»   » ಪ್ರಕಾಶ್ ರೈ ರಿಂದ ಪ್ರಭಾವಿತರಾದ ಮನೋಜ್ 'ಜೀವನದಿಗೆ' ವಿಲನ್ ಆದ ಕತೆ!

ಪ್ರಕಾಶ್ ರೈ ರಿಂದ ಪ್ರಭಾವಿತರಾದ ಮನೋಜ್ 'ಜೀವನದಿಗೆ' ವಿಲನ್ ಆದ ಕತೆ!

Written By:
Subscribe to Filmibeat Kannada

ನೋಡೋಕೆ ತುಂಬಾ ಸ್ಮಾರ್ಟ್. ಫಸ್ಟ್ ಟೈಮ್ ನೋಡಿದವರು ಯಾರೇ ಆದ್ರು ಈತ ಆಕ್ಟರ್ ಇರಬೇಕು ಎಂದೇ ಊಹಿಸುವಷ್ಟು ಸೂಪರ್ ಅಂಡ್ ಸುರಸುಂದರಾಂಗನ ರೀತಿ ಕಾಣಿಸುತ್ತಾನೆ. ಅವನೇ ಈಗಷ್ಟೆ ಮೀಸೆ ಚಿಗುರಿರುವ 'ಜೀವನದಿ' ಧಾರಾವಾಹಿಯಲ್ಲಿನ ವಿಲನ್ ಮನೋಜ್ ಕುಮಾರ್. ಈತನಿಗೆ ಈಗ ಕೇವಲ 22 ವಯಸ್ಸು ಅಷ್ಟೆ. ಆದ್ರೆ 2 ನೇ ತರಗತಿಯಿಂದಲೂ ನಟನೆಯ ನಂಟಿದೆ.

ಇನ್ನೂ ಸ್ವಲ್ಪ ಏಜ್ ಆದ್ರೆ ಅದೇ ಫಿಟ್‌ ನೆಸ್, ಸ್ಮಾಟ್‌ನೆಸ್ ಕಾಪಾಡಿಕೊಂಡ್ರೆ ಒಂದ್ ರೇಂಜ್ ಗೆ ಮಾಲಿವುಡ್ ನ ದುಲ್ಕರ್ ಸಲ್ಮಾನ್ ಮತ್ತು ಸ್ಯಾಂಡಲ್ ವುಡ್ ನ ಗೋಲ್ಡನ್ ಸ್ಟಾರ್ ಗಣೇಶ್ ರನ್ನೇ ಹೋಲುವ ಲಕ್ಷಣಗಳು ಮನೋಜ್ ಕುಮಾರ್ ರವರಿಗಿದೆ.

ಜ್ಯೋತಿ ಎಂಬ ಮಹಿಳೆ ಕುರಿತು ಲೇಖಕಿ ಸರಸ್ವತಿ ನಟರಾಜನ್ ಬರೆದಿರುವ 'ಜ್ಯೋತಿ' ಹೆಸರಿನ ಕಾದಂಬರಿ ಆಧಾರಿತವಾದ ಸೀರಿಯಲ್ 'ಜೀವನದಿ' ಉದಯ ಚಾನೆಲ್ ನಲ್ಲಿ ಸೋಮ-ಶುಕ್ರವಾರದವರೆಗೆ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿದೆ. ಈ ಧಾರಾವಾಹಿಯಲ್ಲಿ ಮನೋಜ್ ಕುಮಾರ್ ವಿಲನಿಸ್ಟ್ ಆಗಿ ಲೀಡ್ ಕ್ಯಾರೆಕ್ಟರ್ ನಲ್ಲಿ ಅಭಿನಯಿಸುತ್ತಿದ್ದಾರೆ. ಇತ್ತೀಚೆಗೆ ಅವರು ಫಿಲ್ಮಿಬೀಟ್ ನೊಂದಿಗೆ ಮಾತನಾಡಿ ತಮ್ಮ ನಟನೆಯ ನಂಟಿನ ಬಗ್ಗೆ, ಧಾರಾವಾಹಿಯಲ್ಲಿನ ಅವರ ಪಾತ್ರದ ಬಗ್ಗೆ ಹಂಚಿಕೊಂಡಿದ್ದಾರೆ. ಅವರೊಂದಿಗಿನ ಸಂದರ್ಶನ ಆಯ್ದ ಅಂಶಗಳು ಈ ಕೆಳಗಿನಂತಿವೆ.

