For Quick Alerts
  ALLOW NOTIFICATIONS  
  For Daily Alerts

  ಸಂದರ್ಶನ: 'ಜೀವನದಿ' ದೀಪಿಕಾಗೆ ಪುನೀತ್ ಎಂದರೆ ಬಲು ಇಷ್ಟ..

  By Suneel
  |

  ಕಿರುತೆರೆಯಲ್ಲಿ ಕನ್ನಡಿಗರಿಗೆ ವಿಭಿನ್ನ ಕಾರ್ಯಕ್ರಮಗಳ ಮೂಲಕ ಮನರಂಜನೆ ನೀಡುತ್ತಾ ತನ್ನದೇ ಆದ ಚಾಪನ್ನು ಮೂಡಿಸಿರುವುದು ಸನ್ ನೆಟ್‌ವರ್ಕ್‌ ನ ಉದಯ ಚಾನೆಲ್. ಅಂದಹಾಗೆ ಈ ಚಾನೆಲ್ ನಲ್ಲಿ ಇತ್ತೀಚೆಗೆ ಆರಂಭವಾದ ಸೋಮವಾರದಿಂದ-ಶುಕ್ರವಾರದವರೆಗೆ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ 'ಜೀವನದಿ' ಧಾರಾವಾಹಿ ಮಹಿಳೆಯರ ಜೀವನ ಶೈಲಿಗೆ ಹತ್ತಿರವಾಗಿದ್ದು ಜನಪ್ರಿಯವಾಗಿದೆ. ಕಾರಣ 'ಜೀವನದಿ' ಧಾರಾವಾಹಿ ಜ್ಯೋತಿ ಎಂಬ ಮಹಿಳೆ ಕುರಿತು ಲೇಖಕಿ ಸರಸ್ವತಿ ನಟರಾಜನ್ ರವರು 'ಜ್ಯೋತಿ' ಎಂಬ ಹೆಸರಿನಲ್ಲಿಯೇ ಬರೆದಿರುವ ಕಾದಂಬರಿ ಆಧಾರಿತವಾಗಿದೆ.

  'ಜೀವನದಿ' ಕಿರುತೆರೆಯಲ್ಲಿ ಪ್ರಸ್ತುತ ವಿಭಿನ್ನವಾದ ಎಲ್ಲರ ನೆಚ್ಚಿನ ಸೀರಿಯಲ್. ಈ ಸೀರಿಯಲ್ ನಲ್ಲಿ ಮುಖ್ಯ ಪಾತ್ರವನ್ನು ದೀಪಿಕಾ ವೆಂಕಟೇಶ್ ಎಂಬುವವರು ನಿರ್ವಹಿಸುತ್ತಿದ್ದಾರೆ. ಅವರು ಇತ್ತೀಚೆಗೆ ಫಿಲ್ಮಿಬೀಟ್ ನೊಂದಿಗೆ ಮಾತನಾಡಿ 'ಜೀವನದಿ'ಯಲ್ಲಿನ ತಮ್ಮ ಪಾತ್ರದ ಬಗ್ಗೆ ಮತ್ತು ಅವರ ನಟನೆಯ ಕುರಿತ ವೈಯಕ್ತಿಕ ಆಸಕ್ತಿಗಳ ಬಗ್ಗೆ ಹಂಚಿಕೊಂಡಿದ್ದಾರೆ. ಅವರೊಂದಿಗಿನ ಸಂದರ್ಶನದ ಆಯ್ದ ಕೆಲವು ವಿಷಯಗಳು ಇಲ್ಲಿವೆ. ಮುಂದೆ ಓದಿರಿ..

  ಸಂದರ್ಶನ: ಸುನೀಲ್ ಬಿಂಡಹಳ್ಳಿ

  ನಿಮ್ಮ ಊರು, ಶಿಕ್ಷಣ?

  ನಿಮ್ಮ ಊರು, ಶಿಕ್ಷಣ?

  - ನಮ್ಮೂರು ಕೋಲಾರ ಜಿಲ್ಲೆಯ ಮಾಲೂರು. ಸ್ಕೂಲಿಂಗ್ ಮಾಡಿದೆಲ್ಲಾ ಅಲ್ಲೇ. ಎಂಜಿನಿಯರಿಂಗ್ ಮತ್ತು ಎಂಟೆಕ್ ಮಾಡಿದ್ದು ಬೆಂಗಳೂರಿನಲ್ಲಿ.

  ನಟನೆಯ ನಂಟು ಬೆಳೆದಿದ್ದು ಹೇಗೆ?

  ನಟನೆಯ ನಂಟು ಬೆಳೆದಿದ್ದು ಹೇಗೆ?

