For Quick Alerts
  ALLOW NOTIFICATIONS  
  For Daily Alerts

  ವಿದೇಶದಲ್ಲಿ ಸಿಲುಕಿದ್ದ ನಟ ಪೃಥ್ವಿರಾಜ್ ಕೊನೆಗೂ ತಾಯ್ನಾಡಿಗೆ ವಾಪಸ್

  |

  ಶೂಟಿಂಗ್ ಗೆಂದು ವಿದೇಶಕ್ಕೆ ತೆರಳಿದ್ದ ಮಲಯಾಳಂ ಖ್ಯಾತ ನಟ ಪೃಥ್ವಿರಾಜ್ ಕೊನೆಗೂ ಭಾರತಕ್ಕೆ ವಾಪಸ್ ಆಗಿದ್ದಾರೆ. ಅವರ ಜೊತೆ ಇಡೀ ಚಿತ್ರತಂಡ ತಾಯ್ನಾಡಿಗೆ ಮರಳಿದ್ದಾರೆ.

  ಲೇಡಿ ಸೂಪರ್ ಸ್ಟಾರ್ ಹೆಸರಿನ ಬಗ್ಗೆ ಭಾರೀ ಚರ್ಚೆ | NAYANTARA | SUPERSTAR | ONEINDIA KANNADA

  ಸುಮಾರು 2 ತಿಂಗಳಿಂದ ಪೃಥ್ವಿರಾಜ್ ಮತ್ತು ಸಿನಿಮಾತಂಡ ದೂರದ ಜೋರ್ಡಾನ್ ನಲ್ಲಿ ಸಿಲುಕಿಕೊಂಡಿದ್ದರು. ನಟ, ನಿರ್ದೇಶಕ ಸೇರಿದಂತೆ ಒಟ್ಟು 58ಮಂದಿ ಸಿನಿಮಾತಂಡ ಸುರಕ್ಷಿತವಾಗಿ ಭಾರತಕ್ಕೆ ವಾಪಸ್ ಆಗಿದ್ದಾರೆ. ಜೋರ್ಡಾನ್ ನಿಂದ ದೆಹಲಿಗೆ ವಿಶೇಷ ವಿಮಾನದಲ್ಲಿ ಬಂದಿರುವ ತಂಡ, ಅಲ್ಲಿಂದ ಕೇರಳದ ಕೊಚ್ಚಿಗೆ ತಲುಪಿದ್ದಾರೆ. ಈ 58 ಜನ ಸದ್ಯ ಕ್ವಾರಂಟೈನಲ್ಲಿದ್ದಾರೆ.

  ವಿದೇಶದಲ್ಲಿ ಸಿಲುಕಿಕೊಂಡಿರುವ ಖ್ಯಾತ ನಟ ಕೊನೆಗೂ ವಾಪಸ್ ಬರಲಿದ್ದಾರೆವಿದೇಶದಲ್ಲಿ ಸಿಲುಕಿಕೊಂಡಿರುವ ಖ್ಯಾತ ನಟ ಕೊನೆಗೂ ವಾಪಸ್ ಬರಲಿದ್ದಾರೆ

  ಚಿತ್ರೀಕರಣಕ್ಕೆ ತೆರಳಿದ್ದ ಈ ತಂಡ ವಾಪಸ್ ಆಗುವುದರೊಳಗೆ ಕೊರೊನಾ ಲಾಕ್ ಡೌನ್ ಆಗಿತ್ತು. ಅಲ್ಲಿನ ಸರ್ಕಾರದ ಅನುಮತಿ ಮೇರೆಗೆ ಏಪ್ರಿಲ್ 10ರ ವರೆಗೂ ಚಿತ್ರೀಕರಣ ಮಾಡಿದ್ದ ಚಿತ್ರತಂಡ ನಂತರ ಚಿತ್ರೀಕರಣ ಪ್ಯಾಕ್ ಅಪ್ ಮಾಡಿ ಮನೆಯಲ್ಲಿಯೇ ಲಾಕ್ ಆಗಿದ್ದರು.

  ಆಹಾರ ಸಮಸ್ಯೆ ಮತ್ತು ಸೋಂಕಿನ ಭಯದಿಂದ ನಿರ್ದೇಶಕ ಬ್ಲೆಸ್ಸಿ ಮತ್ತು ನಟ ಪೃಥ್ವಿರಾಜ್ ಭಾರತಕ್ಕೆ ವಾಪಸ್ ಆಗಲು ಕೇರಳ ಅಧಿಕಾರಿಗಳ ಸಹಾಯ ಕೋರಿದ್ದರು. ಕೊನೆಗೂ ಇಡೀ ತಂಡ ಸುರಕ್ಷಿತವಾಗಿ ಮನೆಗೆ ಮರಳಿದ್ದಾರೆ.

  English summary
  Malayan Actor Prithviraj Sukumaran and crew are return to India after 2 months.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X