ಸಂದರ್ಶನ: ಸುನೀಲ್, ಬಿಂಡಹಳ್ಳಿ

ನಮ್ಮ ಓದುಗರಿಗೆ ನಿಮ್ಮ ಪರಿಚಯ

- ನೇಟಿವ್ ಕುಶಾಲನಗರ ಹತ್ತಿರ ಹಾರಂಗಿ. ಚಿಕ್ಕಂದಿನಿಂದಲೂ ಬೆಳೆದಿದ್ದು ಬೆಂಗಳೂರಿನಲ್ಲಿಯೇ. ಎಜುಕೇಶನ್ ಜಾಸ್ತಿ ಏನು ಇಲ್ಲ. ಸೆಕೆಂಡ್ ಪಿಯುಸಿನಲ್ಲಿ ಅಕೌಂಟ್ ಸಬ್ಜೆಕ್ಟ್ ಫೇಲ್ ಆಯ್ತು. ನಂತರ ಶಿಕ್ಷಣಕ್ಕೆ ಗುಡ್ ಬಾಯ್ ಹೇಳಿದೆ. ಈಗ 'ಜೀವನದಿ' ಧಾರಾವಾಹಿನಲ್ಲಿ ನಟಿಸುತ್ತಿದ್ದೇನೆ.

ಅಭಿನಯದ ಕಡೆ ಮುಖ ಮಾಡಿದ್ದು ಹೇಗೆ?

ಚಿಕ್ಕವಯಸ್ಸಿನಿಂದಲೂ ನಟನೆಯ ನಂಟಿದೆ. 2ನೇ ಕ್ಲಾಸ್ ನಿಂದಲೂ ರಂಗಭೂಮಿಯಲ್ಲಿ ಇದೀನಿ. 'ನಾಟ್ಯ ಸರಸ್ವತಿ ಶಾಂತಲ ಕನ್ನಡ ಕಲಾ ಸಂಘ', 'ಸಾತ್ವಿಕ ಮತ್ತು ರಂಗಪಯಣ' ಟೀಮ್ ನಲ್ಲಿ ಕೆಲಸ ಮಾಡುತ್ತಿದ್ದೆ. ಮೊದಲು ಕ್ಯಾಮೆರಾ ಫೇಸ್ ಮಾಡಿದ್ದು 7ನೇ ತರಗತಿಯಲ್ಲಿ ಇದ್ದಾಗ. 'ಮಾನಸ ವೀಣೆ' ಎಂಬ ಸೀರಿಯಲ್ ನಲ್ಲಿ ಹೀರೋಯಿನ್ ತಮ್ಮನಾಗಿ ನಟಿಸಿದ್ದೆ. ನಮ್ಮ ತಂದೆಯ ಫ್ರೆಂಡ್ ರಂಗಭೂಮಿಯಲ್ಲಿದ್ರು. ಅವರು ಬಂದು ಆ ಕ್ಯಾರೆಕ್ಟರ್ ಗೆ ನಮ್ಮ ತಂದೆ ಕೇಳಿ ಕರೆದುಕೊಂಡು ಹೋಗಿದ್ರು. ಆದ್ರೆ ಅಧಿಕೃತವಾಗಿ ಸೆಕೆಂಡ್ ಪಿಯುಸಿ ಫೇಲ್ ಆದ ನಂತರ ಈ ಕಡೆ ಮುಖಮಾಡಿದೆ. ಅದಕ್ಕಾಗಿ 2013-14 ನೇ ಬ್ಯಾಚ್ ನಲ್ಲಿ ನೀನಾಸಂ ನಲ್ಲಿ ಕೋರ್ಸ್ ಮಾಡಿದೆ. ಅದೇ ವರ್ಷದಲ್ಲಿ ನೀನಾಸಂನಲ್ಲಿ ನಾವೊಂದು ನಾಟಕ ಮಾಡಿದ್ವಿ. ಅಲ್ಲಿ ಬಿ.ಸುರೇಶ್ ರವರು ನೋಡಿದ್ದರಿಂದ ಅವರ 'ದೇವರನಾಡಲ್ಲಿ' ಸಿನಿಮಾಗೆ ಅವಕಾಶ ನೀಡಿದ್ದರು. ಇಡೀ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದೀನಿ.

