For Quick Alerts
  ALLOW NOTIFICATIONS  
  For Daily Alerts

  ನಟ-ಗಾಯಕ ವಿಜಯ್ ಯೇಸುದಾಸ್ ಕಾರು ಅಪಘಾತ

  |

  ನಟ ಹಾಗೂ ಗಾಯಕರಾಗಿ ಗುರುತಿಸಿಕೊಂಡಿರುವ ಖ್ಯಾತ ಗಾಯಕ ಏಸುದಾಸ್ ಪುತ್ರ ವಿಜಯ್ ಏಸುದಾಸ್ ಅವರ ಕಾರು ಸೋಮವಾರು ತಡರಾತ್ರಿ ಅಪಘಾತಕ್ಕೆ ಈಡಾಗಿದೆ.

  ಸೋಮವಾರ ತಡರಾತ್ರಿ ತಿರುವನಂತಪುರಂ ನಿಂದ ಕೊಚ್ಚಿ ಕಡೆಗೆ ಕಾರಿನಲ್ಲಿ ಬರುತ್ತಿದ್ದಾಗ ಅಲಪ್ಪು ಬಳಿ ವಿಜಯ್ ಏಸುದಾಸ್ ಕಾರು ಅಪಘಾತಕ್ಕೆ ಈಡಾಗಿದೆ.

  ಹೆದ್ದಾರಿಯಲ್ಲಿ ಎದುರಿಗೆ ಬರುತ್ತಿದ್ದ ಕಾರಿಗೆ ವಿಜಯ್ ಕಾರು ಢಿಕ್ಕಿ ಹೊಡೆದಿದ್ದು, ಎರಡೂ ಕಾರಿನಲ್ಲಿದ್ದವರಿಗೆ ಸಣ್ಣ-ಪುಟ್ಟ ಗಾಯಗಳಷ್ಟೆ ಆಗಿವೆ ಎನ್ನಲಾಗಿದೆ. ಆದರೆ ವಿಜಯ್ ಕಾರು ಜಖಂ ಆಗಿದೆಯಂತೆ.

  20 ವರ್ಷಗಳಿಂದಲೂ ವಿಜಯ್ ಏಸುದಾಸ್ ಹಿನ್ನೆಲೆ ಗಾಯಕ ಮಾಡುತ್ತಿದ್ದಾರೆ. ಇತ್ತೀಚೆಗೆ ಅಭಿನಯ ಸಹ ಪ್ರಾರಂಭಿಸಿದ್ದು, ತಮಿಳಿನ ವಿಜಯ್, ವಿಕ್ರಂ ಅವರ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೆಲವು ಮಲಯಾಳಂ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ ವಿಜಯ್.

  ACT 1978 : 60 ಲಕ್ಷದ ಸೆಟ್ ಹಾಕಿದ್ದು ನೋಡಿ ಪುನೀತ್ ರಾಜ್ ಕುಮಾರ್ ಖುಷಿ ಪಟ್ಟಿದ್ರು | Sanchari Vijay | Puneeth

  ಹಲವು ವರ್ಷಗಳಿಂದಲೂ ಮಲಯಾಳಂ ಸಿನಿಮಾಗಳಿಗೆ ಹಾಡುತ್ತಿದ್ದ ವಿಜಯ್ ಏಸುದಾಸ್, ಇತ್ತೀಚೆಗಷ್ಟೆ ಇನ್ನುಮುಂದೆ ತಾವು ಮಲಯಾಳಂ ಸಿನಿಮಾಗಳಿಗೆ ಹಾಡುವುದಿಲ್ಲ ಎಂದು ಘೋಷಿಸಿದ್ದಾರೆ. ಮಲಯಾಳಂ ಸಿನಿಮಾ ಉದ್ಯಮದಲ್ಲಿ ಗಾಯಕರು ಹಾಗೂ ಸಂಗೀತ ನಿರ್ದೇಶಕರಿಗೆ ಸೂಕ್ತ ಗೌರವ ನೀಡುವುದಿಲ್ಲ, ಹಾಗಾಗಿ ಇನ್ನು ಮುಂದೆ ಮಲಯಾಳಂ ಸಿನಿಮಾಗಳಿಗೆ ಹಾಡುವುದಿಲ್ಲ ಎಂದಿದ್ದಾರೆ ವಿಜಯ್.

  English summary
  Actor-singer Vijay Yesydas met with car accident on Monday on Kochi-Thiruvananthapuram high way.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X