For Quick Alerts
  ALLOW NOTIFICATIONS  
  For Daily Alerts

  'ಮಿಲನ' ಪಾರ್ವತಿಗೆ ಕೆಟ್ಟದಾಗಿ ಮೆಸೇಜ್ ಮಾಡುತ್ತಿದ್ದ ವ್ಯಕ್ತಿಯ ಬಂಧನ

  |

  ದಕ್ಷಿಣ ಭಾರತೀಯ ಚಿತ್ರರಂಗದ ಟ್ಯಾಲೆಂಟೆಡ್ ನಟಿ ಮಿಲನ ಪಾರ್ವತಿ ತಿರುವೊತ್ತುಗೆ ಕೆಟ್ಟ ಪದಗಳನ್ನು ಬಳಸಿ ಮೆಸೇಜ್ ಮಾಡುತ್ತಿರುವುದಲ್ಲದೆ, ಸಾಮಾಜಿಕ ಜಾಲಾತಣದಲ್ಲಿಯೂ ನಟಿಯ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ್ದ ವ್ಯಕ್ತಿಯನ್ನು ಕೇರಳಾದ ಎಲಾಥೂರ್ ಪೊಲೀಸರು ಬಂಧಿಸಿದ್ದಾರೆ.

  ಬಂಧಿತ ವ್ಯಕ್ತಿ ಕೇರಳದ ಪಲಕ್ಕಾಡ್ ನ ನೆನ್ಮಾರಾ ಮೂಲದ 40 ವರ್ಷದ ಕಿಶೋರ್ ಎಂದು ತಿಳಿದು ಬಂದಿದೆ. ಆರೋಪಿ ಕಿಶೋರ್ ನಟಿ ಪಾರ್ವತಿ ತಂದೆ ಹಾಗೂ ಸಹೋದರನಿಗೆ ಪಾರ್ವತಿ ಬಗ್ಗೆ ಅವಹೇಳನಕಾರಿ ಸಂದೇಶಗಳನ್ನು ಕಳುಹಿಸುತ್ತಿದ್ದನಂತೆ, ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿಯೂ ಕೆಟ್ಟ ಪದಗಳನ್ನು ಬಳಸಿ ಮಾನಹಾನಿ ಪೋಸ್ಟ್ ಗಳನ್ನು ಹಾಕುತ್ತಿದ್ದನಂತೆ.

  ವಿಜಯ್ ದೇವರಕೊಂಡ ಮುಂದೆಯೇ 'ಅರ್ಜುನ್ ರೆಡ್ಡಿ' ಸಿನಿಮಾ ತಪ್ಪನ್ನು ಎತ್ತಿಹಿಡಿದ 'ಮಿಲನ' ನಟಿವಿಜಯ್ ದೇವರಕೊಂಡ ಮುಂದೆಯೇ 'ಅರ್ಜುನ್ ರೆಡ್ಡಿ' ಸಿನಿಮಾ ತಪ್ಪನ್ನು ಎತ್ತಿಹಿಡಿದ 'ಮಿಲನ' ನಟಿ

  ಈ ಬಗ್ಗೆ ಬೇಸತ್ತ ಪಾರ್ವತಿ ತಾಯಿ ಪೊಲೀಸ್ ಸ್ಟೇಷನ್ ನಲ್ಲಿ ದೂರು ದಾಖಲಿದ್ದಾರೆ. ಪಾರ್ವತಿ ತಾಯಿಯ ದೂರಿನ ಆಧಾರದ ಮೇಲೆ ಕೇರಳದ ಪೊಲೀಸರು ಕಿಶೋರ್ ನನ್ನು ಬಂಧಿಸಿದ್ದಾರೆ. ಆದರೆ ಕಿಶೋರ್ ಬಂಧನಕ್ಕೆ ಒಳಗಾಗುತ್ತಿರುವುದು ಇದೇ ಮೊದಲೇನಲ್ಲವಂತೆ. ಈ ಮೊದಲು ಕೂಡ ಜನರಿಗೆ ಮೋಸ ಮಾಡಿದ್ದ ಕಾರಣಕ್ಕೆ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡು ಜೈಲು ಸೇರಿರುವ ಬಗ್ಗೆ ತಿಳಿದುಬಂದಿದೆ.

  ಬಂಧಿತ ವ್ಯಕ್ತಿ ಕಿಶೋರ್ ನಟಿ ಪಾರ್ವತಿ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡದೆ ಫಾಲೋ ಮಾಡುತ್ತಿದ್ದಾನಂತೆ. ಆದರೆ ಯಾಕೆ ಪಾರ್ವತಿ ಹಿಂದೆ ಬಿದ್ದಿದ್ದ ಎನ್ನುವ ಬಗ್ಗೆ ಪೊಲೀಸರ ತನಿಕೆ ನಡೆಯುತ್ತಿದ್ದಾರೆ. ಸದ್ಯ ಪೊಲೀಸರ ವಶದಲ್ಲಿ ಇರುವ ಆರೋಪಿ ಕಿಶೋರ್ ನನ್ನು ವಿಚಾರಣ ನಡೆಸುತ್ತಿದ್ದಾರೆ.

  English summary
  A Man Arrested in Kerala for Defaming and harassing actress Parvathy and her Family.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X