  - ಅಭಿನಯಕ್ಕೆ ಅಂತ ಯಾವುದೇ ಟ್ರೈನಿಂಗ್ ಎಲ್ಲಿಗೂ ಹೋಗ್ಲಿಲ್ಲ. ಕಾಲೇಜ್-ಸ್ಕೂಲ್ ಡೇಸ್‌ನಲ್ಲಿ ಕಾರ್ಯಕ್ರಮಗಳಲ್ಲಿ ಆಕ್ಟಿಂಗ್ ಮತ್ತು ಡ್ಯಾನ್ಸ್ ಮಾಡುತ್ತಿದೆ. ಎಂಟೆಕ್ ಫೈನಲ್ ಇಯರ್ ಓದಬೇಕಾದ್ರೆ ಜೀ ಕನ್ನಡ ವಾಹಿನಿಯ 'ಜೊತೆ-ಜೊತೆಯಲಿ' ಧಾರಾವಾಹಿಗೆ ಆಫರ್ ಬಂತು. ಅಲ್ಲಿಂದ ಆಕ್ಟಿಂಗ್ ಜರ್ನಿ ಶುರುವಾಗಿದ್ದು.

  ಇದುವರೆಗೂ ಎಷ್ಟು ಧಾರಾವಾಹಿಗಳಲ್ಲಿ ಅಭಿನಯಿಸಿದ್ದೀರಿ?

  ಇದುವರೆಗೂ ಎಷ್ಟು ಧಾರಾವಾಹಿಗಳಲ್ಲಿ ಅಭಿನಯಿಸಿದ್ದೀರಿ?

  ಮೊದಲು ಶುರುಮಾಡಿದ್ದು ಮೊದಲೇ ಹೇಳಿದಾಗೆ ಜೀ ಕನ್ನಡ ಚಾನೆಲ್ ನ 'ಜೊತೆ ಜೊತೆಯಲಿ' ಸೀರಿಯಲ್ ನಲ್ಲಿ. ನಂತರ ಈಟಿವಿ ಕನ್ನಡ (ಕಲರ್ಸ್ ಕನ್ನಡ) 'ಚರಣದಾಸಿ', ಸ್ಟಾರ್ ಸುವರ್ಣದಲ್ಲಿ 'ಅಮ್ಮ', ಸೀರಿಯಲ್ ನಲ್ಲಿ ನಟಿಸಿದ್ದೇನೆ. ಈಗ ಉದಯ ಟಿವಿಯ 'ಜೀವನದಿ'ಯಲ್ಲಿ ಲೀಡ್ ರೋಲ್ ನಿಭಾಯಿಸುತ್ತಿದ್ದೇನೆ.

  'ಜೀವನದಿ'ಯಲ್ಲಿ ನಿಮ್ಮ ಪಾತ್ರ...

  'ಜೀವನದಿ'ಯಲ್ಲಿ ನಿಮ್ಮ ಪಾತ್ರ...

  - 'ಜ್ಯೋತಿ' ಪಾತ್ರ. ಲಾಯರ್, ಹೌಸ್ ವೈಫ್, ಆಟೋ ಡ್ರೈವರ್ ಈ ಮೂರು ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಆದರೆ ತ್ರಿಬಲ್ ಆಕ್ಟಿಂಗ್ ಅಲ್ಲ. ಕಥೆಯ ಟ್ವಿಸ್ಟ್ ಇರೋದೆ ಈ ಪಾತ್ರಗಳಲ್ಲಿ. ಹಂತ ಹಂತಗಳಲ್ಲಿ ನಾನು ಕಷ್ಟಗಳನ್ನು ಅನುಭವಿಸುತ್ತೇನೆ. ಅಪ್ಪ-ಅಮ್ಮ ಕಾಲೇಜ್ ಡೇಸ್‌ನಲ್ಲಿಯೇ ಬಲವಂತವಾಗಿ ಮದುವೆ ಮಾಡಿಸುತ್ತಾರೆ. ಮಗು ಆಗುತ್ತೆ. ನಂತರ ಗಂಡ ಬಿಟ್ಟು ಹೊರಟು ಹೋಗುತ್ತಾನೆ. ಆಗ ಆಟೋ ಓಡಿಸಿಕೊಂಡು, ಲಾಯರ್ ಆಗಬೇಕು ಅನ್ನೋ ಕನಸನ್ನು ನಾನೇ ದುಡಿದು ಓದಿ ನನಸು ಮಾಡಿಕೊಳ್ಳುತ್ತೇನೆ. ಹೀಗೆ ಸಾಗುತ್ತೆ.

  ಸಿನಿಮಾ ಅವಕಾಶ?

  ಸಿನಿಮಾ ಅವಕಾಶ?

  - ಹೊಸ ಪ್ರೊಡಕ್ಷನ್ ಸಿನಿಮಾಗಳಿಗೆ ಅವಕಾಶ ಬಂದವು. ಆದರೆ ಕಥೆ ಇಷ್ಟವಾಗಿಲ್ಲ. ನಾನಾಗಿ ನಾನು ಇನ್ನೂ ಯಾವುದೇ ಆಡಿಷನ್ ಟ್ರೈ ಮಾಡಿಲ್ಲ. ಯಾಕಂದ್ರೆ 'ಜೀವನದಿ'ನಲ್ಲಿ ಈಗ ಬ್ಯುಸಿ ಇದೀನಿ.

