For Quick Alerts
ALLOW NOTIFICATIONS  
For Daily Alerts

  'ವೀಕೆಂಡ್ ವಿತ್ ರಮೇಶ್'ಗೆ ಸಾಧಕರನ್ನು ಕರೆತರುವುದೇ ದೊಡ್ಡ ಚಾಲೆಂಜ್: ರಾಘವೇಂದ್ರ ಹುಣಸೂರು

  By Suneel
  |

  ಕನ್ನಡಿಗರಿಗೆ ಸದಾ ಕಾಲ ಸಧಬಿರುಚಿಯ ಮನರಂಜನೆ ನೀಡುತ್ತಾ, ಜೊತೆಗೆ ಟಿ.ಆರ್.ಪಿ ರೇಟಿಂಗ್ ನಲ್ಲೂ ಈಗ ಮೂಂಚೂಣಿಯಲ್ಲಿರುವುದು ಜೀ ಕನ್ನಡ ವಾಹಿನಿ. ಜೀ ಕನ್ನಡ ವಾಹಿನಿ ಕಳೆದ ಮೂರು ವರ್ಷಗಳಿಂದ ಇತರೆ ಚಾನೆಲ್ ಗಿಂತ ಹೆಚ್ಚು ಪ್ರೇಕ್ಷಕ ವರ್ಗ ಹೊಂದಲು, ಚಾನೆಲ್ ನಲ್ಲಿ ಮೂಡಿಬರುತ್ತಿರುವ ಹಲವು ವಿಭಿನ್ನ ಕಾರ್ಯಕ್ರಮಗಳೇ ಕಾರಣ.['ವೀಕೆಂಡ್ ವಿತ್ ರಮೇಶ್-3' ಸಾಧಕರ ಪಟ್ಟಿ ಬಹಿರಂಗ ಪಡಿಸಿದ ಜೀ ಕನ್ನಡ ವಾಹಿನಿ ಮುಖ್ಯಸ್ಥ!]

  ಅಂದಹಾಗೆ ನಿಮಗೆಲ್ಲಾ ತಿಳಿದಂತೆ 'ವೀಕೆಂಡ್ ವಿತ್ ರಮೇಶ್' ಮೂರನೇ ಸೀಸನ್ ಇದೇ ಶನಿವಾರ (ಮಾರ್ಚ್ 25) ಆರಂಭಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಜೀ ಕನ್ನಡ ವಾಹಿನಿ ಕಾರ್ಯಕ್ರಮ ಮುಖ್ಯಸ್ಥರಾದ ರಾಘವೇಂದ್ರ ಹುಣಸೂರು ಅವರ ಜೊತೆ ನಿಮ್ಮ ಫಿಲ್ಮಿ ಬೀಟ್ ನಡೆಸಿದ ಸಂದರ್ಶನ ಇಲ್ಲಿದೇ..

  ಸಂದರ್ಶನ: ಸುನೀಲ್ ಬಿಂಡಹಳ್ಳಿ

  'ವೀಕೆಂಡ್ ವಿತ್ ರಮೇಶ್' ಕಾನ್ಸೆಪ್ಟ್ ನಿಮಗೆ ಹೊಳೆದಿದ್ದ? or ಬೇರೆ ಚಾನೆಲ್ ನಿಂದ ಸ್ಫೂರ್ತಿ ಪಡೆದಿದ್ದ?

  - 'ವೀಕೆಂಡ್ ವಿತ್ ರಮೇಶ್' ಕಾನ್ಸೆಪ್ಟ್ ನನಗೆ ಹೊಳೆದಿದ್ದು. ಆದ್ರೆ ಪೂರ್ಣವಾಗಿ ಡೆವಲಪ್ ಮಾಡಿದ್ದು ಟೀಮ್ ನಲ್ಲಿ.[ಬಹುನಿರೀಕ್ಷಿತ 'ವೀಕೆಂಡ್' ಆರಂಭ: ಮೊದಲ ಅತಿಥಿ ಬಹಿರಂಗ.!]

  ರಮೇಶ್ ಅರವಿಂದ್ ಸರ್ ಜೊತೆ ಕೆಲಸ ಮಾಡೋದು ನನ್ನ ಕನಸಾಗಿತ್ತು..

  - ನಾನು 'ಬಿಗ್ ಬಾಸ್' ಮೊದಲ ಸೀಸನ್ ಡೈರೆಕ್ಟ್ ಮಾಡ್ ಬೇಕಾದ್ರೆ ರಮೇಶ್ ಅರವಿಂದ್ ಸರ್ ತಮ್ಮ ಸಿನಿಮಾ ಪ್ರಮೋಶನ್ ಗೆ ಬಂದಿದ್ರು. ನಾನು ಸಾಧಕರ ಜೀವನದ ಬಗ್ಗೆ ಅವರಿಗೆ ಗೊತ್ತಿಲ್ಲದ ಹಾಗೆ ಅವರ ಬಗ್ಗೆ ರಿಸರ್ಚ್ ಮಾಡಿ ಸಂದರ್ಶನ ಮಾಡಬೇಕು ಎಂದು ಡೆವಲಪ್ ಮಾಡಿದ್ದ ಕಾರ್ಯಕ್ರಮದ ನಿರೂಪಣೆಗೆ, ಅವರೇ ಸೂಕ್ತ ಅಂದುಕೊಂಡಿದ್ದೆ. ಆದ್ರೆ ಈ ಕಾರ್ಯಕ್ರಮಕ್ಕೆ ಟೈಟಲ್ ಕೊಟ್ಟಿದ್ದು ಮಾತ್ರ ಅವರೊಂದಿಗೆ ಪೂರ್ಣವಾಗಿ ಚರ್ಚೆ ನಡೆಸಿ, ನಿರೂಪಣೆಗೆ ಒಪ್ಪಿಕೊಂಡ ನಂತರ.

  'ವೀಕೆಂಡ್ ವಿತ್ ರಮೇಶ್' ಶುರು ಮಾಡಲು ಇದ್ದ ದೊಡ್ಡ ಚಾಲೆಂಜ್..

  - 'ವೀಕೆಂಡ್ ವಿತ್ ರಮೇಶ್' ಶುರು ಮಾಡೋಕೆ ಒಂದು ದೊಡ್ಡ ಚಾಲೆಂಜ್ ಇತ್ತು. ಮೊದಲು ಸೆಲೆಬ್ರಿಟಿಗಳನ್ನು ಸಂದರ್ಶನ ಮಾಡುವುದು ಪ್ಲಾನ್ ಇದ್ದದ್ದು. ಆದ್ರೆ ಇಲ್ಲಿ ಯಾವುದೇ ಚಾನೆಲ್ ಗಳಲ್ಲಿ ಮತ್ತು ಪತ್ರಿಕೆಗಳಲ್ಲಿ ಮಾಡಿರುವ ಸಂದರ್ಶನ ಇರಬಾರದು. ಅವರ ಲೈಫ್ ಅನ್ನು ಅವರಿಗೆ ತಿರುವಿ ಹಾಕಿ, ದೃಶ್ಯಗಳು, ವಸ್ತುಗಳ ಮೂಲಕ ಉಣಬಡಿಸುವುದ್ದಾಗಿತ್ತು. ಅವರಿಗೆ ಗೊತ್ತಿಲ್ಲದ ಎಷ್ಟೋ ಮಾಹಿತಿಗಳನ್ನು ಅವರ ಮುಂದೆ ನೆನಪುಗಳಾಗಿ ಇಡುವುದು ದೊಡ್ಡ ಚಾಲೆಂಜ್ ಆಗಿತ್ತು. ಎಲ್ಲಾ ರೀತಿಯಲ್ಲೂ ಪ್ರೇಕ್ಷಕರಿಗೂ ಸಪ್ರೈಸ್ ನೀಡುವುದು ಇದರ ಉದ್ದೇಶವಾಗಿತ್ತು.

