twitter
    For Quick Alerts
    ALLOW NOTIFICATIONS  
    For Daily Alerts

    ದುರ್ಯೋಧನ ಮತ್ತು ಪೈಲ್ವಾನ ಇಬ್ಬರಲ್ಲಿಯೂ ಒಂದು ಶಕ್ತಿ ಇದೆ- ನಾಗೇಂದ್ರ ಪ್ರಸಾದ್

    |

    ಒಂದು ಕಡೆ 'ಸಾಹೋರೇ ಸಾಹೋ.. ಅಜಾನುಬಾಹು..' ಹಾಡು ಮೊಳಗುತಿದೆ. ಮತ್ತೊಂದು ಕಡೆ 'ಬಂದ ನೋಡು ಪೈಲ್ವಾನ್..' ಹಾಡು ಕೇಕೆ ಹಾಕುತ್ತಿದೆ. ಈ ಎರಡು ಹಾಡುಗಳಿಗೆ ಸಾಹಿತ್ಯ ಬರೆದಿರುವವರು ಡಾ ವಿ ನಾಗೇಂದ್ರ ಪ್ರಸಾದ್.

    ಹಾಡುಗಳನ್ನು ಬರೆಯುವುದರಲ್ಲಿ ತಾವು ಆಲ್ ರೌಂಡರ್ ಎನ್ನುವುದನ್ನು ವಿ ನಾಗೇಂದ್ರ ಪ್ರಸಾದ್ ಈಗಾಗಲೇ ಸಾಬೀತು ಮಾಡಿದ್ದಾರೆ. ಎರಡೂವರೆ ಸಾವಿರಕ್ಕೂ ಅಧಿಕ ಹಾಡುಗಳನ್ನು ಬರೆದಿರುವ ನಾಗೇಂದ್ರ ಪ್ರಸಾದ್ ಖಾತೆಯಲ್ಲಿ ಬೇಕಾದಷ್ಟು ಸೂಪರ್ ಹಿಟ್ ಗೀತೆಗಳು ಇವೆ.

    ಥೀಮ್ ಸಾಂಗ್ ಬಳಿಕ ಬರ್ತಿದೆ 'ಪೈಲ್ವಾನ್' ರೋಮ್ಯಾಂಟಿಕ್ ಸಾಂಗ್ ಥೀಮ್ ಸಾಂಗ್ ಬಳಿಕ ಬರ್ತಿದೆ 'ಪೈಲ್ವಾನ್' ರೋಮ್ಯಾಂಟಿಕ್ ಸಾಂಗ್

    ಇತ್ತೀಚಿನ ಹಾಡುಗಳನ್ನು ಗಮನಿಸಿದರೆ, 'ಟಗರು ಬಂತು ಟಗರು..' 'ಸಲಾಮ್ ರಾಕಿ ಬಾಯ್', 'ಶಾಕುಂತ್ಳೆ ಸಿಕ್ಕಳು..' 'ರೆಕ್ಕೆಯ ಕುದುರೆ ಏರಿ..' ಹೀಗೆ ಈ ಹಾಡುಗಳು ಕೂಡ ದೊಡ್ಡ ಟ್ರೆಂಡ್ ಆಗಿವೆ.

    ಈ ಹಾಡುಗಳ ಬಳಿಕ ಇದೇ ವರ್ಷ ಮತ್ತೆ ನಾಗೇಂದ್ರ ಪ್ರಸಾದ್ ಲೇಖನಿ ಜಾದು ಮಾಡಿದೆ. ಕನ್ನಡದ ಸದ್ಯದ ಬಹು ನಿರೀಕ್ಷಿತ 'ಕುರುಕ್ಷೇತ್ರ' ಹಾಗೂ ಪೈಲ್ವಾನ್ ಹಾಡುಗಳನ್ನು ಅವರೇ ಬರೆದಿದ್ದಾರೆ. ಈ ಬಗ್ಗೆ ಫಿಲ್ಮಿಬೀಟ್ ಕನ್ನಡದ ಜೊತೆಗೆ ನಾಗೇಂದ್ರ ಪ್ರಸಾದ್ ಮಾತನಾಡಿದ್ದಾರೆ.

    ಒಂದೇ ಸಮಯದಲ್ಲಿ 'ಕುರುಕ್ಷೇತ್ರ' ಮತ್ತು 'ಪೈಲ್ವಾನ್' ಎಂಬ ಎರಡು ಬೇರೆ ಬೇರೆ ಶೈಲಿಯ, ದೊಡ್ಡ ಚಿತ್ರಗಳಿಗೆ ಹಾಡು ಬರೆದಿದ್ದೀರಿ ಆ ಅನುಭವ ಹೇಗಿತ್ತು ?

    ಒಂದೇ ಸಮಯದಲ್ಲಿ 'ಕುರುಕ್ಷೇತ್ರ' ಮತ್ತು 'ಪೈಲ್ವಾನ್' ಎಂಬ ಎರಡು ಬೇರೆ ಬೇರೆ ಶೈಲಿಯ, ದೊಡ್ಡ ಚಿತ್ರಗಳಿಗೆ ಹಾಡು ಬರೆದಿದ್ದೀರಿ ಆ ಅನುಭವ ಹೇಗಿತ್ತು ?

    ''ಹೌದು, ಎರಡು ಸಿನಿಮಾಗಳ ಹಾಡುಗಳು ಬೇರೆ ಶೈಲಿಯಲ್ಲಿ ಇವೆ. ನಾನು ಇಲ್ಲಿಯವರೆಗೆ 2500 ಕ್ಕೂ ಹೆಚ್ಚು ಹಾಡುಗಳನ್ನು ಬರೆದಿದ್ದೇನೆ. ಆದರೆ, ಒಂದೇ ರೀತಿಯ ಹಾಡುಗಳಿಗೆ ಅಂಟಿಕೊಂಡಿಲ್ಲ. ಅದೇ ನನಗೆ ಇಲ್ಲಿ ಪ್ಲಸ್ ಪಾಯಿಂಟ್ ಆಯ್ತು ಅನಿಸುತ್ತದೆ. ಕನ್ನಡದಲ್ಲಿ ಪೌರಾಣಿಕ ಸಿನಿಮಾ ಬಂದು ಎರಡ್ಮೂರು ದಶಕಗಳು ಆಗಿದೆ. ನನ್ನ ಪಾಲಿಗೆ ಈ ಚಿತ್ರ ಬಂದಿದ್ದು ಒಂದು ಸುಯೋಗ. ಹಾಡುಗಳ ಹಾಗೂ ಸಂಭಾಷಣೆಯ ಜೊತೆಗೆ ನಿರ್ದೇಶನ ವಿಭಾಗದಲ್ಲಿಯೂ ಕೆಲಸ ಮಾಡಿದ್ದೇನೆ. ಇದು ನನ್ನ ಅದೃಷ್ಟ. 'ಪೈಲ್ವಾನ್' ಕೂಡ ಒಂದು ವಿಶೇಷ ಸಿನಿಮಾ. ಅಂತರಾಷ್ಟ್ರೀಯ ಮಟ್ಟದ ಕಥೆ ಇದೆ. ಎಮೋಷನ್ಸ್ ಗಳು ತುಂಬ ಚೆನ್ನಾಗಿದೆ.''

    ಸುದೀಪ್ ಹಾಗೂ ದರ್ಶನ್ ರಿಗೆ ಈ ಹಿಂದೆ ಸಾಕಷ್ಟು ಹಾಡುಗಳನ್ನು ಬರೆದ ನಿಮಗೆ ಇಲ್ಲಿ ಸಾವಾಲಾಗಿದ್ದು ಏನು?

    ಸುದೀಪ್ ಹಾಗೂ ದರ್ಶನ್ ರಿಗೆ ಈ ಹಿಂದೆ ಸಾಕಷ್ಟು ಹಾಡುಗಳನ್ನು ಬರೆದ ನಿಮಗೆ ಇಲ್ಲಿ ಸಾವಾಲಾಗಿದ್ದು ಏನು?

    ''ಕುರುಕ್ಷೇತ್ರ' ಚಿತ್ರಕ್ಕೆ ಬರೆಯುವಾಗ ಕೆಲವು ಸವಾಲು ಇದ್ದವು. ಇಲ್ಲಿ ತೀರ ಹಳೆಗನ್ನಡ ಬರೆದರೆ ಜನರಗೆ ಅರ್ಥ ಆಗುವುದಿಲ್ಲ. ಹಾಗಾಗಿ ಪದಗಳ ಬಳಕೆ ಮೇಲೆ ಇನ್ನಷ್ಟು ಗಮನ ನೀಡಬೇಕಾಗಿತ್ತು. ಚಿತ್ರದ ಸನ್ನಿವೇಶದ ಜೊತೆಗೆ ಕಲಾವಿದರಿಗೆ ಏನು ಬೇಕೋ ಅದನ್ನು ಮಾಡೆ ಮಾಡುತ್ತೇವೆ. ಏಕೆಂದರೆ, ಕಲಾವಿದರ ಇಮೇಜ್ ಗಳನ್ನು ಕಟ್ಟಿಕೊಟ್ಟಿರುವುದೇ ಹಾಡುಗಳು. 'ದುರ್ಯೋಧನ', 'ಪೈಲ್ವಾನ' ಎರಡೂ ಪಾತ್ರಗಳಿಗೆ ಶಕ್ತಿ ಇದೆ. ಹಾಗಾಗಿ ಪ್ರತಿ ಹಾಡಿನಲ್ಲಿಯೂ ಆ ಶಕ್ತಿ ತುಂಬ ಬೇಕಾಗಿತ್ತು.

    'ಬಂದ ನೋಡು ಪೈಲ್ವಾನ್' : ಚಿತ್ರದ ಮೊದಲ ಹಾಡು ರಿಲೀಸ್ 'ಬಂದ ನೋಡು ಪೈಲ್ವಾನ್' : ಚಿತ್ರದ ಮೊದಲ ಹಾಡು ರಿಲೀಸ್

    'ಕುರುಕ್ಷೇತ್ರ' ಬಿಡುಗಡೆ ತಡ ಆಗಲು ಕಾರಣ ಏನು?

