For Quick Alerts
  ALLOW NOTIFICATIONS  
  For Daily Alerts

  'ಕಾಂತಾರ' ಬಳಿಕ ಬಾಕ್ಸಾಫೀಸ್‌ನಲ್ಲಿ 'ಜಯ ಜಯ ಜಯ ಜಯ ಹೇ' ಸದ್ದು: 18 ದಿನಗಳಲ್ಲೇ ದಾಖಲೆ!

  |

  ಇದು ಮಾಸ್ ಸಿನಿಮಾನಾ? ಇಲ್ಲಾ ಕ್ಲಾಸ್ ಸಿನಿಮಾ? ಅಂತ ನೋಡಿ ಥಿಯೇಟರ್‌ಗೆ ಹೋಗಿ ಸಿನಿಮಾ ನೋಡುವ ಕಾಲ ಮುಗೀತು ಅನಿಸುತ್ತಿದೆ. ಅದಕ್ಕೀಗ ನಮ್ಮ ಕಣ್ಣ ಮುಂದೆ ಎರಡು ಸಿನಿಮಾಗಳಿವೆ. ಒಂದು ಕನ್ನಡ ಸಿನಿಮಾ 'ಕಾಂತಾರ'. ಇನ್ನೊಂದು ಮಲಯಾಳಂ ಸಿನಿಮಾ 'ಜಯ ಜಯ ಜಯ ಜಯ ಹೇ'.

  ಈ ಎರಡು ಸಿನಿಮಾಗಳೂ ಗೆದ್ದಿರೋದು ಮಾಸ್, ಕ್ಲಾಸ್ ಅನ್ನೋ ಬ್ರ್ಯಾಂಡ್ ಮೇಲೆ ಅಲ್ಲವೇ ಅಲ್ಲ. ಈ ಎರಡೂ ಸಿನಿಮಾಗಳಲ್ಲಿ ಕಂಟೆಂಟ್ ಇದ್ದಿದ್ದರಿಂದಲೇ ಬ್ಲಾಕ್‌ ಬಸ್ಟರ್ ಲಿಸ್ಟ್ ಸೇರಿವೆ. ಜನರೂ ಕೂಡ ಮೆಚ್ಚಿ ಹೊಗಳಿ ಕೊಂಡಾಡುತ್ತಿದ್ದಾರೆ.

  'ಕಾಂತಾರ' ಗೆಲುವನ್ನು ಪಂಜುರ್ಲಿ,ಗುಳಿಗ ದೈವಗೆ ಅರ್ಪಿಸಿದ ರಿಷಬ್ ಶೆಟ್ಟಿ: 50 ದಿನದಲ್ಲಾದ ಕಲೆಕ್ಷನ್ ಇಷ್ಟು!'ಕಾಂತಾರ' ಗೆಲುವನ್ನು ಪಂಜುರ್ಲಿ,ಗುಳಿಗ ದೈವಗೆ ಅರ್ಪಿಸಿದ ರಿಷಬ್ ಶೆಟ್ಟಿ: 50 ದಿನದಲ್ಲಾದ ಕಲೆಕ್ಷನ್ ಇಷ್ಟು!

  'ಕಾಂತಾರ' ಕಥೆ ಏನು ಅನ್ನೋದು ಈಗಾಗಲೇ ಹೊತ್ತಿದೆ. ಆದ್ರೀಗ 'ಕಾಂತಾರಾ'ಗೂ ಟಕ್ಕರ್ ಕೊಡುವಂತಹ ಸಿನಿಮಾವೊಂದು ದಕ್ಷಿಣ ಭಾರತದಲ್ಲಿ ಬೇಜಾನ್ ಸದ್ದು ಮಾಡುತ್ತಿದೆ. ಅಂದ್ಹಾಗೆ ಈ ಸಿನಿಮಾದ ಬಜೆಟ್ 'ಕಾಂತಾರ' ಬಜೆಟ್‌ನ ಕಾಲು ಭಾಗದಷ್ಟು. ಅಷ್ಟಕ್ಕೂ ಮಲಯಾಳಂ ಸಿನಿಮಾ ಮಾಡಿರೋ ಸಾಧನೆ ಏನು? ಅಂತ ತಿಳಿಯೋಕೆ ಮುಂದೆ ಓದಿ.