  ಸೀಸನ್ 3 ಬರ್ತಿದೆ, ಜನರಿಗೆ ಹೆಚ್ಚಿನ ನಿರೀಕ್ಷೆ ಇದೆ, ಅದನ್ನ ಹೇಗೆ ರೀಚ್ ಮಾಡ್ತೀರಾ?

  - ಪ್ರತಿ ಸೀಸನ್ ಗೂ ಅದರದ್ದೇ ಆದ ಮಹತ್ವ ಇದೆ. ಈ ಶೋ ಬರೋದೆ ಒಂದ್ ರೀತಿ ಪ್ರತಿ ಹಬ್ಬಗಳು ವಾಪಸ್ಸು ಬಂದ ಹಾಗೆ. ಈ ಸೀಸನ್ ನಲ್ಲಿ ಆದಷ್ಟು, ಜನರಿಗೆ ಒಪ್ಪುವ ಸಾಧಕರನ್ನು ಕರೆದುಕೊಂಡು ಬರಲು ಪ್ರಯತ್ನಿಸಿದ್ದೇವೆ. ಜನರು ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಅವರನ್ನು ಕರೆದುಕೊಂಡು ಬನ್ನಿ ಅಂತಾರೆ. ಇವರನ್ನು ಕರೆದುಕೊಂಡು ಬರಲು ಕಳೆದ ಎರಡು ಸೀಸನ್ ನಲ್ಲೂ ಪ್ರಯತ್ನಿಸಿದ್ದೇವೆ. ನಮಗೂ ಆ ಆಸೆ ಇದೆ. ಆದ್ರೆ ಅವರಿಗೆ ಅವರದ್ದೇ ಆದ ಸೆಡ್ಯೂಲ್ ಮತ್ತು ಲಿಮಿಟೇಶನ್ ಇರುತ್ತೆ. ಆದ್ದರಿಂದ ಬರಲು ಸಾಧ್ಯವಾಗಿಲ್ಲ.

  ಸೀಸನ್ 3 ನಲ್ಲಿ ಯಾವ ಕ್ಷೇತ್ರದ ಸಾಧಕರೆಲ್ಲಾ ಇದ್ದಾರೆ?

  - ಕಳೆದ ಬಾರಿ ಉಳಿದವರನ್ನು ಈ ಸೀಸನ್ ನಲ್ಲಿ ಸಾಧಕರ ಸೀಟ್ ಮೇಲೆ ಕೂರಿಸಿದ್ದೇವೆ. ಈ ಭಾರಿ ಜನರು ನೋಡಲು ಬಯಸುವ ಕಾಮನ್ ಮ್ಯಾನ್ (ಸಿನಿಮೇತರ) ಸಾಧಕರನ್ನು ಕರೆದುಕೊಂಡುಬರಲು ಹೆಚ್ಚು ಪ್ರಯತ್ನಿಸಿದ್ದೇವೆ.

  'ವೀಕೆಂಡ್ ವಿತ್ ರಮೇಶ್' ನಲ್ಲಿ ಸೆಲೆಬ್ರಿಟಿಗಳನ್ನು ತೋರಿಸಿಯೇ ಟಿಆರ್ ಪಿ ಹೆಚ್ಚಿಸಿಕೊಂಡಿತು ಅಂತಾರಲ್ಲಾ?

  -ಯಾವುದೇ ಕಾರ್ಯಕ್ರಮ ಸೆಲೆಬ್ರಿಟಿಗಳು ಇದ್ದಾರೆ ಅಂದ ಮಾತ್ರಕ್ಕೆ ಯಶಸ್ವಿ ಆಗೋದಿಲ್ಲ. ಅವರ ಬದುಕು, ಅಲ್ಲಿನ ವಿಷಯದ ಮೇಲೆ ಆಧಾರವಾಗಿರುತ್ತೆ. 'ಕಾಮಿಡಿ ಕಿಲಾಡಿಗಳು', 'ಡ್ರಾಮಾ ಜೂನಿಯರ್ಸ್' ಅದರದ್ದೇ ಆದ ವಿಶೇಷ ವಿಷಯಗಳನ್ನು ಹೊಂದಿದ್ದೊ. ಆದ್ದರಿಂದಲೇ ಯಶಸ್ವಿ ಆಗಿದ್ದು. ಆದ್ರೆ 'ವೀಕೆಂಡ್ ವಿತ್ ರಮೇಶ್' ಸಾಧಕರ ಬಗ್ಗೆ ಯಾರಿಗೂ ತಿಳಿಯದ ವಿಷಯಗಳನ್ನು, ಸಂದರ್ಶನದ ಮೂಲಕ ತೋರಿಸೋ ಕಾರ್ಯಕ್ರಮ. ಅಲ್ಲದೇ ಕೆಲವೊಂದು ವಿಷಯಗಳು ಅವರಿಗೆ ಮರೆತಿರುತ್ತೆ. ಅಂತಹ ಮೌಲ್ಯವಾದ ಮಾಹಿತಿಗಳನ್ನು ನಾವು ಮತ್ತೊಮ್ಮೆ ನೆನಪಿಸಿಕೊಡುತ್ತೇವೆ.

  ಸೀಸನ್ 3 ಗೆ ಪೂರ್ವ ಸಿದ್ಧತೆ ಹೇಗೆಲ್ಲಾ ಇತ್ತು?

  - 'ವೀಕೆಂಡ್ ವಿತ್ ರಮೇಶ್-3' ಗೆ ಬೇರೆ ರೀತಿ ಫಾರ್ಮ್ಯಾಟ್ ಬಳಕೆ ಏನು ಮಾಡಿಲ್ಲ. ಆದರೆ ರಿಸರ್ಚ್ ಗೆ ಅಂತ ಹೆಚ್ಚಿನ ತಂಡಗಳನ್ನು ಮಾಡಿಕೊಂಡಿದ್ದೀವಿ.

  ಸಾಧಕರಲ್ಲಿ ವೇದಿಕೆಗೆ ಬರದ ಇನ್ನೂ ಹಲವರು ಇದ್ದಾರಲ್ಲಾ? ಉದಾಹರಣೆಗೆ- ಹಂಸಲೇಖ ಸರ್

  - ಸಾಧಕರು ಅಂತ ಬಂದಾಗ ಎಲ್ಲರಿಗೂ ಆಹ್ವಾನ ನೀಡಿದ್ದೇವೆ. ಆದರೆ ಕೆಲವರು ಕಾರಣಾಂತರಗಳಿಂದ ಬರೋಕೆ ಆಗಿಲ್ಲ. ಅವರಿಗೆ ಸಮಯ ಸಿಕ್ಕಿಲ್ಲ. ನಾವು ಸಹ ವಾರಕ್ಕೆ ಒಬ್ಬರನ್ನೇ ಕೂರಿಸೋಕೆ ಆಗೋದು ಅಲ್ವಾ..

  ಜೀ ವಾಹಿನಿಗೆ ಪ್ರೇಕ್ಷಕ ವರ್ಗ ಹೆಚ್ಚಾಗಿದ್ದೆ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಿಂದ ಅಂತರಲ್ಲಾ?

  - ಹೌದು. ಇದನ್ನ ಒಪ್ಪಿಕೊಳ್ಳುತ್ತೇನೆ. ಮೂರು ವರ್ಷಗಳ ಹಿಂದೆ ಜೀ ಕನ್ನಡ ವಾಹಿನಿಗೆ ಬಂದಾಗ ಮೊದಲು ಶುರು ಮಾಡಿದ್ದೆ 'ವೀಕೆಂಡ್ ವಿತ್ ರಮೇಶ್'. ಅಲ್ಲಿಂದ ಜೀ ಕನ್ನಡ ವಾಹಿನಿ ನೋಡುವ ಪ್ರೇಕ್ಷಕರು ಹೆಚ್ಚಾದರು.

  English summary
  Zee Kannada Channel's popular 'Weekend with Ramesh 3' is about to start From March 25. Here is the Exclusive Inteview with Zee Kannada Channel Programm Head Raghavendra Hunsur.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more