For Quick Alerts
  ALLOW NOTIFICATIONS  
  For Daily Alerts

  ನಟಿ ನಜರಿಯ ನಜೀಮ್ ಇನ್‌ಸ್ಟಾಗ್ರಾಂ ಖಾತೆ ಹ್ಯಾಕ್

  |

  ಇತ್ತೀಚೆಗೆ ಸೆಲೆಬ್ರಿಟಿಗಳ ಸಾಮಾಜಿಕ ಜಾಲತಾಣ ಖಾತೆಗಳು ಹ್ಯಾಕ್ ಆಗುತ್ತಿರುವ ಪ್ರಕರಣಗಲು ಹೆಚ್ಚಾಗುತ್ತಿವೆ.

  ಮಲಯಾಳಂ ನ ಖ್ಯಾತ ನಟಿ ನಜರಿಯಾ ನಜೀಮ್ ಅವರ ಇನ್‌ಸ್ಟಾಗ್ರಾಂ ಖಾತೆ ಹ್ಯಾಕ್ ನಿನ್ನೆ (ಸೋಮವಾರ) ರಾತ್ರಿ ಹ್ಯಾಕ್ ಆಗಿದೆ.

  ಯಾರೊ ವಿದೇಶಿಗರು ನಟಿಯ ಇನ್‌ಸ್ಟಾಗ್ರಾಂ ಖಾತೆಯನ್ನು ಹ್ಯಾಕ್ ಮಾಡಿ, ನಜರಿಯಾ ಖಾತೆಯಿಂದ ಲೈವ್ ಬಂದಿದ್ದರು. ಲೈವ್‌ ನಲ್ಲಿ ಇಬ್ಬರು ವ್ಯಕ್ತಿಗಳು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ವಿಡಿಯೋ ಪ್ರಸಾರವಾಗುತ್ತಿತ್ತು. ವ್ಯಕ್ತಿಗಳ ಮುಖ ಕಾಣಿಸುತ್ತಿರಲಿಲ್ಲ ಬದಲಿಗೆ ನೆರಳು ಮಾತ್ರವೇ ಕಾಣುತ್ತಿತ್ತು. ಇಬ್ಬರೂ ಸಹ ವಿದೇಶಿ ಭಾಷೆಯಲ್ಲಿ ಮಾತನಾಡುತ್ತಿದ್ದರು.

  ನಟಿ ನಜರಿಯಾ ಸಹ ತಮ್ಮ ಇನ್‌ಸ್ಟಾಗ್ರಾಂ ಖಾತೆ ಹ್ಯಾಕ್ ಆಗಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. 'ನನ್ನ ಇನ್‌ಸ್ಟಾಗ್ರಾಂ ಖಾತೆಯನ್ನು ಕೆಲ ಜೋಕರ್‌ಗಳು ಹ್ಯಾಕ್ ಮಾಡಿದ್ದಾರೆ. ನನ್ನ ಖಾತೆಯಿಂದ ಯಾರಿಗಾದರೂ ಏನಾದರೂ ಮೆಸೆಜ್ ಗಳು ಹೋಗಿದ್ದರೆ ಅದನ್ನು ನಿರ್ಲಕ್ಷಿಸಿ' ಎಂದು ನಾಜರಿಯಾ ಮನವಿ ಮಾಡಿದ್ದಾರೆ.

  ನಟಿ ಟಬು ಅವರ ಇನ್‌ಸ್ಟಾಗ್ರಾಂ ಖಾತೆ ಹ್ಯಾಕ್ ಆಗಿತ್ತು. ಅದಕ್ಕೂ ಮುನ್ನಾ ನಟಿ, ರಾಜಕಾರಣಿ ಊರ್ಮಿಳಾ ಮಾತೋಂಡ್ಕರ್ ಅವರ ಇನ್‌ಸ್ಟಾಗ್ರಾಂ ಖಾತೆ ಸಹ ಹ್ಯಾಕ್ ಆಗಿತ್ತು. ಅದಕ್ಕೂ ಮುನ್ನಾ ಕನ್ನಡದ ಸಂಗೀತಗಾರ ಚಂದನ್ ಶೆಟ್ಟಿ ಅವರ ಖಾತೆಯೂ ಹ್ಯಾಕ್ ಆಗಿತ್ತು.

  ಪೊಗರು ಸಿನಿಮಾದಿಂದ ದೂರ ಉಳಿದ ರಶ್ಮಿಕಾ ಮಂದಣ್ಣ | Filmibeat Kannada

  ಮಲಯಾಳಂ ನಟಿ ನಾಜರಿಯಾ ನಜೀಮ್, ತಮಿಳು, ತೆಲುಗು ಸಿನಿಮಾ ರಂಗಗಳಲ್ಲಿಯೂ ಸಖತ್ ಖ್ಯಾತ ನಟಿ. ಖ್ಯಾತ ನಟ ಫಹಾದ್ ಫಾಸಿಲ್ ಅನ್ನು ವರಿಸಿರುವ ಈ ನಟಿ ಪ್ರಸ್ತುತ 'ಅಂತೆ ಸುಂದರಾನಿಕಿ' ಹೆಸರಿನ ತೆಲುಗು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ನಾಯಕ ನಾನಿ.

  English summary
  Actress Nazriya Nazim's Instagram account hacked by unknown people. actress request to not respond to the messeges which came by her account.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X