ಆಕ್ಟರ್ ಆಗಿರಲಿಲ್ಲ ಅಂದ್ರೆ?

ದೇವ್ರಾಣೆ ಗೊತ್ತಿಲ್ಲ. ಈಗ ಆಕ್ಟಿಂಗ್ ನಲ್ಲಿದ್ರು ಡೈರೆಕ್ಷನ್ ಕಡೇನೆ ತುಂಬಾ ಇಂಟ್ರೆಸ್ಟ್ ಇದೆ. ಆದ್ರೆ ಒಂದಂತು ಡಿಸೈಡ್‌ ಮಾಡಿದಿನಿ. ಅದು ಸಿನಿಮಾ ನನ್ನ ಲೈಫ್ ಲೈನ್ ಅಂತ. ಇದ್ ಬಿಟ್ರೆ ಬೇರೆ ಕೆಲಸ ನನಗೆ ಗೊತ್ತಿಲ್ಲ.

'ಜೀವನದಿ'ಯಲ್ಲಿ ನಿಮ್ಮ ಪಾತ್ರ? ನಿಮ್ಮ ಪಾತ್ರವು ಕಾದಂಬರಿ ಆಧಾರಿತವೇ?

- ಅರುಣ್. ವಿಲನಿಸ್ಟ್ ಲೀಡ್ ಕ್ಯಾರೆಕ್ಟರ್. ಒಳ್ಳೇ ಪಾತ್ರ. ಹೀರೋಯಿನ್‌ ಗೆ ತುಂಬಾ ಕಾಟ ಕೊಡೋದು, ಹಿಂಸೆ ಕೊಡೋದು. ಅವಳು ಏನು ಮಾಡಿದ್ರು, ಅದರ ವಿರುದ್ಧ ಹೋಗೋದು. ಅವಳ ಮಟ್ಟ ಹಾಕೋದೆ ನನ್ನ ಗುರಿ. ಆದ್ರೆ ಕಾದಂಬರಿ ಆಧಾರಿತವಾಗಿಯೇ ಇದೆಯೇ ಎಂಬುದು ಗೊತ್ತಿಲ್ಲ. ನಾನು ಆ ಕಾದಂಬರಿ ಓದಿಲ್ಲ. ಆದ್ರೆ ಮೊದಲು ಹಾಗೆ ಹೇಳಿದ್ರು.

'ಜೀವನದಿ'ಯ ಪಾತ್ರಕ್ಕೂ ನಿಜ ಜೀವನಕ್ಕೂ ವ್ಯಾತ್ಯಾಸ ಎನಾದ್ರು.. ಇದ್ಯಾ?

-ಅದು ನೋಡಿರೋರಿಗೆ ಗೊತ್ತು. ಬಟ್ ಅಷ್ಟುಂತು ಇಲ್ಲ. ನಿಜವಾಗಿ ಯಾರಿಗೂ ವಿಲನ್ ಅಲ್ಲ. ಆದ್ರೆ ತುಂಬಾ ತರ್ಲೆ ಮಾಡ್‌ತೀನಿ. ಈಗೀಗ ಅದ್ನ ಕಡಿಮೆ ಮಾಡಿದಿನಿ. ನೀನಾಸಂ ತುಂಬಾ ಬದಲಾಯಿಸ್ತು. ಒಂಥರಾ ಡೆಡ್ ಆಪೋಸಿಟ್.

