»   » 'ಕಾಮಿಡಿ ಕಲಾವಿದ'ನಾಗಬೇಕೆಂಬ ಕನಸಿಗಾಗಿ 'ಚಕ್ರವ್ಯೂಹ' ಭೇದಿಸಿದ ಪ್ರವೀಣ್ ಕುಮಾರ್ ಗಸ್ತಿ

'ಕಾಮಿಡಿ ಕಲಾವಿದ'ನಾಗಬೇಕೆಂಬ ಕನಸಿಗಾಗಿ 'ಚಕ್ರವ್ಯೂಹ' ಭೇದಿಸಿದ ಪ್ರವೀಣ್ ಕುಮಾರ್ ಗಸ್ತಿ

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಪ್ರವೀಣ್ ಕುಮಾರ್ ಗಸ್ತಿ.....ನೋಡುವುದಕ್ಕೆ ಸಖತ್ ಸ್ಲಿಮ್ ಆಗಿದ್ರು, ಇವರ ಕಾಮಿಡಿ ಮಾತ್ರ ಹುಚ್ಚೆದ್ದು ಕುಣಿಯುವಂತೆ ಮಾಡುತ್ತೆ. ಈ ಕಡೆ ಹುಡುಗಿ ಪಾತ್ರಕ್ಕೂ ಸೈ, ಆ ಕಡೆ ಕುಡುಕನ ಪಾತ್ರಕ್ಕೂ ಜೈ, ಮತ್ತೊಂದೆಡೆ ಹುಚ್ಚನ ಪಾತ್ರಕ್ಕೂ ತಕ್ಕ ಅಭಿನಯ ಮತ್ತು ಮ್ಯಾನರಿಸಂ ಹೊಂದಿರುವ ಫರ್ಫೆಕ್ಟ್ 'ಕಾಮಿಡಿ ಕಿಲಾಡಿ'.

  ಪ್ರವೀಣ್ ಗೆ ಕನ್ನಡ ಕಲಾವಿದರನ್ನ ಮಿಮಿಕ್ರಿ ಮಾಡುವುದು ಅಂದ್ರೆ ತುಂಬಾ ಇಷ್ಟ. ಅದರಲ್ಲೂ ಸಾಧುಕೋಕಿಲಾ ಅಂದ್ರೆ ಒಂಥರಾ ಕ್ರೇಜ್. ಎಲ್ಲ ತರಹದ ಪಾತ್ರಗಳಲ್ಲೂ ಕಮಾಲ್ ಮಾಡಿರುವ ಪ್ರವೀಣ್ ಒಂದು ರೀತಿ ಜೂನಿಯರ್ ಸಾಧುಕೋಕಿಲಾ ಅಂತಾನೇ ಹೇಳ್ಬಹುದು.

  ನೀವೆಲ್ಲ ನೋಡಿರುವಂತೆ ಪ್ರವೀಣ್ ಕುಮಾರ್ ಒಳ್ಳೆ ಕಲಾವಿದ ನಿಜಾ. ಅದೇ ರೀತಿ ತಂದೆ-ತಾಯಿಗೆ ಒಳ್ಳೆ ಮಗನೂ ಹೌದು ಎನ್ನುವುದು ಅವರ ಕಥೆ ಕೇಳಿದ ಮೇಲೆ ನಿಮಗೂ ಅನಿಸದೆ ಇರಲ್ಲ. ಹೌದು, ನೀವು ನೋಡಿರದ ಪ್ರವೀಣ್ ಕುಮಾರ ಗಸ್ತಿ ಅವರ ಬದುಕನ್ನ ನಾವು ಹೇಳಲಿದ್ದೇವೆ. ಇಂದು 'ಕಾಮಿಡಿ ಕಿಲಾಡಿ' ಆಗಿ ಕರ್ನಾಟಕ ಜನತೆಗೆ ಮನಸ್ಸು ಮುಟ್ಟಿದ್ದಾರೆ ಅಂದ್ರೆ, ಅದರ ಹಿಂದಿರುವ ಮುಳ್ಳಿನ ಹಾದಿಯ ಬಗ್ಗೆ ನೀವು ತಿಳಿದು ಕೊಳ್ಳಬೇಕು.

  'ಕಾಮಿಡಿ ಕಿಲಾಡಿಗಳು' ಖ್ಯಾತಿಯ 'ಪ್ರವೀಣ್ ಕುಮಾರ್' ಕುರಿತು, ನಿಮ್ಮ ಫಿಲ್ಮಿ ಬೀಟ್ ನಡೆಸಿರುವ ಸಂದರ್ಶನ ಮುಂದೆ ಓದಿ.....
  ಸಂದರ್ಶನ - ಭರತ್ ಕುಮಾರ್

  ಪ್ರವೀಣ್ ಕುಮಾರ್ ಗಸ್ತಿ ಬಗ್ಗೆ.....!

  ಪ್ರವೀಣ್.... ಪೂರ್ತಿ ಹೆಸರು ಪ್ರವೀಣ್ ಕುಮಾರ್ ಗಸ್ತಿ.. ತಂದೆ ಶಿವಪ್ಪ ಗಸ್ತಿ ಮತ್ತು ತಾಯಿ ಸುವರ್ಣ ಶಿವಪ್ಪ ಗಸ್ತಿ. ಬೆಳಗಾವಿ ಜಿಲ್ಲೆ ಗೋಕಾಕ್ ತಾಲ್ಲೋಕಿನವರು. ಪ್ರವೀಣ್ ಗೆ ಗೋಪಿನಾಥ್ ಗಸ್ತಿ ಎಂಬ ಸಹೋದರ ಕೂಡ ಇದ್ದಾರೆ.

  ಅಭಿನಯದ ಆಸಕ್ತಿ ಬೆಳದಿದ್ದು ಹೇಗೆ?

  ಶಾಲೆಯಲ್ಲಿ ಓದುವಾಗಲೇ ಪ್ರವೀಣ್ ಕುಮಾರ್ ಗೆ ಆಕ್ಟಿಂಗ್ ಮೇಲೆ ಆಸಕ್ತಿ ಮೂಡಿತ್ತು. 3ನೇ ಕ್ಲಾಸ್ ನಲ್ಲಿದ್ದಾಗ ಬಣ್ಣ ಹಚ್ಚಿದ್ದರು. ಹೈ ಸ್ಕೂಲ್ ಓದುವಾಗ, ಕೃಷ್ಣ, ಶಕುನಿ, ಹನುಮಂತನ ವೇಷ ಹಾಕಿ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿದ್ದರು. ವಿಶೇಷ ಅಂದ್ರೆ, ಒಂದೊಮ್ಮೆ ಶಾಲೆಗೆ ಹನುಮಂತನ ವೇಷ ಧರಿಸಿಕೊಂಡು ಹೋಗಿರುವ ಉದಾಹರಣೆಯೂ ಇದೆ.

  ಪ್ರವೀಣ್ ಕಲೆಗೆ ಅಡ್ಡಿಯಾಯಿತು ಬಡತನ!

  ಎಲ್ಲ ಸರಿಯಿತ್ತು ಎನ್ನುವಷ್ಟರಲ್ಲಿ ತಂದೆ ಮಾಡುತ್ತಿದ್ದ ಬ್ಯಾಂಕಿನ ಕೆಲಸದಲ್ಲಿ ಮೋಸವಾಯಿತು. ಅಮ್ಮ ಬಟ್ಟೆ ಹೊಲಿದು ಮಕ್ಕಳನ್ನ ಸಾಕುವಂತಾಯಿತು. ಈ ಮಧ್ಯೆ ಇದ್ದ ಜಮೀನನ್ನ ಮಾರಿದ್ದರು. ಬಡತನದ ಜೊತೆಗೆ ಆರ್ಥಿಕ ಸಂಕಷ್ಟ ಎದುರಾಯಿತು. ಆಗಲೇ ಮನೆಯ ಜವಾಬ್ದಾರಿ ಪ್ರವೀಣ್ ಮೇಲೆ ಬಿತ್ತು. ಓದನ್ನ ಅರ್ಧದಲ್ಲೆ ನಿಲ್ಲಿಸಿದರು. ಪೇಪರ್ ಹಾಕುವ ಕೆಲಸಕ್ಕೆ ಸೇರಿಕೊಂಡರು. ಬಟ್ಟೆ ಅಂಗಡಿಗೆ ಕೆಲಸಕ್ಕೆ ಹೋದರು. ಸೆಕ್ಯೂರಿಟಿ ಗಾರ್ಡ್ ಕೆಲಸಕ್ಕೆ ಕೂಡ ಸೇರಿಕೊಂಡು ಮನೆಯನ್ನ ನಿಭಾಯಿಸಿದರು.

  ಓದು-ಕೆಲಸ ಜೊತೆಗೆ ಕಾಮಿಡಿ ಕಡೆ ಒಲವು!

  ನಿರಂತವಾಗಿ ಅಭಿನಯದಲ್ಲಿ ಆಸಕ್ತಿ ಮೂಡಿಸಿಕೊಂಡಿದ್ದ ಪ್ರವೀಣ್ ಕುಮಾರ್ ಒಂದು ಕಡೆ ಕೆಲಸ ಮಾಡಿಕೊಂಡು, ಮತ್ತೊಂದೆಡೆ ಮನೆಯನ್ನ ನಿರ್ವಹಿಸಿಕೊಂಡು, ಜೊತೆಗೆ ಆರ್ಕೆಸ್ಟ್ರಾಗಳಲ್ಲಿ ಕಾರ್ಯಕ್ರಮಗಳನ್ನ ಮಾಡುತ್ತಿದ್ದರು.

  ಡಿಪ್ಲೋಮಾ ಕಂಪ್ಯೂಟರ್ ಸೈನ್ಸ್ ಮುಗಿಸಿರುವ ಪ್ರವೀಣ್!

  ಪ್ರವೀಣ್ ಕುಮಾರ್ ಡಿಪ್ಲೋಮಾ ಕಂಪ್ಯೂಟರ್ ಸೈನ್ಸ್ ಮುಗಿಸಿದ್ದಾರೆ. ಬಿ.ಇ ಮಾಡಬೇಕೆಂಬ ಆಸೆ ಇತ್ತು. ಆದ್ರೆ, ಆರ್ಥಿಕ ಕಷ್ಟದಿಂದ ಮುಂದುವರೆಸಲು ಸಾಧ್ಯವಾಗಲಿಲ್ಲವಂತೆ. 8 ನೇ ತರಗತಿ ಓದುವಾಗಲೇ ಮನೆಯ ಪೂರ್ತಿ ಜವಾಬ್ದಾರಿಯನ್ನ ವಹಿಸಿಕೊಂಡಿದ್ದರಂತೆ.

  ಆರ್ಕೆಸ್ಟ್ರಾದಲ್ಲಿ ಕೆಲಸ ಆರಂಭಿಸಿದ ಪ್ರವೀಣ್!

  ಹೀಗೆ ಒಂದು ದಿನ, ಸಾವಳಿಗೆ ಊರಲ್ಲಿ 'ಶಬ್ಬಿರಡಾಂಗಿ' ಆರ್ಕೆಸ್ಟ್ರಾದವರು ಬಂದಿದ್ದರು. ಆ ವೇಳೆ ಸ್ನೇಹಿತರು ಪ್ರವೀಣ್ ಅವರನ್ನ ಕರೆದುಕೊಂಡು ಹೋಗಿದ್ದರು. ಅದೇ ಸಮಯಕ್ಕೆ ಕಾಮಿಡಿ ಆರ್ಟಿಸ್ಟ್ ಕೈಕೊಟ್ಟಿದ್ದ. ಬಹಳ ಕೇಳಿಕೊಂಡ ನಂತರ ಒಂದು ಅವಕಾಶ ಕೊಟ್ಟರು. ಸುಮಾರು ಮುಕ್ಕಾಲು ಗಂಟೆ ಸತತವಾಗಿ ಕಾಮಿಡಿ ಮಾಡಿದ ಪ್ರವೀಣ್ ಅಲ್ಲಿದ್ದ ಜನರಿಂದ ಚಪ್ಪಾಳೆ ಗಿಟ್ಟಿಸಿಕೊಂಡರು. ಅಂದು ಜನರು ಹೊಡೆದ ಚಪ್ಪಾಳೆಯನ್ನ ನೋಡಿದ 'ಶಬ್ಬಿರಡಾಂಗಿ' ಆರ್ಕೆಸ್ಟ್ರಾದವರು ಪ್ರವೀಣ್ ಅವರನ್ನ ತಮ್ಮ ತಂಡದಲ್ಲಿ ಸೇರಿಸಿಕೊಂಡರು. ಅದಾದ ನಂತರ ಸುಮಾರು 1200 ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನ ಪ್ರವೀಣ್ ನೀಡಿದ್ದಾರೆ. ಅಲ್ಲಿಂದ ನೀನಾಸಂಗೂ ಹೋಗಿ ಆಕ್ಟಿಂಗ್ ಕಲಿತಿದ್ದಾರೆ.

  7 ವರ್ಷದ ಆಸೆ 'ಕಾಮಿಡಿ ಕಿಲಾಡಿಗಳು'!

  ಜೀ ಕನ್ನಡದಲ್ಲಿ ಪ್ರಸಾರವಾಗುವ 'ಕಾಮಿಡಿ ಕಿಲಾಡಿ'ಗಳು ಕಾರ್ಯಕ್ರಮಕ್ಕೆ 7 ವರ್ಷದಿಂದ ಬರಬೇಕು ಎಂಬ ಆಸೆ ಹೊತ್ತು ಕಾಯುತ್ತಿದ್ದರಂತೆ ಪ್ರವೀಣ್. ಕೊನೆಗೂ 7ನೇ ವರ್ಷ ಟಿಕೆಟ್ ಸಿಕ್ಕಿತ್ತು. ಪ್ರವೀಣ್ ಆಯ್ಕೆಗಾಗಿ ಸುಮಾರು ಮೂಕ್ಕಾಲು ಗಂಟೆ ಆಡಿಷನ್ ಮಾಡಿದ್ದರಂತೆ. ಆಮೇಲೆ ಒಂದು ವಾರದ ನಂತರ ಫೋನ್ ಮಾಡಿ ಆಯ್ಕೆಯಾಗಿದ್ದೀರಾ ಎಂದು ಖಚಿತ ಪಡಿಸಿದ್ದರಂತೆ.

  ಪ್ರವೀಣ್ ಜೀವನದಲ್ಲೊಂದು ಒಂದು ಹಾಸ್ಯ ಘಟನೆ!

  'ಕಾಮಿಡಿ ಕಿಲಾಡಿ' ಕಾರ್ಯಕ್ರಮಗಳಿಗೂ ಬರುವ ಮುಂಚೆ 'ಹೆಣ್ಣು ನೋಡೋಕೆ ಹೋಗಿದ್ದರಂತೆ. ಹುಡುಗಿ ಕೂಡ ಇಷ್ಟವಾಗಿದ್ದರಂತೆ. ಆದ್ರೆ, ಹುಡುಗಿ ಅವರ ಅಪ್ಪ, ''ಹುಡುಗ ಏನ್ ಕೆಲಸ ಮಾಡುತ್ತೀದ್ದಾನೆ ಎಂದು ಕೇಳಿದಾಗ, ಪ್ರವೀಣ್ ಅವರ ತಂದೆ ''ಕಾಮಿಡಿ ಮಾಡುತ್ತಾನೆ'' ಎಂದರಂತೆ. ಅಷ್ಟೇ ನೀವು ಹೊರಡಬಹುದು ನಾವು ಆಮೇಲೆ ಹೇಳ್ತಿವಿ ಅಂತ ಕಳುಹಿಸಿದ್ರಂತೆ. ''ಕಾಮಿಡಿ ಮಾಡಿದ್ರು, ಹುಡುಗಿ ಕೊಡಲ್ಲ'' ಎಂದು ಆ ದಿನ ಗೊತ್ತಾಯ್ತು ಎನ್ನುತ್ತಾರೆ ಪ್ರವೀಣ್. ಆದ್ರೆ, ಈಗ 'ಹುಡುಗಿ ನಾನು ಕೊಡ್ತಿನಿ, ನಾನು ಕೊಡ್ತಿನಿ' ಮುಂದೆ ಬರ್ತಾರೆ ಎಂದು ಸಂತಸ ವ್ಯಕ್ತಪಡಿಸುತ್ತಾರೆ.

  'ಕಾಮಿಡಿ ಕಿಲಾಡಿ'ಗಳು ಜರ್ನಿ ಹೇಗಿತ್ತು?