    'ಕುರುಕ್ಷೇತ್ರ' ಬಿಡುಗಡೆ ತಡ ಆಗಲು ಕಾರಣ ಏನು?

    ಸಿನಿಮಾ ತಡ ಆಗಿದ್ದು, ಗ್ರಾಫಿಕ್ಸ್ ನಿಂದ ಅಷ್ಟೇ. ಅಂದುಕೊಂಡ ಹಾಗೆ ಗ್ರಾಫಿಕ್ಸ್ ಬರಬೇಕಿತ್ತು. ತ್ರೀಡಿ ಮತ್ತು ಗ್ರಾಫಿಕ್ಸ್ ಕೆಲಸಗಳು ಇರುವ ಕಾರಣ ಸಿನಿಮಾದ ಬಿಡುಗಡೆ ಹೆಚ್ಚು ಸಮಯ ಬೇಕಾಯ್ತು.

    ಇತ್ತೀಚಿಗೆ ಬರೆದ ಎಲ್ಲ ವೆರೈಟಿ ಹಾಡುಗಳು ಹಿಟ್ ಆಗಿವೆ. ಆ ಹಾಡುಗಳ ಬಗ್ಗೆ ಹೇಳಿ

    ಇತ್ತೀಚಿಗೆ ಬರೆದ ಎಲ್ಲ ವೆರೈಟಿ ಹಾಡುಗಳು ಹಿಟ್ ಆಗಿವೆ. ಆ ಹಾಡುಗಳ ಬಗ್ಗೆ ಹೇಳಿ

    ''ವೆರೈಟಿ ಹಾಡುಗಳು ನಿರ್ದೇಶಕರು ಸೃಷ್ಟಿಸುವ ಸನ್ನಿವೇಶದಿಂದ ಬರುತ್ತದೆ. ಉದಾಹರಣೆಗೆ 'ಕೆಜಿಎಫ್' ಸಿನಿಮಾದಲ್ಲಿ ನಾಯಕ ಬಾಂಬೆಯಲ್ಲಿ ಇರುವ ಕನ್ನಡಿಗ. ಹಾಗಾಗಿ ಹಿಂದಿ ಮತ್ತು ಕನ್ನಡ ಮಿಶ್ರಿತ ಹಾಡು ಬರೆದೆ. ಒಂದು ಟಗರಿನ ಕ್ಯಾರೆಕ್ಟರ್ ಹೇಳಬೇಕು ಎಂದಾಗ 'ಟಗರು ಬಂತು ಟಗರು..' ಹಾಡು ಬಂತು. 'ಅಪ್ಪ ಐ ಲವ್ ಯೂ..' ನಲ್ಲಿ ಅಪ್ಪನ ಬಗ್ಗೆ, 'ಅಮ್ಮ ಐ ಲವ್ ಯೂ', ನಲ್ಲಿ ಅಮ್ಮನ ಬಗ್ಗೆ ಹಾಡು ಬರೆದೆ. 'ಸಿಂಗ' ಚಿತ್ರದಲ್ಲಿಯೂ ತಾಯಿಯ ಹಾಡು ಇದೆ. ಈ ಹಿಂದೆ ಎಷ್ಟೊಂದು ತಾಯಿಯ ಹಾಡು ಬರೆದಿದ್ದರೂ, ಪ್ರತಿ ಸಲ ಹೊಸದಾಗಿ ಯೋಚನೆ ಮಾಡುತ್ತೇನೆ.

    ದರ್ಶನ್ ಕುರುಕ್ಷೇತ್ರದಿಂದ ಮತ್ತೊಂದು ಸರ್ಪ್ರೈಸ್ ಸುದ್ದಿ ದರ್ಶನ್ ಕುರುಕ್ಷೇತ್ರದಿಂದ ಮತ್ತೊಂದು ಸರ್ಪ್ರೈಸ್ ಸುದ್ದಿ

    ನಿಮ್ಮ ಮುಂದಿನ ನಿರ್ದೇಶನದ ಸಿನಿಮಾ ಯಾವಾಗ?

    ನಿಮ್ಮ ಮುಂದಿನ ನಿರ್ದೇಶನದ ಸಿನಿಮಾ ಯಾವಾಗ?

    ಅದರ ತಯಾರಿ ನಡೆಯುತ್ತದೆ. ಈ ವರ್ಷ ಶುರು ಮಾಡುತ್ತೇನೆ. ಹಿಂದಿನ ಸಿನಿಮಾ 'ಗೂಗಲ್'ಗೆ ಒಳ್ಳೆಯ ಹೆಸರು ಬಂತು. ಮುಂದಿನ ಸಿನಿಮಾವನ್ನು ಸದ್ಯದಲ್ಲಿಯೇ ಪ್ರಾರಂಭ ಮಾಡುತ್ತೇನೆ.

    English summary
    Kannada lyricist V Nagendra Prasad interview about 'Pailwan' and 'Kurukshetra' movie songs.
    Tuesday, July 16, 2019, 15:38
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X