ನಿಮ್ಮ ಪಾತ್ರಕ್ಕೆ ಹೇಗೆಲ್ಲಾ ಸಿದ್ಧತೆ ಮಾಡಿಕೊಳ್ಳುತ್ತೀರಾ?

-ನೀನಾಸಂನಲ್ಲಿ ಯಾವುದೇ ಒಂದು ಕ್ಯಾರೆಕ್ಟರ್ ಗೆ ಹೇಗೆಲ್ಲಾ ಸ್ಟಡಿ ಮಾಡಬೇಕು ಎಂದು ಕಲಿತಿದ್ದೆ. ಅದೇ ರೀತಿ ಯಾವುದೇ ಪಾತ್ರಕ್ಕೆ ಆದರೂ ತಯಾರಿ ಮಾಡಿಕೊಳ್ತೀನಿ. ನೀನಾಸಂ ಕಲಿಗೆ ಹೆಲ್ಪ್ ಆಗುತ್ತೆ. ಈ ಧಾರಾವಾಹಿಯಲ್ಲಿ ನನ್ನ ಕ್ಯಾರೆಕ್ಟರ್ ಎಂಎಲ್‌ಎ ಮಗ. ನಿನ್ ಜೊತೆ ಹುಡುಗರು ಇರ್ತಾರೆ. ಹೀರೋಯಿನ್ ಗೆ ವಿಲನ್ ನೀನು ಅಂತ ಹೇಳಿದ್ರು. ಸೋ ಒಮ್ಮೆ ಸೆಟ್ ಗೆ ಎಂಟ್ರಿ ಆದ್ರೆ. ಕ್ಯಾರೆಕ್ಟರ್ ಒಳಗೇನೆ ಮೈಂಡ್ ಓಡುತ್ತೆ.

ನಿಮ್ಮ ನಟನೆಗೆ ಹೆಚ್ಚು ಸ್ಫೂರ್ತಿ ಯಾರು?

- ಪ್ರಕಾಶ್ ರೈ. ಅದ್ ಬಿಟ್ರೆ ಕಮಲ್ ಹಾಸನ್.

ಸಿನಿಮಾ ಅವಕಾಶ?

ಸದ್ಯಕ್ಕೆ ಹುಡುಕುತ್ತಾ ಇದೀನಿ. 'ದೇವರ ನಾಡಲ್ಲಿ' ಬಿಟ್ರೆ ಬೇರೆ ಯಾವ ಚಿತ್ರದಲ್ಲೂ ಇನ್ನು ನಟಿಸಿಲ್ಲ. ಯಾಕಂದ್ರೆ ಈ ಚಿತ್ರದ ನಂತರ ನೀನಾಸಂ ತಿರುಗಾಟಕ್ಕೆ ಹೊರಟೋದೆ. ಅಲ್ಲಿಂದ ಬಂದ ನಂತರ ಈ ಸೀರಿಯಲ್ ಸಿಕ್ತು.

ನೀನಾಸಂ ತಿರುಗಾಟ ಅಂದ್ರೆ ಏನು?

ಅಲ್ಲಿ ಒಂದು ವರ್ಷ ಕೋರ್ಸ್ ಮಾಡಿರುವವರಲ್ಲಿ ಕೆಲವರನ್ನ ಅವರು ಆಯ್ಕೆ ಮಾಡಿಕೊಳ್ಳುತ್ತಾರೆ. ಅವರೆಲ್ಲ ಸೇರಿ ಎರಡು ನಾಟಕಗಳನ್ನು ತಯಾರು ಮಾಡ್ತೀವಿ. ಆ ಎರಡು ನಾಟಕಗಳನ್ನು ಕರ್ನಾಟಕದಾದ್ಯಂತ ನಿರಂತರವಾಗಿ 8 ತಿಂಗಳು ಪ್ರದರ್ಶನ ಮಾಡ್ತೀವಿ. ಅಂದ್ರೆ ಇವತ್ತು ಬೆಂಗಳೂರಿಗೆ ಬಂದು ನಾಟಕ ಮಾಡಿದ್ರೆ ಎರಡನೇ ದಿನ ಮತ್ತೊಂದು ನಾಟಕ ಮಾಡ್ತೀವಿ. ನಂತರ ತಕ್ಷಣ ಲಗ್ಗೇಜು ಪ್ಯಾಕ್ ಮಾಡಿ ಇನ್ನೊಂದು ಸ್ಥಳಕ್ಕೆ ಹೋಗಿ, ಅಲ್ಲಿಗೆ ಹೋದ ದಿನವೇ ನಾಟಕ ಮಾಡ್ತೀವಿ. ಇದನ್ನ ನೀನಾಸಂ ತಿರುಗಾಟ ಅಂತಾರೆ.