  ''ಈ ಜರ್ನಿಯಲ್ಲಿ ತುಂಬಾ ಕಲಿತ್ತೀದ್ದೀನಿ. ಇದೊಂದು ಟೀಮ್ ವರ್ಕ್. ನಾವು ಫರ್ಫಾಮೆನ್ಸ್ ಮಾಡಿದ್ರು, ನಮಗೋಸ್ಕರ ಇಷ್ಟು ಜನ ಕೆಲಸ ಮಾಡ್ತಾರೆ. ನಗಿಸುವುದು ಕಷ್ಟ. ಪ್ರಯತ್ನ ಪಡ್ತಿದ್ದೀವಿ ಅಷ್ಟೆ. ಕಾಮಿಡಿ ಕಷ್ಟ ಅಲ್ಲ, ನೋವು ತಿನ್ನುವುದು ಕಷ್ಟ. ಆ ಕಷ್ಟದಿಂದ ಬರುವುದು ಕಾಮಿಡಿ ಆಗುತ್ತೆ. ನಮಗೆ ನಾವು ಅಸಹ್ಯ ಪಟ್ಟರೆ, ಕಾಮಿಡಿ ಹುಟ್ಟುತ್ತೆ'' ಎನ್ನುತ್ತಾರೆ ಪ್ರವೀಣ್

  ಕಾಮಿಡಿ ಕಿಲಾಡಿಗಳಲ್ಲಿ ನಿಮ್ಮ ಬೆಸ್ಟ್ ಪಾತ್ರ ಯಾವುದು?

  'ಕುಡುಕ' ಮತ್ತು 'ಸಾಧುಕೋಕಿಲಾ' ಪಾತ್ರಗಳು ಅಂದ್ರೆ ತುಂಬಾ ಇಷ್ಟ. ಒಂದು ನಾಟಕ ಮಾಡಿದ್ವಿ. ಅದನ್ನ ಮರೆಯೋಕಾಗಲ್ಲ. ಇನ್ನೂ ಕೆಲವೊಂದು ಪಾತ್ರಗಳು ಮಾಡಬೇಕಿತ್ತು. ಆದ್ರೆ, ನನಗೆ ಅದು ಸಿಕ್ಕಿಲ್ಲ. ಬೇರೆಯವರು ಆ ಪಾತ್ರಗಳು ಮಾಡಿದಾಗ ಆ ಸಮಯದಲ್ಲಿ ಅಯ್ಯೋ ಅಂದಿದ್ದು ಉಂಟು...

  ಮುಂದಿನ ನಿಮ್ಮ ಯೋಜನೆ ಏನು?

  ಹೆಸರು ಮಾಡಿದ್ದೀವಿ. ಆ ಹೆಸರು ಕೆಡದಂತೆ ಏನಾದ್ರೂ ಕೆಲಸ ಮಾಡಬೇಕು. ಸದ್ಯ, ಹಲವು ಜನರು ಕರೆಯುತ್ತಿದ್ದಾರೆ. ಒಂದೊಳ್ಳೆ ಅವಕಾಶ, ಒಂದೊಳ್ಳೆ ಪಾತ್ರ ಬಂದಾಗ ಖಂಡಿತಾ ಸಿನಿಮಾ, ಧಾರವಾಹಿ ಮಾಡ್ತಿನಿ''

  ಆಲ್ ದಿ ಬೆಸ್ಟ್ ಪ್ರವೀಣ್

  ಕಾಮಿಡಿ ಕಿಲಾಡಿಗಳು ಗೆಲ್ಲದಿದ್ದರೂ ಇಡೀ ಕರ್ನಾಟಕ ಜನರ ಹೃದಯದಲ್ಲಿ ಸ್ಥಾನ ಪಡೆದುಕೊಂಡಿರುವ ಪ್ರವೀಣ್ ಗೆ ನಮ್ಮ ಕಡೆಯಿಂದಲೂ ಆಲ್ ದಿ ಬೆಸ್ಟ್. ಇವರು ಮುಂದಿನ ಜೀವನ ಕೂಡ ಸುಖಕರವಾಗಿರಲಿ ಎಂದು ನಾವು ಕೂಡ ಹಾರೈಸುತ್ತೇವೆ.

  English summary
  Zee Kannada 'Comedy Kiladigalu' Grand Finale Contestant Praveen Kumar Interview. Watch here.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more