  'ಜಯ ಜಯ ಜಯ ಜಯ ಹೇ' ಹವಾ ಶುರು!

  'ಜಯ ಜಯ ಜಯ ಜಯ ಹೇ' ಹವಾ ಶುರು!

  ಮತ್ತೊಂದು ದಕ್ಷಿಣ ಭಾರತದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆದ್ದು ಬೀಗುತ್ತಿದೆ. ಕನ್ನಡ ಸಿನಿಮಾ 'ಕಾಂತಾರ' ಕೋಟಿ ಕೋಟಿ ಲೂಟಿ ಮಾಡಿದಂತೆ ಮಲಯಾಳಂನ ಸ್ಮಾಲ್ ಬಜೆಟ್ ಸಿನಿಮಾವೊಂದು ಸದ್ದು ಮಾಡುತ್ತಿದೆ. ಅದುವೇ 'ಜಯ ಜಯ ಜಯ ಜಯ ಹೇ'. ದೊಡ್ಡ ಸ್ಟಾರ್ ಕಾಸ್ಟ್ ಇಲ್ಲ. ದೊಡ್ಡ ಬಜೆಟ್ ಸಿನಿಮಾನೂ ಅಲ್ಲ. ರೊಮ್ಯಾಂಟಿಕ್ ಸೀನ್-ಆಕ್ಷನ್ ಅಂತೂ ಇಲ್ಲ. ಹಾಗಂತ ಸ್ಟಾರ್ ನಟರೂ ಇಲ್ಲ. ಹೀಗಿದ್ದರೂ ಸಿನಿಮಾ ಬಾಕ್ಸಾಫೀಸ್‌ನಲ್ಲಿ ದೊಡ್ಡ ಮೊತ್ತವನ್ನೇ ಕಲೆ ಹಾಕಿದೆ. 'ಕಾಂತಾರ' ಬಳಿಕ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಸಿನಿಮಾ ಇದೇನೆ 'ಜಯ ಜಯ ಜಯ ಜಯ ಹೇ'.

  ಈ ಸಿನಿಮಾದ ಬಜೆಟ್-ಕಲೆಕ್ಷನ್ ಎಷ್ಟು?

  ಈ ಸಿನಿಮಾದ ಬಜೆಟ್-ಕಲೆಕ್ಷನ್ ಎಷ್ಟು?

  'ಜಯ ಜಯ ಜಯ ಜಯ ಹೇ' ಮಲಯಾಳಂ ಬಾಕ್ಸಾಫೀಸ್‌ನಲ್ಲಿ ಮತ್ತೊಂದು ಬ್ಲಾಕ್‌ ಬಸ್ಟರ್ ಅಂತ ಸಾಬೀತಾಗಿದೆ. ಬೆಸಿಲ್ ಜೋಸೆಫ್ ಹಾಗೂ ದರ್ಶನಾ ರಾಜೇಂದ್ರನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಪಿನ್ ದಾಸ್ ಈ ಸಿನಿಮಾದ ನಿರ್ದೇಶಕ. ದೊಡ್ಡ ಸ್ಟಾರ್ ಕಾಸ್ಟ್ ಇಲ್ಲದ ಈ ಸಿನಿಮಾ ಬಜೆಟ್ ಕೇವಲ 5 ಕೋಟಿ ರೂ. ಅಂದ್ರೆ, 'ಕಾಂತಾರ' ಸಿನಿಮಾ ಬಜೆಟ್‌ಗಿಂತಲೂ ಮೂರು ಪಟ್ಟು ಕಡಿಮೆ. ಅಕ್ಟೋಬರ್ 28 ರಂದು ತೆರೆಕಂಡಿದ್ದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಇಲ್ಲಿವರೆಗೂ 35 ಕೋಟಿ ರೂ. ಗಳಿಕೆ ಕಂಡಿದೆ.

  ಈ ಸಿನಿಮಾ ಮೆಚ್ಚಲು ಏನು ಕಾರಣ?

  ಈ ಸಿನಿಮಾ ಮೆಚ್ಚಲು ಏನು ಕಾರಣ?

  ಈಗ ಚರ್ಚೆಯಾಗುತ್ತಿರೋದು 'ಜಯ ಜಯ ಜಯ ಜಯ ಹೇ' ಸಿನಿಮಾದ ಕಥೆ. ಜಯ ಅನ್ನೋ ಮಹತ್ವಾಕಾಂಕ್ಷೆಯುಳ್ಳ ಹುಡುಗಿ ತನ್ನ ಮನೆಯಲ್ಲಿ ಹೇಗೆ ತಿರಸ್ಕಾರಕ್ಕೆ ಒಳಗಾಗುತ್ತಾಳೆ. ಮದುವೆ ಬಳಿಕ ಗಂಡನ ಮನೆಯಲ್ಲಿ ಹಿಂಸೆ ಅನುಭವಿಸುತ್ತಾಳೆ. ಇದರಿಂದ ಹೊರಬಂದು ಹೇಗೆ ಬದುಕು ಕಟ್ಟಿಕೊಳ್ಳುತ್ತಾಳೆ ಅನ್ನೋದನ್ನು ರಿಯಲಿಸ್ಟಿಕ್ ಆಗಿ, ವಿಡಂಬನಾತ್ಮಕವಾಗಿ ಸಿನಿಮಾದಲ್ಲಿ ತೋರಿಸಿದ್ದಾರೆ. ಇದೇ ಕಥೆಯೀಗ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.

  ಬಜೆಟ್ ಮುಖ್ಯ ಅಲ್ಲ.. ಕಂಟೆಂಟ್ ಮುಖ್ಯ!

  ಬಜೆಟ್ ಮುಖ್ಯ ಅಲ್ಲ.. ಕಂಟೆಂಟ್ ಮುಖ್ಯ!

  ಕನ್ನಡದ 'ಕಾಂತಾರ' ಆಗಿರಲಿ. ಇಲ್ಲಾ ಮಲಯಾಳಂ ಸಿನಿಮಾ 'ಜಯ ಜಯ ಜಯ ಜಯ ಹೇ' ಆಗಿರಲಿ. ಬಜೆಟ್‌ ಹಾಕಿ ಸಿನಿಮಾ ಮಾಡಿದ್ದಲ್ಲ. ಇದರಲ್ಲಿ ಬಲವಾದ ಕಥೆಯಿತ್ತು. ಸ್ಕ್ರೀನ್ ಪ್ಲೇ ಅದ್ಭುತವಾಗಿತ್ತು. ಗಂಭೀರ ವಿಷಯವನ್ನೂ ಹಾಸ್ಯರೂಪ ಕೊಟ್ಟು ಹೇಳಲಾಗಿತ್ತು. ಹೀಗಾಗಿ ಎರಡೂ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಬೇಜಾನ್ ಸದ್ದು ಮಾಡಿದೆ. ಮತ್ತೊಮ್ಮೆ ಬಜೆಟ್ ಮುಖ್ಯ ಅಲ್ಲ. ಮಾಸ್ ಅಥವಾ ಕ್ಲಾಸ್ ಹಣೆಪಟ್ಟಿನೂ ಮುಖ್ಯ ಅಲ್ಲ ಅನ್ನೋದು ಸಾಬೀತಾಗಿದೆ. ಸದ್ಯ ದಕ್ಷಿಣ ಭಾರತದ 'ಕಾಂತಾರ' ಹಾಗೂ 'ಜಯ ಜಯ ಜಯ ಜಯ ಹೇ' ಎರಡೂ ಸಿನಿಮಾ ದೊಡ್ಡ ಬಜೆಟ್ ಸಿನಿಮಾ ಮಾಡೋರಿ ಮಾದರಿಯಾಗಿದೆ.

  English summary
  After Kantara Its Malayalam Movie Jaya Jaya Jaya Jaya Hey Massive In Box Office, Know More.
  Friday, November 18, 2022, 18:17
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X