ನಿಮ್ಮ ಮೊದಲ ಕ್ರಷ್

-ಸಿನಿಮಾ. ಅದನ್ನ ಕೈಯಲ್ಲಿನ ಲೈಫ್‌ ಲೈನ್‌ ನಲ್ಲಿ ಹಚ್ಚೆ ಹಾಕಿಸಿದ್ದೀನಿ. ನಮ್ಮ ಡೈರೆಕ್ಟರ್ ಅದನ್ನ ನೋಡಿ ಬೈಯುತ್ತಿದ್ದರು. ಆಗ ಅವರಿಗೆ ಅದು ಸಿನಿಮಾ ಅಂತ ತೋರಿಸಿದೆ.

ಫಿಟ್ ನೆಸ್‌ಗೆ ಯಾವ ರೀತಿ ಕಸರತ್ತು ಮಾಡ್ತೀರಾ?

- ಎರಡು ತಿಂಗಳಿಂದ ಜಿಮ್‌ಗೆ ಹೋಗ್ತಿದೀನಿ. ಅದ್ ಬಿಟ್ರೆ ನೀನಾಸಂನಲ್ಲಿ ಕಲಿತಿರೋ ಸ್ವಲ್ಪ ಕಲರಿ ಶೈಲಿ, ಮರ್ಜಾಲ ಎಕ್ಸಸೈಜ್, ಕೇರಳ ಶೈಲಿಯ ಎಕ್ಸಸೈಜ್ ಆಗಾಗ ಮಾಡ್ತೀನಿ.

ನಿಮ್ಮ ಹವ್ಯಾಸಗಳು..

- ಹೆಚ್ಚು ಇತಿಹಾಸ ಮತ್ತು ಬಯೋಗ್ರಫಿ ಪುಸ್ತಕಗಳನ್ನು ಓದುತ್ತೀನಿ. ಪ್ರೀ ಆಗಿದ್ದಾಗ ಕ್ರಿಕೆಟ್ ಆಡೋದು, ಸಿನಿಮಾ ನೋಡುವುದು, ತುಂಬಾ ಬೇಜಾರು ಆದ್ರೆ ಟ್ರಿಪ್ ಹೋಗೋದು. ವಿಕಿಪೀಡಿಯಾ ನನ್ನ ಬೆಸ್ಟ್ ಫ್ರೆಂಡ್.

ಎಂತಹ ಚಿತ್ರಗಳಲ್ಲಿ ನಟಿಸುವ ಆಸೆ

- ಎಂತಹ ಚಿತ್ರ ಅನ್ನೋದಿಕ್ಕಿಂತ ಒಳ್ಳೆ ಪಾತ್ರಗಳಲ್ಲಿ ಆಕ್ಟ್ ಮಾಡಬೇಕು ಅನ್ನೋದು ಆಸೆ. ನನಗೆ ಪ್ರಕಾಶ್ ರೈ, ಅನಂತ್ ನಾಗ್, ಕಮಲ್ ಹಾಸನ್, ಜಪಾನೀಸ್ ಆಕ್ಟರ್ Toshiro Mifune ತುಂಬಾ ಇಷ್ಟ.

English summary
Udaya tv 'Jeevanadi' serial lead villain actor Manoj kumar Interview. Previouly Manoj Kumar was acted in B. Suresh directorial 'Devara Naadalli' Movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada