Don't Miss!
- News
ವಿಜಯಪುರದ ಆಲಮೇಲದಲ್ಲಿ ನೂರಾರು ಮಕ್ಕಳಿಗೆ ದಡಾರ: ಎಚ್ಚರಿಕೆ ವಹಿಸಲು ಜಿಲ್ಲಾಡಳಿತ ಮನವಿ
- Sports
ಆಕ್ಯುಪ್ರೆಶರ್ ಚಿಕಿತ್ಸೆ ಪಡೆಯುತ್ತಿರುವ ಚಿತ್ರವನ್ನು ಹಂಚಿಕೊಂಡ ಶ್ರೇಯಸ್ ಅಯ್ಯರ್
- Technology
ಅತಿ ಕಡಿಮೆ ಬೆಲೆಯಲ್ಲಿ ಹೊಸ ಸ್ಮಾರ್ಟ್ವಾಚ್ ಪರಿಚಯಿಸಿದ ಫೈರ್ಬೋಲ್ಟ್ !
- Lifestyle
ನಿಮ್ಮ ಗಂಡ 'ಅಮ್ಮನ ಮಗ'ವಾಗಿರುವುದರಿಂದ ತುಂಬಾನೇ ಸಮಸ್ಯೆ ಆಗುತ್ತಿದೆಯೇ?
- Finance
ಆಧಾರ್ ಕಾರ್ಡ್ ಸುರಕ್ಷತೆಗಾಗಿ ಯುಐಡಿಎಐ ನೂತನ ನಿಯಮ ತಿಳಿಯಿರಿ!
- Automobiles
ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಎಸ್ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮಲಯಾಳಂನ ಎಲ್ಲಾ ಸ್ಟಾರ್ ನಟ-ನಟಿಯರು ಒಂದೇ ಸಿನಿಮಾದಲ್ಲಿ!
ಮಲಯಾಳಂ ಸಿನಿಮಾ ರಂಗದವರು ಸೃಜನಶೀಲ, ಭಿನ್ನ, ಹೊಸ ರೀತಿಯ ಸಿನಿಮಾಗಳನ್ನು ನಿರ್ಮಿಸುವಲ್ಲಿ ಪ್ರವೀಣರು. ಹೊಸ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತಾರೆ ಅವರು.
ಇದೀಗ ಇಡೀಯ ಮಲಯಾಳಂ ಸಿನಿಮಾ ರಂಗದ ಎಲ್ಲ ಸ್ಟಾರ್ ನಟ-ನಟಿಯರನ್ನು ಒಟ್ಟು ಸೇರಿಸಿ ಒಂದು ಸಿನಿಮಾ ಮಾಡಲು ಯೋಜನೆ ರೂಪಿಸಿದ್ದಾರೆ. ಈ ಬಗ್ಗೆ ಅಧಿಕೃತ ಘೋಷಣೆ ಸಹ ಆಗಿಬಿಟ್ಟಿದೆ.
ಹೌದು, ಮೋಹನ್ ಲಾಲ್, ಮುಮ್ಮಟಿ, ದುಲ್ಕರ್ ಸಲ್ಮಾನ್, ನಿವಿನ್ ಪೌಲಿ, ಪೃಥ್ವಿರಾಜ್ ಸುಕುಮಾರ್, ಫಹಾದ್ ಪಾಸಿಲ್ ಇನ್ನೂ ಹಲವಾರು ನಟರು ಒಟ್ಟಿಗೆ ಈ ಸಿನಿಮಾದಲ್ಲಿ ನಟಿಸಲಿದ್ದಾರೆ. ಅಷ್ಟೇ ಅಲ್ಲ ಮಲಯಾಳಂ ನ ನಟಿಯರು ಸಹ ಸಿನಿಮಾದಲ್ಲಿ ಇರಲಿದ್ದಾರೆ.

AMMA ವತಿಯಿಂದ ಈ ಸಿನಿಮಾ
ಅಸೋಸಿಯೇಷನ್ ಆಫ್ ಮಲಯಾಳಂ ಮೂವಿ ಆಕ್ಟರ್ಸ್ (AMMA) ಕಡೆಯಿಂದ ಈ ಹೊಸ ಸಿನಿಮಾ ನಿರ್ಮಾಣವಾಗುತ್ತಿದ್ದು. ಯಾವೊಬ್ಬ ನಟರೂ ಸಹ ಸಂಭಾವನೆ ಪಡೆಯದೇ ಸಿನಿಮಾದಲ್ಲಿ ನಟಿಸಲಿದ್ದಾರೆ. ಈ ಸಿನಿಮಾದ ನಿರ್ದೇಶನ ಜವಾಬ್ದಾರಿಯನ್ನು ಪ್ರಿಯದರ್ಶನ್ ಮತ್ತು ಕೆಟಿ ರಾಜೀವ್ ಕುಮಾರ್ ಅವರುಗಳು ಸಿನಿಮಾವನ್ನು ನಿರ್ದೇಶಿಸಲಿದ್ದಾರೆ.

ಪೋಸ್ಟರ್ ಬಿಡುಗಡೆ ಮಾಡಿದ ಮೋಹನ್‌ಲಾಲ್-ಮುಮ್ಮಟಿ
AMMA ದ ಹೊಸ ಕಟ್ಟಡ ಉದ್ಘಾಟನೆ ವೇಳೆಯಲ್ಲಿ ಮೋಹನ್‌ಲಾಲ್ ಮತ್ತು ಮುಮ್ಮಟಿ ಒಟ್ಟಿಗೆ ಸಿನಿಮಾದ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದಾರೆ. ಸಿನಿಮಾಕ್ಕೆ 'ಟ್ವಿಂಟಿ 20' ಎಂದು ಹೆಸರಿಡಲಾಗಿದೆ. ಈ ಸಿನಿಮಾ ಕ್ರೈಂ ಥ್ರಿಲ್ಲರ್ ಆಗಿರಲಿದೆ.

140 ಕ್ಕೂ ಹೆಚ್ಚು ಮಂದಿ ನಟ-ನಟಿಯರಿಂದ ನಟನೆ
ಸಿನಿಮಾದಲ್ಲಿ 140 ಕ್ಕೂ ಹೆಚ್ಚು ಮಂದಿ ಮಲಯಾಳಂ ನಟ-ನಟಿಯರು ನಟಿಸಲಿದ್ದಾರೆ. 'ಒಂದು ದಿನದ ಕೆಲಸವಾದರೂ ಸರಿ ಎಲ್ಲರೂ ಬಂದು ಸಿನಿಮಾದಲ್ಲಿ ನಟಿಸಿ, ಸಹಕಾರ ನೀಡಿ' ಎಂದು 'ಅಮ್ಮಾ' ದ ಅಧ್ಯಕ್ಷ ಮೋಹನ್‌ಲಾಲ್ ನಟರಲ್ಲಿ ಮನವಿ ಮಾಡಿದ್ದಾರೆ.
Recommended Video

2022 ಕ್ಕೆ ಸಿನಿಮಾ ಬಿಡುಗಡೆ
ಪ್ರತಿವರ್ಷ 'ಅಮ್ಮಾ' ಪರವಾಗಿ ದೊಡ್ಡ ವೇದಿಕೆ ಕಾರ್ಯಕ್ರಮ ಆಯೋಜಿಸಲಾಗುತ್ತಿತ್ತು. ಆದರೆ ಈ ವರ್ಷ ಕೊರೊನಾ ಕಾರಣದಿಂದಾಗಿ ವೇದಿಕೆ ಕಾರ್ಯಕ್ರಮ ಆಯೋಜಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ ಎಂದಿದ್ದಾರೆ ಮೋಹನ್‌ಲಾಲ್. ಈ ಸಿನಿಮಾವು 2021 ರ ಮಧ್ಯಭಾಗದಲ್ಲಿ ಚಿತ್ರೀಕರಣ ಪ್ರಾರಂಭ ಮಾಡಿ, 2022 ರ ಆರಂಭದಲ್ಲಿ ಬಿಡುಗಡೆ ಆಗಲಿದೆ.