  ಯಾವ ನಟ-ನಟಿ ಇಷ್ಟ?

  ಯಾವ ನಟ-ನಟಿ ಇಷ್ಟ?

  - ಪುನೀತ್ ಸರ್. ಅವರ ಡ್ಯಾನ್ಸ್ ಅಂದ್ರೆ ತುಂಬಾ ಇಷ್ಟ. ಅವರು ಎಲ್ಲಾ ನಟಿಯರಿಗೂ ಇಷ್ಟವಾಗುತ್ತಾರೆ. ನಟಿಯರಲ್ಲಿ ಸೋನಂ ಕಪೂರ್ ಇಷ್ಟ.

  ಯಾವ ನಟನೊಂದಿಗೆ ಅಭಿನಯಿಸಲು ಇಷ್ಟ?

  ಯಾವ ನಟನೊಂದಿಗೆ ಅಭಿನಯಿಸಲು ಇಷ್ಟ?

  - ಪರ್ಟಿಕ್ಯೂಲರ್ ಆಗಿ ಹೇಳೋಕೆ ಆಗಲ್ಲ. ಯಾಕಂದ್ರೆ ಈ ಫೀಲ್ಡ್ ಗೆ ಬರೋರು ಟ್ಯಾಲೆಂಟ್ ಇಂದಲೇ ಬರೋದು. ಸೋ ಯಾರಾದ್ರು ಪರವಾಗಿಲ್ಲ. ನನ್ನ ಪಾತ್ರನ ನಾನು ಅಚ್ಚುಕಟ್ಟಾಗಿ ಮಾಡಬೇಕು.

  ಎಂತಹ ಪಾತ್ರಗಳಲ್ಲಿ ಅಭಿನಯಿಸುವ ಆಸೆ?

  ಎಂತಹ ಪಾತ್ರಗಳಲ್ಲಿ ಅಭಿನಯಿಸುವ ಆಸೆ?

  - ಮಹಿಳಾ ಪ್ರಧಾನ ಸಿನಿಮಾಗಳು, ಪ್ರಯೋಗಾತ್ಮಕ ಸಿನಿಮಾಗಳಲ್ಲಿ ನಟಿಸುವ ಆಸೆ.

  ಪದೇ ಪದೇ ನೋಟಬೇಕು ಎನಿಸುವ ಸಿನಿಮಾ?

  ಪದೇ ಪದೇ ನೋಟಬೇಕು ಎನಿಸುವ ಸಿನಿಮಾ?

  - ಹಿಂದಿಯ 'ನೀರ್ಜಾ' ಚಿತ್ರ. ಕನ್ನಡದಲ್ಲಿ 'ರಂಗಿತರಂಗ', 'ಗೋಧಿ ಬಣ್ಣ ಸಾಧಾರಣ ಮೈಕಟ್ಟು', 'ಉಳಿದವರು ಕಂಡಂತೆ'.

  ಕಿರುತೆರೆ ನಟಿಯಾಗಿ ಫಿಟ್‌ನೆಸ್‌ ಗೆ ಎಷ್ಟು ಪ್ರಾಮುಖ್ಯತೆ ಕೊಡ್ತೀರಾ?

  ಕಿರುತೆರೆ ನಟಿಯಾಗಿ ಫಿಟ್‌ನೆಸ್‌ ಗೆ ಎಷ್ಟು ಪ್ರಾಮುಖ್ಯತೆ ಕೊಡ್ತೀರಾ?

  -ಡಯಟ್ ಅಂತ ಏನು ಫಾಲೋ ಮಾಡಲ್ಲ. ಸಿಕ್ಕಾ ಪಟ್ಟೆ ತಿಂತೀನಿ. ಯಾಕಂದ್ರೆ ಎಷ್ಟು ತಿಂದ್ರು ದಪ್ಪ ಆಗಲ್ಲ ನಾನು. ಬಟ್ ಬೆಳಿಗ್ಗೆ ವೇಳೆ ಜಾಗಿಂಗ್ ಮಾಡ್ತೀನಿ.

  ಯಾರ್ ಮೇಲಾದ್ರು ಲವ್ ಆಗಿದ್ಯಾ...?

  ಯಾರ್ ಮೇಲಾದ್ರು ಲವ್ ಆಗಿದ್ಯಾ...?

  - ಇನ್ನೂ ಇಲ್ಲ. ನಂತರಾನೆ ಅಲೋಚಿಸುವ ನನ್ನ ಅಭಿರುಚಿಗೆ ತಕ್ಕನಾಗಿ ಯಾರಾದ್ರು ಸಿಕ್ಕಿದ್ರೆ ಕಂಡಿತಾ ಲವ್ ಆಗಬಹುದು. ಸ್ಟಿಲ್ ಸರ್ಚಿಂಗ್.

  English summary
  Udaya TV 'Jeevanadi' serial lead actress Deepika Venkatesh interview.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X