೀಬೀಟ್' ಗೆ ಪ್ರಕಾಶ್ ನೀಡಿದ ಸಂದರ್ಶನದ ಆಯ್ದ ಭಾಗ ಇಂತಿದೆ.

ಫಿಲ್ಮೀಬೀಟ್: ಚಾಲಿಪೋಲಿಲು ಎಂದರೆ ಏನು?
ಪ್ರಕಾಶ್ : ಕೆಲಸಕ್ಕೆ ಬಾರದವರು ಎಂದು. ಚಿತ್ರದಲ್ಲಿ ಪ್ರೀತಿ, ಪ್ರೇಮ, ಪ್ರಣಯಕ್ಕೆ ಹೆಚ್ಚಿನ ಪ್ರಾತಿನಿಧ್ಯತೆ ನೀಡಲಾಗಲಿಲ್ಲ. ಹಾಸ್ಯ ಪ್ರಧಾನವಾದ ಚಿತ್ರವಿದು.

ಫಿಲ್ಮೀಬೀಟ್: ಬೆಂಗಳೂರಿನಲ್ಲಿ ಚಿತ್ರ ಬಿಡುಗಡೆ ಮಾಡಲು ಕರ್ನಾಟಕ ಚಲನಚಿತ್ರ ಮಂಡಳಿ ಸಹಕಾರ ನೀಡಿದೆಯೇ?
ಪ್ರಕಾಶ್ : ಹೌದು, ಮಂಡಳಿ ನಮಗೆ ಸಂಪೂರ್ಣ ಸಹಕಾರ ನೀಡಿದೆ. ಬರುವ ವಾರ ಬೆಂಗಳೂರಿನಲ್ಲಿ ಚಿತ್ರ ಬಿಡುಗಡೆ ಮಾಡಲಿದ್ದೇವೆ.

ಫಿಲ್ಮೀಬೀಟ್: ಮಂಗಳೂರಿನಲ್ಲಿ ತುಳು ಚಿತ್ರಗಳಿಗೆ ಯಾವ ರೀತಿಯ ಬೆಂಬಲ ಸಿಗುತ್ತಿದೆ?
ಪ್ರಕಾಶ್ : ತುಳು ಭಾಷೆಗೆ ಮಹತ್ವ ನೀಡಬೇಕು, ಇನ್ನೂ ಹೆಚ್ಚು ತುಳು ಚಿತ್ರಗಳು ಬಿಡುಗಡೆಯಾಗಬೇಕು ಎನ್ನುವವರೇ ಕಾಲು ಎಳೆಯುತ್ತಾರೆ ಎನ್ನುವುದು ನೋವಿನ ವಿಚಾರ. ಇಲ್ಲಿ ಕೇವಲ ಹನ್ನೊಂದು ಚಿತ್ರಮಂದಿರಗಳು ಇರುವುದು, ಅದು ಕೂಡಾ ಒಂದು ಸಮಸ್ಯೆ.

Tulu Movie Chaali Polilu Producer Prakash Pandeshwara interview to Filmibeat Kannada

ಫಿಲ್ಮೀಬೀಟ್: ಚಿತ್ರದಲ್ಲಿ ಏನು ಸಂದೇಶ ಹೇಳಲು ಹೊರಟಿದ್ದೀರಾ?
ಪ್ರಕಾಶ್ : ಇದೊಂದು ಸಣ್ಣ ಬಜೆಟಿನ ಚಿತ್ರ, ಆದರೆ ಚಿತ್ರದಲ್ಲಿ ಒಳ್ಳೆ ಸಂದೇಶವಿದೆ. ಐಪಿಎಲ್ ಮತ್ತು ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ಆಸಕ್ತಿ ಇರುವುವರಿಗೆ ಚಿತ್ರದಲ್ಲಿ ಉತ್ತಮ ಸಂದೇಶ ನೀಡಿದ್ದೇವೆ. ಚಿತ್ರದಲ್ಲಿ ಹಾಸ್ಯಕ್ಕೆ ಹೆಚ್ಚಿನ ಪ್ರಾತಿನಿಧ್ಯತೆ ನೀಡಲಾಗಿದೆ. ನಮ್ಮ ಚಿತ್ರವನ್ನು ನೋಡಿ, ಪ್ರೊತ್ಸಾಹಿಸಬೇಕೆಂದು ಎಲ್ಲರಲ್ಲಿ ಮನವಿ ಮಾಡುತ್ತಿದ್ದೇನೆ.

ಫಿಲ್ಮೀಬೀಟ್: ಚಿತ್ರದ ತಾರಾಗಣ ಮತ್ತು ತಂತ್ರಜ್ಞರ ಬಗ್ಗೆ?
ಪ್ರಕಾಶ್ : ಚಿತ್ರದಲ್ಲಿ ಮೂವರು ನಾಯಕರು. ದೇವದಾಸ್ ಕಾಪಿಕಾಡ್, ನವೀನ್ ಪಡೀಲ್, ಭೋಜರಾಜ್ ವಾಮಂಜೂರು. ಇವರೆಲ್ಲಾ ಸಹಪಾತ್ರದಲ್ಲಿ ಇದುವರೆಗೆ ಕಾಣಿಸಿಕೊಂಡಿದ್ದವರು. ಮೊದಲ ಬಾರಿಗೆ ನಾಯಕರಾಗಿ ಇವರು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪದ್ಮಜಾ ರಾವ್ ಕೂಡಾ ಚಿತ್ರದಲ್ಲಿ ನಟಿಸುತ್ತಿದ್ದಾರೆ. ತುಳು ಚಿತ್ರವೊಂದರಲ್ಲಿ ಇದೇ ಮೊದಲಬಾರಿಗೆ ಎರಡು ರೆಡ್ ಐಪಿಕ್ಸ್ ಕ್ಯಾಮರಾ ಬಳಸಿಕೊಳ್ಳಲಾಗಿದೆ. (ಐಸಾಕ್ ರಿಚರ್ಡ್, ಮಂಗಳೂರು ವರದಿಗಾರ)

English summary
Tulu Movie ’Chaali Polilu’ Producer Prakash Pandeshwara interview to Filmibeat Kannada. This movie releasing in Dakshina Kannada and Udupi on October 31st

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada